AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಐಪಿಎಲ್​ ಆರಂಭಕ್ಕೂ ಮುನ್ನ ಕಿಂಗ್​ ಕೊಹ್ಲಿ- ಡಿವಿಲಿಯರ್ಸ್​ ನಡುವೆ ಸ್ಪರ್ಧೆ! ನಾಳೆ ನಡೆಯುವ ಈ ಪಂದ್ಯದಲ್ಲಿ ಗೆಲ್ಲುವವರಾರು?

IPL 2021: ನೀವು ವಿಕೆಟ್ಸ್‌ ಮಧ್ಯೆ ಈಗಲೂ ಅತಿವೇಗದ ಓಟಗಾರರಾಗಿದ್ದೀರಿ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ ನಾಳೆ ಇಬ್ಬರು ಒಟ್ಟಿಗೆ ಓಡಿ ಪರೀಕ್ಷಿಸೋಣ ಎಂದಿದ್ದಾರೆ

IPL 2021: ಐಪಿಎಲ್​ ಆರಂಭಕ್ಕೂ ಮುನ್ನ ಕಿಂಗ್​ ಕೊಹ್ಲಿ- ಡಿವಿಲಿಯರ್ಸ್​ ನಡುವೆ ಸ್ಪರ್ಧೆ! ನಾಳೆ ನಡೆಯುವ ಈ ಪಂದ್ಯದಲ್ಲಿ ಗೆಲ್ಲುವವರಾರು?
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​
Follow us
ಪೃಥ್ವಿಶಂಕರ
|

Updated on: Mar 31, 2021 | 2:11 PM

ಐಪಿಎಲ್ 2021 ಏಪ್ರಿಲ್ 9 ರಿಂದ ಪ್ರಾರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆದರೆ, ನಾಳೆ ನಡೆಯುವ ಪಂದ್ಯದಲ್ಲಿ, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಎಂಬ ಇಬ್ಬರು ಸ್ನೇಹಿತರು ಐಪಿಎಲ್ 2021 ಪ್ರಾರಂಭವಾಗುವ ಮೊದಲು ಮುಖಾಮುಖಿಯಾಗಲಿದ್ದಾರೆ. ಈ ಇಬ್ಬರು ಸ್ನೇಹಿತರು ಎದುರಾಳಿ ತಂಡಗಳ ಬಲವನ್ನು ಎದುರಿಸುವ ಮೊದಲು ತಮ್ಮ ವೇಗವನ್ನು ಪರೀಕ್ಷಿಸುವ ಸ್ಪರ್ಧೆಗೆ ಪರಸ್ಪರ ಮುಂದಾಗಿದ್ದಾರೆ.

ಈ ಇಬ್ಬರ ನಡುವೆ ಟ್ವಿಟರ್​ ವಾರ್ ಈ ಇಬ್ಬರ ನಡುವಿನ ವಾರ್​ ವಿರಾಟ್ ಕೊಹ್ಲಿ ಅವರ ಟ್ವೀಟ್ನೊಂದಿಗೆ ಪ್ರಾರಂಭವಾಯಿತು, ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದ ನಂತರ ಕೊಹ್ಲಿ, ತಾವು ಥ್ರೆಡ್‌ಮಿಲ್‌ ಮೇಲೆ ಓಡುತ್ತಿರುವ ವಿಡಿಯೋವನ್ನು ಟ್ವೀಟ್‌ ಮಾಡಿ ವಿಶ್ರಾಂತಿಯೇ ಇಲ್ಲ. ಇಲ್ಲಿಂದ ಏನಿದ್ದರೂ ವೇಗಕ್ಕೆ ಪ್ರಾಮುಖ್ಯತೆ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ, ನಿಮ್ಮ ಲಯ ಖುಷಿ ನೀಡುತ್ತಿದೆ. ತಂಡ ಸೇರಿಕೊಳ್ಳಲು ಹೊರಟಿದ್ದೇನೆ ಎಂದು, ತಾವು ಬ್ಯಾಗ್​ ತೋಟ್ಟಿರುವ ಫೋಟೋವೊಂದನ್ನು ಹರಿಬಿಟ್ಟರು. ಇದಕ್ಕೆ ಉತ್ತರಿಸಿದ ಕೊಹ್ಲಿ, ನೀವು ವಿಕೆಟ್ಸ್‌ ಮಧ್ಯೆ ಈಗಲೂ ಅತಿವೇಗದ ಓಟಗಾರರಾಗಿದ್ದೀರಿ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ ನಾಳೆ ಇಬ್ಬರು ಒಟ್ಟಿಗೆ ಓಡಿ ಪರೀಕ್ಷಿಸೋಣ ಎಂದಿದ್ದಾರೆ

ಈ ಬಾರಿ ಐಸಿಎಲ್ 2021 ಗಾಗಿ ಆರ್‌ಸಿಬಿಯ ನೋಟ ಬದಲಾಗಿದೆ. ಈ ಬಾರಿ ಪವರ್ ಹಿಟ್ಟರ್ ಆಗಿ, ಈ ತಂಡವು ವಿರಾಟ್ ಮತ್ತು ಎಬಿಡಿಯನ್ನು ಮಾತ್ರವಲ್ಲದೆ ಮ್ಯಾಕ್ಸ್ ವೆಲ್ ಅನ್ನು ಸಹ ಹೊಂದಿರುತ್ತದೆ, ಐಸಿಎಲ್ 2021 ರ ಹರಾಜಿನಲ್ಲಿ ಆರ್ಸಿಬಿ ಮ್ಯಾಕ್ಸ್ ವೆಲ್ ಅವರನ್ನು ದುಬಾರಿ ಬೆಲೆ ನೀಡಿ ಕೊಂಡುಕೊಂಡಿದೆ. ಹೀಗಾಗಿ ಈ ಆವೃತ್ತಿಯಲ್ಲಿ ಮ್ಯಾಕ್ಸ್ ವೆಲ್ ಮೇಲೆ ಆರ್​ಸಿಬಿ ಹೆಚ್ಚಿನ ಆಟವನ್ನು ನಿರೀಕ್ಷಿಸುತ್ತಿದೆ.

ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದ ಎದುರಾಳಿ ಐಸಿಎಲ್‌ನ 14 ನೇ ಸೀಸನ್ ಆರ್‌ಸಿಬಿಯ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಏಪ್ರಿಲ್ 9 ರಂದು ಚೆನ್ನೈನಲ್ಲಿ ನಡೆಯುವ ಆವೃತ್ತಿಯ ಮೊದಲ ಪಂದ್ಯದಲ್ಲಿ, 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆರ್‌ಸಿಬಿ ಎದುರು ಇರಲಿದೆ. ಈ ಆವೃತ್ತಿಯು ಮೇ 30 ರವರೆಗೆ ನಡೆಯಲಿದ್ದು, ಇದರಲ್ಲಿ 60 ಪಂದ್ಯಗಳು ನಡೆಯಲಿವೆ. ಕೊರೊನಾವೈರಸ್ ಕಾರಣ, ಈ ಬಾರಿ ಪಂದ್ಯಾವಳಿಯನ್ನು 6 ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದ್ದು, ಅಂತಿಮ ಪಂದ್ಯ ಮೇ 30 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ:IPL 2021: ಆರ್​ಸಿಬಿ ಮೇಲೆ ಪಂಜಾಬ್​ಗೆ ಸಿಕ್ಕಾಪಟ್ಟೆ ಲವ್.. ಬೆಂಗಳೂರು ತಂಡದ ಜೆರ್ಸಿ ಕಾಪಿ ಹೊಡೆದ ಕಿಂಗ್ಸ್​ಗೆ ಈಗ ಟ್ರೋಲಿಗರ ಕಾಟ!

Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ