ಕೆಲವು ಆಟಗಾರರಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಅವರ ಅದ್ಭುತ ಆಟದಿಂದ ಅವರು ನಿರಂತರವಾಗಿ ಅಭಿಮಾನಿಗಳ ಹೃದಯದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ, ಕೆಂಟ್ ತಂಡದ 45 ವರ್ಷದ ಬ್ಯಾಟ್ಸ್‌ಮನ್ ಡ್ಯಾರೆನ್ ಸ್ಟೀವನ್ಸ್ ಅವರು ತಮ್ಮನ್ನು ತಾವು ಕ್ರಿಕೆಟ್ ಜಗತ್ತಿನ ಮುಂದೆ ಆಟಕ್ಕೆ ವಯಸ್ಸಿಲ್ಲ ಎಂಬುದನ್ನು ಸಾಭೀತುಪಡಿಸಿಕೊಂಡಿದ್ದಾರೆ. ಅವರು ಕೇವಲ 149 ಎಸೆತಗಳಲ್ಲಿ 190 ರನ್ ಬಾರಿಸಿದರು. ಇದರಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್ ಬಾರಿಸಿದರು. ಅದೇ ಸಮಯದಲ್ಲಿ, ಸ್ಟೀವನ್ಸ್ ಅವರ ಹೆಸರಿನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿಯವರೆಗೆ 40 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಬ್ಯಾಟ್ಸ್‌ಮನ್ 15 ಸಿಕ್ಸರ್‌ಗಳನ್ನು ಹೊಡೆದಿಲ್ಲ. ಅವರು 45 ನೇ ವಯಸ್ಸಿನಲ್ಲಿ ಈ ಅದ್ಭುತ ಸಾಧನೆ ಮಾಡಿದರು.
ಡ್ಯಾರೆನ್ ಸ್ಟೀವನ್ಸ್ ಹೆಸರಿನಲ್ಲಿ ವಿಶೇಷ ದಾಖಲೆ
40 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಬ್ಯಾಟ್ಸ್‌ಮನ್ 10 ಸಿಕ್ಸರ್‌ಗಳಿಗಿಂತ ಹೆಚ್ಚು ಹೊಡೆದಿಲ್ಲ. ಸ್ಟೀವನ್ಸ್ 15 ಸಿಕ್ಸರ್‌ಗಳೊಂದಿಗೆ ಹೊಸ ದಾಖಲೆ ನಿರ್ಮಿಸಿದರು. ಈ ದಾಖಲೆಯನ್ನು ಈ ಹಿಂದೆ ಜಾನ್ ಮ್ಯಾಕ್‌ಫೀ ಹೊಂದಿದ್ದರು. 1926 ರಲ್ಲಿ ವ್ಯಾನ್‌ಸರ್‌ಶೈರ್ ವಿರುದ್ಧದ ಪಂದ್ಯದಲ್ಲಿ ಲಂಕಾಷೈರ್ ಪರ ಆಡುತ್ತಿದ್ದಾಗ ಜಾನ್ ಮ್ಯಾಕ್‌ಫೀ 10 ಸಿಕ್ಸರ್ ಬಾರಿಸಿದರು. ಆ ಸಮಯದಲ್ಲಿ ಮ್ಯಾಕ್‌ಫೀ 44 ವರ್ಷ ವಯಸ್ಸಾಗಿತ್ತು.
ಡ್ಯಾರೆನ್ ಸ್ಟೀವನ್ಸ್ ಪವಾಡ
ಡ್ಯಾರೆನ್ ಸ್ಟೀವನ್ಸ್ ಅವರ 190 ರನ್‌ಗಳ ಬಲದಿಂದ ಕೆಂಟ್ 307 ರನ್ ಗಳಿಸಿತು. ಕೆಂಟ್ 7 ವಿಕೆಟ್ ಕಳೆದುಕೊಂಡು ಕೇವಲ 92 ರನ್‌ಗಳಿಸಿತ್ತು. ಒಂಬತ್ತನೇ ವಿಕೆಟ್‌ಗೆ 166 ರನ್‌ಗಳ ಜೊತೆಯಾಟಕ್ಕಾಗಿ ಡ್ಯಾರೆನ್ ಕಮ್ಮಿನ್ಸ್ ಜೊತೆ ಕೈಜೋಡಿಸಿದರು. ಈ ಪಾಲುದಾರಿಕೆಯಲ್ಲಿ ಕಮ್ಮಿನ್ಸ್ ಕೇವಲ 1 ರನ್ ಗಳಿಸಿದರು. ಉಳಿದ ರನ್ ಸ್ಟೀವನ್ಸ್ ಬ್ಯಾಟ್ನಿಂದ ಬಂದಿತು. ಉತ್ತಮವಾಗಿ ಬ್ಯಾಟಿಂಗ್ ಮಾಡಿದ ನಂತರ, ಸ್ಟೀವನ್ಸ್ ಬೌಲಿಂಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಅವರು ಮಾರ್ಕಸ್ ಲಾಬುಶೆನ್ ಅವರ ನಿರ್ಣಾಯಕ ವಿಕೆಟ್ ಪಡೆದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸ್ಟಾರ್ ಆಟಗಾರ
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಸ್ಟೀವನ್ಸ್‌ರ 36 ನೇ ಶತಕ. ಸ್ಟೀವನ್ಸ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 315 ಪಂದ್ಯಗಳನ್ನು ಆಡಿದ್ದಾರೆ. ಬೌಲಿಂಗ್‌ನಲ್ಲೂ ತನ್ನ ಶಕ್ತಿಯನ್ನು ತೋರಿಸಿದ್ದಾರೆ. ಅವರು 565 ಪ್ರಥಮ ದರ್ಜೆ ವಿಕೆಟ್‌ಗಳನ್ನು ತಮ್ಮ ಹೆಸರಿಗೆ ತೆಗೆದುಕೊಂಡಿದ್ದಾರೆ. ಸ್ಟೀವನ್ಸ್ 1997 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.