IPL 2021: ಚೇತೇಶ್ವರ್ ಪೂಜಾರಾ ಬ್ಯಾಟ್ನಿಂದ ಸಿಡಿಯುತ್ತಿವೆ ಸಿಕ್ಸರ್ ಮೇಲೆ ಸಿಕ್ಸರ್ಗಳು!
2014 ಕ್ಕಿಂತ ಮುಂಚೆ ಆಡಿದ 30 ಐಪಿಎಲ್ ಪಂದ್ಯಗಳಲ್ಲಿ ಪೂಜಾರಾ 390 ರನ್ ಗಳಿಸಿದ್ದಾರೆ, 4 ಸಿಕ್ಸ್ ಬಾರಿಸಿದ್ದಾರೆ ಮತ್ತು ಒಂದು ಅರ್ಧ ಶತಕವನ್ನು ಅವರ ಹೆಸರಿಗಿದೆ.
ಮುಂಬೈ: ಚೇತೇಶ್ವರ್ ಪೂಜಾರಾ ಸಿಕ್ಸರ್ ಮೆಲೆ ಸಿಕ್ಸರ್ ಬಾರಿಸಿದರು ಅಂತ ಯಾರಾದರೂ ಹೇಳಿದರೆ ಅವರೆಲ್ಲೋ ತಮಾಷೆ ಮಾಡುತ್ತಿರಬಹುದು ಅನ್ನೋದು ಜನರ ಪ್ರತಿಕ್ರಿಯೆ ಆಗಿರುತ್ತದೆ. ಆದರೆ ನಾವಿಲ್ಲಿ ಹೇಳುತ್ತಿರುವುದು ಖಂಡಿತವಾಗಿಯೂ ತಮಾಷೆಯಲ್ಲ. ಯಾಕಂದರೆ, ಭಾರತದ ಈ ಟೆಸ್ಟ್ ಸ್ಪೆಷಲಿಸ್ಟ್ ಕ್ರಮೇಣ ಕ್ರಿಕೆಟ್ನ ಕಿರು ಆವೃತ್ತಿಗೂ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದೆ, ಪೂಜಾರಾ ಅವರನ್ನು ಈ ಬಾರಿಯ ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್ಗೆ ಚೆನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಖರೀದಿಸಿದೆ. ಸಿಎಸ್ಕೆಯ ನೆಟ್ಸ್ನಲ್ಲಿ ಪೂಜಾರಾ ಅವರು ಬಾಲ್ಗಳನ್ನು ದೂರದೂರಕ್ಕೆ ಎತ್ತ್ತಿ ಬಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಮೊದಲಿಗೆ ಅವರು ದೀಪಕ್ ಚಹರ್ ಅವರ ಎಸೆತವನ್ನು ಮಿಡ್ವಿಕೆಟ್ ಬೌಂಡರಿ ಕಡೆ ಎತ್ತಿ ಬಾರಿಸುತ್ತಾರೆ, ನಂತರ ಸ್ಪಿನರ್ ಕರ್ನ್ ಶರ್ಮ ಅವರ ಎಸೆತವನ್ನು ಸ್ಲಾಗ್ ಸ್ವೀಪ್ ಮಾಡುತ್ತಾರೆ. ಹಾಗೆಯೇ ಅವರು ಮುನ್ನುಗ್ಗಿ ಬಾಲನ್ನು ಲಾಂಗಾನ್ ಮೇಲೆ ಎತ್ತಿ ಬಾರಿಸಿತ್ತಿರುವುದನ್ನು ಸಹ ವಿಡಿಯೊದಲ್ಲಿ ನೋಡಬಹುದಾಗಿದೆ. ವೇಗದ ಬೌಲರ್ಗಳನ್ನು ಗಾಳಿಯಲ್ಲಿ ಫ್ಲಿಕ್ ಮಾಡುವ ಜೊತೆಗೆ ಆಫ್ಸೈಡ್ನಲ್ಲೂ ಬಾಲನ್ನು ಗಾಳಿಯಲ್ಲಿ ಬಾರಿಸಿದ್ದಾರೆ.
Puji was on fire ?@cheteshwar1 #csk pic.twitter.com/CNbPXi786q
— Ravi Desai ?? Champion CSK ?? (@its_DRP) March 30, 2021
ಟೆಸ್ಟ್ಗಳಲ್ಲಿ ಬ್ಯಾಟ್ ಮಾಡುವ ಪೂಜಾರಾ ಅವರ ಶೈಲಿ ಮತ್ತು ಈ ವಿಡಿಯೊದಲ್ಲಿ ಕಾಣುತ್ತಿರುವ ಅವರ ಬ್ಯಾಟಿಂಗ್ ವೈಖರಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಟೆಸ್ಟ್ಗಳಲ್ಲಿ ಅವರು ತಮ್ಮ ತಾಳ್ಮೆಯ ಆಟದ ಮೂಲಕ ಎದುರಾಳಿ ಬೌಲರ್ಗಳು ಬಸವಳಿಯುವಂತೆ ಮಾಡುತ್ತಾರೆ. ದುರ್ಬಲ ಎಸೆತಕ್ಕಾಗಿ ತಾಸುಗಟ್ಟಲೆ ಕಾಯುತ್ತಾರೆ. ಸಾಂಪ್ರದಾಯಿಕ ಕ್ರಿಕೆಟ್ನಲ್ಲಿ ಅವರು ಕಡಿಮೆ ಬ್ಯಾಕ್ಲಿಫ್ಟ್ನೊಂದಿಗೆ ಆಡುತ್ತಾರೆ. ಆದರೆ ಈ ವಿಡಿಯೋನಲ್ಲಿ ಅವರು ಹೈ ಬ್ಯಾಕ್ಲಿಫ್ಟ್ನೊಂದಿಗೆ ಆಡುತ್ತಿುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಟೆಸ್ಟ್ ಕ್ರಿಕೆಟ್ನಲ್ಲಿ ಪೂಜಾರಾ ದೇಹದ ಹತ್ತಿರದಿಂದ ಬಾಲನ್ನು ಆಡುತ್ತಾರೆ.
ಅವರ ಬ್ಯಾಟಿಂಗ್ ವೈಖರಿ ನೋಡಿದವರಿಗೆ ಅವರು ಯಾವತ್ತು ಸಿಕ್ಸ್ ಬಾರಿಸಿರಲಾರರು ಎಂದು ಭಾಸವಾಗಬಹುದು. ಆದರೆ, ಟೆಸ್ಟ್ಗಳಲ್ಲಿ ಅವರು 14 ಸಿಕ್ಸರ್ ಬಾರಿಸಿದ್ದಾರೆ. ಐಪಿಎಲ್ನಲ್ಲಿ ಅವರು ಕೊನೆಯ ಬಾರಿಗೆ ಆಡಿದ್ದು 2014ರಲ್ಲಿ. ಆದಾದ ನಂತರ ನಡೆದ ಹರಾಜು ಪ್ರಕ್ರಿಯೆಗಳಲ್ಲಿ ಅವರು ಅನ್ಸೋಲ್ಡ್ ಆಗಿ ಉಳಿಯುತ್ತಿದರು! ಆದರೆ 2021 ರ ಸೀಸನ್ಗೆ ಸಿಎಸ್ಕೆ ಅವರನ್ನು ರೂ. 50ಲಕ್ಷಗಳಿಗೆ ಖರೀದಿಸಿದೆ.
2014 ಕ್ಕಿಂತ ಮುಂಚೆ ಆಡಿದ 30 ಐಪಿಎಲ್ ಪಂದ್ಯಗಳಲ್ಲಿ ಪೂಜಾರಾ 390 ರನ್ ಗಳಿಸಿದ್ದಾರೆ, 4 ಸಿಕ್ಸ್ ಬಾರಿಸಿದ್ದಾರೆ ಮತ್ತು ಒಂದು ಅರ್ಧ ಶತಕವನ್ನು ಅವರ ಹೆಸರಿಗಿದೆ.
ಚೆನೈ-ನೆಲೆಯ ಸಿಎಸ್ಕೆ ತಂಡ ಮಾರ್ಚ್ 8 ರಿಂದ ಅದೇ ನಗರದಲ್ಲಿ ಅಭ್ಯಾಸನಿರತವಾಗಿತ್ತು. ಒಂದೆರಡು ದಿನಗಳ ಹಿಂದೆ ಮುಂಬೈಗೆ ಬಂದಿಳಿದಿದ್ದು ತಂಡದ ಸದಸ್ಯರು ಏಳು-ದಿನ ಅವಧಿಯ ಕಡ್ಡಾಯ ಕ್ವಾರಂಟೈನ್ಗೊಳಗಾಗಿದ್ದಾರೆ. ಪ್ರಸಕ್ತ ಸೀಸನ್ನ ತನ್ನ ಮೊದಲ 5 ಪಂದ್ಯಗಳನ್ನು ಅದು ಮುಂಬೈಯಲ್ಲಿ ಆಡಲಿದೆ.
ಇದನ್ನೂ ಓದಿ: IPL 2021: ಮಾರ್ಚ್ 29ರಿಂದ ಆರ್ಸಿಬಿ ಸಮರಾಭ್ಯಾಸ! ಇಷ್ಟರಲ್ಲೇ ತಂಡ ಸೇರ್ತಿದ್ದಾರೆ ಆರ್ಸಿಬಿ ಆಪತ್ಭಾಂದವ ಎಬಿ ಡಿವಿಲಿಯರ್ಸ್
ಇದನ್ನೂ ಓದಿ: IPL 2021: ಮುಂಬೈ ಇಂಡಿಯನ್ಸ್ ಟೀಮಿನ ಆರಂಭಿಕ ಜೋಡಿ ವಿಧ್ವಂಸಕವಾಗಿದೆ: ಆಕಾಶ್ ಚೋಪ್ರಾ