IND vs WI: ಮೈದಾನದಲ್ಲಿ ಕೊಹ್ಲಿ-ರೋಹಿತ್ ನಡುವೆ ನಡೆದ ಆ ಘಟನೆ ಕಂಡು ಶಾಕ್ ಆದ ಫ್ಯಾನ್ಸ್
Virat Kohli Rohit Sharma Celebration Viral Video: ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ವಿರಾಟ್ ಕೊಹ್ಲ ಇದೇ ಮೊದಲ ಬಾರಿಗೆ ಆಡುತ್ತಿರುವ ಕಾರಣ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಹೀಗಿರುವಾಗ ಈ ಪಂದ್ಯದಲ್ಲಿ ನಡೆದ ಘಟನೆಯ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.
ಅಹ್ಮದಾಬಾದ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (India vs West Indies) ಸಂಪೂರ್ಣ ಮೇಲುಗೈ ಸಾಧಿಸಿತು. ಟೀಮ್ ಇಂಡಿಯಾದ (Team India) ಹೊಸ ನಾಯಕನ ಹೊಸ ಯೋಜನೆಗೆ ತಬ್ಬಿಬ್ಬಾದ ಪ್ರವಾಸಿಗರು ಬ್ಯಾಟಿಂಗ್- ಬೌಲಂಗ್ ಎರಡರಲ್ಲೂ ನೀರಸ ಪ್ರದರ್ಶನ ತೋರಿದರು. 6 ವಿಕೆಟ್ಗಳ ಭರ್ಜರಿ ಜಯ ಕಾಣುವ ಮೂಲಕ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ಪರಿಪೂರ್ಣ ನಾಯಕನಾಗಿ ಮೊದಲ ಏಕದಿನ ಪಂದ್ಯವನ್ನು ಮುನ್ನಡೆಸಿದರೆ, ವಿರಾಟ್ ಕೊಹ್ಲಿ ರೋಹಿತ್ ನಾಯಕತ್ವದಡಿಯಲ್ಲಿ ಮೊದಲ ಪಂದ್ಯವನ್ನು ಆಡಿದರು. ಇದಕ್ಕಾಗಿಯೇ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಯಾಕೆಂದರೆ ಕೊಹ್ಲಿ- ರೋಹಿತ್ (Virat Kohli-Rohit Sharma) ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆದರೆ, ನಿನ್ನೆಯ ಪಂದ್ಯದಲ್ಲಿ ಇವರಿಬ್ಬರ ನಡುವೆ ನಡೆದ ಆ ಒಂದು ಘಟನೆ ಈರೀತಿ ಅಂದುಕೊಳ್ಳುತ್ತಿದ್ದವರಿಗೆ ಶಾಕ್ ನೀಡಿತು.
ಈ ಘಟನೆಗೆ ಕಾರಣವಾಗಿದ್ದು 20ನೇ ಓವರ್ನಲ್ಲಿ ಯುಜ್ವೇಂದ್ರ ಚಹಲ್ ಕಿತ್ತ ವಿಕೆಟ್. ತಮ್ಮ ಮೊದಲ ಓವರ್ನ ಮೂರನೇ ಎಸೆತದಲ್ಲೇ ಚಹಲ್ ನಿಕೋಲಸ್ ಪೂರನ್ರನ್ನು ಎಲ್ಬಿಡಬ್ಲ್ಯೂ ಮಾಡಿ ಪೆವಿಲಿಯನ್ಗೆ ಅಟ್ಟಿದರು. ಇದರ ಮುಂದಿನ ಎಸೆತದಲ್ಲೇ ವಿಂಡೀಸ್ ನಾಯಕ ಪ್ರಮುಖ ವಿಕೆಟ್ ಕೀರೊನ್ ಪೊಲಾರ್ಡ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಎರಡು ಎಸೆತದಲ್ಲಿ 2 ವಿಕೆಟ್ ಪಡೆದುಕೊಂಡ ಭಾರತ ಖುಷಿಯಲ್ಲಿ ತೇಲಾಡಿತು. ಅದರಲ್ಲೂ ಕೊಹ್ಲಿ ಹಾಗೂ ರೋಹಿತ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಜಿಗಿದುಕೊಂಡು ಕೈ-ಕೈ ತಾಗಿಸಿ ನಗುತ್ತಾ ಖುಷಿಯಲ್ಲಿ ಸಂಭ್ರಮಿಸಿದರು.
ರೋಹಿತ್- ಕೊಹ್ಲಿ ಅವರ ಈ ಸಂಭ್ರಮವನ್ನು ಕಂಡು ಅನೇಕರು ಇದು ಈ ಪಂದ್ಯದ ಸ್ಮರಣೀಯ ಕ್ಷಣ ಎಂದು ಬಣ್ಣಿಸಿದ್ದಾರೆ. ಇನ್ನೂ ಕೆಲವರು ಕೊಹ್ಲಿ-ರೋಹಿತ್ ನಡುವೆ ಸರಿಯಿಲ್ಲ ಎಂಬವರು ಒಮ್ಮೆ ಈ ವಿಡಿಯೋ ನೋಡಿ ಟಾಂಗ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
Rohit Sharma and Virat Kohli. pic.twitter.com/Eij8fqMbqZ
— Diving Slip (@SlipDiving) February 7, 2022
ಇನ್ನು ಚಹಲ್ ಅವರ 2ನೇ ಓವರ್ನಲ್ಲೂ ಭಾರತದ ಖುಷಿ ಮತ್ತಷ್ಟು ಹೆಚ್ಚಿಸಿತು. 73 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ವಿಂಡೀಸ್ಗೆ ಚಹಲ್ ತಮ್ಮ 2ನೇ ಓವರ್ನಲ್ಲೇ ಮತ್ತೊಂದು ಶಾಕ್ ನೀಡಿದರು. ವಿಂಡೀಸ್ ಬ್ಯಾಟರ್ ಶಮರ್ ಬ್ರೂಕ್ಸ್ ಬ್ಯಾಟ್ಗೆ ಚೆಂಡು ಸ್ವಲ್ಪ ತಗುಲಿ ಕೀಪರ್ ರಿಷಭ್ ಪಂತ್ ಕೈಗೆ ಸೇರಿತ್ತು. ಆದರೆ, ನಾಯಕ ರೋಹಿತ್ ಸೇರಿದಂತೆ ಇಡೀ ತಂಡ ಎಲ್ಬಿಡಬ್ಲ್ಯೂಗೆ ಮನವಿ ಮಾಡಿತು. ಇತ್ತ ಆನ್ಫೀಲ್ಡ್ ಅಂಪೈರ್ ನಾಟೌಟ್ ಎಂಬ ತೀರ್ಪು ನೀಡಿದರು.
Good understanding between Kohli and Rohit.. ? @imVkohli @ImRo45 @BCCI pic.twitter.com/dYhi4sW3xm
— 17_18_chinna_33_45 (@veerasurendra33) February 7, 2022
ಆದರೆ, ಭಾರತಕ್ಕೆ ಇದು ಸರಿ ಕಾಣಲಿಲ್ಲ. ರೋಹಿತ್ ವಿಕೆಟ್ ಕೀಪರ್ ಪಂತ್ರನ್ನು ಚೆಂಡು ಎಡ್ಜ್ ಆಗಿರಬಹುದಾ? ಎಂದು ಕೇಳಿದರು. ಈ ಸಂದರ್ಭ ಅಲ್ಲಿಗೆ ಮಧ್ಯ ಪ್ರವೇಶಿಸಿದ ಕಿಂಗ್ ಕೊಹ್ಲಿ ಚೆಂಡು ಬ್ಯಾಟ್ಗೆ ತಾಗಿದೆ ಎಂದು ರೋಹಿತ್ರನ್ನು ಮನವರಿಕೆ ಮಾಡಿ ಡಿಆರ್ಎಸ್ ತೆಗೆದುಕೊಳ್ಳುವಂತೆ ಸೂಚಿಸಿದರು. ಅದರಂತೆ ರೋಹಿತ್ ಡಿಆರ್ಎಸ್ ಮೊರೆಹೋದರು. ಇವರ ನಡುವಣ ಸಂಭಾಷಣೆ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ. ಟಿವಿ ರಿಪ್ಲೇನಲ್ಲಿ ಚೆಂಡು ಬ್ಯಾಟಿಗೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿ ಔಟ್ ಎಂಬ ತೀರ್ಪು ಬಂತು.
Rohit Sharma Six Video: ಹಿಟ್ಮ್ಯಾನ್ ರೋಹಿತ್ ಶರ್ಮಾ ಸಿಡಿಸಿದ ಸಿಕ್ಸ್ ಕಂಡು ಪೊಲಾರ್ಡ್ ಮಾಡಿದ್ದೇನು ನೋಡಿ
Rohit Sharma: ಪಂದ್ಯ ಮುಗಿದ ಬಳಿಕ ಮಹತ್ವದ ಮಾಹಿತಿ ಹಂಚಿಕೊಂಡ ನಾಯಕ ರೋಹಿತ್ ಶರ್ಮಾ