IND vs WI: ಮೈದಾನದಲ್ಲಿ ಕೊಹ್ಲಿ-ರೋಹಿತ್ ನಡುವೆ ನಡೆದ ಆ ಘಟನೆ ಕಂಡು ಶಾಕ್ ಆದ ಫ್ಯಾನ್ಸ್

| Updated By: Vinay Bhat

Updated on: Feb 07, 2022 | 11:04 AM

Virat Kohli Rohit Sharma Celebration Viral Video: ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ವಿರಾಟ್ ಕೊಹ್ಲ ಇದೇ ಮೊದಲ ಬಾರಿಗೆ ಆಡುತ್ತಿರುವ ಕಾರಣ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಹೀಗಿರುವಾಗ ಈ ಪಂದ್ಯದಲ್ಲಿ ನಡೆದ ಘಟನೆಯ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.

IND vs WI: ಮೈದಾನದಲ್ಲಿ ಕೊಹ್ಲಿ-ರೋಹಿತ್ ನಡುವೆ ನಡೆದ ಆ ಘಟನೆ ಕಂಡು ಶಾಕ್ ಆದ ಫ್ಯಾನ್ಸ್
Kohli Rohit celebration ND vs WI
Follow us on

ಅಹ್ಮದಾಬಾದ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (India vs West Indies) ಸಂಪೂರ್ಣ ಮೇಲುಗೈ ಸಾಧಿಸಿತು. ಟೀಮ್ ಇಂಡಿಯಾದ (Team India) ಹೊಸ ನಾಯಕನ ಹೊಸ ಯೋಜನೆಗೆ ತಬ್ಬಿಬ್ಬಾದ ಪ್ರವಾಸಿಗರು ಬ್ಯಾಟಿಂಗ್- ಬೌಲಂಗ್ ಎರಡರಲ್ಲೂ ನೀರಸ ಪ್ರದರ್ಶನ ತೋರಿದರು. 6 ವಿಕೆಟ್​ಗಳ ಭರ್ಜರಿ ಜಯ ಕಾಣುವ ಮೂಲಕ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ಪರಿಪೂರ್ಣ ನಾಯಕನಾಗಿ ಮೊದಲ ಏಕದಿನ ಪಂದ್ಯವನ್ನು ಮುನ್ನಡೆಸಿದರೆ, ವಿರಾಟ್ ಕೊಹ್ಲಿ ರೋಹಿತ್ ನಾಯಕತ್ವದಡಿಯಲ್ಲಿ ಮೊದಲ ಪಂದ್ಯವನ್ನು ಆಡಿದರು. ಇದಕ್ಕಾಗಿಯೇ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಯಾಕೆಂದರೆ ಕೊಹ್ಲಿ- ರೋಹಿತ್ (Virat Kohli-Rohit Sharma) ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆದರೆ, ನಿನ್ನೆಯ ಪಂದ್ಯದಲ್ಲಿ ಇವರಿಬ್ಬರ ನಡುವೆ ನಡೆದ ಆ ಒಂದು ಘಟನೆ ಈರೀತಿ ಅಂದುಕೊಳ್ಳುತ್ತಿದ್ದವರಿಗೆ ಶಾಕ್ ನೀಡಿತು.

ಈ ಘಟನೆಗೆ ಕಾರಣವಾಗಿದ್ದು 20ನೇ ಓವರ್​ನಲ್ಲಿ ಯುಜ್ವೇಂದ್ರ ಚಹಲ್ ಕಿತ್ತ ವಿಕೆಟ್. ತಮ್ಮ ಮೊದಲ ಓವರ್​ನ ಮೂರನೇ ಎಸೆತದಲ್ಲೇ ಚಹಲ್ ನಿಕೋಲಸ್ ಪೂರನ್​ರನ್ನು ಎಲ್​ಬಿಡಬ್ಲ್ಯೂ ಮಾಡಿ ಪೆವಿಲಿಯನ್​​ಗೆ ಅಟ್ಟಿದರು. ಇದರ ಮುಂದಿನ ಎಸೆತದಲ್ಲೇ ವಿಂಡೀಸ್ ನಾಯಕ ಪ್ರಮುಖ ವಿಕೆಟ್ ಕೀರೊನ್ ಪೊಲಾರ್ಡ್​ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಎರಡು ಎಸೆತದಲ್ಲಿ 2 ವಿಕೆಟ್ ಪಡೆದುಕೊಂಡ ಭಾರತ ಖುಷಿಯಲ್ಲಿ ತೇಲಾಡಿತು. ಅದರಲ್ಲೂ ಕೊಹ್ಲಿ ಹಾಗೂ ರೋಹಿತ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಜಿಗಿದುಕೊಂಡು ಕೈ-ಕೈ ತಾಗಿಸಿ ನಗುತ್ತಾ ಖುಷಿಯಲ್ಲಿ ಸಂಭ್ರಮಿಸಿದರು.

ರೋಹಿತ್- ಕೊಹ್ಲಿ ಅವರ ಈ ಸಂಭ್ರಮವನ್ನು ಕಂಡು ಅನೇಕರು ಇದು ಈ ಪಂದ್ಯದ ಸ್ಮರಣೀಯ ಕ್ಷಣ ಎಂದು ಬಣ್ಣಿಸಿದ್ದಾರೆ. ಇನ್ನೂ ಕೆಲವರು ಕೊಹ್ಲಿ-ರೋಹಿತ್ ನಡುವೆ ಸರಿಯಿಲ್ಲ ಎಂಬವರು ಒಮ್ಮೆ ಈ ವಿಡಿಯೋ ನೋಡಿ ಟಾಂಗ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

 

ಇನ್ನು ಚಹಲ್ ಅವರ 2ನೇ ಓವರ್​ನಲ್ಲೂ ಭಾರತದ ಖುಷಿ ಮತ್ತಷ್ಟು ಹೆಚ್ಚಿಸಿತು. 73 ರನ್​ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ವಿಂಡೀಸ್​ಗೆ ಚಹಲ್ ತಮ್ಮ 2ನೇ ಓವರ್​ನಲ್ಲೇ ಮತ್ತೊಂದು ಶಾಕ್ ನೀಡಿದರು. ವಿಂಡೀಸ್ ಬ್ಯಾಟರ್​ ಶಮರ್​ ಬ್ರೂಕ್ಸ್​ ಬ್ಯಾಟ್​ಗೆ ಚೆಂಡು ಸ್ವಲ್ಪ ತಗುಲಿ ಕೀಪರ್​ ರಿಷಭ್​ ಪಂತ್‌ ಕೈಗೆ ಸೇರಿತ್ತು. ಆದರೆ, ನಾಯಕ ರೋಹಿತ್ ಸೇರಿದಂತೆ ಇಡೀ ತಂಡ ಎಲ್​ಬಿಡಬ್ಲ್ಯೂಗೆ ಮನವಿ ಮಾಡಿತು. ಇತ್ತ ಆನ್​ಫೀಲ್ಡ್​ ಅಂಪೈರ್​ ನಾಟೌಟ್ ಎಂಬ ತೀರ್ಪು ನೀಡಿದರು.

 

ಆದರೆ, ಭಾರತಕ್ಕೆ ಇದು ಸರಿ ಕಾಣಲಿಲ್ಲ. ರೋಹಿತ್ ವಿಕೆಟ್ ಕೀಪರ್​ ಪಂತ್​ರನ್ನು ಚೆಂಡು ಎಡ್ಜ್​ ಆಗಿರಬಹುದಾ? ಎಂದು ಕೇಳಿದರು. ಈ ಸಂದರ್ಭ ಅಲ್ಲಿಗೆ ಮಧ್ಯ ಪ್ರವೇಶಿಸಿದ ಕಿಂಗ್ ಕೊಹ್ಲಿ ಚೆಂಡು ಬ್ಯಾಟ್​ಗೆ ತಾಗಿದೆ ಎಂದು ರೋಹಿತ್​ರನ್ನು ಮನವರಿಕೆ ಮಾಡಿ ಡಿಆರ್​ಎಸ್​ ತೆಗೆದುಕೊಳ್ಳುವಂತೆ ಸೂಚಿಸಿದರು. ಅದರಂತೆ ರೋಹಿತ್ ಡಿಆರ್​ಎಸ್​ ಮೊರೆಹೋದರು. ಇವರ ನಡುವಣ ಸಂಭಾಷಣೆ ಸ್ಟಂಪ್ ಮೈಕ್​ನಲ್ಲಿ ಸೆರೆಯಾಗಿದೆ. ಟಿವಿ ರಿಪ್ಲೇನಲ್ಲಿ ಚೆಂಡು ಬ್ಯಾಟಿಗೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿ ಔಟ್ ಎಂಬ ತೀರ್ಪು ಬಂತು.

Rohit Sharma Six Video: ಹಿಟ್​ಮ್ಯಾನ್ ರೋಹಿತ್ ಶರ್ಮಾ ಸಿಡಿಸಿದ ಸಿಕ್ಸ್​ ಕಂಡು ಪೊಲಾರ್ಡ್ ಮಾಡಿದ್ದೇನು ನೋಡಿ

Rohit Sharma: ಪಂದ್ಯ ಮುಗಿದ ಬಳಿಕ ಮಹತ್ವದ ಮಾಹಿತಿ ಹಂಚಿಕೊಂಡ ನಾಯಕ ರೋಹಿತ್ ಶರ್ಮಾ