IPL 2021: ಮುಂಬೈ ಇಂಡಿಯನ್ಸ್ ಟೀಮಿನ ಆರಂಭಿಕ ಜೋಡಿ ವಿಧ್ವಂಸಕವಾಗಿದೆ: ಆಕಾಶ್ ಚೋಪ್ರಾ
ಚೋಪ್ರಾ ಪ್ರಕಾರ, ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಜೋಡಿ ಅತ್ಯಂತ ವಿಧ್ವಂಸಕವಾಗಿದೆ. ಯುಎಈಯಲ್ಲಿ ನಡೆದ ಐಪಿಲಎಲ್ 2020 ಸೀಸನಲ್ಲಿ ಅಂಬಾನಿ ಒಡೆತನದ ತಂಡಕ್ಕೆ ನಾಯಕ ರೋಹಿತ್ ಶರ್ಮ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಇನ್ನಿಂಗ್ಸ್ ಆರಂಭಿಸಿ ಸ್ಫೋಟಕ ಆರಂಭಗಳನ್ನು ಒದಗಿಸಿದರು.
ಇಂಡಿಯನ್ ಪ್ರಿಮೀಯರ್ ಲೀಗ್ 14 ನೇ ಸೀಸನ್ ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿಯುಳಿದಿವೆ. ನಿಮಗೆ ಗೊತ್ತಿರುವಂತೆ 2021ರ ಸೀಸನ್ ಏಪ್ರಿಲ್ 9ರಿಂದ ಶುರುವಾಗಲಿದೆ. ನಿಸ್ಸಂದೇಹವಾಗಿ ಇದು ವಿಶ್ವದ ಅತಿದೊಡ್ಡ ಕ್ರೀಡಾ ಈವೆಂಟ್ಗಳಲ್ಲಿ ಒಂದು. ಇದು ಒದಗಿಸುವ ಮನರಂಜನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರಿಕೆಟೇನ್ಮೆಂಟ್ ಎಂಬ ಅನ್ವರ್ಥನಾಮವನ್ನೂ ಐಪಿಎಲ್ ಪಡೆದುಕೊಂಡಿದೆ. ಒಂದೂವರೆ ತಿಂಗಳಿಗೂ ಹೆಚ್ಚಿನ ಅವಧಿಗೆ ಇದು ಕೀಡಾಸಕ್ತರಿಗೆ ಭರ್ಜರಿ ಮನರಂಜನೆ ಒದಗಿಸುತ್ತದೆ. ಕಾಮೆಂಟೇಟರ್, ಮಾಜಿ ಆಟಗಾರರು, ಕ್ರಿಕೆಟ್ ಬರಹಗಾರರು ಈ ಬಾರಿಯ ಐಪಿಎಲ್ ಕುರಿತು ಹಲವಾರು ಭವಿಷ್ಯವಾಣಿಗಳನ್ನು ಮಾಡಲಾರಂಭಿಸಿದ್ದಾರೆ. ಆಕಾಶ್ ಚೋಪ್ರಾ ಗೊತ್ತಲ್ಲ? ಕ್ರೀಡೆ ಮತ್ತು ಆಟಗಾರರ ಪ್ರತಿಭೆ ಮತ್ತು ಸಾಮರ್ಥ್ಯಗಳ ಬಗ್ಗೆ ಕರಾರುವಕ್ಕಾದ ಕಾಮೆಂಟ್ಗಳನ್ನು ಅವರು ಮಾಡುತ್ತಾರೆ. ಅವರ ಅಭಿಮಾನಿಗಳು ಪ್ರಸಕ್ತ ಸೀಸನ್ನಲ್ಲಿ ಯಾವ ಟೀಮು ಸ್ಫೋಟಕ ಆರಂಭಿಕ ಜೋಡಿಯನ್ನು ಹೊಂದಿದೆ ಎಂದು ಕೇಳಿರುವ ಪ್ರಶ್ನೆಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಚೋಪ್ರಾ ಉತ್ತರ ನೀಡಿದ್ದಾರೆ.
ಚೋಪ್ರಾ ಪ್ರಕಾರ, ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಜೋಡಿ ಅತ್ಯಂತ ವಿಧ್ವಂಸಕವಾಗಿದೆ. ಯುಎಈಯಲ್ಲಿ ನಡೆದ ಐಪಿಲಎಲ್ 2020 ಸೀಸನಲ್ಲಿ ಅಂಬಾನಿ ಒಡೆತನದ ತಂಡಕ್ಕೆ ನಾಯಕ ರೋಹಿತ್ ಶರ್ಮ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಇನ್ನಿಂಗ್ಸ್ ಆರಂಭಿಸಿ ಸ್ಫೋಟಕ ಆರಂಭಗಳನ್ನು ಒದಗಿಸಿದರು. ಒಂದು ಪಕ್ಷ ಡಿ ಕಾಕ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಶರ್ಮ ಬಯಸಿದರೂ ಅವರ ಜತೆ ಆರಂಭಿಕನಾಗಿ ಆಡಲು ಇಶಾನ್ ಕಿಷನ್ ಇದ್ದಾರೆ. ತಮ್ಮ ಸಾಮರ್ಥ್ಯವೇನು ಅಂತ ಇಂಗ್ಲೆಂಡ್ ವಿರುದ್ಧ ತಮ್ಮ ಪದಾರ್ಪಣೆಯ ಟಿ20 ಪಂದ್ಯದಲ್ಲಿ ಕಿಷನ್ ತೋರಿದರು.
ಮುಂಬೈ ಟೀಮಿನ ಆರಂಭಿಕ ಜೋಡಿ ಯಾಕೆ ವಿಧ್ವಂಸಕ ಅಂತ ಚೋಪ್ರಾ ತಮ್ಮ ಯೂಟ್ಯೂಬ್ ಚ್ಯಾನೆಲ್ನಲ್ಲಿ ವಿವರಿಸಿದ್ದಾರೆ. ‘ಯಾವ ಟೀಮು ಸ್ಫೋಟಕ ಆರಂಭಿಕ ಜೋಡಿಯನ್ನು ಹೊಂದಿದೆ ಅಂತ ನೀವೆಲ್ಲ ಕೇಳಿದ್ದೀರಿ. ವೆಲ್, ನನ್ನ ದೃಷ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಟೀಮಿನ ಓಪನರ್ಸ್ ವಿಧ್ವಂಸಕರಾಗಿದ್ದಾರೆ. ಕ್ವಿಂಟನ್ ಡಿ ಕಾಕ್ ಸ್ಥಾನದಲ್ಲಿ ಅವರು ಇಶಾನ್ ಕಿಷನ್ ಅವರನ್ನು ಆಡಿಸಿದರೂ ಅದು ಸ್ಫೋಟಕವಾಗೇ ಉಳಿಯಲಿದೆ, ನನ್ನ ವೋಟು ಮುಂಬೈ ತಂಡಕ್ಕೆ’ ಎಂದು ಚೋಪ್ರಾ ಹೇಳಿದ್ದಾರೆ.
ಐಪಿಎಲ್ 2020 ಸೀಸನ್ನಲ್ಲಿ ಡಿ ಕಾಕ್ ಮತ್ತು ಕಿಷನ್ ಇಬ್ಬರೂ ಸ್ಮರಣಿಯ ಪ್ರದರ್ಶನಗಳನ್ನು ನೀಡಿದರು. ಜಾರ್ಖಂಡ್ನ ಕಿಷನ್ 14 ಪಂದ್ಯಗಳಿಂದ 516 ರನ್ ಗಳಿಸಿ ಟೀಮಿನ ಪರ ಅತ್ಯಧಿಕ ರನ್ ಗಳಿಸಿದ ಹಿರಿಮೆಗೆ ಪಾತ್ರರಾದರೆ, 16 ಪಂದ್ಯಗಳನ್ನಾಡಿದ ಡಿ ಕಾಕ್ 503 ರನ್ ಬಾರಿಸಿದರು.
ಖ್ಯಾತಿಯ ಹಿನ್ನೆಲೆಯಿಂದ ನೋಡಿದರೆ ರೋಹಿತ್ ಶರ್ಮ ಅವರಿಗೆ ಕಳೆದ ಸೀಸನ್ ಸಾಧಾರಣವಾಗಿತ್ತು. 12 ಪಂದ್ಯಗಳನ್ನಾಡಿದ ಅವರು ಕೇವಲ 332 ರನ್ ಗಳಿಸಿದರು. ಗಮನಿಸಬೇಕಾದ ಅಂಶವೇನೆಂದರೆ, ಶರ್ಮ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಗಾಯದಿಂದಾಗಿ ಅವರು ಒಂದಷ್ಟು ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್ ಮತ್ತು ಸೀಮಿತ ಓವರ್ಗಳ ಸರಣಿಗಳಲ್ಲಿ ಅವರು ಸ್ಪರ್ಶ ಕೊಂಡುಕೊಂಡಿರುವುದು ಸತ್ಯ, ಹಾಗಾಗಿ ಹಿಟ್ಮ್ಯಾನ್ ಅವರ ಬ್ಯಾಟ್ ಈ ಬಾರಿಯ ಐಪಿಎಲ್ನಲ್ಲಿ ಗರ್ಜಿಸಲಿದೆ.
ಅಂದಹಾಗೆ, ಕಳೆದ ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಈ ಸೀಸನ್ನ ಮೊದಲ ಪಂದ್ಯವನ್ನು ಏಪ್ರಿಲ್ 10 ರಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನೈಯಲ್ಲಿ ಆಡಲಿದೆ.
ಇದನ್ನೂ ಓದಿ: IPL 2021: ಆರ್ಸಿಬಿಗೆ ಮೊದಲ ಎದುರಾಳಿ ಮುಂಬೈ.. ಹೀಗಿದೆ ನೋಡಿ ನಮ್ಮ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ..!
Published On - 5:00 pm, Wed, 31 March 21