AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 7 ಇನ್ನಿಂಗ್ಸ್​ಗಳಲ್ಲಿ ಒಂದೇ ರೀತಿ ಔಟ್; ಇಂಗ್ಲೆಂಡ್​ನಲ್ಲಿ ಬಹಿರಂಗವಾಯ್ತು ಜೈಸ್ವಾಲ್ ವೀಕ್ನೆಸ್

Yashasvi Jaiswal's Struggle: ಯಶಸ್ವಿ ಜೈಸ್ವಾಲ್ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದ ಜೈಸ್ವಾಲ್, ಇಂಗ್ಲೆಂಡ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 7 ಬಾರಿ ಒಂದೇ ರೀತಿಯಲ್ಲಿ ಔಟಾಗಿರುವುದು ಅವರ ಬ್ಯಾಟಿಂಗ್ ದೌರ್ಬಲ್ಯಗಳನ್ನು ಎತ್ತಿ ತೋರಿಸುತ್ತದೆ. ಮುಂದಿನ ಪಂದ್ಯಗಳಲ್ಲಿ ಸುಧಾರಣೆ ಕಂಡುಕೊಳ್ಳುವುದು ಅವರಿಗೆ ಸವಾಲಾಗಿದೆ.

IND vs ENG: 7 ಇನ್ನಿಂಗ್ಸ್​ಗಳಲ್ಲಿ ಒಂದೇ ರೀತಿ ಔಟ್; ಇಂಗ್ಲೆಂಡ್​ನಲ್ಲಿ ಬಹಿರಂಗವಾಯ್ತು ಜೈಸ್ವಾಲ್ ವೀಕ್ನೆಸ್
Yashasvi Jaiswal
ಪೃಥ್ವಿಶಂಕರ
|

Updated on: Jul 31, 2025 | 8:49 PM

Share

ಯಶಸ್ವಿ ಜೈಸ್ವಾಲ್ (Yashasvi Jaiswal) ತಮ್ಮ ಮೊದಲ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಮೆಚ್ಚಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿಯೂ ಭಾರತದ ಯುವ ಆರಂಭಿಕ ಆಟಗಾರನಿಂದ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಇದಕ್ಕೆ ಪೂರಕವಾಗಿ ಜೈಸ್ವಾಲ್ ಕೂಡ ಅದೇ ರೀತಿಯ ಆರಂಭವನ್ನು ಪಡೆದುಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿದ್ದರು. ಆದರೆ ಆ ಬಳಿಕ ಅವರ ಪ್ರದರ್ಶನದಲ್ಲಿ ವಿಶೇಷವೇನು ಕಂಡುಬಂದಿಲ್ಲ. ಇದೀಗ ಓವಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್​ನಲ್ಲಿಯೂ ಜೈಸ್ವಾಲ್ ಒಂದಂಕಿಗೆ ಸುಸ್ತಾಗಿದ್ದಾರೆ. ಈ ರೀತಿಯಾಗಿ, ಈ ಸರಣಿಯಲ್ಲಿ ಆರನೇ ಬಾರಿಗೆ, ಅವರು 50 ಕ್ಕಿಂತ ಕಡಿಮೆ ಸ್ಕೋರ್‌ಗೆ ಔಟಾಗಿದ್ದಾರೆ, ಆದರೆ 7 ನೇ ಬಾರಿಗೆ ಅವರು ಒಂದೇ ರೀತಿಯಲ್ಲಿ ಔಟಾಗಿರುವುದು ತಂಡದ ಕಳವಳವನ್ನು ಹೆಚ್ಚಿಸಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಜುಲೈ 31 ರಂದು ಪ್ರಾರಂಭವಾಗಿದೆ. ಈ ಪಂದ್ಯದಲ್ಲೂ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿದೆ. ಆದರೆ ಈ ಬಾರಿಯೂ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಲ್ಕನೇ ಓವರ್‌ನಲ್ಲಿ ಗಸ್ ಅಟ್ಕಿನ್ಸನ್ ಅವರ ಎಸೆತದಲ್ಲಿ ಜೈಸ್ವಾಲ್ ಎಲ್ಬಿಡಬ್ಲ್ಯೂ ಆಗಿ ಔಟಾಗುವ ಮೂಲಕ ತಂಡಕ್ಕೆ ಮೊದಲ ಆಘಾತ ನೀಡಿದರು. ಈ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಕೇವಲ 2 ರನ್​ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಕ್ಕೆ ದೊಡ್ಡ ಆರಂಭ ನೀಡುವಲ್ಲಿ ವಿಫಲರಾದರು.

ಜೈಸ್ವಾಲ್ ಅವರ ಆರನೇ ವೈಫಲ್ಯ

ಇಂಗ್ಲೆಂಡ್ ವಿರುದ್ಧದ ಈ ಸರಣಿಯ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಶತಕ ಗಳಿಸಿದ್ದರು. ಮುಂದಿನ ಪಂದ್ಯದಲ್ಲೂ ಜೈಸ್ವಾಲ್ ಅವರಿಂದ ಇದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಮುಂದಿನ 8 ಸತತ ಇನ್ನಿಂಗ್ಸ್‌ಗಳಲ್ಲಿ ಜೈಸ್ವಾಲ್ ಬ್ಯಾಟ್​ನಿಂದ ಕೇವಲ 2 ಅರ್ಧಶತಕಗಳು ಮಾತ್ರ ಸಿಡಿದಿದ್ದರೆ, 4 ಬಾರಿ ಒಂದಂಕಿಗೆ ಔಟಾಗಿದ್ದಾರೆ. ಅದರಲ್ಲಿ 2 ಬಾರಿ ಜೈಸ್ವಾಲ್‌ಗೆ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ, ಈ ಸರಣಿಯಲ್ಲಿ ಅವರ ಸ್ಕೋರ್‌ ಕ್ರಮವಾಗಿ 101, 4, 87, 28, 13, 0, 58, 0, 2 ಆಗಿದೆ.

IND vs ENG: 51 ವರ್ಷಗಳ ಬಳಿಕ ಮ್ಯಾಂಚೆಸ್ಟರ್​ನಲ್ಲಿ ಇತಿಹಾಸ ಬರೆದ ಯಶಸ್ವಿ ಜೈಸ್ವಾಲ್

7ನೇ ಬಾರಿಗೆ ಒಂದೇ ರೀತಿಯಲ್ಲಿ ಔಟ್

ಕಡಿಮೆ ಸ್ಕೋರ್‌ ಮಾತ್ರವಲ್ಲ, ಈ ಸರಣಿಯಲ್ಲಿ ಜೈಸ್ವಾಲ್ ಔಟ್ ಆದ ರೀತಿಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಾಸ್ತವವಾಗಿ, ಈ ಸರಣಿಯಲ್ಲಿ ಜೈಸ್ವಾಲ್ ಎಲ್ಲಾ 9 ಇನ್ನಿಂಗ್ಸ್‌ಗಳಲ್ಲಿ ವಿಕೆಟ್ ಒಪ್ಪಿಸಿದ್ದು, ಅದರಲ್ಲಿ 7 ಬಾರಿ ಒಂದೇ ನ್ಯೂನತೆಗೆ ಬಲಿಯಾಗಿದ್ದಾರೆ. ವಾಸ್ತವವಾಗಿ ಜೈಸ್ವಾಲ್, ಬಲಗೈ ವೇಗದ ಬೌಲರ್ ರೌಂಡ್​ ದಿ ವಿಕೆಟ್​ ಬಂದು ಬೌಲಿಂಗ್ ಮಾಡಿದಾಗಲೆಲ್ಲ ಎಲ್ಬಿಡಬ್ಲ್ಯೂ ಬಲೆಗೆ ಅಥವಾ ಸ್ಲಿಪ್​ನಲ್ಲಿ ಕ್ಯಾಚ್​ ನೀಡಿ ಔಟಾಗಿದ್ದಾರೆ. ಇದರರ್ಥ ಜೈಸ್ವಾಲ್ ಅವರ ದೌರ್ಬಲ್ಯ ಇಂಗ್ಲೆಂಡ್​ನಲ್ಲಿ ಜಗಜ್ಜಾಹೀರಾದಂತ್ತಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ನ್ಯೂನತೆಯನ್ನು ಸರಿಪಡಿಸುವುದು ಜೈಸ್ವಾಲ್‌ಗೆ ಸವಾಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್