ಭಾರತಕ್ಕಾಗಿ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಭಾರತದ ಅತ್ಯಂತ ಯಶಸ್ವಿ ನಾಯಕ ಎಂ.ಎಸ್. ಧೋನಿ. ಎಲ್ಲಾ ಭಾರತೀಯರ ಅಚ್ಚುಮೆಚ್ಚಿನ ಕ್ರಿಕೆಟಿಗ ಎಂಬುದರಲ್ಲಿ ಎರಡು ಮಾತಿಲ್ಲ. ಧೋನಿ ಮಾಡುವ ಎಲ್ಲ ಚಟುವಟಿಕೆಯೂ ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಧೋನಿಯ ಹೊಸ ನೋಟ ಅಥವಾ ಅವರು ತೆಗೆದುಕೊಂಡ ಹೊಸ ಬೈಕು ಇರಲಿ ಇವೆಲ್ಲವೂ ಬಾರೀ ಸುದ್ದಿಯಾಗುತ್ತವೆ. ಐಪಿಎಲ್ ರದ್ದಾದ ನಂತರ ಧೋನಿ ಪ್ರಸ್ತುತ ಕುಟುಂಬದೊಂದಿಗೆ ಶಿಮ್ಲಾದಲ್ಲಿ ರಜೆಯಲ್ಲಿದ್ದಾರೆ. ಈ ಬಾರಿ ಧೋನಿ ಮೀಸೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಧೋನಿ ತನ್ನ ಮಗಳ ಜೊತೆಗಿನ ಫೋಟೋಗಳು ವೈರಲ್ ಆಗಿದ್ದವು.
ಗಿಡಗಳನ್ನು ನೆಡಿ ಮತ್ತು ಮರಗಳನ್ನು ಕಾಪಾಡಿ
ಈಗ ಧೋನಿ ನಾಯಕತ್ವದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಧೋನಿಯ ಹೊಸ ಲುಕ್ನ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಏತನ್ಮಧ್ಯೆ, ಈ ಫೋಟೋಕ್ಕೆ ನೆಟಿಜನ್‌ಗಳು ವಿಭಿನ್ನ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ ಮತ್ತು ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ. ಸಿಎಸ್ಕೆ ಹಮಚಿಕೊಂಡಿರುವ ಧೋನಿ ಮೀಸೆ ಬಿಟ್ಟಿರುವ ಈ ಫೋಟೋದಲ್ಲಿ ಮರದಿಂದ ತಯಾರಾದ ಹೋಟೆಲ್ ಬಳಿ ನಿಂತಿರುವ ಧೋನಿ ನಿಂತಿದ್ದಾರೆ. ಹಾಗೆಯೇ ಒಂದು ಮರದ ತುಂಡಿನ ಮೇಲೆ ಗಿಡಗಳನ್ನು ನೆಡಿ ಮತ್ತು ಮರಗಳನ್ನು ಕಾಪಾಡಿ ಎಂದು ಬರೆಯಲಾಗಿದೆ.
Planting the right thoughts! ?
Thala ?#WhistlePodu #Yellove ? pic.twitter.com/rbZmSwGA2n— Chennai Super Kings – Mask P?du Whistle P?du! (@ChennaiIPL) June 25, 2021
ಉಳಿದ ಐಪಿಎಲ್‌ಗಾಗಿ ಕ್ರಿಕೆಟಿಗರು ಉತ್ಸುಕರಾಗಿದ್ದಾರೆ
ಕೊರೊನಾ ಬಿಕ್ಕಟ್ಟಿನಿಂದ ಮುಂದೂಡಲ್ಪಟ್ಟ ಐಪಿಎಲ್ 2021 ಸೆಪ್ಟೆಂಬರ್-ಅಕ್ಟೋಬರ್ ನಡುವೆ ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕೆಲವು ದಿನಗಳ ಹಿಂದೆ ತಿಳಿಸಿದೆ. ಏತನ್ಮಧ್ಯೆ, ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದರಿಂದ, ಅಭಿಮಾನಿಗಳು ಧೋನಿ ಆಡುವದನ್ನು ನೋಡುವ ಏಕೈಕ ಆಯ್ಕೆ ಐಪಿಎಲ್ ಆಗಿದೆ.
ಇದನ್ನೂ ಓದಿ:ಎಮ್ ಎಸ್ ಧೋನಿಯನ್ನು ತಬ್ಬಿ ನಿಂತ ಮಗಳು; ಕ್ಯಾಮರಾ ಮುಂದೆ ಝೀವಾ ಕೊಟ್ಟ ಸ್ಮೈಲ್ ನೋಡಿ