ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ICC World Test Championship) ಫೈನಲ್‌ಗೂ ಮುನ್ನ ಆಸ್ಟ್ರೇಲಿಯಾ ಹಿನ್ನಡೆ ಅನುಭವಿಸಿದೆ. ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಜೋಶ್ ಹೇಜಲ್‌ವುಡ್ (Josh Hazelwood) ಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೇಜಲ್‌ವುಡ್‌ಗೆ ಹಿಮ್ಮಡಿ ಗಾಯವಾಗಿದ್ದು, ಆಶಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಲು ಮಂಡಳಿ ಚಿಂತಿಸಿದೆ. ವಾಸ್ತವವಾಗಿ ಐಪಿಎಲ್‌ನಲ್ಲಿ ಆರ್ಸಿಬಿ (RCB) ಪರ ಆಡಿದ್ದ ಜೋಶ್ ಟೂರ್ನಿಯ ಮಧ್ಯದಲ್ಲೇ ಇಂಜುರಿಗೊಳಗಾಗಿದ್ದರು. ಈ ಕಾರಣಕ್ಕಾಗಿ ಅವರು ಐಪಿಎಲ್‌ನ (IPL 2023) ಮಧ್ಯದಲ್ಲಿಯೇ ಆರ್ಸಿಬಿ ತಂಡ ತೊರೆದಿದ್ದರು. ಆದರೆ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೂ ಮುನ್ನ ಅವರು ಫಿಟ್ ಆಗುತ್ತಾರೆ ಎಂದು ಆಸ್ಟ್ರೇಲಿಯಾ ಭಾವಿಸಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಹೇಜಲ್‌ವುಡ್‌ಗೆ ಫೈನಲ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಹೀಗಾಗಿ ಜೂನ್ 7 ರಿಂದ ಆರಂಭವಾಗುವ ಟೆಸ್ಟ್ ವಿಶ್ವಕಪ್ಗೆ ಹೇಜಲ್‌ವುಡ್ ಬದಲು ಆಸೀಸ್ ತಂಡದಲ್ಲಿ ಯಾರು ಆಡುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ಹೇಜಲ್‌ವುಡ್ ಫಿಟ್ ಆಗಿದ್ದರೆ, ಅವರು ಫೈನಲ್‌ನಲ್ಲಿ ಆಡುವುದು ಖಚಿತವಾಗಿತ್ತು. ಆದರೆ ಈಗ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡದ ಮ್ಯಾನೇಜ್‌ಮೆಂಟ್ ಹೇಜಲ್‌ವುಡ್ ಬದಲಿಯಾಗಿ ಮತ್ತೊಬ್ಬ ಬೌಲರ್ನನ್ನು ಕಂಡುಕೊಳ್ಳಬೇಕಾಗಿದೆ. ಇದಕ್ಕಾಗಿ ಆಸ್ಟ್ರೇಲಿಯಾ ಎರಡು ಆಯ್ಕೆಗಳನ್ನು ಹೊಂದಿದೆ.
ICYMI, Josh Hazlewood has been ruled out of the #WTC23 final against India.
Details ⬇️https://t.co/cmbUwbeqCw
— ICC (@ICC) June 5, 2023
ಹೇಜಲ್‌ವುಡ್ ಬದಲಿಗೆ ಮೈಕಲ್ ನೆಸರ್ ಆಸ್ಟ್ರೇಲಿಯ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ. ಈ ಆಟಗಾರ ಆಸ್ಟ್ರೇಲಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕಳೆದ ವರ್ಷ ನಡೆದ ಆಶಸ್ ಸರಣಿಯಲ್ಲಿ ಆಸೀಸ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದುವರೆಗೆ ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ನೆಸರ್ ಏಳು ವಿಕೆಟ್ ಪಡೆದಿದ್ದಾರೆ. ಇದೀಗ ಹೇಜಲ್‌ವುಡ್ ಬದಲಿಗೆ ತಂಡಕ್ಕೆ ಬಂದಿರುವ ನೆಸರ್, ಆಸೀಸ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಆಡುತ್ತಾರಾ ಅಥವಾ ಇಲ್ಲವಾ ಎಂಬ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಇದಕ್ಕೆ ಕಾರಣವೂ ಇದ್ದು ನೇಸರ್ಗಿಂತ ಆಸೀಸ್ ತಂಡದಲ್ಲಿ ಹೆಚ್ಚು ಪಂದ್ಯಗಳನ್ನಾಡಿರುವ ಸ್ಕಾಟ್ ಬೋಲ್ಯಾಂಡ್ ಅವರನ್ನು ಆಸೀಸ್ ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ.
WTC Final 2023, IND vs AUS: ಲಂಡನ್ನ ಓವಲ್ ಮೈದಾನಕ್ಕೆ ಬಂದ ಟೀಮ್ ಇಂಡಿಯಾ ಆಟಗಾರರು: ಮಿಸ್ಟ್ರಿ ಪಿಚ್ ಕಂಡು ಶಾಕ್?
ಬೋಲ್ಯಾಂಡ್ ಆಸ್ಟ್ರೇಲಿಯಾ ಪರ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಏಳು ಪಂದ್ಯಗಳಲ್ಲಿ 28 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಬೋಲ್ಯಾಂಡ್ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಇದೇ ಭಾರತದ ವಿರುದ್ಧವೇ ಆಡಿದ್ದರು. ಈ ವರ್ಷದ ಆರಂಭದಲ್ಲಿ ಭಾರತ ಪ್ರವಾಸಕ್ಕೆ ಬಂದಿದ್ದ ಆಸ್ಟ್ರೇಲಿಯಾ ತಂಡದಲ್ಲಿ ಬೋಲ್ಯಾಂಡ್‌ಗೆ ಅವಕಾಶ ಸಿಕ್ಕಿತ್ತು. ನಾಗ್ಪುರದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೋಲ್ಯಾಂಡ್‌ಗೆ ಆಡುವ ಅವಕಾಶ ಸಿಕ್ಕಿತ್ತು. ಆದರೆ ಆ ಪಂದ್ಯದಲ್ಲಿ ಬೋಲ್ಯಾಂಡ್‌ಗೆ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ.
ಇದೀಗ ಆಸೀಸ್ ತಂಡದಿಂದ ಹೇಜಲ್‌ವುಡ್ ಹೊರಬಿದ್ದಿರುವುದು ಭಾರತಕ್ಕೆ ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ ಈ ಬಲಗೈ ವೇಗದ ಬೌಲರ್ಗೆ ತನ್ನ ಅತ್ಯುತ್ತಮ ಬೌಲಿಂಗ್‌ನಿಂದ ಪಂದ್ಯದ ದಿಕ್ಕನೇ ಬದಲಿಸುವ ಸಾಮಥ್ರ್ಯವಿತ್ತು. ಆದರೆ ಹೇಜಲ್‌ವುಡ್ ಅಲಭ್ಯತೆ ಭಾರತಕ್ಕೆ ಮತ್ತೊಂದು ಸಂಕಷ್ಟವನ್ನು ತಂದ್ದೊಡ್ಡಿದೆ. ಏಕೆಂದರೆ ಹೇಜಲ್‌ವುಡ್ ಬದಲು ತಂಡದಲ್ಲಿ ಸ್ಥಾನ ಪಡೆಯುವ ಉಳಿದ ಇಬ್ಬರು ಬೌಲರ್ಗಳ ವಿರುದ್ಧ ಟೀಂ ಇಂಡಿಯಾ ಆಟಗಾರರು ಆಡಿಲ್ಲ. ಹೀಗಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಅವರ ಬೌಲಿಂಗ್ ಹೇಗಿದೆ ಎಂದು ತಿಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರಲ್ಲಿ ಯಾರೇ ತಂಡದಲ್ಲಿ ಸ್ಥಾನ ಪಡೆದರೂ ಅವರು ಭಾರತಕ್ಕೆ ದುಸ್ವಪ್ನವಾಗಬಹುದು. ಇಂಗ್ಲೆಂಡ್‌ನಲ್ಲಿನ ಪರಿಸ್ಥಿತಿಗಳು ಹೇಗಾದರೂ ವೇಗದ ಬೌಲರ್‌ಗಳಿಗೆ ಸ್ನೇಹಿಯಾಗಿದ್ದು, ಯಾರೇ ಆಡಿದರೂ ಖಂಡಿತ ಸಹಾಯ ಪಡೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಹೇಜಲ್‌ವುಡ್ ಅನುಪಸ್ಥಿತಿ ಭಾರತಕ್ಕೆ ಒಂದು ರೀತಿಯಲ್ಲಿ ಸಂಕಷ್ಟವನ್ನೇ ತಂದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ