ಭಾರತೀಯ ಪುರುಷರ ತಂಡದಂತೆಯೇ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದೆ. ಏಕೈಕ ಟೆಸ್ಟ್ ಪಂದ್ಯದ ಡ್ರಾ ನಂತರ, ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿಯನ್ನು ಆಡಲಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ, ಬ್ಯಾಟಿಂಗ್ ಸಾಧನೆ ಕಳಪೆಯಿಂದಾಗಿ ಭಾರತ ಸೋತಿದೆ. ಆದರೆ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಆಂಗ್ಲರ ನಾಡಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಅನುಭವಿಗಳನ್ನು ಮೀರಿಸಿ ವಿಶಿಷ್ಠ ದಾಖಲೆ ಬರೆದಿದ್ದಾರೆ.