ಎರಡು ದಿನಗಳ ಕಾಲ ನಡೆದ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿಗೆ ತೆರೆ ಬಿದ್ದಿದೆ. ಈ ಬಾರಿಯ ಆಕ್ಷನ್ನಲ್ಲಿ ಒಟ್ಟು 182 ಒಟ್ಟು ಆಟಗಾರರು ಸೇಲ್ ಆಗಿದ್ದಾರೆ. 10 ಫ್ರಾಂಚೈಸಿಗಳು ಒಟ್ಟು 639.15 ಕೋಟಿ ರೂ. ಖರ್ಚು ಮಾಡಿದೆ. ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಮೊತ್ತಕ್ಕೆ ಸೇಲಾಗುವ ಮೂಲಕ ದಾಖಲೆ ಬರೆದಿದ್ದಾರೆ. ಇವರು 27 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾದರು. ಇದರ ನಡುವೆ ಭಾರತ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರನ್ನು 10 ಲಕ್ಷ ಕೊಟ್ಟು ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿದೆ.
ಮೊಹಮ್ಮದ್ ಶಮಿ ದೊಡ್ಡ ಮೊತ್ತಕ್ಕೆ ಸೇಲ್ ಆದ ಬೆನ್ನಲ್ಲೇ ಇವರ ಮಾಜಿ ಪತ್ನಿ ಹಸೀನ್ ಜಹಾನ್ ಅವರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಳಕೆದಾರರು ಹಸೀನ್ ಜಹಾನ್ ಅವರ ಡ್ಯಾನ್ಸ್ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಅವರನ್ನು ಎಸ್ಆರ್ಹೆಚ್ 10 ಕೋಟಿ ರೂಪಾಯಿಗಳಿಗೆ ಖರೀದಿಸಿದ ನಂತರ ಅವರು ತಮ್ಮ ರೀಲ್ ಅನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
Mohammad Shami’s Ex wife posted this reel after he got sold for 10cr to SRH #IPLAuction #IPLAuction2025 pic.twitter.com/eoCmMK27iN
— Hamish Aslam (@hamishcafe) November 25, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋದಿಸಿದ ಟಿವಿ9 ಕನ್ನಡ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಶಮಿಯನ್ನು ಸನ್‌ರೈಸರ್ಸ್ ಹೈದರಾಬಾದ್‌ಗೆ ಖರೀದಿ ಮಾಡಿದ ನಂತರ ಹಸೀನ್ ಜಹಾನ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂಬುದು ಸುಳ್ಳು.
ನಿಜಾಂಶ ತಿಳಿಯಲು ನಾವು ವೈರಲ್ ವಿಡಿಯೋದಿಂದ ಕೀಫ್ರೇಮ್‌ಗಳನ್ನು ಹೊರತೆಗೆದಾಗ ಮತ್ತು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಅನ್ನು ಬಳಸಿಕೊಂಡು ಹುಡುಕಿದಾಗ, ನವೆಂಬರ್ 14, 2024 ರಂದು #womanpower, #womenempowerment ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಇದೇ ವಿಡಿಯೋವನ್ನು ಹಸಿನ್ ಜಹಾನ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಅಪ್ಲೋಡ್ ಮಾಡಿರುವುದು ಎಂದು ನಾವು ಕಂಡುಕೊಂಡಿದ್ದೇವೆ.
ನವೆಂಬರ್ 14, 2024 ರಂದು ಹಸಿನ್ ಜಹಾನ್ ಅವರು ವಿಡಿಯೋ ರೀಲ್ ಅನ್ನು ಪ್ರಕಟಿಸಿದ್ದು, ಐಪಿಎಲ್ 2025 ಹರಾಜು ಪ್ರಕ್ರಿಯೆ ನಡೆದಿರುವುದು ನವೆಂಬರ್ 24, 25 ರಂದು. ಹೀಗಾಗಿ ಐಪಿಎಲ್ ಹರಾಜು ಪ್ರಕ್ರಿಯೆಯ ಮೊದಲೇ ಈ ವಿಡಿಯೋವನ್ನು ಅವರು ಅಪ್ಲೋಡ್ ಮಾಡಿದ್ದಾರೆ.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಇಂಡಿಯನ್ ಪ್ರೀಮಿಯರ್ ಲೀಗ್ X ಹ್ಯಾಂಡಲ್ ಅನ್ನು ಪರಿಶೀಲಿಸಿದಾಗ, ಹರಾಜು ನವೆಂಬರ್ 24, 25 2024 ರಂದು ನಡೆದಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಮೊಹಮ್ಮದ್ ಶಮಿ INR 10 ಕೋಟಿಗೆ #SRH ಗೆ ಸೇರಿದರು #TATAIPLAuction ಎಂದು ಬರೆಯಲಾಗಿದೆ.
You want pace, you get pace! ⚡️ ⚡️
Mohammad Shami joins #SRH for INR 10 Crore 🙌 🙌#TATAIPLAuction | #TATAIPL | @MdShami11 | @SunRisers pic.twitter.com/Jxl8Kv781J
— IndianPremierLeague (@IPL) November 24, 2024
16 ಆಗಸ್ಟ್ 2018 ರಂದು, ಹಸಿನ್ ಜಹಾನ್ ಪತ್ನಿ ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಕೌಟುಂಬಿಕ ಹಿಂಸೆ, ಹಲ್ಲೆ, ವರದಕ್ಷಿಣೆ ಕಿರುಕುಳ ಮತ್ತು ಕ್ರಿಕೆಟ್ ಫಿಕ್ಸಿಂಗ್‌ನಂತಹ ಹಲವು ಗಂಭೀರ ಆರೋಪಗಳನ್ನು ಹಸಿನ್ ಜಹಾನ್ ಮಾಡಿದ್ದರು. ಆದಾಗ್ಯೂ, ಫಿಕ್ಸಿಂಗ್ ಬಗ್ಗೆ ಬಿಸಿಸಿಐ ತನಿಖೆಯಲ್ಲಿ ಅವರು ನಿರಪರಾಧಿ ಎಂದು ಸಾಬೀತಾಗಿತ್ತು. ಇನ್ನು ಪತ್ನಿ ಮಾಡಿರುವ ಎಲ್ಲಾ ಆರೋಪಗಳನ್ನು ಮೊಹಮ್ಮದ್ ಶಮಿ ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಸದ್ಯ ಈ ಜೋಡಿ ಪತ್ಯೇಕವಾಗಿ ವಾಸಿಸುತ್ತಿದೆ.
ಇದನ್ನೂ ಓದಿ: ಧೀರೇಂದ್ರ ಶಾಸ್ತ್ರಿ ಪಾದಯಾತ್ರೆಯಲ್ಲಿ ಔರಂಗಜೇಬನ ಪೋಸ್ಟರ್?: ವೈರಲ್ ವಿಡಿಯೋದ ಸತ್ಯ ಏನು?
ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದ ಹಸಿನ್ ಜಹಾನ್ ಮಾಸಿಕ 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ತೀರ್ಪು ನೀಡಿದ್ದ ನ್ಯಾಯಾಲಯವು, ಮೊಹಮ್ಮದ್ ಶಮಿ ಅವರಿಗೆ ಪ್ರತಿ ತಿಂಗಳು 50 ಸಾವಿರ ರೂ. ನೀಡಬೇಕೆಂದು ಸೂಚಿಸಿದೆ. 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್ಗೆ ಒಬ್ಬಳು ಮಗಳಿದ್ದಾಳೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.