IPL 2021: ಶಿಖರ್ ಧವನ್ – ಚಹಲ್​ ಪತ್ನಿ ಧನಶ್ರೀ ವರ್ಮಾ ಬಾಂಗ್ರಾ ಸ್ಟೆಪ್ಸ್ ಸಖತ್ ಸೌಂಡ್ ಮಾಡ್ತಿದೆ..! ವಿಡಿಯೋ ನೋಡಿ

|

Updated on: Apr 01, 2021 | 11:52 AM

ಶಿಖರ್ ಜೊತೆಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನ ಧನಶ್ರಿ, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ ಕೆಲವೇ ಕೆಲವು ಗಂಟೆಯಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

IPL 2021: ಶಿಖರ್ ಧವನ್ - ಚಹಲ್​ ಪತ್ನಿ ಧನಶ್ರೀ ವರ್ಮಾ ಬಾಂಗ್ರಾ ಸ್ಟೆಪ್ಸ್ ಸಖತ್ ಸೌಂಡ್ ಮಾಡ್ತಿದೆ..! ವಿಡಿಯೋ ನೋಡಿ
ಶಿಖರ್ ಧವನ್ - ಚಹಲ್​ ಪತ್ನಿ ಧನಶ್ರೀ ಬಾಂಗ್ರಾ ಸ್ಟೆಪ್ಸ್
Follow us on

ಐಪಿಎಲ್ ಮಹಾಸಂಗ್ರಾಮಕ್ಕಿನ್ನೂ ಎಂಟೇ ದಿನ ಬಾಕಿಯಿದೆ. ಆದ್ರೆ ಆಗಲೇ ಐಪಿಎಲ್ ಕ್ರೇಜ್ ಶುರುವಾಗಿದೆ. ಈಗಾಗಲೇ ಮಿನಿ ಸಮರಕ್ಕೆ ಅಭ್ಯಾಸ ಶುರುಮಾಡಿರುವ ಕ್ರಿಕೆಟಿಗರು, ಐಪಿಎಲ್ ಆರಂಭಕ್ಕೂ ಮುನ್ನ ಹಲ್ಚಲ್ ಎಬ್ಬಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿ ಮುಕ್ತಾಯವಾದಂತೆ ಟೀಮ್ ಇಂಡಿಯಾ ಆಟಗಾರರೆಲ್ಲಾ, ಐಪಿಎಲ್ಗಾಗಿ ಸಜ್ಜಾಗುತ್ತಿದ್ದಾರೆ. ತಮ್ಮ ತಮ್ಮ ತಂಡಗಳ ಪರ ಪ್ರಾಕ್ಟೀಸ್ ಮಾಡೋದಕ್ಕೆ ಶುರುಮಾಡಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಬಾಂಗ್ರಾ ಸ್ಟೆಪ್ಸ್ ಹಾಕಿರೋ ವಿಡಿಯೋ ಸಖತ್ ಸೌಂಡ್ ಮಾಡ್ತಿದೆ.

ಧನುಶ್ರೀ, ಧವನ್ ಜೊತೆಗೆ ಬಾಂಗ್ರಾ ಸ್ಟೆಪ್ಸ್
ಈ ಭಾರಿಯ ಐಪಿಎಲ್ನಲ್ಲಿ ಆರ್ಸಿಬಿ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು, ಚೆನ್ನೈನಲ್ಲಿ ಆರಂಭಿಕ ಪಂದ್ಯಗಳನ್ನಾಡಲಿವೆ. ಹೀಗಾಗಿ ಉಭಯ ತಂಡಗಳು ಚೆನ್ನೈನಲ್ಲಿ ಪ್ರಾಕ್ಟೀಸ್ ಮಾಡುತ್ತಿವೆ. ಚಹಲ್ ಜೊತೆಗೆ ಚೆನ್ನೈಗೆ ತೆರಳಿರುವ ಧನಶ್ರೀ, ಧವನ್ ಜೊತೆಗೆ ಬಾಂಗ್ರಾ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾಳೆ. ಶಿಖರ್ ಜೊತೆಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನ ಧನಶ್ರಿ, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ ಕೆಲವೇ ಕೆಲವು ಗಂಟೆಯಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಚಹಲ್ ವೃತ್ತಿಜೀವನ
ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಭರವಸೆಯ ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಹಲ್ ಟಿ 20 ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಹರಿಯಾಣದ ಸ್ಪಿನ್ನರ್, ಚಾಹಲ್ ಅವರು 2009 ರಲ್ಲಿ ನಡೆದ ರಾಷ್ಟ್ರೀಯ ಅಂಡರ್ -19 ಕೂಚ್ ಬೆಹರ್ ಟ್ರೋಫಿಯಲ್ಲಿ 34 ವಿಕೆಟ್ ಪಡೆದಾಗ ಮೊದಲ ಬಾರಿಗೆ ಗಮನ ಸೆಳೆದರು. ಜೊತೆಗೆ ಪಂದ್ಯಾವಳಿಯಲ್ಲಿ ಪ್ರಮುಖ ವಿಕೆಟ್ ಪಡೆದವರಾಗಿ ಗಮನ ಸೆಳೆದರು. 2011 ರಲ್ಲಿ ಮುಂಬೈ ಇಂಡಿಯನ್ಸ್ ಸ್ಕ್ವಾಡ್‌ನ ಭಾಗವಾದ ಚಹಲ್, ಚಾಂಪಿಯನ್ಸ್ ಲೀಗ್ ಟಿ 20 ಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಲ್ಲದೆ ಫೈನಲ್‌ನಲ್ಲೂ ಸಹ ಆಡಿದ್ದರು.

2014 ರಿಂದ ಆರ್‌ಸಿಬಿಯ ಭಾಗವಾಗಿರುವ ಚಹಲ್ ಅವರು ಲೀಗ್‌ನ 2015 ಮತ್ತು 2016 ರ ಆವೃತ್ತಿಯಲ್ಲಿ 23 ಮತ್ತು 21 ವಿಕೆಟ್‌ಗಳನ್ನು ಪಡೆದು ಮಿಂಚಿದರು. ನಿಯಮಿತ ಅಂತರದಲ್ಲಿ ವಿಕೆಟ್ ಕಬಳಿಸುವ ಮೂಲಕ, ಚಹಲ್ ಅವರು 2016 ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದರು ಮತ್ತು ನಂತರ ಇಂಗ್ಲೆಂಡ್ ವಿರುದ್ಧ ಟಿ 20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ:IPL 2021: ಚೇತೇಶ್ವರ್ ಪೂಜಾರಾ ಬ್ಯಾಟ್​ನಿಂದ ಸಿಡಿಯುತ್ತಿವೆ ಸಿಕ್ಸರ್​ ಮೇಲೆ ಸಿಕ್ಸರ್​ಗಳು!