ಪಾಕ್ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಬೆನ್ ಸ್ಟೋಕ್ಸ್​, ಜೋಸ್ ಬಟ್ಲರ್ ಸರಣಿಯಿಂದ ಔಟ್

|

Updated on: Jul 03, 2021 | 8:59 PM

3 ಪಂದ್ಯಗಳ ಏಕದಿನ ಸರಣಿಗೆ ಇಂಗ್ಲೆಂಡ್ 16 ಸದಸ್ಯರ ತಂಡವನ್ನು ಘೋಷಿಸಿದೆ. ತಂಡದ ಉಪನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಈ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಪಾಕ್ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಬೆನ್ ಸ್ಟೋಕ್ಸ್​, ಜೋಸ್ ಬಟ್ಲರ್ ಸರಣಿಯಿಂದ ಔಟ್
ಇಂಗ್ಲೆಂಡ್​ ಆಟಗಾರರು
Follow us on

ಶ್ರೀಲಂಕಾ ವಿರುದ್ಧದ ಟಿ 20 ಸರಣಿಯಲ್ಲಿ ಮತ್ತು ಏಕದಿನ ಸರಣಿಯಲ್ಲೂ ಅಜೇಯ ಮುನ್ನಡೆ ಸಾಧಿಸಿದ ನಂತರ, ಇಂಗ್ಲೆಂಡ್ ಕ್ರಿಕೆಟ್ ತಂಡವು ಮುಂದಿನ ಸರಣಿಯ ಸಿದ್ಧತೆಗಳಿಗೆ ಒತ್ತು ನೀಡಲು ಪ್ರಾರಂಭಿಸಿದೆ. ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದ ಮೊದಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲ ಮತ್ತು ಶ್ರೀಲಂಕಾ ವಿರುದ್ಧ ಆಡಿದ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ. ಆದರೆ, ತಂಡದಲ್ಲಿ ಈ ಆಟಗಾರ ಇಲ್ಲದಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಕಾರಣ ಬೆನ್ ಸ್ಟೋಕ್ಸ್. ಇಂಗ್ಲೆಂಡ್‌ನ ಖ್ಯಾತ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಗಾಯದ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಆದರೆ ಪ್ರಸ್ತುತ ಇಂಗ್ಲಿಷ್ ತಂಡದಲ್ಲಿ ಸೇರಿಸಲಾಗಿಲ್ಲ.

3 ಪಂದ್ಯಗಳ ಏಕದಿನ ಸರಣಿಗೆ ಇಂಗ್ಲೆಂಡ್ 16 ಸದಸ್ಯರ ತಂಡವನ್ನು ಘೋಷಿಸಿದೆ. ತಂಡದ ಉಪನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಈ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಶ್ರೀಲಂಕಾ ವಿರುದ್ಧದ ಟಿ 20 ಸರಣಿಯಲ್ಲಿ ಅವರು ಗಾಯಗೊಂಡರು ಮತ್ತು ಪ್ರಸ್ತುತ ಅದರಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಏಕದಿನ ಸರಣಿಯ ಮಧ್ಯದಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಕೂಡ ಈ ಸರಣಿಗೆ ಲಭ್ಯವಿಲ್ಲ. ಅವರ ಸ್ಥಾನದಲ್ಲಿ, ಆಕ್ರಮಣಕಾರಿ ಬ್ಯಾಟ್ಸ್‌ಮನ್ ಟಾಮ್ ಬ್ಯಾಂಟನ್ ಅವರನ್ನು ಪಾಕಿಸ್ತಾನ ಸರಣಿಗೆ ಉಳಿಸಿಕೊಳ್ಳಲಾಗಿದೆ.

ಐಪಿಎಲ್‌ನಲ್ಲಿ ಗಾಯಗೊಂಡಿದ್ದು, ಕಳೆದ ತಿಂಗಳು ಮರಳಿದರು
ಏಪ್ರಿಲ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2021 ರಲ್ಲಿ ರಾಜಸ್ಥಾನ್ ರಾಯಲ್ಸ್‌ನ ಮೊದಲ ಪಂದ್ಯದಲ್ಲಿ ಇಂಗ್ಲಿಷ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬೆರಳಿಗೆ ಪೆಟ್ಟಾಗಿತ್ತು. ಈ ಕಾರಣದಿಂದಾಗಿ ಅವರನ್ನು ಪಂದ್ಯಾವಳಿಯಿಂದ ಹೊರಗುಳಿಸಲಾಯಿತು. ಅವರು ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ ಶಸ್ತ್ರಚಿಕಿತ್ಸೆ ಒಳಗಾಗಿದ್ದರು. ಸ್ವಲ್ಪ ಸಮಯದವರೆಗೆ ತಂಡದಿಂದ ಹೊರಗುಳಿದ ನಂತರ, ಕಳೆದ ತಿಂಗಳು ಟಿ 20 ಬ್ಲಾಸ್ಟ್ ಪಂದ್ಯಾವಳಿಯ ಮೂಲಕ ತಮ್ಮ ಕೌಂಟಿ ತಂಡ ಡರ್ಹಾಮ್‌ಗೆ ಪುನರಾಗಮನ ಮಾಡಿದರು. ಟೂರ್ನಿಯಲ್ಲಿ ಇದುವರೆಗೆ ಕೆಲವು ಸಂದರ್ಭಗಳಲ್ಲಿ ಸ್ಟೋಕ್ಸ್ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಉತ್ತಮ ಕ್ಯಾಚ್ ಕೂಡ ಪಡೆದಿದ್ದಾರೆ. ಏಕದಿನ ಸರಣಿಯನ್ನು ಕಳೆದುಕೊಂಡಿದ್ದರೂ, ಪಾಕಿಸ್ತಾನ ವಿರುದ್ಧದ ಟಿ 20 ಸರಣಿಯಿಂದ ಮರಳಲು ಸ್ಟೋಕ್ಸ್‌ಗೆ ಅವಕಾಶವಿದೆ. ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಜುಲೈ 8 ರಿಂದ ಕಾರ್ಡಿಫ್‌ನಲ್ಲಿ ಪ್ರಾರಂಭವಾಗಲಿದೆ.

ಏಕದಿನ ಸರಣಿಯ ಇಂಗ್ಲೆಂಡ್ ತಂಡ
ಇಯಾನ್ ಮೋರ್ಗನ್ (ಕ್ಯಾಪ್ಟನ್), ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೋ ರೂಟ್, ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಸ್ಯಾಮ್ ಕುರ್ರನ್, ಡೇವಿಡ್ ವಿಲ್ಲಿ, ಟಾಮ್ ಕುರ್ರನ್, ಆದಿಲ್ ರಶೀದ್, ಮಾರ್ಕ್ ವುಡ್, ಲಿಯಾಮ್ ಲಿವಿಂಗ್ಸ್ಟನ್, ಕ್ರಿಸ್ ವೋಕ್ಸ್, ಲಿಯಾಮ್ ಡಾಸನ್, ಜಾರ್ಜ್ ಗಾರ್ಟನ್, ಟಾಮ್ ಬಾಂಟನ್ .