Ranji Trophy: ಕೇವಲ 6 ಇನ್ನಿಂಗ್ಸ್​ನಲ್ಲಿ 3ನೇ ಭರ್ಜರಿ ಶತಕ! ರಣಜಿಯಲ್ಲಿ ವಿಶ್ವಕಪ್ ಹೀರೋ ಯಶ್ ಧುಲ್ ಅಬ್ಬರ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 08, 2022 | 7:41 AM

Yash Dhull: ಛತ್ತೀಸ್‌ಗಢ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಯಶ್ ಧುಲ್ ಅದ್ಭುತ ಶತಕ ಗಳಿಸಿದ್ದಾರೆ, ಇದು ರಣಜಿ ಟ್ರೋಫಿಯಲ್ಲಿ ಬ್ಯಾಟ್‌ನೊಂದಿಗೆ ಅವರ ಮೂರನೇ ಶತಕವಾಗಿದೆ. ಈ ಶತಕದಿಂದಾಗಿ ಡೆಲ್ಲಿ ಛತ್ತೀಸ್ ಗಢದ ಮೇಲೂ ಮುನ್ನಡೆ ಸಾಧಿಸಿದೆ.

Ranji Trophy: ಕೇವಲ 6 ಇನ್ನಿಂಗ್ಸ್​ನಲ್ಲಿ 3ನೇ ಭರ್ಜರಿ ಶತಕ! ರಣಜಿಯಲ್ಲಿ ವಿಶ್ವಕಪ್ ಹೀರೋ ಯಶ್ ಧುಲ್ ಅಬ್ಬರ
ಯಶ್ ಧುಲ್
Follow us on

ವಯಸ್ಸು ಕೇವಲ 19 ವರ್ಷ.. ಆದರೆ ಬ್ಯಾಟಿಂಗ್​ಗೆ ಯಾರು ಸರಿಸಾಟಿ ಇಲ್ಲ. ಅನುಭವಿ ಆಟಗಾರರೂ ಇದನ್ನು ನೋಡಿ ಬೆರಗಾಗುವಂತಹ ಆಟ. ತಂಡವನ್ನು ಏಕಾಂಗಿಯಾಗಿ ಗೆಲ್ಲಿಸುವ ಸಾಮಥ್ಯ್ರ ಹೊಂದಿರುವ ಆಟಗಾರ ಅಂಡರ್ 19 ಟಿ20 ವಿಶ್ವಕಪ್ ಹೀರೋ ಯಶ್ (Yash Dhull). ಭಾರತಕ್ಕೆ ಐದನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ನಾಯಕ, ಇದೀಗ ರಣಜಿ ಟ್ರೋಫಿ (Ranji Trophy)ಯಲ್ಲಿ ಮೂರನೇ ಶತಕ ಬಾರಿಸಿದ್ದಾರೆ. ಅವರು ತಮ್ಮ ಮೂರನೇ ರಣಜಿ ಪಂದ್ಯದಲ್ಲಿ ದೆಹಲಿ ಪರ ಇನ್ನಿಂಗ್ಸ್ ಆರಂಭಿಸಿ ಈ ಸಾಧನೆ ಮಾಡಿದರು. ಛತ್ತೀಸ್‌ಗಢ ವಿರುದ್ಧದ ಮೂರನೇ ರಣಜಿ ಶತಕಕ್ಕೆ ಅವರು ಸ್ಕ್ರಿಪ್ಟ್ ಬರೆದರು.

ಈ ಹಿಂದೆ ಅವರು ತಮ್ಮ ಮೊದಲ ರಣಜಿ ಪಂದ್ಯದಲ್ಲೇ ಎರಡು ಶತಕಗಳ ಕಥೆ ಬರೆದಿದ್ದರು. ತಮಿಳುನಾಡು ವಿರುದ್ಧದ ಅವರ ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕಗಳನ್ನು ಗಳಿಸಿದರು. ಅಂದರೆ ಬ್ಯಾಕ್ ಟು ಬ್ಯಾಕ್ ಶತಕಗಳು ದಾಖಲಾಗಿದ್ದವು. ನಂತರ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ 113 ರನ್ ಗಳಿಸಿದರು. ಈ ಮೂಲಕ ತಮ್ಮ ಚೊಚ್ಚಲ ರಣಜಿಯಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇವರಿಗಿಂತ ಮೊದಲು 1952-53ನೇ ಸಾಲಿನಲ್ಲಿ ನಾರಿ ಕಾಂಟ್ರಾಕ್ಟರ್ ಹಾಗೂ 2012-13ನೇ ಸಾಲಿನಲ್ಲಿ ವಿರಾಗ್ ಅವಟೆ ಈ ಅದ್ಭುತ ಸಾಧನೆ ಮಾಡಿದ್ದರು. ಇದರ ನಂತರ ಯಶ್ ಧುಲ್ ಜಾರ್ಖಂಡ್ ವಿರುದ್ಧ ಎರಡನೇ ರಣಜಿ ಪಂದ್ಯವನ್ನು ಆಡಿದರು. ಆದರೆ ಅಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲಾಗಲಿಲ್ಲ.

ಯಶ್ ಧುಲ್ ಮೂರನೇ ರಣಜಿ ಶತಕ
ಅಲ್ಲದೆ, ಛತ್ತೀಸ್‌ಗಢ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲೂ ಬ್ಯಾಟ್ ಕೆಲಸ ಮಾಡಲಿಲ್ಲ. ಛತ್ತೀಸ್‌ಗಢ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಯಶ್ ಧುಲ್ ಕೇವಲ 29 ರನ್ ಗಳಿಸಿದ್ದರು. ಅಷ್ಟೇ ಅಲ್ಲದೇ ಇಡೀ ತಂಡ ಕೇವಲ 295 ರನ್‌ಗಳಿಗೆ ಆಲ್​ಔಟ್ ಆಯಿತು. ನಂತರ ದೆಹಲಿಯು ಫಾಲೋ-ಆನ್ ಆಡಬೇಕಾಯಿತು. ಅಂದರೆ, ದೊಡ್ಡ ಸೋಲಿನ ಬಿಕ್ಕಟ್ಟು ತಂಡದಲ್ಲಿ ಕಾಡುತ್ತಿತ್ತು. ಆದರೆ, ಈ ಬಿಕ್ಕಟ್ಟಿನ ಸಮಯದಲ್ಲಿ, ಯುವ ಯಶ್ ಧುಲ್ ತಂಡಕ್ಕಾಗಿ ಹೋರಾಟ ನಡೆಸಿದರು.

ಛತ್ತೀಸ್‌ಗಢ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಯಶ್ ಧುಲ್ ಅದ್ಭುತ ಶತಕ ಗಳಿಸಿದ್ದಾರೆ, ಇದು ರಣಜಿ ಟ್ರೋಫಿಯಲ್ಲಿ ಬ್ಯಾಟ್‌ನೊಂದಿಗೆ ಅವರ ಮೂರನೇ ಶತಕವಾಗಿದೆ. ಈ ಶತಕದಿಂದಾಗಿ ಡೆಲ್ಲಿ ಛತ್ತೀಸ್ ಗಢದ ಮೇಲೂ ಮುನ್ನಡೆ ಸಾಧಿಸಿದೆ.

ಛತ್ತೀಸ್‌ಗಢ 482/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್
ಇದಕ್ಕೂ ಮೊದಲು ಛತ್ತೀಸ್‌ಗಢ ತನ್ನ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 482 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಯಶ್ ಧುಲ್ ಹೊರತಾಗಿ, ದೆಹಲಿಯ ಎರಡನೇ ಓಪನರ್ ಧ್ರುವ ಶೋರೆ ಕೂಡ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಗಳಿಸಿದರು. ಇವರಿಬ್ಬರು ಸೇರಿಕೊಂಡು ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಸುಲಭ ಜಯ ತಂದುಕೊಟ್ಟಿದ್ದು, ಇದೀಗ ಬಹುತೇಕ ಡ್ರಾದತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ:ಡ್ರಗ್ಸ್ ಪ್ರಕರಣದಲ್ಲಿ ಅಮೇರಿಕಾದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ್ತಿಯನ್ನು ಬಂಧಿಸಿದ ರಷ್ಯಾ! ಶಿಕ್ಷೆ ಎಷ್ಟು ವರ್ಷ ಗೊತ್ತಾ?

Published On - 1:46 pm, Sun, 6 March 22