
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship final) ಫೈನಲ್‌ನಲ್ಲಿ ಭಾರತ ಸತತ ಎರಡನೇ ಬಾರಿಗೆ ಸೋತಿದೆ. ಆಸ್ಟ್ರೇಲಿಯಾ, ಭಾರತವನ್ನು (India vs Australia) 209 ರನ್‌ಗಳಿಂದ ಸೋಲಿಸಿ, ಚಾಂಪಿಯನ್ ಪಟ್ಟಕ್ಕೇರಿದೆ. ಇದರೊಂದಿಗೆ ಆಸ್ಟ್ರೇಲಿಯಾ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ತಂಡವಾಗಿ ಹೊರಹೊಮ್ಮಿದೆ. ಇದೀಗ ಸತತ ಎರಡನೇ ಬಾರಿಗೂ ಟೆಸ್ಟ್ ವಿಶ್ವಕಪ್ ಗೆಲ್ಲುವಲ್ಲಿ ಎಡವಿದ ಟೀಂ ಇಂಡಿಯಾದ (Team India) ನಾಯಕ ರೋಹಿತ್ ಶರ್ಮಾ (Rohit Sharma) ಐಸಿಸಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ಪ್ರಮುಖ ಮೂರು ವಿಷಯಗಳನ್ನಿಟ್ಟುಕೊಂಡು ಐಸಿಸಿ (ICC) ವಿರುದ್ಧ ಹರಿಹಾಯ್ದಿರುವ ಹಿಟ್ಮ್ಯಾನ್ ಮುಂದಿನ ಆವೃತ್ತಿಯಿಂದಾದರೂ ಐಸಿಸಿ ತನ್ನ ಈ ನಡೆಯಲ್ಲಿ ಬದಲಾವಣೆ ಕಂಡುಕೊಳ್ಳಲಿ ಎಂದಿದ್ದಾರೆ.
ಮೊದಲೆಯದ್ದಾಗಿ ರೋಹಿತ್ ಐಸಿಸಿ ವಿರುದ್ಧ ಗುಡುಗಿದ ವಿಚಾರವೆಂದರೆ, ಡಬ್ಲ್ಯುಟಿಸಿ ಫೈನಲ್ ಪಂದ್ಯದ ಬಗ್ಗೆ. ವಾಸ್ತವವವಾಗಿ ಈ ಒಂದು ಚಾಂಪಿಯನ್ಶಿಪ್ ಗೆಲ್ಲಲ್ಲು ಕ್ರಿಕೆಟ್ ಆಡುವ ದೇಶಗಳು ಬರೋಬ್ಬರಿ 2 ವರ್ಷ ಇತರ ದೇಶಗಳ ವಿರುದ್ಧ ಸೆಣೆಸಾಡಿರುತ್ತವೆ. ಆದರೆ ಫೈನಲ್ ಪಂದ್ಯಕ್ಕೆ ಬಂದಾಗ ಈ ಪಂದ್ಯವನ್ನು ಕೇವಲ 1 ಪಂದ್ಯಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇದು ರೋಹಿತ್ ಅವರು ಅಸಮಾಧಾನಗೊಳ್ಳುವಂತೆ ಮಾಡಿದೆ. ಈ ಬಗ್ಗೆ ಮಾತನಾಡಿದ ರೋಹಿತ್, ಟೆಸ್ಟ್ ಚಾಂಪಿಯನ್‌ಶಿಪ್‌ನ ಚಾಂಪಿಯನ್ ತಂಡವನ್ನು ಕೇವಲ ಒಂದು ಪಂದ್ಯದಿಂದ ನಿರ್ಧರಿಸಬಾರದು. ಅದರ ಬದಲಿಗೆ 3 ಪಂದ್ಯಗಳ ಸರಣಿ ಮೂಲಕ ಚಾಂಪಿಯನ್ ತಂಡವನ್ನು ನಿರ್ಧರಿಸಬೇಕು ಎಂದಿದ್ದಾರೆ. ಅಲ್ಲದೆ ಮುಂದಿನ ಸೀಸನ್ನಿಂದಲೇ ಐಸಿಸಿ ಈ ಕ್ರಮವನ್ನು ಜಾರಿಗೆ ತರಬೇಕು ಎಂದಿದ್ದಾರೆ.
WTC Final 2023: ಟಾಸ್ ಗೆದ್ದ ಭಾರತ ಎಡವಿದ್ದೆಲ್ಲಿ? ಇಲ್ಲಿವೆ ಸೋಲಿಗೆ ಪ್ರಮುಖ 5 ಕಾರಣಗಳು
ಇನ್ನು ಡಬ್ಲ್ಯಟಿಸಿ ಫೈನಲ್ ಪಂದ್ಯದ ವಿಚಾರಕ್ಕೆ ಬಂದರೆ, ಈಗ ನಡೆದಿರುವ ಎರಡೂ ಫೈನಲ್ ಪಂದ್ಯಗಳನ್ನು ಇಂಗ್ಲೆಂಡ್ನಲ್ಲಿಯೇ ಆಡಲಾಗಿದೆ. ಮೊದಲ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಇದೇ ಇಂಗ್ಲೆಂಡ್ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು. ಇದೀಗ ಈ ಬಗ್ಗೆ ಮಾತನಾಡಿರುವ ರೋಹಿತ್, ಫೈನಲ್ ಪಂದ್ಯವನ್ನು ಕೇವಲ ಇಂಗ್ಲೆಂಡ್ನಲ್ಲಿ ಮಾತ್ರ ಏಕೆ ಆಡಲಾಗುತ್ತಿದೆ. ಈ ಪಂದ್ಯವನ್ನು ವಿಶ್ವದ ಎಲ್ಲಿ ಬೇಕಾದರೂ ಆಡಬಹುದಲ್ಲ ಎಂದಿದ್ದಾರೆ. ಈ ಮೂಲಕ ಐಸಿಸಿ ಆಯೋಜನೆಯ ಬಗ್ಗೆ ರೋಹಿತ್ ಪ್ರಶ್ನೆ ಮಾಡಿದ್ದಾರೆ. ವಿಪರ್ಯಾಸವೆಂದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಆವೃತ್ತಿಯ ಫೈನಲ್ ಪಂದ್ಯ ಕೂಡ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
ಮೂರನೇಯದ್ದಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯವನ್ನು ಜೂನ್ ತಿಂಗಳಲ್ಲೇ ಆಯೋಜನೆ ಮಾಡುತ್ತಿರುವ ಬಗ್ಗೆ ರೋಹಿತ್ ಪ್ರಶ್ನೆ ಎತ್ತಿದ್ದಾರೆ. ಈ ಫೈನಲ್ ಪಂದ್ಯವನ್ನು ಜೂನ್ ಬದಲಾಗಿ ಮಾರ್ಚ್ನಲ್ಲಿಯೂ ಆಡಿಸಬಹುದು ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ಇನ್ನು ಭಾರತದ ಸೋಲಿನಿಂದ ರೋಹಿತ್ ತೀವ್ರ ನಿರಾಸೆಗೊಂಡಿದ್ದು, ಸರಣಿ ಗೆಲುವಿಗಿಂತ ಚಾಂಪಿಯನ್ಶಿಪ್ ಗೆಲ್ಲುವುದು ಮುಖ್ಯ ಎಂದಿದ್ದಾರೆ. 4 ವರ್ಷಗಳ ಕಾಲ ತಂಡವು 2 ಫೈನಲ್‌ಗಾಗಿ ಬಹಳಷ್ಟು ಶ್ರಮಿಸಿದೆ. ಆದರೆ ಫೈನಲ್‌ನಲ್ಲಿ ಸೋತಿರುವುದು ತುಂಬಾ ನಿರಾಶಾದಾಯಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ