ಏಷ್ಯಾಕಪ್‌ನಲ್ಲಿ ನಿರೀಕ್ಷೆ ತಕ್ಕಂತೆ ಆಡದ ಟೀಂ ಇಂಡಿಯಾ ಈಗ ವಿಶ್ವಕಪ್ಗೆ ಸಿದ್ದತೆ ನಡೆಸುತ್ತಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯ ಹಾಗೂ ಆಫ್ರಿಕಾ ಎದುರು ಟಿ20 ಸರಣಿಯನ್ನು ಆಡಬೇಕಿದೆ. ಈ ಎರಡು ದೇಶಗಳೊಂದಿಗಿನ ಸರಣಿಗೆ ಸಾಕಷ್ಟು ಸಮಯವಿದ್ದು, ಹೀಗಾಗಿ ಟೀಂ ಇಂಡಿಯಾ ಆಟಗಾರರು ತಮ್ಮ ಮಡದಿ- ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅವರ ಸಾಲಿಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಚಹಲ್ ದಂಪತಿಗಳು ಸಹ ಸೇರಿದ್ದಾರೆ. ಕೆಲವು ದಿನಗಳಿಂದ ಈ ಜೋಡಿಗಳ ಬಗ್ಗೆ ಅನೇಕ ಗಾಸಿಪ್ಗಳು ಮತ್ತು ವದಂತಿಗಳು ಕೇಳಲಾರಂಬಿಸಿದ್ದವು. ಚಹಲ್- ಹಾಗೂ ಧನಶ್ರೀ ನಡುವಿನ ವೈವಾಹಿಕ ಬದುಕಿನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂತಲೂ ಹಲವು ಸುದ್ದಿಗಳು ಬಿತ್ತರಿಸಿದ್ದವು. ಇದಕ್ಕೆ ಈ ದಂಪತಿಗಳು ಮಾಡಿದ ಕೆಲವು ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಸಹ ಪುಷ್ಠಿ ನೀಡಿದ್ದವು. ಆದರೆ ಇದೀಗ ಚಹಲ್ ದಂಪತಿಗಳು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಏಷ್ಯಾಕಪ್ ಯುಜ್ವೇಂದ್ರ ಚಹಲ್‌ಗೆ ಹೆಚ್ಚಿನ ಯಶಸ್ಸನ್ನು ತಂದುಕೊಡದಿದ್ದರೂ, ರನ್ ನೀಡಿದೆ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿ ಹಾಕುವಲ್ಲಿ ಚಹಲ್ ಯಶಸ್ವಿಯಾಗಿದ್ದರು. ಆದಾಗ್ಯೂ, ಪಂದ್ಯಾವಳಿಯ ಪ್ರಾರಂಭಕ್ಕೂ ಮುಂಚೆಯೇ, ಅವರು ಕೆಲವು ಆಫ್-ಫೀಲ್ಡ್ ಸುದ್ದಿಗಳಿಂದ ಸದಾ ಸುದ್ದಿಯಲ್ಲಿದ್ದರು. ಏಷ್ಯಾಕಪ್ ಆರಂಭಕ್ಕೂ ಮುನ್ನ ಚಹಲ್ ಹಾಗೂ ಧನಶ್ರೀ ವರ್ಮಾ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿತ್ತು.
ವದಂತಿಗಳಿಗೆ ತಿರುಗೇಟು
Instagram ನಲ್ಲಿ ಅವರಿಬ್ಬರ ಕೆಲವು ಪೋಸ್ಟ್‌ಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಹೈಪರ್‌ಆಕ್ಟಿವ್ ಬಳಕೆದಾರರು ಇವರಿಬ್ಬರ ನಡುವಿನ ಬಿರುಕಿನ ವದಂತಿಗಳನ್ನು ಹರಡಲು ಪ್ರಾರಂಭಿಸಿದ್ದರು. ಇನ್ನೂ ಅನೇಕ ಬಳಕೆದಾರರು ಇಬ್ಬರನ್ನೂ ಟ್ರೋಲ್ ಮಾಡಲು ಪ್ರಾರಂಭಿಸಿದ್ದರು. ಹೀಗಿರುವಾಗ ಈ ದಂಪತಿಗಳು ಎಲ್ಲಾ ಸುದ್ದಿಗಳನ್ನು ವದಂತಿ ಎಂದು ಬಣ್ಣಿಸಿ ಹೇಳಿಕೆ ನೀಡಲು ಆರಂಭಿಸಿದ್ದರು. ಈಗ ಚಹಲ್ ತಮ್ಮ ಪತ್ನಿಯೊಂದಿಗಿರುವ ರೋಮ್ಯಾಂಟಿಕ್ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುವ ಮೂಲಕ ಟ್ರೋಲ್‌ಗಳು ಮತ್ತು ವದಂತಿಗಳನ್ನು ಹರಡುವವರ ಬಾಯಿ ಮುಚ್ಚಿಸಿದ್ದಾರೆ.
ವಿಶ್ವಕಪ್ಗೆ ತಯಾರಿ
ನಾವು ಯುಜ್ವೇಂದ್ರ ಚಹಲ್ ಅವರ ಆಟದ ಬಗ್ಗೆ ಮಾತನಾಡುವುದಾದರೆ, ಭಾರತ ತಂಡದ ಈ ಅನುಭವಿ ಲೆಗ್ ಸ್ಪಿನ್ನರ್ ಕಣ್ಣುಗಳು ಈಗ ಟಿ 20 ವಿಶ್ವಕಪ್ ಮೇಲೆ ನೆಟ್ಟಿದೆ. ಏಷ್ಯಾಕಪ್‌ನಲ್ಲಿ, ಚಹಲ್ ಅವರ ಖಾತೆಗೆ 4 ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳಷ್ಟೇ ಬಿದ್ದವು. ಆದರೆ ಇದರ ಹೊರತಾಗಿಯೂ, ಅವರು T20 ವಿಶ್ವಕಪ್‌ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವಕಪ್‌ಗೂ ಮುನ್ನ ಚಹಲ್ ಆಸ್ಟ್ರೇಲಿಯಾ ವಿರುದ್ಧ ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
Published On - 3:18 pm, Fri, 16 September 22