ಕ್ರಿಕೆಟ್ ವಿಶೇಷ: ಬದ್ಧ ವೈರಿ ಪಾಕ್​ ಜೊತೆ ಭಾರತದ ಕ್ರಿಕೆಟ್ ಕದನ.. ಏಪ್ರಿಲ್​ನಲ್ಲಿ ತ್ರಿಕೋನ ಸರಣಿ ಆಯೋಜನೆ!

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಏಪ್ರಿಲ್ 3 ರಂದು ಮುಖಾಮುಖಿಯಾಗಲಿವೆ. ಏಪ್ರಿಲ್ 4 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ.

ಕ್ರಿಕೆಟ್ ವಿಶೇಷ: ಬದ್ಧ ವೈರಿ ಪಾಕ್​ ಜೊತೆ ಭಾರತದ ಕ್ರಿಕೆಟ್ ಕದನ.. ಏಪ್ರಿಲ್​ನಲ್ಲಿ ತ್ರಿಕೋನ ಸರಣಿ ಆಯೋಜನೆ!
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿಶಂಕರ
|

Updated on: Mar 31, 2021 | 11:49 AM

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ದಯಾದಿ ತಂಡಗಳ ನಡುವೆ ಕ್ರಿಕೆಟ್ ಸರಣಿಯನ್ನು ಕಣ್ತುಂಬಿಕೊಳ್ಳುವ ಅವರ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಏಪ್ರಿಲ್ 2 ರಿಂದ ಪ್ರಾರಂಭವಾಗುವ ಟ್ರೈ-ಟಿ 20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಸೆಣಸಲಿವೆ. ಈ ಪಂದ್ಯಗಳು ಮೂರು ದೇಶಗಳ ಅಂಧರ ಕ್ರಿಕೆಟ್ ತಂಡಗಳ ನಡುವೆ ನಡೆಯುತ್ತಿದ್ದರೂ, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಯಾವ ಪಂದ್ಯವಾಳಿ ನಡೆದರು ಅದು ಎರಡು ದೇಶಗಳಿಗೂ ಪ್ರತಿಷ್ಠೆಯ ಕಣವಾಗಿರುತ್ತದೆ. ತ್ರಿಕೋನ ಟಿ 20 ಸರಣಿಯು ಏಪ್ರಿಲ್ 2 ರಿಂದ ಪ್ರಾರಂಭವಾಗಿ ಏಪ್ರಿಲ್ 8 ರವರೆಗೆ ನಡೆಯಲಿದೆ.

ಟಿ 20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಮೂರನೇ ತಂಡ ಬಾಂಗ್ಲಾದೇಶ ತಂಡವಾಗಿದೆ. ಎಲ್ಲಾ ಪಂದ್ಯಗಳು ಢಾಕಾದಲ್ಲಿ ನಡೆಯಲಿದೆ. ತ್ರಿವಳಿ ಸರಣಿ ಟಿ 20 ಯಲ್ಲಿ ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಭಾಗವಹಿಸುತ್ತಿವೆ ಎಂದು ಪಾಕಿಸ್ತಾನ ಅಂಧರ ಕ್ರಿಕೆಟ್ ಮಂಡಳಿ ವರದಿ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸರಣಿಯಲ್ಲಿ ಮೊದಲ ಮುಖಾಮುಖಿ ಏಪ್ರಿಲ್ 4 ರಂದು ನಡೆಯಲಿದೆ ಎಂದು ಕೌನ್ಸಿಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಸ್ಪರ್ಧಿಸಲಿವೆ.

ಏಪ್ರಿಲ್ 4 ರಂದು ಭಾರತದೆದುರು ಪಾಕ್​ ಕ್ರಿಕೆಟ್ ಕದನ ಪಾಕಿಸ್ತಾನ ಬ್ಲೈಂಡ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಟಿ 20 ಸರಣಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರು ಮತ್ತು ಪಾಕಿಸ್ತಾನದ ಅಧಿಕಾರಿಗಳಿಗೆ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದೆ ಎಂದು ಹೇಳಿದರು. ಈ ಪರೀಕ್ಷೆಯಲ್ಲಿ ಎಲ್ಲರೂ ನಕಾರಾತ್ಮಕವಾಗಿ ಕಂಡುಬಂದಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ಆಟಗಾರರ ಪರೀಕ್ಷೆಯೂ ನಕಾರಾತ್ಮಕವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸರಣಿಯ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್ 2 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಏಪ್ರಿಲ್ 3 ರಂದು ಮುಖಾಮುಖಿಯಾಗಲಿವೆ. ಏಪ್ರಿಲ್ 4 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಏಪ್ರಿಲ್ 5 ವಿಶ್ರಾಂತಿ ದಿನ ಮತ್ತು ನಂತರ ಏಪ್ರಿಲ್ 6 ರಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಸ್ಪರ್ಧೆ ನಡೆಯಲಿದೆ. ಏಪ್ರಿಲ್ 7 ರಂದು ಭಾರತ ತಂಡ ಮತ್ತೊಮ್ಮೆ ಪಾಕಿಸ್ತಾನವನ್ನು ಎದುರಿಸಲಿದೆ. ಅಗ್ರ ಎರಡು ತಂಡಗಳ ನಡುವೆ ಏಪ್ರಿಲ್ 8 ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಕ್ರಿಕೆಟ್​ ಪ್ರಿಯರಿಗೆ ಸಿಹಿ ಸುದ್ದಿ: ಇಷ್ಟರಲ್ಲೇ ಇಂಡಿಯಾ- ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್​ ಸರಣಿ ನಡೆಯುವ ಸಾಧ್ಯತೆ!