Rishabh Pant: ರೋಹಿತ್ ಮಾಡಿದ ತಪ್ಪನ್ನೇ ರಿಷಭ್ ಪಂತ್ ಮಾಡುತ್ತಿದ್ದಾನೆ; ಕೀಪರ್ ಕಿವಿ ಹಿಂಡಿದ ಕಪಿಲ್ ದೇವ್

|

Updated on: May 27, 2021 | 7:25 PM

Rishabh Pant: ಆರಂಭದಲ್ಲಿ ರೋಹಿತ್ ಶರ್ಮಾಗೂ ಕೂಡ ಇದೇ ಸಲಹೆಯನ್ನು ನೀಡಿದ್ದೆವು, ಶರ್ಮಾ ಕೂಡ ಬಿಗ್ ಶಾಟ್ ಪ್ರಯತ್ನಕ್ಕೆ ಕೈಹಾಕಿ ಬೇಗನೇ ವಿಕೆಟ್ ಒಪ್ಪಿಸುತ್ತಿದ್ದರು.

Rishabh Pant: ರೋಹಿತ್ ಮಾಡಿದ ತಪ್ಪನ್ನೇ ರಿಷಭ್ ಪಂತ್ ಮಾಡುತ್ತಿದ್ದಾನೆ; ಕೀಪರ್ ಕಿವಿ ಹಿಂಡಿದ ಕಪಿಲ್ ದೇವ್
ರಿಶಬ್​ ಪಂತ್​
Follow us on

ಭಾರತೀಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಇತ್ತೀಚಿನ ಫಾರ್ಮ್ ತುಂಬಾ ಚೆನ್ನಾಗಿದೆ. ಅವರು ಮೊದಲು ಆಸ್ಟ್ರೇಲಿಯಾ ಮತ್ತು ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ನಂತರ ದೈತ್ಯ ಕ್ರಿಕೆಟಿಗರು ಪಂತ್ ಬ್ಯಾಟಿಂಗ್​ ಬಗ್ಗೆ ಹೊಗಳಿ ಮಾತಾನಾಡಲು ಆರಂಭಿಸಿದರು. ಆದರೆ ಇಲ್ಲೊಬ್ಬರು ಮಾಜಿ ಕ್ರಿಕೆಟಿಗ ಪಂತ್​ಗೆ ಕಿವಿಮಾತು ಹೇಳಿದ್ದಾರೆ. ರೋಹಿತ್ ಶರ್ಮಾ ಮಾಡಿದ ಅದೇ ತಪ್ಪುಗಳನ್ನು ಪಂತ್ ಪುನರಾವರ್ತಿಸುತ್ತಿದ್ದಾರೆ ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ. ಜೊತೆಗೆ ಪಂತ್ ಆಟದಲ್ಲಿ ಇನ್ನೂ ಕೆಲವು ಮಹತ್ವದ ಸುಧಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಐಸಿಸಿ ಮೊದಲ ಬಾರಿಗೆ ಆಯೋಜಿಸುತ್ತಿದ್ದು, ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸೌತಾಂಪ್ಟನ್‌ನಲ್ಲಿ ಜೂನ್ 18 ರಿಂದ ಜೂನ್ 22 ರವರೆಗೆ ನಡೆಯಲಿದೆ. ಮಳೆಯಿಂದಾಗಿ ತೊಂದರೆಯಾದಾಗ, ಜೂನ್ 23 ರಂದು ಹೆಚ್ಚುವರಿ ದಿನವನ್ನು ಸಹ ಇರಿಸಲಾಗಿದೆ. ಈ ಪಂದ್ಯದ ನಂತರ ಭಾರತ ಇಂಗ್ಲೆಂಡ್‌ನಲ್ಲಿಯೇ ಉಳಿದು ಆತಿಥೇಯ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ.

ಪಂತ್ ನೆಲ ಕಚ್ಚಿ ಆಡಬೇಕಿದೆ
ರಿಷಭ್ ಪಂತ್ ಒಬ್ಬ ಉದಯೋನ್ಮುಖ ಆಟಗಾರ. ಆತನಿಗೆ ಟೀಂ ಇಂಡಿಯಾ ಪರ ಆಡಲು ಇನ್ನೂ ಸಾಕಷ್ಟು ಸಮಯವಿದೆ, ನಿಜಕ್ಕೂ ಆತನ ಹೊಡೆತಗಳ ಮಟ್ಟ ಅದ್ಭುತವಾದದ್ದು. ಆದರೆ ಇಂಗ್ಲೆಂಡ್ ನೆಲ ಸವಾಲಿನಿಂದ ಕೂಡಿರಲಿದ್ದು, ಪಂತ್ ಪ್ರತಿ ಎಸೆತಕ್ಕೂ ಬಿಗ್ ಶಾಟ್ ಬಾರಿಸುವವ ಪ್ರಯತ್ನಕ್ಕೆ ಮುಂದಾಗದೇ ಮೈದಾನದಲ್ಲಿ ಹೆಚ್ಚು ಸಮಯ ನಿಂತು ಆಡುವ ಪ್ರಯತ್ನ ಮಾಡಬೇಕು. ಆರಂಭದಲ್ಲಿ ರೋಹಿತ್ ಶರ್ಮಾಗೂ ಕೂಡ ಇದೇ ಸಲಹೆಯನ್ನು ನೀಡಿದ್ದೆವು, ಶರ್ಮಾ ಕೂಡ ಬಿಗ್ ಶಾಟ್ ಪ್ರಯತ್ನಕ್ಕೆ ಕೈಹಾಕಿ ಬೇಗನೇ ವಿಕೆಟ್ ಒಪ್ಪಿಸುತ್ತಿದ್ದರು ನಂತರದ ದಿನಗಳಲ್ಲಿ ನಿಧಾನವಾಗಿ ಇನಿಂಗ್ಸ್ ಕಟ್ಟಿ ನೆಲೆಯೂರಿದ ಮೇಲೆ ದೊಡ್ಡ ಹೊಡೆತಗಳಿಗೆ ಕೈಹಾಕುವ ಅಭ್ಯಾಸವನ್ನು ಮಾಡಿಕೊಂಡು ಯಶಸ್ವಿಯಾದರು ಎಂದು ರಿಷಭ್ ಪಂತ್‌ಗೆ ತಾಳ್ಮೆಯ ಬ್ಯಾಟಿಂಗ್ ನಡೆಸುವಂತೆ ಕಪಿಲ್ ದೇವ್ ಸಲಹೆ ನೀಡಿದ್ದಾರೆ.

ಕಪಿಲ್‌ಗೆ ಟೆಸ್ಟ್ ಮೇಲೆ ಇನ್ನೂ ಹೋಗಿಲ್ಲ ಮೋಹ
ಕಪಿಲ್ ದೇವ್ ಅವರು ಟೆಸ್ಟ್ ಕ್ರಿಕೆಟ್ ಅನ್ನು ಇತರ ಸ್ವರೂಪಗಳಿಗಿಂತ ಹೆಚ್ಚು ಪ್ರೀತಿಸುತ್ತಾರೆ. ಇತರ ಎರಡು ಸ್ವರೂಪಗಳಿಗಿಂತ ಹೆಚ್ಚು ಕೆಂಪು ಚೆಂಡು ಕ್ರಿಕೆಟ್ ನೋಡಲು ಇಷ್ಟಪಡುತ್ತೇನೆ ಎಂದು ಕಪಿಲ್ ಹೇಳಿದರು. ನಾನು ಟೆಸ್ಟ್ ಕ್ರಿಕೆಟ್‌ನ ದೊಡ್ಡ ಅಭಿಮಾನಿ ಎಂಬುದು ಎಂದಿಗೂ ಸತ್ಯ. ನಾನು ಇಡೀ ದಿನ ಆಟಗಳನ್ನು ನೋಡಲು ಇಷ್ಟಪಡುತ್ತೇನೆ. ಕೆಲಸದ ಕಾರಣದಿಂದಾಗಿ ನಾನು ಟಿವಿ ವೀಕ್ಷಿಸಲು ಸಾಧ್ಯವಾಗದಿದ್ದರೆ, ನಾನು ಮುಖ್ಯಾಂಶಗಳನ್ನು ನೋಡುತ್ತೇನೆ ಎಂದು ಕಪಿಲ್ ಟೆಸ್ಟ್ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಗ್ರಾಮೀಣ ಭಾಗದ ಜನರಿಗೆ ನನ್ನ ನೆರವು ಬಳಕೆಯಾಗಲಿ! ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ರಿಷಭ್ ಪಂತ್