IND vs ENG: ಯಶಸ್ವಿ ಜೈಸ್ವಾಲ್ ಬ್ಯಾಟ್ ಮುರಿದ ಇಂಗ್ಲೆಂಡ್ ವೇಗಿ; ಇದರ ಬೆಲೆ ಎಷ್ಟು?
Yashasvi Jaiswal's Bat: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ, ಯಶಸ್ವಿ ಜೈಸ್ವಾಲ್ ಅವರ ಬ್ಯಾಟ್ ಕ್ರಿಸ್ ವೋಕ್ಸ್ ಅವರ ಎಸೆತಕ್ಕೆ ಮುರಿದುಹೋದ ಘಟನೆ ವೈರಲ್ ಆಗಿದೆ. 9ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಜೈಸ್ವಾಲ್ ಹೊಸ ಬ್ಯಾಟ್ ತಂದು ಆಟ ಮುಂದುವರಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೈಸ್ವಾಲ್ ಬಳಸುವ ಬ್ಯಾಟ್‌ನ ಬೆಲೆ ಕುರಿತು ಚರ್ಚೆಗಳು ನಡೆಯುತ್ತಿವೆ. ಜೈಸ್ವಾಲ್ ಮತ್ತು ರಾಹುಲ್ ಅವರ ಉತ್ತಮ ಜೊತೆಯಾಟ ಭಾರತಕ್ಕೆ ಉತ್ತಮ ಆರಂಭ ಒದಗಿಸಿದೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಅದರಂತೆ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ಕೆಎಲ್ ರಾಹುಲ್ (KL Rahul) ತಂಡದ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದುವರೆಗೆ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದೆ. ಆದರೆ ಇದೇ ವೇಳೆ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಅವರ ಮಾರಕ ವೇಗ ಯಶಸ್ವಿ ಜೈಸ್ವಾಲ್ ಅವರ ಬ್ಯಾಟ್ ಅನ್ನು ಎರಡು ತುಂಡುಗಳನ್ನಾಗಿಸಿದೆ. ಭಾರತದ ಇನ್ನಿಂಗ್ಸ್‌ನ 9 ನೇ ಓವರ್‌ನಲ್ಲಿ, ಸ್ಟ್ರೈಕ್‌ನಲ್ಲಿದ್ದ ಯಶಸ್ವಿ ಜೈಸ್ವಾಲ್, ವೋಕ್ಸ್ ಅವರ ಎಸೆತವನ್ನು ಡಿಫೆಂಡ್ ಮಾಡುವ ವೇಳೆ ಅವರ ಬ್ಯಾಟ್ ಮುರಿದು ಹೋಗಿದ್ದು, ಇದರಿಂದಾಗಿ ಜೈಸ್ವಾಲ್ ಬೇರೆ ಬ್ಯಾಟನ್ನು ತರಿಸಿಬೇಕಾಯಿತು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಜೈಸ್ವಾಲ್ ಬ್ಯಾಟ್ ಮುರಿದ ವೋಕ್ಸ್
ಮೇಲೆ ಹೇಳಿದಂತೆ ಭಾರತದ ಇನ್ನಿಂಗ್ಸ್‌ನ 9 ನೇ ಓವರ್‌ನಲ್ಲಿ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಬೌಲಿಂಗ್ ಮಾಡುತ್ತಿದ್ದರು ಮತ್ತು ಯಶಸ್ವಿ ಜೈಸ್ವಾಲ್ ಸ್ಟ್ರೈಕ್‌ನಲ್ಲಿದ್ದರು. ಈ ಓವರ್‌ನ ಐದನೇ ಎಸೆತದಲ್ಲಿ, ಜೈಸ್ವಾಲ್ ರಕ್ಷಣಾತ್ಮಕ ಹೊಡೆತವನ್ನು ಆಡಲು ಪ್ರಯತ್ನಿಸಿದರು. ಚೆಂಡು ಅವರು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ಬೌನ್ಸ್ ಆಗಿ ನೇರವಾಗಿ ಅವರ ಬ್ಯಾಟ್‌ನ ಹ್ಯಾಂಡಲ್‌ಗೆ ಬಡಿಯಿತು. ಚೆಂಡಿನ ಹೊಡೆತ ಎಷ್ಟು ಬಲವಾಗಿತ್ತೆಂದರೆ ಜೈಸ್ವಾಲ್ ಅವರ ಬ್ಯಾಟ್‌ನ ಹ್ಯಾಂಡಲ್ ಮುರಿಯಿತು. ಇದನ್ನು ನೋಡಿದ ಆಟಗಾರರು, ಅಂಪೈರ್‌ಗಳು ಮತ್ತು ಮೈದಾನದಲ್ಲಿದ್ದ ಅಭಿಮಾನಿಗಳು ಆಘಾತಕ್ಕೊಳಗಾದರು. ಆ ಬಳಿಕ ಜೈಸ್ವಾಲ್ ಮುರಿದ ಬ್ಯಾಟ್ ಅನ್ನು ನೋಡಿ ನಂತರ ಅದನ್ನು ಬದಲಾಯಿಸಲು ಡಗೌಟ್ ಕಡೆಗೆ ಬೆರಳು ತೋರಿಸಿದರು.
ಬ್ಯಾಟ್ ಮುರಿದ ವಿಡಿಯೋ
Bat be like “mujhe kyun toda?” 😭🏏#ENGvIND 👉 4th TEST, DAY 1 | LIVE NOW on JioHotstar 👉 https://t.co/0VxBWU8ocO pic.twitter.com/q80vIuwqIj
— Star Sports (@StarSportsIndia) July 23, 2025
ಇದಾದ ನಂತರ, ಕರುಣ್ ನಾಯರ್ ತಂದ 4 ಬ್ಯಾಟ್‌ಗಳಲ್ಲಿ ಒಂದನ್ನು ಜೈಸ್ವಾಲ್ ಆಯ್ಕೆ ಮಾಡಿಕೊಂಡರು. ಈ ವಿಶಿಷ್ಟ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಜೈಸ್ವಾಲ್ ಬಳಸುವ ಬ್ಯಾಟ್‌ನ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ನೆಟ್ಟಿಗರು ಮುಂದಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜೈಸ್ವಾಲ್ ಬಳಸುವ ಬ್ಯಾಟ್‌ನ ಬೆಲೆ 1 ಲಕ್ಷ ರೂ. ಎಂದು ವರದಿಯಾಗಿದೆ.
IND vs ENG: ಸತತ 4ನೇ ಪಂದ್ಯದಲ್ಲೂ ಟಾಸ್ ಸೋತ ಭಾರತ; ಗಿಲ್ ಪಡೆಯಲ್ಲಿ 3 ಬದಲಾವಣೆ
ಭಾರತಕ್ಕೆ ಉತ್ತಮ ಆರಂಭ
ಈ ಘಟನೆಯ ಹೊರತಾಗಿಯೂ, ಯಶಸ್ವಿ ಜೈಸ್ವಾಲ್ ತಾಳ್ಮೆಯಿಂದ ತಮ್ಮ ಇನ್ನಿಂಗ್ಸ್ ಅನ್ನು ಮುಂದುವರಿಸಿದ್ದಾರೆ. ಅಲ್ಲದೆ ತಂಡಕ್ಕೆ ಅವಶ್ಯಕವಾಗಿದ್ದ ಜೊತೆಯಾಟವನ್ನು ಕಟ್ಟಿದ್ದಾರೆ. ಈ ಸುದ್ದಿ ಬರೆಯುವ ವೇಳೆಗೆ ಜೈಸ್ವಾಲ್ ಹಾಗೂ ರಾಹುಲ್ ನಡುವೆ ಮುರಿಯದ ವಿಕೆಟ್ಗೆ ಅರ್ಧಶತಕದ ಜೊತೆಯಾಟ ಮೂಡಿಬಂದಿದೆ. ಈ ಜೊತೆಯಾಟವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವ ಜವಾಬ್ದಾರಿ ಈ ಜೋಡಿ ಮೇಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:35 pm, Wed, 23 July 25
