ಇವರು ಯಾವ ರೀತಿಯ ಪ್ರವಾಸ ಆಯೋಜಿಸಿದ್ದಾರೆ; ಬಿಸಿಸಿಐ ಮೇಲೆ ಕಿಡಿಕಾರಿದ ದಿಲೀಪ್ ವೆಂಗ್‍ಸಾರ್ಕರ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದ ನಂತರ ಒಂದೂವರೆ ತಿಂಗಳವರೆಗೆ ಭಾರತೀಯ ತಂಡ ಅಲ್ಲಿ ಏನು ಮಾಡುತ್ತದೆ?

ಇವರು ಯಾವ ರೀತಿಯ ಪ್ರವಾಸ ಆಯೋಜಿಸಿದ್ದಾರೆ; ಬಿಸಿಸಿಐ ಮೇಲೆ ಕಿಡಿಕಾರಿದ ದಿಲೀಪ್ ವೆಂಗ್‍ಸಾರ್ಕರ್
ಜೋ ರೂಟ್, ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on: May 31, 2021 | 8:58 PM

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ ಫೈನಲ್) ಫೈನಲ್ ಪಂದ್ಯವನ್ನು ಆಡಲು ಭಾರತೀಯ ಕ್ರಿಕೆಟ್ ತಂಡ ಜೂನ್ 2 ರಂದು ಇಂಗ್ಲೆಂಡ್‌ಗೆ ತೆರಳಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 18 ರಂದು ನಡೆಯುವ ಫೈನಲ್ ಪಂದ್ಯದ ನಂತರ ಆಗಸ್ಟ್ 4 ರಿಂದ ಆರಂಭವಾಗಲಿದೆ. ಏತನ್ಮಧ್ಯೆ, ಭಾರತದ ಮಾಜಿ ನಾಯಕ ದಿಲೀಪ್ ವೆಂಗ್ಸಾರ್ಕರ್ ಎರಡು ಸರಣಿಗಳ ನಡುವೆ ಒಂದೂವರೆ ತಿಂಗಳ ಅಂತರದ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಡಬ್ಲ್ಯೂಟಿಸಿ ಫೈನಲ್ ನಂತರ ಒಂದೂವರೆ ತಿಂಗಳವರೆಗೆ ಭಾರತ ತಂಡವು ಇಂಗ್ಲೆಂಡ್ನಲ್ಲಿ ಏನು ಮಾಡುತ್ತದೆ? ಆದ್ದರಿಂದ ಪ್ರವಾಸವನ್ನು ಸರಿಯಾಗಿ ಯೋಜಿಸಬೇಕು ಎಂದು ವೆಂಗ್‌ಸಾರ್ಕರ್ ಹೇಳಿದರು.

ಕ್ರಿಕೆಟ್ ನೆಕ್ಸ್ಟ್ ಗೆ ನೀಡಿದ ಸಂದರ್ಶನದಲ್ಲಿ ದಿಲೀಪ್ ವೆಂಗ್ಸರ್ಕರ್, “ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದ ನಂತರ ಒಂದೂವರೆ ತಿಂಗಳವರೆಗೆ ಭಾರತೀಯ ತಂಡ ಅಲ್ಲಿ ಏನು ಮಾಡುತ್ತದೆ? ಇಂಗ್ಲೆಂಡ್ ಮತ್ತು ಭಾರತ ನಡುವಿನ ಪಂದ್ಯಗಳ ವೇಳಾಪಟ್ಟಿಯನ್ನು ನೋಡಿ ನಾನು ತುಂಬಾ ಅಸಮಾದಾನಗೊಂಡಿದ್ದೇನೆ. ಯಾವ ರೀತಿಯ ಪ್ರವಾಸವನ್ನು ಇವರು ಆಯೋಜಿಸಿದ್ದಾರೆ? ನೀವು ಒಂದು ಪಂದ್ಯವನ್ನು ಆಡಿ ನಂತರ ಮತ್ತೊಂದು ಪಂದ್ಯಕ್ಕಾಗಿ ಒಂದೂವರೆ ತಿಂಗಳು ಕಾಯಬೇಕಾಗಿರುವುದು ಹೇಗೆ? ಪಾಕಿಸ್ತಾನ ಮತ್ತು ಶ್ರೀಲಂಕಾ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಆಡಬೇಕಾದರೆ, ಭಾರತ ಮತ್ತು ಇಂಗ್ಲೆಂಡ್ ಪಂದ್ಯಗಳನ್ನು ತಕ್ಷಣ ಆಡಬೇಕು ಎಂದಿದ್ದಾರೆ

ಇಂಗ್ಲೆಂಡ್ ಪ್ರವಾಸದ ಮಾಹಿತಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಜೂನ್ 18 ರಿಂದ 22 ರವರೆಗೆ ನಡೆಯಲಿದೆ. ಅದರ ನಂತರ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವನ್ನು ಆಗಸ್ಟ್ 4 ರಿಂದ 8 ರವರೆಗೆ ನಾಟಿಂಗ್ಹ್ಯಾಮ್ನಲ್ಲಿ ಆಡಲಾಗುತ್ತದೆ. ಎರಡನೇ ಪಂದ್ಯವನ್ನು ಆಗಸ್ಟ್ 12 ರಿಂದ ಲಂಡನ್‌ನಲ್ಲಿ ಮತ್ತು ಮೂರನೇ ಪಂದ್ಯವನ್ನು ಆಗಸ್ಟ್ 25 ರಿಂದ ಲೀಡ್ಸ್ನಲ್ಲಿ ಆಡಲಾಗುತ್ತದೆ. ಐದನೇ ಮತ್ತು ಅಂತಿಮ ಪಂದ್ಯ ಸೆಪ್ಟೆಂಬರ್ 2 ರಿಂದ 6 ರವರೆಗೆ ಲಂಡನ್‌ನಲ್ಲಿ ನಾಲ್ಕನೇ ಪಂದ್ಯದ ನಂತರ ಸೆಪ್ಟೆಂಬರ್ 10 ರಿಂದ 14 ರವರೆಗೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ