Tv9 Digital Live | ದೇವದತ್ ಪಡಿಕ್ಕಲ್ ರಾಷ್ಟ್ರೀಯ ತಂಡಕ್ಕೆ ಆಡುವ ದಿನ ದೂರವಿಲ್ಲ: ಜೋಸೆಫ್ ಹೂವರ್

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒತ್ತಡವನ್ನು ನಿಭಾಯಿಸಲು ಮತ್ತು ಫ್ರೆಶರ್ ಕುಕ್ಕರ್​ನಂಥ ಸ್ಥಿತಿಯಲ್ಲಿ ಉತ್ಕೃಷ್ಟತೆಯನ್ನು ಮೆರೆಯಲು ಆಟಗಾರರಿಗೆ ಐಪಿಎಲ್ ಸಹಾಯ ಮಾಡಿದೆ. ಈ ಮಾದರಿಯ ಟೂರ್ನಿಗಳು ಆಟಗಾರರ ಬೆಳವಣಿಗೆಗೆ ಪೂರಕವಾಗಿದೆ.

Tv9 Digital Live | ದೇವದತ್ ಪಡಿಕ್ಕಲ್ ರಾಷ್ಟ್ರೀಯ ತಂಡಕ್ಕೆ ಆಡುವ ದಿನ ದೂರವಿಲ್ಲ: ಜೋಸೆಫ್ ಹೂವರ್
Tv9 ಆ್ಯಂಕರ್ ಹರಿಪ್ರಸಾದ್ ಮತ್ತು ಕ್ರೀಡಾ ಪತ್ರಕರ್ತ ಜೋಸೆಫ್ ಹೂವರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 31, 2021 | 9:28 PM

ಇಂಡಿಯನ್ ಪ್ರಿಮೀಯರ್ ಲೀಗ್​ನ (ಐಪಿಎಲ್) ಮತ್ತೊಂದು ಸೀಸನ್ ಮತ್ತೂ ಸ್ಪಷ್ಟವಾಗಿ ಹೇಳಬೇಕೆಂದರೆ 14ನೇ ಸೀಸನ್ ಏಪ್ರಿಲ್ 9ರಂದು ಆರಂಭವಾಗಲಿದೆ. ಕ್ರಿಕೆಟ್​ ಪ್ರೇಮಿಗಳಿಗೆ ಐಪಿಎಲ್ ಒದಗಿಸುವ ಮನರಂಜನೆಗೆ ಸರಿಸಾಟಿಯಾಗುವಂಥದ್ದು ಮತ್ತೊಂದಿಲ್ಲ. ಅದಕ್ಕೆಂದೇ ಇದನ್ನು ಕ್ರಿಕೆಟೇನ್ಮೆಂಟ್​ ಅಂತಲೂ ಕರೆಯುತ್ತಾರೆ. ಗಮನಾರ್ಹ ಸಂಗತಿಯೆಂದರೆ ಈ ಬಾರಿಯ ಸೀಸನ್ ಬೇಗ ಬಂದುಬಿಟ್ಟಿದೆ. ನಿಮಗೆ ಗೊತ್ತಿರುವ ಹಾಗೆ ಐಪಿಎಲ್​ ಸೀಸನ್-13 ಕಳೆದ ನವೆಂಬರ್​ನಲ್ಲಿ ಮುಕ್ತಾಯಗೊಂಡಿತ್ತು. ಕೋವಿಡ್​-19 ಪಿಡುಗಿನಿಂದಾಗಿ ಆ ಸೀಸನ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್​ನ ಮೂರು ನಗರಗಳಲ್ಲಿ ಆಡಿಸಲಾಗಿತ್ತು. ಪ್ರೇಕ್ಷಕರಿಗೆ ನೇರವಾಗಿ ಪಂದ್ಯಗಳನ್ನು ನೋಡುವ ಅವಕಾಶವಿರಲಿಲ್ಲ. ಈ ಸಲದ ಸೀಸನ್ ಭಾರತದಲ್ಲಿ ನಡೆಯುತ್ತಿರುವುದು ನಿಜವಾದರೂ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದರಿಂದ ಇಲ್ಲೂ ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ಆಡಿಸಲಾಗುತ್ತದೆ.

ಈ ಬಾರಿಯ ಐಪಿಎಲ್ ಸೀಸನ್, ಟೂರ್ನಿಯ ಮೇಲೆ ಕೊವಿಡ್​-19 ಪ್ರಭಾವ, ಖಾಲಿ ಮೈದಾನಗಳು, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುತ್ತಿರುವ ಭಾರತ ಮತ್ತು ವಿದೇಶಗಳ ಯುವ ಆಟಗಾರರು ಮೊದಲಾದ ಹಲವಾರು ಸಂಗತಿಗಳನ್ನು ಟಿವಿ9 ನಿರೂಪಕ ಹರಿ ಪ್ರಸಾದ್ ಅವರು ಖ್ಯಾತ ಕ್ರೀಡಾ ಪತ್ರಕರ್ತ ಜೋಸೆಫ್ ಹೂವರ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಫಿಸಿಯೋ ಅಬ್ರಹಾಂ ಅವರೊಂದಿಗೆ ಡಿಜಿಟಲ್ ಲೈವ್ ಸಂವಾದದಲ್ಲಿ ಚರ್ಚಿಸಿದರು.

ಪ್ರೇಕ್ಷಕರಿಲ್ಲದ ಮೈದಾನಗಳಲ್ಲಿ ಐಪಿಎಲ್ ಪಂದ್ಯಗಳು ಹೇಗಿರಲಿವೆ ಎಂದು ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೂವರ್​, ಟಿ20 ಕ್ರಿಕೆಟ್ ಮತ್ತು ಐಪಿಎಲ್ ವಿನ್ಯಾಸಗೊಳಿಸಿದ್ದೇ ಪ್ರೇಕ್ಷಕರಿಗಾಗಿ. ಖಾಲಿ ಮೈದಾನಗಳಲ್ಲಿ ಆಡುವುದು ಆಟಗಾರರಿಗೂ ಬೇಸರದ ಸಂಗತಿಯೇ ಆದರೆ, ಕೊವಿಡ್-19 ಪಿಡುಗು ಅಂಥ ಸನ್ನಿವೇಶವನ್ನು ಸೃಷ್ಟಿಸಿರುವುದರಿಂದ ಹಾಗೆ ಆಡುವುದು ಅನಿವಾರ್ಯವಾಗಿದೆ. ಐಪಿಎಲ್ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಮೊದಲ ಐಪಿಎಲ್ ಆರಂಭವಾದಾಗ ನಾನು ಟಿವಿ9 ಸ್ಟುಡಿಯೋನಲ್ಲಿ ಕುಳಿತು ಆಟಗಾರರು ತರಕಾರಿಗಳಂತೆ ಮಾರಾಟವಾಗುತ್ತಿದ್ದಾರೆ ಅಂತ ಮಾತಾಡಿದ್ದೆ. ಅದರೆ ಉದಯೋನ್ಮುಖ ಆಟಗಾರರಿಗೆ ತಮ್ಮ ಪ್ರತಿಭೆ ತೋರಲು ಇಂದು ದೊಡ್ಡ ವೇದಿಕೆಯಾಗಿ ಪರಿಣಮಿಸಿದೆ. ಅಷ್ಟು ಮಾತ್ರವಲ್ಲದೆ ಯುವ ಪ್ರತಿಭೆಗಳಿಗೆ ಅದು ದೊಡ್ಡ ಮೊತ್ತದ ಹಣವನ್ನು ಸಹ ಒದಗಿಸುತ್ತಿದೆ ಎಂದು ಹೂವರ್ ಹೇಳಿದರು.

ಒತ್ತಡ ನಿರ್ವಹಿಸುವುದನ್ನು ಕಲಿತಿದ್ದಾರೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒತ್ತಡವನ್ನು ನಿಭಾಯಿಸಲು ಮತ್ತು ಫ್ರೆಶರ್ ಕುಕ್ಕರ್​ನಂಥ ಸ್ಥಿತಿಯಲ್ಲಿ ಉತ್ಕೃಷ್ಟತೆಯನ್ನು ಮೆರೆಯಲು ಆಟಗಾರರಿಗೆ ಐಪಿಎಲ್ ಸಹಾಯ ಮಾಡಿದೆ ಎಂಬ ಹರಿಪ್ರಸಾದ್​ ಮಾತಿಗೆ ಸಹಮತ ವ್ಯಕ್ತಪಡಿಸಿದ ಹೂವರ್ ಈ ಟೂರ್ನಿಯು ಆಟಗಾರರ ಬೆಳವಣಿಗೆಗೆ ಪೂರಕವಾಗಿದೆ ಎಂದರು. ಆಂತರರಾಷ್ಟ್ರೀಯ ಕ್ರಿಕೆಟರ್​ಗಳೊಂದಿಗೆ ಭಾರತೀಯ ಆಟಗಾರರಿಗೆ ಆಡುವ ಅವಕಾಶ ಸಿಗುತ್ತಿರುವುದರಿಂದ ಅವರ ಸ್ಕಿಲ್​ಗಳಲ್ಲಿ ಸುಧಾರಣೆಯಾಗುತ್ತಿದೆ. ನಟರಾಜನ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಮೊದಲಾದ ಆಟಗಾರರೆಲ್ಲ ಐಪಿಎಲ್ ಮುಖಾಂತರವೇ ಪ್ರವರ್ಧಮಾನಕ್ಕೆ ಬಂದರು ಎಂದು ಹೇಳಿದರು. ಐಪಿಎಲ್ ಆಟಗಾರರರಿಗೆ ಒಂದು ಪ್ಯಾಕೇಜ್ ಥರ ಲಭ್ಯವಾಗುತ್ತಿದ್ದರೂ ಐಪಿಎಲ್ ಕ್ರಿಕೆಟ್​ ಅಲ್ಲ, ಕ್ರಿಕೆಟ್ ಅಂದರೆ ಐಪಿಎಲ್ ಅಲ್ಲ ಎನ್ನುವುದನ್ನು ಜನರು ಮನಗಾಣಬೇಕು ಅಂತ ಹೂವರ್ ಹೇಳಿದರು.

ಭರವಸೆಯ ಆಟಗಾರರು ಈ ಬಾರಿಯ ಸೀಸನ್​ನಲ್ಲಿ ಕರ್ನಾಟಕದ ಯಾವ ಆಟಗಾರರ ಮೇಲೆ ಹೆಚ್ಚು ಭರವಸೆ ಇಟ್ಟುಕೊಳ್ಳಲಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೂವರ್; ಮಾಯಾಂಕ್ ಅಗರರ್​ವಾಲ್, ಕೆ.ಎಲ್.ರಾಹುಲ್, ಪೃಥ್ವಿ ಶಾ ಅವರಲ್ಲದೆ ಹಲವಾರು ಆಟಗಾರರು ಈ ಬಾರಿ ತಮ್ಮ ಪ್ರತಿಭೆ ಮೆರೆಯಲಿದ್ದಾರೆ. ಇಂದಿನ ಯುವಕರಿಗೆ ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್​ನಲ್ಲಿ ಆಡುವುದು ಮುಖ್ಯವಾಗುತ್ತಿದೆ. ಅಂತ ಹೂವರ್ ವಿಷಾದದಿಂದ ಹೇಳಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿರುವ ರಿಷಭ್ ಪಂತ್ ಅವರಿಗೆ ನಾಯಕತ್ವದ ಗುಣಗಳನ್ನು ತೋರಲು ಉತ್ತಮ ಅವಕಾಶ ಒದಗಿ ಬಂದಿದೆ ಎಂದ ಅವರು ಪಂತ್​ರಲ್ಲಿ ಟೀಮನ್ನು ಲೀಡ್ ಮಾಡುವ ಸಾಮರ್ಥ್ಯವಿದೆ ಆದರೆ, ಟೀಮ್ ಮ್ಯಾನೇಜ್ಮೆಂಟ್​ ಮತ್ತು ಸೀನಿಯರ್​ ಅಟಗಾರರ ನೆರವು ಅವರರಿಗೆ ಬೇಕು. ಖಾಲಿ ಮೈದಾನಗಳಲ್ಲಿ ಆಡುವಾಗ ಆಟಗಾರರ ಮನಸ್ಥಿತಿ ಬಗ್ಗೆ ಮಾತಾಡಿದ ಫಿಸಿಯೋ ಆಬ್ರಹಾಂ, ಅದು ನಿಶ್ಚಿತವಾಗಿಯೂ ಅವರ ಮೇಲೆ ಪ್ರಭಾವ ಬೀರುತ್ತದೆ, ಅದರೆ, ಕ್ರಮೇಣವಾಗಿ ಅಂಥ ಸ್ಥಿತಿಗೆ ಅವರು ಒಗ್ಗಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇದು ಮಹೇಂದ್ರಸಿಂಗ್​ ಧೋನಿಗೆ ಕೊನೆಯ ಸೀಸನ್? ಧೋನಿಯ ಸೆಲ್-ಬೈ-ಡೇಟ್ ಮುಗಿದಿದೆಯಾದರೂ ಅವರ ಸಾಮರ್ಥ್ಯದ ಬಗ್ಗೆ ಮಾತಾಡುವುದು ಸರಿಯೆನಿಸಿವುದಿಲ್ಲ. ಯಾಕೆಂದರೆ ಅವರ ಸಾಮರ್ಥ್ಯದ ಬಗ್ಗೆ ಸಂಶಯ ತಳೆಯುವುದು ಸಾಧ್ಯವೇ ಇಲ್ಲ. ಅವರು ಭಾರತ ಮತ್ತು ಸಿಎಸ್​ಕೆಗೆ ಹಲವಾರು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ದೇಶದೆಲ್ಲೆಡೆ ಅನೇಕ ಆಟಗಾರರಿಗೆ ಪ್ರೇರಣೆಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕರ್ನಾಟಕದ ಆಲ್​ರೌಂಡರ್ ಕೆ.ಗೌತಮ್ ಒಬ್ಬ ಆಟಗಾರನಾಗಿ ಮತ್ತಷ್ಟು ವಿಕಸನಗೊಳ್ಳಲಿದ್ದಾರೆ ಎಂದು ಹೂವರ್ ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು ತಂಡದ ತಯಾರಿ ಬಗ್ಗೆ ಅಬ್ರಹಾಂ ಅವರಿಗೆ ಕೇಳಿದ ಪ್ರಶ್ನೆಗೆ ಟೀಮಿನ ನಾಯಕ ವಿರಾಟ್​ ಕೊಹ್ಲಿ, ಇಂಗ್ಲೆಂಡ್​ ವಿರುದ್ಧ ಎಲ್ಲ ಸರಣಿಗಳನ್ನು ಗೆದ್ದು ಭಾರಿ ಆತ್ಮವಿಶ್ವಾಸ ಮತ್ತು ಹುಮ್ಮಸ್ಸಿನಲ್ಲಿದ್ದಾರೆ. ಅದನ್ನೇ ಆರ್​ಸಿಬಿ ತಂಡಕ್ಕೂ ವರ್ಗಾಯಿಸಿದ್ದಾರೆ, ಮತ್ತು ಟೀಮಿನ ಇತರ ಸದಸ್ಯರು ಅದೇ ಹುರುಪಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

Devadutt Padikkal

ದೇವದತ್ ಪಡಿಕ್ಕಲ್

ಬ್ಯಾಲೆನ್ಸ್​ಡ್ ತಂಡ ಈ ಬಾರಿಯ ಆರ್​ಸಿಬಿ ತಂಡ ಅತ್ಯಂತ ಸಮತೋಲನದಿಂದ ಕೂಡಿದೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಖರೀದಿಸಿರುವುದು ಬಲವನ್ನು ಹೆಚ್ಚಸಿದೆ. ಆಸ್ಸೀ ಆಟಗಾರ 10 ಎಸೆತಗಳಲ್ಲಿ 40 ರನ್ ಬಾರಿಸುವ ಸಾಮರ್ಥ್ಯವುಳ್ಳ ಆಟಗಾರ ಎಂದರು. ಕೊಹ್ಲಿ, ಎಬಿಡಿ ವಿಲಿಯರ್ಸ್ ಮತ್ತು ದೇವದತ್ ಪಡಿಕ್ಕಲ್ ಅವರನ್ನು ಒಳಗೊಂಡ ಆರ್​ಸಿಬಿಯ ಬ್ಯಾಟಿಂಗ್ ಆದ್ಭುತವಾಗಿದೆ. ಪಡಿಕ್ಕಲ್ ಅಪಾರ ಪ್ರತಿಭಾವಂತ ಆಟಗಾರನಾಗಿದ್ದು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ದಿನ ದೂರವಿಲ್ಲ ಎಂದರು.

ಬೇರೆಬೇರೆ ತಂಡಗಳಿಗೆ ಆಡುತ್ತಿರುವ ಕರ್ನಾಟಕದ ಆಟಗಾರರ ಬಗ್ಗೆ ಮಾತಾಡಿದ ಹೂವರ್ ಮನೀಶ್ ಪಾಂಡೆ ಅವರನ್ನು ಬಿಸಿಸಿಐ ಕಡೆಗಣಿಸುತ್ತಿರುವುದು ಸೋಜಿಗ ಹುಟ್ಟಿಸುತ್ತಿದೆ ಎಂದು ಹೇಳಿದರು, ಅವರು ಅತ್ಯುತ್ತಮ ಬ್ಯಾಟ್ಸ್​ಮನ್ ಮಾತ್ರವಲ್ಲ ಒಬ್ಬ ಶ್ರೇಷ್ಠ ಫೀಲ್ಡರ್ ಕೂಡ ಹೌದು ಎಂದರು. ಪಾಂಡೆ ಆದಷ್ಟ ಬೇಗ ರಾಷ್ಟ್ರೀಯ ಟೀಮಿಗೆ ವಾಪಸ್ಸಾಗಲಿ ಎಂದು ಹಾರೈಸಿದರು.

ಇದನ್ನೂ ಓದಿ: IPL 2021: ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿದ ಸಿಎಸ್‌ಕೆ ತಂಡ, ಮೈದಾನದಲ್ಲಿ ಬೆವರಿಳಿಸಿದ ಕೂಲ್​ ಕ್ಯಾಪ್ಟನ್ ಧೋನಿ​

Published On - 9:20 pm, Wed, 31 March 21

ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ