Wimbledon 2021: ಮಹಿಳಾ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ಸಾನಿಯಾ ಮಿರ್ಜಾಗೆ ಸೋಲು; ಮಹಿಳಾ ಡಬಲ್ಸ್‌ನಿಂದ ಔಟ್

Wimbledon 2021: ಸಾನಿಯಾ ಮಿರ್ಜಾ ಮತ್ತು ಬೆಥೆನ್ನಿ ಮ್ಯಾಟೆಕ್-ಸ್ಯಾಂಡ್ಸ್ ವಿಂಬಲ್ಡನ್ 2021 ರ ಮಹಿಳಾ ಡಬಲ್ಸ್‌ನಿಂದ ಹೊರಬಿದಿದ್ದಾರೆ.

Wimbledon 2021: ಮಹಿಳಾ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ಸಾನಿಯಾ ಮಿರ್ಜಾಗೆ ಸೋಲು; ಮಹಿಳಾ ಡಬಲ್ಸ್‌ನಿಂದ ಔಟ್
ಸಾನಿಯಾ ಮಿರ್ಜಾ ಮತ್ತು ಬೆಥೆನ್ನಿ ಮ್ಯಾಟೆಕ್-ಸ್ಯಾಂಡ್ಸ್
Follow us
ಪೃಥ್ವಿಶಂಕರ
|

Updated on: Jul 03, 2021 | 9:57 PM

ಸಾನಿಯಾ ಮಿರ್ಜಾ ಮತ್ತು ಬೆಥೆನ್ನಿ ಮ್ಯಾಟೆಕ್-ಸ್ಯಾಂಡ್ಸ್ ವಿಂಬಲ್ಡನ್ 2021 ರ ಮಹಿಳಾ ಡಬಲ್ಸ್‌ನಿಂದ ಹೊರಬಿದಿದ್ದಾರೆ. ಈ ಜೋಡಿ ಎರಡನೇ ಸುತ್ತಿನಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಮತ್ತು ವೆರೋನಿಕಾ ಕುಡರ್ಮಾಟೋವಾ ವಿರುದ್ಧ 6-4, 6-3 ಸೆಟ್‌ಗಳಿಂದ ನೇರ ಸೆಟ್‌ಗಳಲ್ಲಿ ಸೋಲನುಭವಿಸಿತು. ರಷ್ಯಾದ ಜೋಡಿ ಒಂದು ಗಂಟೆ 28 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಆದಾಗ್ಯೂ, ಸಾನಿಯಾ ಇನ್ನೂ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿರುತ್ತಾರೆ. ಈ ಪಂದ್ಯದಲ್ಲಿ ಅವರು ಭಾರತದ ರೋಹನ್ ಬೋಪಣ್ಣ ಅವರೊಂದಿಗೆ ಕೈಜೋಡಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಸಾನಿಯಾ ಮತ್ತು ಬೋಪಣ್ಣ ಜೋಡಿ ಐದಾನ್ ಮೆಕ್‌ಹಗ್ ಮತ್ತು ಎಮಿಲಿ ವೆಬ್ಲೆ-ಸ್ಮಿತ್‌ರನ್ನು ಎದುರಿಸಲಿದ್ದಾರೆ. ಮಹಿಳಾ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಮತ್ತು ಬೆಥೆನ್ನಿ ಇಂದು ಫಾರ್ಮ್‌ನಲ್ಲಿ ಕಾಣಿಸಲಿಲ್ಲ. ಇಬ್ಬರೂ ಮೊದಲ ಸೆಟ್‌ನಲ್ಲಿ ಹೆಣಗಾಡಿದರು ಆದರೆ ಎರಡನೇ ಸೆಟ್‌ನಲ್ಲಿ ರಷ್ಯಾದ ಜೋಡಿಯ ಆಟದ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ.

ರಷ್ಯಾದ ಜೋಡಿ ಬ್ರೇಕ್ ಪಾಯಿಂಟ್ ಪಡೆದು 6-4 ರಿಂದ ಪಂದ್ಯವನ್ನು ಗೆದ್ದುಕೊಂಡಿತು ಮೊದಲ ಸೆಟ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಬೆಥೆನ್ನಿ ಮ್ಯಾಟೆಕ್-ಸ್ಯಾಂಡ್ಸ್ ರಷ್ಯಾದ ಜೋಡಿಗೆ ಕಠಿಣ ಹೋರಾಟ ನೀಡಿದರು. ಆರಂಭಿಕ ಪಂದ್ಯದಲ್ಲಿ, ಎರಡೂ ಸಮಬಲಗೊಂಡಿತು ಆದರೆ ಕೊನೆಯಲ್ಲಿ ರಷ್ಯಾದ ಜೋಡಿ ಬ್ರೇಕ್ ಪಾಯಿಂಟ್ ಪಡೆದು 6-4ರಿಂದ ಪಂದ್ಯವನ್ನು ಗೆದ್ದುಕೊಂಡಿತು. ಎರಡನೇ ಸೆಟ್‌ನಲ್ಲಿ, ಸಾನಿಯಾ-ಬೆಥೆನ್ನಿ ಮೊದಲ ಸರ್ವ್ ಅನ್ನು ಮುರಿದರು ಆದರೆ ನಂತರ ಕೆಲವು ಕೆಟ್ಟ ಹೊಡೆತಗಳಿಂದಾಗಿ ಪಂದ್ಯ ಕೈತಪ್ಪಲು ಆರಂಭವಾಯಿತು. ಇದರ ನಂತರ, ಸಾನಿಯಾ ಮತ್ತು ಅವರ ಜೊತೆಗಾತಿ ರಷ್ಯಾದ ಜೋಡಿಯ ಹೊಡೆತವನ್ನು ಸಮನಾಗಿಸಲು ಪ್ರಯತ್ನಿಸುತ್ತಿರುವುದು ಕಂಡುಬಂತು. ಅವಕಾಶ ಬಂದಾಗ, ಅವರು ಅವುಗಳ ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಮೂರನೇ ಸೆಟ್ ವರೆಗೆ ಪಂದ್ಯವನ್ನು ತೆಗೆದುಕೊಂಡು ಹೋಗಲು ಸಹ ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಎರಡನೇ ಸೆಟ್ ಅನ್ನು 6-3ರಿಂದ ಕಳೆದುಕೊಂಡ ನಂತರ ಅವರು ಪಂದ್ಯಾವಳಿಯಿಂದ ಹೊರಬಿದಿದ್ದಾರೆ.

3 ವರ್ಷಗಳ ನಂತರ ಸಾನಿಯಾ ವಾಪಸ್ ಪ್ರವಾಸದ ಮೊದಲ ಪಂದ್ಯದಲ್ಲಿ ಇಂಡೋ-ಅಮೆರಿಕನ್ ಜೋಡಿ ಅಲೆಕ್ಸಾ ಗೌರಾಚಿ ಮತ್ತು ಡಿಜಿರಿ ಕ್ರಾವ್ಜಿಕ್ ಅವರನ್ನು ಸೋಲಿಸಿತ್ತು. ಮೂರು ವರ್ಷಗಳ ನಂತರ ಸಾನಿಯಾ ವಿಂಬಲ್ಡನ್ ಆಡುತ್ತಿದ್ದಾರೆ. ಕಳೆದ ವರ್ಷ ಈ ಪಂದ್ಯಾವಳಿಯನ್ನು ಕೊರೊನಾದಿಂದ ನಡೆಸಲು ಸಾಧ್ಯವಾಗಲಿಲ್ಲ. ಅದಕ್ಕೂ ಮೊದಲು ಸಾನಿಯಾ ತಾಯಿಯಾದಾಗಿನಿಂದ ಟೆನಿಸ್ ಕೋರ್ಟ್‌ನಿಂದ ದೂರವಿರುತ್ತಿದ್ದರು. ಅದೇ ವರ್ಷದಲ್ಲಿ, ಅವರು ಕೋರ್ಟ್​ಗೆ ಮರಳಿದರು ಮತ್ತು ಅದರ ನಂತರ ಇದು ಅವರ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿ. ಆಟಕ್ಕೆ ಹಿಂದಿರುಗಿದ ನಂತರ, ಸಾನಿಯಾ ಚೆನ್ನಾಗಿ ಪ್ರಾರಂಭಿಸಿದರು. ಮಹಿಳಾ ಮತ್ತು ಮಿಶ್ರ ಡಬಲ್ಸ್‌ನಲ್ಲಿ ತನ್ನ ಮೊದಲ ಸುತ್ತಿನ ಪಂದ್ಯಗಳನ್ನು ಗೆದ್ದರು.

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?