AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಟಿ20 ಇನ್ನಿಂಗ್ಸ್ ಆರಂಭಿಸುವ ವಿರಾಟ್​ ಕೊಹ್ಲಿ ನಿರ್ಧಾರದಿಂದ ಆರ್​ಸಿಬಿಗೆ ಲಾಭ: ಮೈಕಲ್ ವಾನ್

ಭಾರತ ಕ್ರಿಕೆಟ್ ಟೀಮನ್ನು ಸತತವಾಗಿ ಫಾಲೋ ಮಾಡುತ್ತಾ ಬಂದಿರುವ ಇಂಗ್ಲೆಂಡ್ ಟೀಮಿನ ಮಾಜಿ ನಾಯಕ ಮೈಕೆಲ್ ವಾನ್ ಅವರು ಕೊಹ್ಲಿ‘ಯ ನಿರ್ಧಾರ ಸಮಯೋಚಿತವಾಗಿದ್ದು ಆರ್​ಸಿಬಿಗೆ ಬಹಳ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ.

India vs England: ಟಿ20 ಇನ್ನಿಂಗ್ಸ್ ಆರಂಭಿಸುವ ವಿರಾಟ್​ ಕೊಹ್ಲಿ ನಿರ್ಧಾರದಿಂದ ಆರ್​ಸಿಬಿಗೆ ಲಾಭ: ಮೈಕಲ್ ವಾನ್
ಮೈಕೆಲ್ ವಾನ್ ಮತ್ತು ವಿರಾಟ್​ ಕೊಹ್ಲಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 22, 2021 | 10:01 PM

ಇಂಗ್ಲೆಂಡ್ ವಿರುದ್ಧ ಅಡಿದ ಕೊನೆಯ ಪಂದ್ಯದಲ್ಲಿ ಸತತವಾಗಿ ವಿಫಲರಾದ ಕೆ.ಎಲ್.ರಾಹುಲ್ ಅವರನನ್ನು ಟೀಮಿನಿಂದ ಕೈಬಿಟ್ಟು ಇನ್ನಿಂಗ್ಸ್​ ಓಪನ್ ಮಾಡುವ ಅನಿರೀಕ್ಷಿತ ಮತ್ತು ಅಚ್ಚರಿಯ ನಿರ್ಧಾರ ತೆಗೆದುಕೊಂಡ ಟೀಮ್ ಇಂಡಿಯಾದ ಸ್ಕಿಪ್ಪರ್ ವಿರಾಟ್​ ಕೊಹ್ಲಿ; ಜೊತೆಗಾರ ಮತ್ತು ಉಪನಾಯಕ ರೋಹಿತ್ ಶರ್ಮ ಅವರೊಂದಿಗೆ ಮೊದಲ ವಿಕೆಟ್​ಗೆ 94 ರನ್ ಸೇರಿಸಿ ಭಾರತಕ್ಕೆ ಅತ್ಯುತ್ತಮ ಆರಂಭ ಕೊಡಿಸಿದರು. ವೈಯಕ್ತಿಕವಾಗಿಯೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ 52 ಎಸೆತಗಳಲ್ಲಿ ಅಜೇಯ 80 ರನ್ ಬಾರಿಸಿದರು. ಭಾರತ 224/2 ರನ್​ಗಳ ಭಾರಿ ಮೊತ್ತ ಗಳಿಸಲು ಕೊಹ್ಲಿಯ ಕಾಣಿಕೆ ಬಹಳ ಮಹತ್ವಪೂರ್ಣವೆನಿಸಿತು.

ಪಂದ್ಯದ ನಂತರ ಮಾತಾಡಿದ ಕೊಹ್ಲಿ ಮುಂಬರುವ ದಿನಗಳಲ್ಲೂ ಟಿ20 ಕ್ರಿಕೆಟ್​ನಲ್ಲಿ ಅವರ ಓಪನರ್​ ಅಗಿ ಆಡುವುದನ್ನು ಮುಂದುವರಿಸುವುದಾಗಿ ಹೇಳಿದರು. ಮುಂದಿನ ತಿಂಗಳು ಆರಂಭವಾಗಲಿರುವ ಇಂಡಿಯನ್ ಪ್ರಿಮೀಯರ್​ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವು ತಾನೇ ಆರಂಭ ಆಟಗಾರನಾಗಿ ಆಡುವುದನ್ನು ಅವರು ಖಚಿತಪಡಿಸಿದರು.

ಭಾರತ ಕ್ರಿಕೆಟ್ ಟೀಮನ್ನು ಸತತವಾಗಿ ಫಾಲೋ ಮಾಡುತ್ತಾ ಬಂದಿರುವ ಇಂಗ್ಲೆಂಡ್ ಟೀಮಿನ ಮಾಜಿ ನಾಯಕ ಮೈಕೆಲ್ ವಾನ್ ಅವರು ಕೊಹ್ಲಿ‘ಯ ನಿರ್ಧಾರ ಸಮಯೋಚಿತವಾಗಿದ್ದು ಆರ್​ಸಿಬಿಗೆ ಬಹಳ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ. ‘ವಿರಾಟ್ ಕೊಹ್ಲಿ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಅಂಶವೊಂದು ಲಭ್ಯವಾಗಿದೆ. ಕೊಹ್ಲಿ ಮೇಲಿನ ಕ್ರಮಾಂಕದಲ್ಲಿ ಆಡಿದರೆ, ಆರ್​ಸಿಬಿ ತಂಡ ಸಾಕಷ್ಟು ಬಲಿಷ್ಠವೆನಿಸಲಿದೆ’ ಎಂದು ಕ್ರಿಕೆಟ್ ವೆಬ್​ಸೈಟೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಾನ್ ಹೇಳಿದ್ದಾರೆ.

‘ಭಾರತದ ವಿಕೆಟ್​ಗಳ ಮೇಲೆ ಅವರು ನಿಸ್ಸಂದೇಹವಾಗಿ ಉತ್ತಮ ಪ್ರದರ್ಶನಗಳನ್ನು ನೀಡಲಿದ್ದಾರೆ. ಭಾರತದಲ್ಲಿ ಆಡುವಾಗ ನೀವು ಯಾವ ಸ್ಥಾನದಲ್ಲಿ ಅಡಲು ಬಯಸುತ್ತೀರಿ ಎಂದು ಯಾವುದೇ ಬ್ಯಾಟ್ಸ್​ಮನ್​ನನ್ನು ಕೇಳಿದರೆ ಅವನು, ಓಪನರ್ ಆಗಿ ಆಡಲು ಬಯಸುತ್ತೇನೆ ಎಂದು ಹೇಳುತ್ತಾನೆ. ಕಿರು ಆವೃತ್ತಿಯಲ್ಲಿ ಕೊಹ್ಲಿ ಇನ್ನಿಂಗ್ಸ್ ಆರಂಭಿಸಲು ನಿರ್ಧಸಿರುವುದರಿಂದ ಮುಂದಿನ ಕೆಲವು ತಿಂಗಳುಗಳ ಕಾಲ ಅವರು ಆ ಜವಾಬ್ದಾರಿಯನ್ನು ಬಹಳ ಎಂಜಾಯ್ ಮಾಡಲಿದ್ದಾರೆ,’ ಎಂದು ವಾನ್ ಹೇಳಿದ್ದಾರೆ.

‘ಅವರ ಬ್ಯಾಟ್​ ನಿಶ್ಚಿತವಾಗಿಯೂ ಚಮತ್ಕಾರಗಳನ್ನು ಮಾಡಲಿದೆ. ಕ್ರಿಕೆಟ್​ ಪ್ರೇಮಿಗಳಿಗೆ, ನಮಗೆ ರಸದೌತಣ ಕಾಯುತ್ತಿದೆ,’ ಎಂದು ವಾನ್ ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 3 ಒಂದು ದಿನದ ಪಂದ್ಯಗಳ ಸರಣಿ ನಾಳೆಯಿಂದ (ಮಂಗಳವಾರ) ಪುಣೆಯಲ್ಲಿ ಆರಂಭವಾಗಲಿದೆ. ಸರಣಿಯ ಎಲ್ಲ ಮೂರು ಗೇಮ್​ಗಳು ಪುಣೆಯಲ್ಲೇ ನಡೆಯಲಿವೆ.

ಇದನ್ನೂ ಓದಿ: India vs England: ಬೆಂಚ್​ ಕಾಯುವುದರಿಂದ ರಾಹುಲ್ ಫಾರ್ಮ್​ಗೆ ಮರಳುವುದಿಲ್ಲ.. ಕನ್ನಡಿಗನ ಪರ ಬ್ಯಾಟ್​ ಬೀಸಿದ ಗಂಭೀರ್​!

Published On - 9:49 pm, Mon, 22 March 21

ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ