Rinku Singh: ಇಡೀ ಪಂದ್ಯದ ಗತಿಯನ್ನೇ ಬದಲಿಸಿತು ಎವಿನ್ ಲೆವಿಸ್ ಹಿಡಿದ ಆ ಒಂದು ಕ್ಯಾಚ್: ವಿಡಿಯೋ

|

Updated on: May 19, 2022 | 11:24 AM

Evin Lewis Catch, KKR vs LSG: ಲಖನೌ ಸೂಪರ್ ಜೇಂಟ್ಸ್ 208 ರನ್ ಕಲೆಹಾಕಿದ್ದರಿಂದ ಕೆಕೆರ್​ಗೆ ಗೆಲುವು ಅನುಮಾನ ಎಂದೇ ನಂಬಲಾಗಿತ್ತು. ಅದು ನಿಜವಾಯಿತಾದರೂ ಒಂದು ಹಂತದಲ್ಲಿ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು ರಿಂಕು ಸಿಂಗ್ (Rinku Singh) ಹಾಗೂ ಎವಿನ್ ಲೆವಿಸ್ ಹಿಡಿದ ರೋಚಕ ಕ್ಯಾಚ್.

Rinku Singh: ಇಡೀ ಪಂದ್ಯದ ಗತಿಯನ್ನೇ ಬದಲಿಸಿತು ಎವಿನ್ ಲೆವಿಸ್ ಹಿಡಿದ ಆ ಒಂದು ಕ್ಯಾಚ್: ವಿಡಿಯೋ
Evin Lewis Catch and Rinku Singh
Follow us on

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬುಧವಾರ ಜರುಗಿದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಖನೌ ಸೂಪರ್ ಜೇಂಟ್ಸ್ (KKR vs LSG) ನಡುವಣ ಪಂದ್ಯದಲ್ಲಿ ರನ್ ಮಳೆಯೇ ಹರಿದುಬಂತು. ಉಭಯ ತಂಡಗಳ ಸ್ಕೋರ್ 200 ರನ್ ಗಟಿ ದಾಟಿಸಿತು. ಕೊನೆಯ ಎಸೆದ ವರೆಗೂ ನಡೆದ ರೋಚಕ ಕಾದಾಟದಲ್ಲಿ ಕೆಎಲ್ ರಾಹುಲ್ (KL Rahul) ಪಡೆ 2 ರನ್​ಗಳಿಂದ ಗೆದ್ದು ಬೀಗಿತು. ಈ ಮೂಲಕ ಪ್ಲೇ ಆಫ್​ಗೆ ಕ್ವಾಲಿಫೈ ಆದ ಎರಡನೇ ತಂಡವಾಯಿತು. ಇತ್ತ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಕೊನೆ ಕ್ಷಣದಲ್ಲಿ ಸೋತ ಪರಿಣಾಮ ಟೂರ್ನಿಯಿಂದ ಹೊರಬಿದ್ದಿದೆ. ಎಲ್​ಎಸ್​ಜಿ ವಿಕೆಟ್ ನಷ್ಟವಿಲ್ಲದ 208 ರನ್ ಕಲೆಹಾಕಿದ್ದರಿಂದ ಕೆಕೆರ್​ಗೆ ಗೆಲುವು ಅನುಮಾನ ಎಂದೇ ನಂಬಲಾಗಿತ್ತು. ಅದು ನಿಜವಾಯಿತಾದರೂ ಒಂದು ಹಂತದಲ್ಲಿ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು ರಿಂಕು ಸಿಂಗ್ (Rinku Singh). ಇವರ ವಿಕೆಟ್ ಲಖನೌ ಗೆಲುವಿಗೆ ಕಾರಣವಾಯಿತು ಎಂದರೆ ತಪ್ಪಗಲಾರದು.

ಹೌದು, ಕೊನೆಯ 12 ಎಸೆತಗಳಲ್ಲಿ ಕೆಕೆಆರ್ ಗೆಲುವಿಗೆ 38 ರನ್​ಗಳ ಅವಶ್ಯತೆಯಿತ್ತು. 19ನೇ ಓವರ್​ನ ಜೇಸನ್ ಹೋಲ್ಡರ್ ಬೌಲಿಂಗ್​ನಲ್ಲಿ ಸುನೀಲ್ ನರೈನ್ ಹಾಗೂ ರಿಂಕು ಸಿಕ್ಸ್ ಸಿಡಿಸಿ ಈ ಓವರ್​ನಲ್ಲಿ ಒಟ್ಟು 17 ರನ್ ಕಲೆಹಾಕಿದರು. ಪರಿಣಾಮ 6 ಎಸೆತಗಳಲ್ಲಿ 21 ರನ್​ಗಳು ಬೇಕಾದವು. ರಾಹುಲ್ ಕೊನೆಯ ಓವರ್ ಬೌಲ್ ಮಾಡಲು ಮಾರ್ಕಸ್ ಸ್ಟಾಯಿನಿಸ್​ಗೆ ಹೇಳಿದರು. ಮೊದಲ ಎಸೆತದಲ್ಲೇ ರಿಂಕು ಸಿಂಗ್ ಚೆಂಡನ್ನು ಬೌಂಡರಿಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ಮೂಲಕ ಸಿಕ್ಸ್. ಮೂರನೇ ಎಸೆತದಲ್ಲೂ ರಿಂಕು ಬ್ಯಾಟ್​​ನಿಂದ ಮತ್ತೊಂದು ಸಿಕ್ಸ್ ಬಂತು. ಈ ಸಂದರ್ಭ ಕೊನೆಯ 3 ಎಸೆತಗಳಲ್ಲಿ 5 ರನ್​​ಗಳು ಬೇಕಾಯಿತಷ್ಟೆ.

ಇದನ್ನೂ ಓದಿ
Quinton de Kock: KKR vs LSG ಪಂದ್ಯದಲ್ಲಿ ಸಿಡಿಯಿತು ಬರೋಬ್ಬರಿ 27 ಸಿಕ್ಸರ್: ರೋಚಕ ಪಂದ್ಯದ ವಿಡಿಯೋ ಇಲ್ಲಿದೆ
KKR vs LSG Highlights, IPL 2022: ರೋಚಕ ಪಂದ್ಯದಲ್ಲಿ ಸೋತ ಕೆಕೆಆರ್; ಪ್ಲೇ ಆಫ್​ಗೆ ಲಕ್ನೋ ಎಂಟ್ರಿ
IBA Womens World Boxing Championships: ಬ್ರೆಜಿಲ್ ಬಾಕ್ಸರ್ ಮಣಿಸಿ ಫೈನಲ್‌ ಪ್ರವೇಶಿಸಿದ ನಿಖತ್ ಜರೀನ್..!
IPL 2022: RCB ಗೆ ಪ್ಲೇಆಫ್​ ಪ್ರವೇಶಿಸಲು ಇರುವುದು ಮೂರೇ ದಾರಿ..!

RCB vs GT: ಆರ್​ಸಿಬಿಗೆ ಗೆದ್ದರಷ್ಟೆ ಉಳಿಗಾಲ: ಆ ಆಟಗಾರ ಇಂದು ಕಣಕ್ಕಿಳಿಯುವುದು ಬಹುತೇಕ ಖಚಿತ

ಈ ವೇಳೆ ಎಲ್ಲರೂ ಕೆಕೆಆರ್​ಗೆ ಜಯ ಎಂದೇ ನಂಬಿದ್ದರು. ಅದಕ್ಕೆ ತಕ್ಕಂತೆ 4ನೇ ಎಸೆತದಲ್ಲಿ ರಿಂಕು 2 ರನ್ ಕಲೆಹಾಕಿದರು. ಆದರೆ, ಸ್ಟೋಯಿನಿಸ್ ಎಸೆದ 5ನೇ ಎಸೆತ ಪಂದ್ಯದ ಗತಿಯನ್ನೇ ಬದಲಾಯಿಸಿತು. ಸ್ಲೋ ಮತ್ತು ವೈಡ್ ಬಾಲ್​ಗೆ ಅನಗತ್ಯ ಶಾಟ್ ಹೊಡೆಯಲು ಹೋಗಿ ರಿಂಕು ಸಿಂಗ್ ಔಟಾದರು. ಆದರೆ, ಇದು ಸುಲಭವಾದ ನಿರ್ಗಮನವಾಗಿರಲಿಲ್ಲ. ಫೀಲ್ಡರ್ ಇಲ್ಲದ ಜಾಗದಲ್ಲಿ ಬಾಲ್ ಗಾಳಿಯಲ್ಲಿದ್ದರೂ ಅಲ್ಲಿಗೆ ವೇಗವಾಗಿ ಓಡಿ ಬಂದ ಎವಿನ್ ಲೆವಿಸ್ ಡೈವ್ ಬಿದ್ದು ಅದುಕೂಡ ಒಂದೇ ಕೈನಲ್ಲಿ ರೋಚಕ ಕ್ಯಾಚ್ ಹಿಡಿದರು.

 

15 ಎಸೆತಗಳನ್ನು ಎದುರಿಸಿದ ರಿಂಕು, 4 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 40 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕೊನೆಯ ಎಸೆತದಲ್ಲಿ ಮೂರು ರನ್ ಬೇಕಾದಾಗ ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಕೆಕೆಆರ್ ಸೋಲಿಗೆ ಶರಣಾದರೆ ಕಡೇ ಹಂತದಲ್ಲಿ ಬೌಲರ್‌ಗಳ ಚಾಣಾಕ್ಷ ನಿರ್ವಹಣೆ ಫಲವಾಗಿ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರ ತನ್ನ ಕಡೇ ಲೀಗ್ ಪಂದ್ಯದಲ್ಲಿ 2 ರನ್‌ಗಳಿಂದ ರೋಚಕ ಜಯ ದಾಖಲಿಸಿತು.

ಈ ಗೆಲುವಿನೊಂದಿಗೆ ಲೀಗ್‌ನಲ್ಲಿ 9ನೇ ಗೆಲುವು ದಾಖಲಿಸಿದ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ತಂಡ 2ನೇ ತಂಡವಾಗಿ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ. ಮತ್ತೊಂದೆಡೆ, ಕೆಕೆಆರ್ ಅಧಿಕೃತವಾಗಿ ಲೀಗ್‌ನಿಂದ ಹೊರಬಿದ್ದಿತು. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ, ಆರಂಭಿಕ ಬ್ಯಾಟರ್‌ಗಳಾದ ಕ್ವಿಂಟನ್ ಡಿಕಾಕ್ (140*ರನ್, 70 ಎಸೆತ, 10 ಬೌಂಡರಿ, 10 ಸಿಕ್ಸರ್) ಹಾಗೂ ನಾಯಕ ಕೆಎಲ್ ರಾಹುಲ್ (68*ರನ್, 51 ಎಸೆತ, 3 ಬೌಂಡರಿ, 4 ಸಿಕ್ಸರ್) ಜೋಡಿಯ ದಾಖಲೆಯ ಅಜೇಯ ಜತೆಯಾಟದ ನೆರವಿನಿಂದ 210 ರನ್ ಪೇರಿಸಿತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:24 am, Thu, 19 May 22