AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final, IND vs AUS: ಭಾರತ-ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹೇಗಿತ್ತು?: ಇಲ್ಲಿದೆ ಸಂಪೂರ್ಣ ಹೈಲೈಟ್ಸ್

India vs Australia Final: ಎರಡನೇ ಆವೃತ್ತಿಯ ಡಬ್ಲ್ಯೂಟಿಸಿ ಪ್ರಶಸ್ತಿಯನ್ನು ಕಾಂಗರೂ ಪಡೆ ಎತ್ತಿ ಹಿಡಿದಿದೆ. ಅಂತಿಮ ಐದನೇ ದಿನ ಭಾರತದ ಗೆಲುವಿಗೆ 280 ರನ್​ ಬೇಕಾಗಿತ್ತು. ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಬೇಕಿತ್ತು. ಇದರಲ್ಲಿ ಆಸೀಸ್ ಯಶಸ್ಸು ಸಾಧಿಸಿ ಮೊದಲ ಸೆಷನ್​ನಲ್ಲೇ ಗೆದ್ದುಕೊಂಡಿತು.

WTC Final, IND vs AUS: ಭಾರತ-ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹೇಗಿತ್ತು?: ಇಲ್ಲಿದೆ ಸಂಪೂರ್ಣ ಹೈಲೈಟ್ಸ್
WTC Final 2023
Vinay Bhat
|

Updated on: Jun 12, 2023 | 7:07 AM

Share

ಮುಖ್ಯಾಂಶಗಳು

  • ಭಾರತ-ಆಸ್ಟ್ರೇಲಿಯಾ WTC ಫೈನಲ್ ಹೇಗಿತ್ತು?
  • 5ನೇ ದಿನ ಭಾರತದ ಗೆಲುವಿಗೆ 280 ರನ್​ ಬೇಕಾಗಿತ್ತು
  • ಡಬ್ಲ್ಯೂಟಿಸಿ ಪ್ರಶಸ್ತಿಯನ್ನು ಕಾಂಗರೂ ಪಡೆ ಎತ್ತಿ ಹಿಡಿದಿದೆ

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final) ಪಂದ್ಯ ಮುಕ್ತಾಯಗೊಂಡಿದೆ. ಗುರಿ ಬೆನ್ನಟ್ಟಲು ಸಾಧ್ಯವಾಗದೆ, ದ್ವಿತೀಯ ಇನ್ನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ನಿಂದ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಎರಡನೇ ಆವೃತ್ತಿಯ ಡಬ್ಲ್ಯೂಟಿಸಿ ಪ್ರಶಸ್ತಿಯನ್ನು ಕಾಂಗರೂ ಪಡೆ ಎತ್ತಿ ಹಿಡಿದಿದೆ. ಇದರಿಂದ ಭಾರತದ 10 ವರ್ಷಗಳ ಐಸಿಸಿ ಕಪ್​ ಬರ ಮುಂದುವರೆದಿದೆ. ಅಂತಿಮ ಐದನೇ ದಿನ ಭಾರತದ ಗೆಲುವಿಗೆ 280 ರನ್​ ಬೇಕಾಗಿತ್ತು. ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಬೇಕಿತ್ತು. ಇದರಲ್ಲಿ ಆಸೀಸ್ ಯಶಸ್ಸು ಸಾಧಿಸಿ ಮೊದಲ ಸೆಷನ್​ನಲ್ಲೇ ಗೆದ್ದುಕೊಂಡಿತು.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್:

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕಾಂಗರೂ ಪಡೆ ಪರ ಮಾರ್ನಸ್ ಲಾಬುಶೇನ್ (26) ಹಾಗೂ ಡೇವಿಡ್ ವಾರ್ನರ್ (43) 69 ರನ್​ಗಳ ಜೊತೆಯಾಟ ಆಡಿದರಷ್ಟೆ. ನಂತರ ಶುರುವಾಗಿದ್ದು ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಆಟ. ಹೆಡ್ ಅವರು ಈ ಪ್ರತಿಷ್ಠಿತ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು. ಮೊದಲ ದಿನ 3 ವಿಕೆಟ್ ಕಳೆದುಕೊಂಡು 327 ರನ್ ಕಲೆಹಾಕಿ ದೊಡ್ಡ ಮೊತ್ತದ ಮುನ್ಸೂಚನೆ ನೀಡಿದ್ದ ಆಸೀಸ್ 2ನೇ ದಿನ ಮೊದಲ ದಿನದ ಮೊತ್ತಕ್ಕೆ 142 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಹೆಡ್ 163 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಆಟ 121 ರನ್​ಗೆ ಅಂತ್ಯವಾಯಿತು. ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 469 ರನ್ಸ್​ಗೆ ಆಲೌಟ್ ಆಯಿತು. ಭಾರತದ ಪರ ಸಿರಾಜ್ 4 ವಿಕೆಟ್ ಕಿತ್ತರೆ ಶಾರ್ದೂಲ್ ಠಾಕೂರ್ ಹಾಗೂ ಶಮಿ ತಲಾ 2ವಿಕೆಟ್‌ಗಳನ್ನು ಪಡೆದರು.

WTC Final 2023: ಟಾಸ್ ಗೆದ್ದ ಭಾರತ ಎಡವಿದ್ದೆಲ್ಲಿ? ಇಲ್ಲಿವೆ ಸೋಲಿಗೆ ಪ್ರಮುಖ 5 ಕಾರಣಗಳು

ಇದನ್ನೂ ಓದಿ
Image
Virat Kohli vs Rohit Sharma: 4 ವರ್ಷದಲ್ಲಿ 4 ಸೋಲು: ಒಂದೇ ವರ್ಷದಲ್ಲಿ 3 ಸೋಲು..!
Image
French Open 2023: ದಾಖಲೆಯ 23ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್..!
Image
WTC Final 2023: ಸೋಲಿನ ಬಳಿಕ 3 ವಿಚಾರಗಳನ್ನಿಟ್ಟುಕೊಂಡು ಐಸಿಸಿ ವಿರುದ್ಧ ಕೆಂಡಕಾರಿದ ರೋಹಿತ್..!
Image
WTC ಫೈನಲ್​ನಲ್ಲಿ ಮಿಂಚಿದ IPL ಆಡದ ಆಟಗಾರರು..!

ಭಾರತ ಮೊದಲ ಇನ್ನಿಂಗ್ಸ್:

ಭಾರತ ಪರ ಓಪನರ್​ಗಳಾದ ನಾಯಕ ರೋಹಿತ್​ ಶರ್ಮಾ (15) ಹಾಗೂ ಶುಭ್​ಮನ್​ ಗಿಲ್​ (13) ವೈಫಲ್ಯ ಅನುಭವಿಸಿದರು. ಚೇತೇಶ್ವರ ಪೂಜಾರ (14) ಹಾಗೂ ವಿರಾಟ್​ ಕೊಹ್ಲಿ (14) ಕೂಡ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್​ಗೆ ಅಜಿಂಕ್ಯ ರಹಾನೆ (89) ಹಾಗೂ ರವೀಂದ್ರ ಜಡೇಜಾ (48) ಉತ್ತಮ ಇನ್ನಿಂಗ್​ ಕಟ್ಟಿ ತಂಡಕ್ಕೆ ನೆರವಾದರು. 71 ರನ್​ಗಳ ಜೊತೆಯಾಟ ಆಡಿದರು. ಆಲ್​ರೌಂಡರ್ ಶಾರ್ದೂಲ್​ ಠಾಕೂರ್​ (51) ತಾಳ್ಮೆಯ ಬ್ಯಾಟಿಂಗ್​ ಮಾಡಿದರು. ಅಂತಿಮವಾಗಿ ಭಾರತ ಆಸಿಸ್​ ವಿರುದ್ಧ ಮೊದಲ ಇನ್ನಿಂಗ್ಸ್​ನಲ್ಲಿ 296 ರನ್​ ಗಳಿಸಿತು.

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್:

ಎರಡನೇ ಇನ್ನಿಂಗ್ಸ್​ನಲ್ಲಿ ಡೇವಿಡ್​ ವಾರ್ನರ್ (1), ಉಸ್ಮಾನ್​ ಖ್ವಾಜಾ (13) ಬೇಗನೆ ನಿರ್ಗಮಿಸಿದರೆ, ಮೂರನೇ ವಿಕೆಟ್​ಗೆ ಮಾರ್ನಸ್ ಲಾಬುಶೇನ್ (41) ಹಾಗೂ ಸ್ಟೀವನ್ ಸ್ಮಿತ್ (34) 62 ರನ್​ಗಳ ಜೊತೆಯಾಟ ಆಡಿದರು. ಕ್ಯಾಮ್ರೋನ್ ಗ್ರೀನ್ 25 ರನ್ ಗಳಿಸಿದರೆ, ಅಲೆಕ್ಸ್ ಕ್ಯಾರಿ ಅಜೇಯ 66 ರನ್ ಸಿಡಿಸಿದರು. ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿ ಭಾರತಕ್ಕೆ 444 ರನ್​ಗಳ ಟಾರ್ಗೆಟ್ ನೀಡಿತು. ಭಾರತ ಪರ ಜಡೇಜಾ 3 ವಿಕೆಟ್ ಪಡೆದರೆ, ಉಮೇಶ್ ಯಾದವ್ ಹಾಗೂ ಶಮಿ ತಲಾ 2 ವಿಕೆಟ್ ಕಿತ್ತರು.

ಭಾರತ ದ್ವಿತೀಯ ಇನ್ನಿಂಗ್ಸ್:

ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್​ನಲ್ಲಿ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಐಪಿಎಲ್ ಹೀರೋ ಶುಭ್​ಮನ್ ಗಿಲ್ 18 ರನ್​ಗೆ ಸುಸ್ತಾದರು. ನಾಯಕ ರೋಹಿತ್ ಶರ್ಮಾ 60 ಎಸೆತಗಳಲ್ಲಿ 43 ರನ್​ಗೆ ಔಟಾದರೆ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 27 ರನ್​ಗೆ ನಿರ್ಗಮಿಸಿದರು. ನಂತರ ಜೊತೆಯಾದ ವಿರಾಟ್ ಕೊಹ್ಲಿ (ಅಜೇಯ 44) ಹಾಗೂ ಅಜಿಂಕ್ಯ ರಹಾನೆ (ಅಜೇಯ 20) ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು. ಗೆಲುವಿಗೆ 280 ರನ್ ಬೇಕಿತ್ತು.

ಕೊನೆಯ ದಿನ ಭಾರತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಗಳಿಸಿದ್ದು ಕೇವಲ 70 ರನ್. ಒಂದೇ ಓವರ್​ನಲ್ಲಿ ವಿರಾಟ್​ ಕೊಹ್ಲಿ (49) ಮತ್ತು ರವೀಂದ್ರ ಜಡೇಜ (0) ವಿಕೆಟ್​ ಕಳೆದುಕೊಂಡಿತು. ಅಜಿಂಕ್ಯಾ ರಹಾನೆ 108 ಬಾಲ್​ನಲ್ಲಿ 7 ಬೌಂಡರಿಯಿಂದ 46 ರನ್​ ಗಳಿಸಿ ಆಡುವಾಗ ವಿಕೆಟ್​ ಕೊಟ್ಟರು. ಶಾರ್ದೂಲ್​ ಠಾಕೂರ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರೆ, 23 ರನ್ ಗಳಿಸಿ ಶ್ರೀಕರ್​ ಭರತ್ ಕೂಡಾ ಔಟಾದರು. ಭಾರತ 234ಕ್ಕೆ ಆಲೌಟ್ ಆಯಿತು. ಆಸ್ಟ್ರೇಲಿಯಾದ ನೇಥನ್​ ಲಿಯಾನ್​ 4, ಸ್ಕಾಟ್​ ಬೋಲ್ಯಾಂಡ್​ 3, ಮಿಚೆಲ್​ ಸ್ಟಾರ್ಕ್​ 2 ವಿಕೆಟ್ ಕಿತ್ತರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್‌ಗೆ ಗಂಭೀರ ಗಾಯ
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್‌ಗೆ ಗಂಭೀರ ಗಾಯ
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ