IND vs ENG: ಸತತ 4ನೇ ಪಂದ್ಯದಲ್ಲೂ ಟಾಸ್ ಸೋತ ಭಾರತ; ಗಿಲ್ ಪಡೆಯಲ್ಲಿ 3 ಬದಲಾವಣೆ
India vs England Manchester Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಿದೆ. 1-2 ಅಂತರದಿಂದ ಹಿನ್ನಡೆಯಲ್ಲಿರುವ ಭಾರತ ತಂಡ, ಶುಭ್ಮನ್ ಗಿಲ್ ನೇತೃತ್ವದಲ್ಲಿ ಗೆಲುವಿನ ಆಸೆಯೊಂದಿಗೆ ಕಣಕ್ಕಿಳಿದಿದೆ. ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇಂಗ್ಲೆಂಡ್ ಕೂಡ ತನ್ನ ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಈ ಪಂದ್ಯ ಭಾರತಕ್ಕೆ ಸರಣಿಯಲ್ಲಿ ಉಳಿಯಲು ನಿರ್ಣಾಯಕವಾಗಿದೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಮ್ಯಾಂಚೆಸ್ಟರ್‌ನಲ್ಲಿ (Manchester Test) ಆರಂಭವಾಗಿದೆ. ಟೀಂ ಇಂಡಿಯಾ ಪ್ರಸ್ತುತ ಸರಣಿಯಲ್ಲಿ 1-2 ಅಂತರದಿಂದ ಹಿನ್ನಡೆಯಲ್ಲಿದ್ದು, ಈ ಪಂದ್ಯವನ್ನು ಗೆದ್ದರೆ ಮಾತ್ರ ಸರಣಿಯಲ್ಲಿ ಜೀವಂತವಾಗಿರಲಿದೆ. ಹೀಗಾಗಿ ಬಲಿಷ್ಠ ಪಡೆಯನ್ನು ಕಟ್ಟಿಕೊಂಡು ನಾಯಕ ಶುಭ್ಮನ್ ಗಿಲ್ (Shubman Gill) ಕಣಕ್ಕಿಳಿಯುತ್ತಿದ್ದಾರೆ. ಈ ಮೊದಲೇ ಗೊತ್ತಿದ್ದಂತೆ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ತಂಡದಲ್ಲಿ ನಿರೀಕ್ಷೆಯಂತೆ ಬದಲಾವಣೆಗಳನ್ನು ಮಾಡಲಾಗಿದೆ. ಇತ್ತ 2 ದಿನಗಳ ಮುಂಚೆಯೇ ಪ್ಲೇಯಿಂಗ್ 11 ಪ್ರಕಟಿಸಿದ್ದ ಇಂಗ್ಲೆಂಡ್ ಕೂಡ ತನ್ನ ತಂಡದಲ್ಲಿ 1 ಬದಲಾವಣೆಯನ್ನು ಮಾಡಿಕೊಂಡು ಮೈದಾನಕ್ಕಿಳಿದಿದೆ.
ಟೀಂ ಇಂಡಿಯಾದಲ್ಲಿ 3 ಬದಲಾವಣೆ
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಇತ್ತ ಸತತ 4ನೇ ಪಂದ್ಯದಲ್ಲೂ ಟಾಸ್ ಸೋತಿರುವ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಇಂಗ್ಲೆಂಡ್ ತಂಡ ಮೇಲೆ ಹೇಳಿದಂತೆ ತಂಡದಲ್ಲಿ 1 ಬದಲಾವಣೆಯನ್ನು ಮಾಡಿದ್ದು ಗಾಯಗೊಂಡಿರುವ ಶೊಯೆಬ್ ಬಶೀರ್ ಬದಲಿಗೆ ಲಿಯಮ್ ಡಾಸನ್ ಆಡುತ್ತಿದ್ದಾರೆ. ಇತ್ತ ಟೀಂ ಇಂಡಿಯಾದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದ್ದು, ಕರುಣ್ ನಾಯರ್, ನಿತೀಶ್ ರೆಡ್ಡಿ, ಆಕಾಶ್ ದೀಪ್ ಹೊರಗುಳಿದಿದ್ದರೆ, ಸಾಯಿ ಸುದರ್ಶನ್, ಶಾರ್ದೂಲ್ ಠಾಕೂರ್ ಹಾಗೂ ಅನ್ಶುಲ್ ಕಂಬೋಜ್ ಆಡುತ್ತಿದ್ದಾರೆ.
ಟಾಸ್ ಮಾಹಿತಿ
🚨 Toss Update 🚨
England win the toss and elect to bowl in Manchester.
Updates ▶️ https://t.co/L1EVgGu4SI#TeamIndia | #ENGvIND pic.twitter.com/Gn8NzxZZkQ
— BCCI (@BCCI) July 23, 2025
ಉಭಯ ತಂಡಗಳು
ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅನ್ಶುಲ್ ಕಂಬೋಜ್.
ಭಾರತದ ಪ್ಲೇಯಿಂಗ್ 11
Here’s #TeamIndia‘s Playing XI for the Fourth Test 🙌
Anshul Kamboj makes his Debut 👏👏
Updates ▶️ https://t.co/L1EVgGu4SI#ENGvIND pic.twitter.com/bR2QO2eT8H
— BCCI (@BCCI) July 23, 2025
ಇಂಗ್ಲೆಂಡ್ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಜೇಮೀ ಸ್ಮಿತ್, ಕ್ರಿಸ್ ವೋಕ್ಸ್, ಲಿಯಾಮ್ ಡಾಸನ್, ಬ್ರೈಡನ್ ಕೋರ್ಸೆ, ಜೋಫ್ರಾ ಆರ್ಚರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Wed, 23 July 25
