AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 9 ಸಿಕ್ಸರ್: ರಾಜಸ್ಥಾನ್ ಆಟಗಾರನ ಸ್ಫೋಟಕ ಶತಕವೂ ಸಾಕಾಗಿಲ್ಲ ಪಾಕ್ ವಿರುದ್ಧ ಗೆಲ್ಲಲು

Liam Livingstone: ಲಿವಿಂಗ್​ಸ್ಟನ್​ಗೆ ಯಾವೊಬ್ಬ ಬ್ಯಾಟ್ಸ್​ಮನ್​ ಸಾಥ್ ನೀಡಲಿಲ್ಲ. ನಾಯಕ ಇಯಾನ್ ಮಾರ್ಗನ್ ಕೂಡ 16 ರನ್​ಗೆ ಔಟ್ ಆದರು. ಆದರೂ ಪಾಕ್ ಬೌಲರ್​ಗಳ ಬೆವರಿಳಿಸಿದ ಲಿವಿಂಗ್​ಸ್ಟನ್ ಕೇವಲ 43 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್, 6 ಬೌಂಡರಿ ಸಿಡಿಸಿ 103 ರನ್ ಚಚ್ಚಿದರು.

ಬರೋಬ್ಬರಿ 9 ಸಿಕ್ಸರ್: ರಾಜಸ್ಥಾನ್ ಆಟಗಾರನ ಸ್ಫೋಟಕ ಶತಕವೂ ಸಾಕಾಗಿಲ್ಲ ಪಾಕ್ ವಿರುದ್ಧ ಗೆಲ್ಲಲು
Liam Livingstone
TV9 Web
| Edited By: |

Updated on:Jul 17, 2021 | 7:57 AM

Share

ಇಂಗ್ಲೆಂಡ್ (England) ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಹೀನಾಯ ಸೋಲು ಅನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನ (Pakistan) ತಂಡ ಮೊದಲ ಟಿ-20 ಪಂದ್ಯಗಳಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದೆ. ನಾಯಕ ಬಾಬರ್ ಅಜಾಂ (Babar Azam) ಅವರ ಅದ್ಭುತ ಬ್ಯಾಟಿಂಗ್ ಜೊತೆಗೆ ಶಾಹಿನ್ ಆಫ್ರಿದಿಯ ಸಮಯೋಚಿತ ಬೌಲಿಂಗ್ ನೆರವಿನಿಂದ ಪಾಕ್ ಮೊದಲ ಟಿ-20 ಪಂದ್ಯದಲ್ಲಿ 31 ರನ್​ಗಳ ಜಯ ಸಾಧಿಸಿದೆ. ಇತ್ತ ಇಂಗ್ಲೆಂಗ್ ತಂಡದ ಪರ ಲ್ಯಾಮ್ ಲಿವಿಂಗ್​ಸ್ಟನ್ (Liam Livingstone) ಸ್ಫೋಟಕ ಶತಕ ಸಿಡಿಸಿದರೂ ಯಾವುದೇ ಪ್ರಯೋಜನ ವಾಗಲಿಲ್ಲ.

ಪಾಕಿಸ್ತಾನ ನೀಡಿದ್ದ ಬರೋಬ್ಬರಿ 233 ರನ್​ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಧದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಡೇವಿಡ್ ಮಲನ್ 1, ಜೇಸನ್ ರಾಯ್ 32, ಜಾನಿ ಬೈರ್​ಸ್ಟೊ 11, ಮೊಯೀನ್ ಅಲಿ 1 ಹೀಗೆ ಪ್ರಮುಖ ಬ್ಯಾಟ್ಸ್​ಮನ್​ಗಳೇ ಪೆವಿಲಿಯನ್ ಸೇರಿಕೊಂಡರು. ಹೀಗೆ ಒಂದುಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಐಪಿಎಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದ ಲ್ಯಾಮ್ ಲಿವಿಂಗ್​ಸ್ಟನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗೆಲುವಿಗೆ ಹೋರಾಟ ನಡೆಸುತ್ತಿದ್ದರು.

ಆದರೆ ಲಿವಿಂಗ್​ಸ್ಟನ್​ಗೆ ಯಾವೊಬ್ಬ ಬ್ಯಾಟ್ಸ್​ಮನ್​ ಸಾಥ್ ನೀಡಲಿಲ್ಲ. ನಾಯಕ ಇಯಾನ್ ಮಾರ್ಗನ್ ಕೂಡ 16 ರನ್​ಗೆ ಔಟ್ ಆದರೆ, ಲೆವಿಸ್ ಗ್ರೆಗರಿ 10 ರನ್​ಗೆ ಸುಸ್ತಾದರು. ಆದರೂ ಪಾಕ್ ಬೌಲರ್​ಗಳ ಬೆವರಿಳಿಸಿದ ಲಿವಿಂಗ್​ಸ್ಟನ್ ಕೇವಲ 43 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್, 6 ಬೌಂಡರಿ ಸಿಡಿಸಿ 103 ರನ್ ಚಚ್ಚಿದರು. ಇಂಗ್ಲೆಂಡ್ 19.2 ಓವರ್​ನಲ್ಲಿ 201 ರನ್​ಗೆ ಆಲೌಟ್ ಆಗುವ ಮೂಲಕ ಸೋಲುಕಂಡಿತು. ಪಾಕ್ ಪರ ಶಾಹಿನ್ ಅಫ್ರಿದಿ ಮತ್ತು ಶದಾಬ್ ಖಾನ್ ತಲಾ 3 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನ ಆರಂಭದಲ್ಲೇ ಸ್ಫೋಟಕ ಆಟ ಶುರುಮಾಡಿತು. ರಿಜ್ವಾನ್ ಹಾಗೂ ನಾಯಕ ಬಾಬರ್ ಅಜಂ ಬೌಂಡರಿ ಸಿಕ್ಸರ್​ಗಳ ಮಳೆ ಸುರಿಸಿದರು. ಮೊದಲ ವಿಕೆಟ್​ಗೇ ಈ ಜೋಡಿ 150 ರನ್​ಗಳ ಕಾಣಿಕೆ ನೀಡಿತು.

ರಿಜ್ವಾನ್ 41 ಎಸೆತಗಳಲ್ಲಿ 63 ರನ್ ಬಾರಿಸಿದರೆ, ಬಾಬರ್ 49 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಿಡಿಸಿ 85 ರನ್ ಗಳಿಸಿದರು. ಫಖರ್ ಜಮಾನ್ 26 ಮತ್ತು ಹಫೀಜ್ 24 ರನ್ ಗಳಿಸಿ 20 ಓವರ್​ನಲ್ಲಿ ತಂಡದ ಮೊತ್ತವನ್ನು 232 ರನ್​ಗೆ ತಂದಿಟ್ಟು ಎದುರಾಳಿಗೆ ಕಠಿಣ ಸವಾಲು ನೀಡಿದರು.

ಪಾಕಿಸ್ತಾನ 31 ರನ್​ಗಳ ಜಯದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟಿ-20 ಪಂದ್ಯ ಜುಲೈ 18 ರಂದು ಭಾನುವಾರ ನಡೆಯಲಿದೆ.

IND vs SL: ನಾನು ಎಲ್ಲ ಮಾದರಿಯ ಕ್ರಿಕೆಟ್​ಗೆ ರೆಡಿ ಎಂದ ಟೀಮ್ ಇಂಡಿಯಾದ ಸ್ಟಾರ್ ಬೌಲರ್

‘ಪ್ರೀತಿಗಿಂತಲೂ ಹೆಚ್ಚಿನದಾದ ಪ್ರೀತಿಯಿಂದ ಪ್ರೀತಿಸಿದ’ ಗರ್ಲ್​ಫ್ರೆಂಡನ್ನೇ ಮದುವೆಯಾದ ರಾಜಸ್ತಾನ ರಾಯಲ್ಸ್ ಆಲ್​ರೌಂಡರ್ ಶಿವಂ ದುಬೆ

(Liam Livingstone 42-ball hundred not enough as England fail to reach Pakistan target)

Published On - 7:53 am, Sat, 17 July 21

Follow Us
TV9 Web
TV9 Web

TV9 Kannada

Read More
ಬದ್ಧ ವೈರಿಗಳ ಭೇಟಿ: ಎದುರು ಬದುರು ಕುಳಿತು ವಿಜಯೇಂದ್ರ-ಯತ್ನಾಳ್ ಮಾತುಕತೆ
ಬದ್ಧ ವೈರಿಗಳ ಭೇಟಿ: ಎದುರು ಬದುರು ಕುಳಿತು ವಿಜಯೇಂದ್ರ-ಯತ್ನಾಳ್ ಮಾತುಕತೆ
ಹುಟ್ಟುಹಬ್ಬದಂದು ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ವಸಿಷ್ಠ ಸಿಂಹ
ಹುಟ್ಟುಹಬ್ಬದಂದು ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ವಸಿಷ್ಠ ಸಿಂಹ
ಕಾವ್ಯಾಗೆ ಹಾಡಲು ಬರ್ತಿಲ್ಲ, ಸುದೀಪ್ ಬಿಡ್ತಿಲ್ಲ: ವಿಡಿಯೋ ನೋಡಿ
ಕಾವ್ಯಾಗೆ ಹಾಡಲು ಬರ್ತಿಲ್ಲ, ಸುದೀಪ್ ಬಿಡ್ತಿಲ್ಲ: ವಿಡಿಯೋ ನೋಡಿ
ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ: ರಾಜಕಾರಣಿಗಳಿಗೆ ಜೋಶಿ ಕಿವಿಮಾತು
ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ: ರಾಜಕಾರಣಿಗಳಿಗೆ ಜೋಶಿ ಕಿವಿಮಾತು
ಮೆಜೆಸ್ಟಿಕ್ ಸಮೀಪದ ಹೋಟೆಲ್​​​ನಲ್ಲಿ ಬೆಂಕಿ ಅವಘಡ
ಮೆಜೆಸ್ಟಿಕ್ ಸಮೀಪದ ಹೋಟೆಲ್​​​ನಲ್ಲಿ ಬೆಂಕಿ ಅವಘಡ
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!