Yuvraj Singh: ವಿರಾಟ್ ಚೆನ್ನಾಗಿ ಆಡ್ತಿಲ್ಲ…ಕೊಹ್ಲಿಯ ಕೆಟ್ಟ ಫಾರ್ಮ್​ ಬಗ್ಗೆ ಯುವಿ ಹೇಳಿದ್ದೇನು?

| Updated By: ಝಾಹಿರ್ ಯೂಸುಫ್

Updated on: Apr 30, 2022 | 2:37 PM

Virat Kohli-Yuvraj Singh: ಈ ಬಾರಿಯ ಐಪಿಎಲ್​ನಲ್ಲಿ ಕೇವಲ ಆಟಗಾರನಾಗಿ ಕಾಣಿಸಿಕೊಂಡ ಕೊಹ್ಲಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದುವರೆಗೆ ಆಡಿದ 9 ಪಂದ್ಯಗಳಲ್ಲಿ 16 ರ ಸರಾಸರಿಯಲ್ಲಿ ಕೇವಲ 128 ರನ್ ಗಳಿಸಿದ್ದಾರೆ.

Yuvraj Singh: ವಿರಾಟ್ ಚೆನ್ನಾಗಿ ಆಡ್ತಿಲ್ಲ...ಕೊಹ್ಲಿಯ ಕೆಟ್ಟ ಫಾರ್ಮ್​ ಬಗ್ಗೆ ಯುವಿ ಹೇಳಿದ್ದೇನು?
Yuvraj Singh-Virat Kohli
Follow us on

ವಿರಾಟ್ ಕೊಹ್ಲಿ (Virat Kohli) ತಮ್ಮ ಕ್ರಿಕೆಟ್ ಜೀವನದ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಾಗಲಿ ಅಥವಾ ಐಪಿಎಲ್‌ನಲ್ಲಾಗಲಿ (IPL 2022) ಕೊಹ್ಲಿ ಬ್ಯಾಟ್​ನಿಂದ ರನ್​ ಮೂಡಿಬರುತ್ತಿಲ್ಲ. ಅದರಲ್ಲೂ ಈ ಬಾರಿಯ ಐಪಿಎಲ್​ನಲ್ಲಿ ಕೇವಲ ಆಟಗಾರನಾಗಿ ಕಾಣಿಸಿಕೊಂಡ ಕೊಹ್ಲಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದುವರೆಗೆ ಆಡಿದ 9 ಪಂದ್ಯಗಳಲ್ಲಿ 16 ರ ಸರಾಸರಿಯಲ್ಲಿ ಕೇವಲ 128 ರನ್ ಗಳಿಸಿದ್ದಾರೆ. ಅಲ್ಲದೆ ಒಂದೇ ಒಂದು ಅರ್ಧ ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ವಿರಾಟ್ ಕೊಹ್ಲಿಯ ಫಾರ್ಮ್​ ಆರ್​ಸಿಬಿ (RCB) ತಂಡದ ಚಿಂತೆಗೆ ಕಾರಣವಾಗಿದೆ. ಆದರೆ ಕಿಂಗ್ ಕೊಹ್ಲಿ ಶೀಘ್ರದಲ್ಲೇ ಕಂಬ್ಯಾಕ್ ಮಾಡಲಿದ್ದಾರೆ ಎಂದು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ. ಇದಕ್ಕೆ ಕೊಹ್ಲಿ ಮಾಡಬೇಕಿರುವುದು, ಅವರು ಮೊದಲಿನಂತೆ ಮುಕ್ತವಾಗಿ ಬ್ಯಾಟಿಂಗ್ ಮಾಡಬೇಕು ಅಷ್ಟೇ ಎಂದು ಯುವಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಕಳೆದುಹೋದ ಫಾರ್ಮ್ ಅನ್ನು ಮರಳಿ ಪಡೆಯಲು ತಮ್ಮ ಆರಂಭಿಕ ದಿನಗಳನ್ನು ನೋಡಬೇಕಾಗಿದೆ. ಕಳೆದ 15 ವರ್ಷಗಳಲ್ಲಿ ಬಂದಿರುವ ಯಾವುದೇ ಅಥ್ಲೀಟ್‌ಗಿಂತ ಕೊಹ್ಲಿಯ ಕಾರ್ಯವೈಖರಿ ನಾಲ್ಕು ಪಟ್ಟು ಉತ್ತಮವಾಗಿದೆ. ಇದೇ ಕಾರಣದಿಂದ ಅವರು ತಮ್ಮ ಕಳಪೆ ಫಾರ್ಮ್‌ನಿಂದ ಹೊರಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಸದ್ಯಕ್ಕೆ ಕೊಹ್ಲಿಯ ಫಾರ್ಮ್ ಉತ್ತಮವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅವರು ಇನ್ನೂ ರನ್ ಗಳಿಸುತ್ತಿದ್ದಾರೆ. ನಿಸ್ಸಂಶಯವಾಗಿ, ಅವರೂ ಕೂಡ ಇದರಿಂದ ಸಂತೋಷವಾಗಿಲ್ಲ. ಏಕೆಂದರೆ ಅವರು ಬೆಂಚ್‌ಮಾರ್ಕ್ ಆಟಗಾರ. ವಿರಾಟ್ ಮತ್ತೊಮ್ಮೆ ಮುಕ್ತವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ. ಈ ಹಿಂದೆ ಏನು ಮಾಡುತ್ತಿದ್ದೆ ಎಂಬುದನ್ನು ಅರಿತು, ತನ್ನನ್ನು ತಾನು ಬದಲಾಯಿಸಿಕೊಂಡು ಮೊದಲಿನಂತೆಯೇ ಇರಲು ಸಾಧ್ಯವಾದರೆ, ಅವರ ಹಳೆಯ ಖದರ್ ಮತ್ತೆ ಕಾಣಿಸಿಕೊಳ್ಳಲಿದೆ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಈಗಾಗಲೇ ಈ ಯುಗದ ಅತ್ಯುತ್ತಮ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ಕಾರ್ಯವೈಖರಿ ಕೂಡ ಅದ್ಭುತವಾಗಿದೆ. ಈ ಕಾರಣದಿಂದಾಗಿ ಆತ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಹೀಗಾಗಿ ಕಂಬ್ಯಾಕ್ ಮಾಡುವುದು ತುಂಬಾ ಸುಲಭ. ಅಲ್ಲದೆ ಶೀಘ್ರದಲ್ಲೇ ಕಂಬ್ಯಾಕ್ ಮಾಡಲಿದ್ದಾರೆ ಎಂದು ಯುವಿ ಹೇಳಿದರು.

ಅದರಂತೆ ಇನ್ನು ಐಪಿಎಲ್​ನಲ್ಲಿ ಆರ್​ಸಿಬಿ ತಂಡಕ್ಕೆ 5 ಪಂದ್ಯಗಳು ಉಳಿದಿದ್ದು, ಈ ಮ್ಯಾಚ್​ಗಳಲ್ಲಿ ವಿರಾಟ್ ಕೊಹ್ಲಿ ಆಡುವುದು ಬಹುತೇಕ ಖಚಿತ ಎನ್ನಬಹುದು. ಹೀಗಾಗಿ 5 ಪಂದ್ಯಗಳ ಒಳಗೆ ಕಿಂಗ್ ಕೊಹ್ಲಿ ಮತ್ತೆ ಫಾರ್ಮ್​​ಗೆ ಮರಳಲಿದ್ದಾರಾ ಕಾದು ನೋಡಬೇಕಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.