Rohit Sharma: ಪಂದ್ಯ ಮುಗಿದ ಬಳಿಕ ಮಹತ್ವದ ಮಾಹಿತಿ ಹಂಚಿಕೊಂಡ ನಾಯಕ ರೋಹಿತ್ ಶರ್ಮಾ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ನಿರೀಕ್ಷೆಗಿಂತ ಒಂದು ಪಟ್ಟು ಹೆಚ್ಚೇ ಉತ್ತಮ ಪ್ರದರ್ಶನ ತೋರಿದೆ. ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಮಾತಾನಾಡಿದ್ದು, ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ. ಅವರು ಏನು ಮಾತನಾಡಿದರು ಇಲ್ಲಿದೆ ನೋಡಿ.

Rohit Sharma: ಪಂದ್ಯ ಮುಗಿದ ಬಳಿಕ ಮಹತ್ವದ ಮಾಹಿತಿ ಹಂಚಿಕೊಂಡ ನಾಯಕ ರೋಹಿತ್ ಶರ್ಮಾ
Rohit Sharma post-match presentation IND vs WI
Follow us
TV9 Web
| Updated By: Vinay Bhat

Updated on: Feb 07, 2022 | 8:39 AM

ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಪ್ರವಾಸಿ ವೆಸ್ಟ್ ಇಂಡೀಸ್ (India vs West Indies) ತಂಡವನ್ನು ಮಣಿಸಿತು. ಇದರೊಂದಿಗೆ ಸಹಸ್ರ ಏಕದಿನ ಪಂದ್ಯವನ್ನು ಗೆಲುವಿನೊಂದಿಗೆ ಸಂಭ್ರಮಿಸಿದ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಪಡೆದುಕೊಂಡಿತು. ಯುಜ್ವೇಂದ್ರ ಚಹಲ್ (Yuzvendra Chahal) ಹಾಗೂ ವಾಷಿಂಗ್ಟನ್ ಸುಂದರ್ ಅವರ ಸ್ಪಿನ್ ಜಾದು ಜೊತೆ ರೋಹಿತ್ ಶರ್ಮಾ ಅವರ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಏಕದಿನ ಸರಣಿಯಲ್ಲಿ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಕೆಲ ಆಟಗಾರರ ಅನುಪಸ್ಥಿತಿಯ ನಡುವೆಯೂ ಟೀಮ್ ಇಂಡಿಯಾ ನಿರೀಕ್ಷೆಗಿಂತ ಒಂದು ಪಟ್ಟು ಹೆಚ್ಚೇ ಉತ್ತಮ ಪ್ರದರ್ಶನ ತೋರಿದೆ. ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಮಾತಾನಾಡಿದ್ದು, ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ. ಅವರು ಏನು ಮಾತನಾಡಿದರು ಇಲ್ಲಿದೆ ನೋಡಿ.

“ನನಗೆ ಈ ಪರಿಪೂರ್ಣ ಆಟ ಎಂಬುದರಲ್ಲಿ ನಂಬಿಕೆಯಿಲ್ಲ. ಯಾಕೆಂದರೆ ಆಟದಲ್ಲಿ ಪರಿಪೂರ್ಣರಾಗಲು ಸಾಧ್ಯವೂ ಇಲ್ಲ. ನಾವು ಉತ್ತಮವಾಗಿರವುದನ್ನು ಮುಂದುವರೆಸಿಕೊಂಡು ಸಾಗಬೇಕಷ್ಟೆ. ಎಲ್ಲರಿಂದಲೂ ಅತ್ಯುತ್ತಮ ಪ್ರದರ್ಶನ ಮೂಡಿಬಂದಿದೆ. ಇದರಿಂದ ಸಂತಸಗೊಂಡಿದ್ದೇನೆ. ಬ್ಯಾಟಿಂಗ್​ನಲ್ಲಿ ನಾವು ಹೆಚ್ಚು ವಿಕೆಟ್​ಗಳನ್ನು ಹೊಂದಿಲ್ಲದಿದ್ದರೂ ಪಂದ್ಯವನ್ನು ಮುಗಿಸಿದ್ದೇವೆ. ಎದುರಾಳಿಯ ಲೋವರ್ ಆರ್ಡರ್​ಗಳಿಗೆ ಸಾಕಷ್ಟು ಒತ್ತಡವನ್ನು ನೀಡಿದ್ದೇವೆ. ಪಂದ್ಯದ ಆರಂಭದಲ್ಲಿ ಮತ್ತು ಅಂತಿಮ ಹಂತದಲ್ಲಿ ನಮ್ಮ ಬೌಲರ್​ಗಳ ಚೆನ್ನಾಗಿ ಕೆಲಸ ಮಾಡಿದರು, ಇದು ನೋಡಲು ಉತ್ತಮವಾಗಿತ್ತು,” ಎಂದು ರೋಹಿತ್ ಹೇಳಿದ್ದಾರೆ.

“ತಂಡವು ವಿಭಿನ್ನವಾಗಿ ಹೊಸದಾಗಿ ಏನನ್ನಾದರೂ ಮಾಡಬೇಕೆಂದು ಬಯಸಿದರೆ ಅದನ್ನು ಕಾರ್ಯರೂಪಕ್ಕೆ ತರಬೇಕು. ಆದರೆ, ನಾವು ತುಂಬಾ ಬದಲಾಗಬೇಕು ಎಂದು ಯೋಚಿಸುವ ಅಗತ್ಯವಿಲ್ಲ. ನಾನು ಪ್ರತಿಯೊಬ್ಬ ಆಟಗಾರನಲ್ಲಿ ಕೇಳಿಕೊಳ್ಳುವುದು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ, ಇದರಿಂದ ಗೆಲುವು ಸಾಧ್ಯ. ನಾನು ಮೈದಾನಕ್ಕೆ ಇಳಿದು ಎರಡು ತಿಂಗಳುಗಳಾಗಿತ್ತು. ಆದರೆ, ತವರಿನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದು ಖುಷಿ ನೀಡಿದೆ.”

“ಮುಂದೆ ನಮಗೆ ದೀರ್ಘ ಕಾಲ ಕ್ರಿಕೆಟ್ ಆಡಲಿದೆ. ಇಲ್ಲಿ ಉತ್ತಮ ನೆಟ್ ಸೆಷನ್ ಹೊಂದಿದ್ದೇವೆ. ನಾನು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿತ್ತು. ಈ ಆಟದಿಂದ ಅನೇಕ ಧನಾತ್ಮಕ ಅಂಶಗಳನ್ನು ತೆಗೆದುಕೊಂಡಿದ್ದೇವೆ. ಈ ಪಿಚ್‌ ಕೂಡ ಸಾಕಷ್ಟು ವಿಶೇಷವಾಗಿದೆ. ಆರಂಭದಲ್ಲಿ ಪಿಚ್‌ ಮೃದುತ್ವವಿತ್ತು. ಹೀಗಾಗಿ ಇಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿದಿತ್ತು. ಆದರೆ, ನನ್ನ ಪ್ರಕಾರ ಪ್ರಾಮಾಣಿಕವಾದ ಆಟಕ್ಕೆ ಟಾಸ್ ದೊಡ್ಡ ವಿಚಾರವೇನು ಆಗುವುದಿಲ್ಲ. ಟಾಸ್ ಮೇಲೆ ನಾನು ಹೆಚ್ಚು ಅವಲಂಬಿತನಾಗಲು ಬಯಸುವುದಿಲ್ಲ. ಅದು ನಮಗೆ ಒಲಿದು ಬಂದರೆ ಖಂಡಿತಾ ಅದರ ಪ್ರಯೋಜನವನ್ನು ಪಡೆಯಬೇಕು,” ಎಂಬುದು ಹಿಟ್​ಮ್ಯಾನ್ ಮಾತು.

ಇದೇವೇಳೆ ಪಂದ್ಯಶ್ರೇಷ್ಠ ಬಾಜಿಕೊಂಡ ಚಹಲ್ ಕೂಡ ಮಾತನಾಡಿದ್ದು, “ಸುಂದರ್ ಆರಂಭದಲ್ಲೇ ಎರಡು ವಿಕೆಟ್ ಕಿತ್ತಿದ್ದ, ಇದರಿಂದ ಎದುರಾಳಿ ಒತ್ತಡದಲ್ಲಿದ್ದರು. ಹೀಗಾಗಿ ನನ್ನ ಕೆಲಸ ಅವರ ಒತ್ತಡವನ್ನು ಮತ್ತಷ್ಟು ಹೆಚ್ಚು ಮಾಡುವುದಾಗಿತ್ತು. ರೋಹಿತ್, ಕೊಹ್ಲಿ ಜೊತೆ ಮಾತನಾಡಿದೆ. ಅವರು ಫೇಸ್ ಪ್ರಮುಖ ಎಂಬ ಮಾಹಿತಿ ನೀಡಿದರು. ಚೆಂಡು ಟರ್ನ್ ಆಗುತ್ತಿದ್ದರೆ, ಅದನ್ನೆ ಮುಂದುವರೆಸುವ ತೀರ್ಮಾನಕ್ಕೆ ಬಂದೆ,” ಎಂಬುದು ಚಹಲ್ ಮಾತು.

India vs West Indies: 1000ನೇ ಏಕದಿನ ಪಂದ್ಯದಲ್ಲಿ ಗೆದ್ದು ದಾಖಲೆ ಬರೆದ ಭಾರತ: ರೋಹಿತ್ ಪಡೆ ಭರ್ಜರಿ ಶುಭಾರಂಭ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್