Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಮಾರ್ಚ್​ 29ರಿಂದ ಆರ್​ಸಿಬಿ ಸಮರಾಭ್ಯಾಸ! ಇಷ್ಟರಲ್ಲೇ ತಂಡ ಸೇರ್ತಿದ್ದಾರೆ ಆರ್​ಸಿಬಿ ಆಪತ್ಭಾಂದವ ಎಬಿ ಡಿವಿಲಿಯರ್ಸ್

IPL 2021: ಮಾರ್ಚ್ 28 ರಂದು ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ತಂಡವನ್ನು ಸೇರಿಕೊಳ್ಳಲಿದ್ದು, ನ್ಯೂಜಿಲೆಂಡ್‌ನ ಯುವ ಬ್ಯಾಟ್ಸ್‌ಮನ್ ಫಿನ್ ಅಲೆನ್ ಚೊಚ್ಚಲ ಪಂದ್ಯದ ನಂತರ ತಂಡವನ್ನು ಸೇರಲಿದ್ದಾರೆ.

IPL 2021: ಮಾರ್ಚ್​ 29ರಿಂದ ಆರ್​ಸಿಬಿ ಸಮರಾಭ್ಯಾಸ! ಇಷ್ಟರಲ್ಲೇ ತಂಡ ಸೇರ್ತಿದ್ದಾರೆ ಆರ್​ಸಿಬಿ ಆಪತ್ಭಾಂದವ ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್
Follow us
ಪೃಥ್ವಿಶಂಕರ
|

Updated on: Mar 24, 2021 | 2:13 PM

ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಆರಂಭಕ್ಕೆ ಕೇವಲ 2 ವಾರಗಳು ಉಳಿದಿವೆ. ಲೀಗ್‌ನ ಎಲ್ಲಾ 8 ತಂಡಗಳು ಇದಕ್ಕಾಗಿ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಆಟಗಾರರು ಒಟ್ಟುಗೂಡುತ್ತಿದ್ದಾರೆ. ವಿದೇಶಿ ಆಟಗಾರರು ಕೂಡ ನಿಧಾನವಾಗಿ ಭಾರತದಲ್ಲಿ ತಮ್ಮ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಮಾರ್ಚ್ 28 ರಂದು ಸರಣಿ ಮುಗಿದ ಕೂಡಲೇ ಟೀಮ್ ಇಂಡಿಯಾದ ಆಟಗಾರರು ಅವರವರ ತಂಡ ಸೇರಲಿದ್ದಾರೆ. ಏತನ್ಮಧ್ಯೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಈ ಬಾರಿಯಾದರು ಕಪ್​ ಗೆಲ್ಲುವ ಭರವಸೆಯೊಂದಿಗೆ ತರಬೇತಿಗಿಳಿಯಲು ದಿನಾಂಕ ನಿಗಧಿಪಡಿಸುತ್ತಿದೆ.

ಜಂಪಾ ಈ ಆವೃತ್ತಿಯ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಜಂಪಾ ಈ ಆವೃತ್ತಿಯ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿಯ ಭಾಗವಾಗಿದ್ದ ಜಂಪಾ ಅವರನ್ನು ಈ ಆವೃತ್ತಿಯಲ್ಲಿ ಆರ್‌ಸಿಬಿ ತನ್ನ ತಂಡದಲ್ಲಿ ಉಳಿಸಿಕೊಂಡಿದೆ. ವಿಶ್ವದ ಅಗ್ರ ಟಿ 20 ಬೌಲರ್‌ಗಳಲ್ಲಿ ಒಬ್ಬರಾದ ಜಂಪಾ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲ್ಲಿದ್ದಾರೆ. ಈ ಕಾರಣದಿಂದಾಗಿ ಅವರು ಈ ಆವೃತ್ತಿಯ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಆರ್‌ಸಿಬಿ ಕ್ರಿಕೆಟ್‌ನ ನಿರ್ದೇಶಕ ಮೈಕ್ ಹೆಸ್ಸನ್ ಇದನ್ನು ದೃಢಪಡಿಸಿದ್ದಾರೆ.

ಜಂಪಾ ಮದುವೆಯ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ ಮಾರ್ಚ್ 24 ರ ಬುಧವಾರ ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ, ಇದರಲ್ಲಿ ಹೆವ್ಸನ್ ತಂಡದ ತರಬೇತಿ ಶಿಬಿರ ಮತ್ತು ಆಟಗಾರರ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದರು. ಮಾರ್ಚ್ 29 ರಿಂದ ತಂಡದ ತರಬೇತಿ ಶಿಬಿರ ಪ್ರಾರಂಭವಾಗಲಿದೆ ಎಂದು ಹೆವ್ಸನ್ ಹೇಳಿದ್ದಾರೆ. ವಿದೇಶಿ ಆಟಗಾರರಲ್ಲಿ ಜಂಪಾಗೆ ಮಾತ್ರ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ನಮ್ಮ ಕೆಲವು ವಿದೇಶಿ ಆಟಗಾರರು ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಆಡಮ್ ಜಂಪಾ ಮದುವೆಯಾಗುತ್ತಿದ್ದಾರೆ. ಇದು ಅವರಿಗೆ ಬಹಳ ಮುಖ್ಯವಾದ ಸಮಯ ಮತ್ತು ಫ್ರ್ಯಾಂಚೈಸ್ ಆಗಿ ನಾವು ಅದರ ಬಗ್ಗೆ ತಿಳಿದಿದ್ದೇವೆ ಮತ್ತು ನಾವು ಅದನ್ನು ಗೌರವಿಸುತ್ತೇವೆ ಮತ್ತು ಈ ಸಮಯವು ಅವರಿಗೆ ಉತ್ತಮವಾಗಿರುತ್ತದೆ ಎಂದು ಭಾವಿಸುತ್ತೇವೆ.

ಎಬಿಡಿ 28 ರಂದು ಬರಲಿದ್ದಾರೆ. ತಂಡದ ಇತರ ಎಲ್ಲ ಆಟಗಾರರು ಏಪ್ರಿಲ್ 1ರೊಳಗೆ ಶಿಬಿರಕ್ಕೆ ಸೇರಲಿದ್ದಾರೆ ಎಂದು ಹೆವ್ಸನ್ ಹೇಳಿದ್ದಾರೆ. ಮಾರ್ಚ್ 28 ರಂದು ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ತಂಡವನ್ನು ಸೇರಿಕೊಳ್ಳಲಿದ್ದು, ನ್ಯೂಜಿಲೆಂಡ್‌ನ ಯುವ ಬ್ಯಾಟ್ಸ್‌ಮನ್ ಫಿನ್ ಅಲೆನ್ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯದ ನಂತರ ತಂಡವನ್ನು ಸೇರಲಿದ್ದಾರೆ. ನಮ್ಮ ಆಟಗಾರರು ಏಪ್ರಿಲ್ 1 ರವರೆಗೆ ಬರುತ್ತಲೇ ಇರುತ್ತಾರೆ. ಫಿನ್ ಅಲೆನ್ ಏಪ್ರಿಲ್ 1 ರಂದು ನ್ಯೂಜಿಲೆಂಡ್ ಪರ ಟಿ 20 ಪಂದ್ಯವನ್ನು ಆಡಿ ಮರುದಿನ ತಂಡ ಸೇರಿಕೊಳ್ಳಲ್ಲಿದ್ದಾರೆ. ಮಾರ್ಚ್ 28 ರಂದು ಎಬಿಡಿ ಬರಲಿದ್ದಾರೆ ಎಂದು ಹೆವ್ಸನ್ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದ ಎದುರಾಳಿ ಐಸಿಎಲ್‌ನ 14 ನೇ ಸೀಸನ್ ಆರ್‌ಸಿಬಿಯ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಏಪ್ರಿಲ್ 9 ರಂದು ಚೆನ್ನೈನಲ್ಲಿ ನಡೆಯುವ ಆವೃತ್ತಿಯ ಮೊದಲ ಪಂದ್ಯದಲ್ಲಿ, 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆರ್‌ಸಿಬಿ ಎದುರು ಇರಲಿದೆ. ಈ ಆವೃತ್ತಿಯು ಮೇ 30 ರವರೆಗೆ ನಡೆಯಲಿದ್ದು, ಇದರಲ್ಲಿ 60 ಪಂದ್ಯಗಳು ನಡೆಯಲಿವೆ. ಕೊರೊನಾವೈರಸ್ ಕಾರಣ, ಈ ಬಾರಿ ಪಂದ್ಯಾವಳಿಯನ್ನು 6 ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದ್ದು, ಅಂತಿಮ ಪಂದ್ಯ ಮೇ 30 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ:India vs England: ಟಿ20 ಇನ್ನಿಂಗ್ಸ್ ಆರಂಭಿಸುವ ವಿರಾಟ್​ ಕೊಹ್ಲಿ ನಿರ್ಧಾರದಿಂದ ಆರ್​ಸಿಬಿಗೆ ಲಾಭ: ಮೈಕಲ್ ವಾನ್

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್