ಅಭಿಮಾನಕ್ಕೋಸ್ಕರ ಫ್ಯಾನ್ಸ್ಗಳು ಏನು ಬೇಕಾದರೂ ಮಾಡುತ್ತಾರೆ. ಸಾವಿರಾರು ಕಿ.ಮೀ ಚಲಿಸಿ ತಮ್ಮಿಷ್ಟದ ನಟ-ನಟಿ ಅಥವಾ ಕ್ರೀಡಾಪಟುಗಳನ್ನು ಭೇಟಿ ಮಾಡುತ್ತಾರೆ. ಕನ್ನಡದ ಸ್ಟಾರ್ ನಟ ಯಶ್ ಅವರನ್ನು ಭೇಟಿ ಮಾಡಲು ಫಿಲಿಫೈನ್ ದೇಶದಿಂದ ಬೆಂಗಳೂರಿಗೆ ಅಭಿಮಾನಿಯೋರ್ವ ಬಂದಿದ್ದ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅದೇ ರೀತಿ, ಈಗ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಲೆಂದು ಅಭಿಮಾನಿಯೋರ್ವ 1800 ಕಿ.ಮೀ ಪ್ರಯಾಣ ಬೆಳೆಸಿದ್ದಾನೆ.
ಇಂಗ್ಲೆಡ್ ವಿರುದ್ಧ ನಾಲ್ಕು ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 3 ಮ್ಯಾಚ್ಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿತ್ತು. ಆದರೆ, ನಾಯಕ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದು ಮಾತ್ರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಅವರ ಬ್ಯಾಟ್ನಿಂದ ಶತಕ ಸಿಡಿಯದೇ 500 ದಿನಗಳ ಮೇಲಾಗಿದೆ. ಹೀಗಾಗಿ, ಟೆಸ್ಟ್ ಪಂದ್ಯದಲ್ಲಿ ಅವರು ಶತಕ ಬಾರಿಸೋದು ಖಚಿತ ಎಂದು ಹೇಳಲಾಗುತ್ತಿತ್ತು. ಆದರೆ, ಅವರು ಎರಡು ಬಾರಿ ಡಕ್ಗೆ ಔಟ್ ಆಗಿದ್ದರು. ಇದು ಭಾರೀ ನಿರಾಸೆ ಮೂಡಿಸಿತ್ತು.
ಈಗ ಮಾರ್ಚ್ 12ರಿಂದ ಟಿ20 ಪಂದ್ಯ ಆರಂಭವಾಗಲಿದೆ. ಐದೂ ಮ್ಯಾಚ್ಗಳು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಏರ್ಪಡುತ್ತಿವೆ. ಟಿ-20ಯಲ್ಲಿಯಾದರೂ ವಿರಾಟ್ ಕೊಹ್ಲಿ ಅಬ್ಬರದ ಆಟ ಪ್ರದರ್ಶನ ಮಾಡಲಿದ್ದಾರೆಯೇ ಎನ್ನುವ ಕುತೂಹಲ ಅಭಿಮಾನಿಗಳದ್ದು.
ಇದೇ ನಂಬಿಕೆ ಇಟ್ಟುಕೊಂಡು ವಿರಾಟ್ ಕೊಹ್ಲಿ ಅಭಿಮಾನಿಯೋರ್ವ ಚೆನ್ನೈನಿಂದ ಗುಜರಾತ್ಗೆ ತೆರಳಿದ್ದಾನೆ. ಮಾರ್ಚ್ 14ರಂದು ನಡೆಯಲಿರುವ ಎರಡನೇ ಟಿ-20 ಪಂದ್ಯಕ್ಕೆ ತಮಿಳುನಾಡಿನ ಅಭಿಮಾನಿಯೋರ್ವ ಟಿಕೆಟ್ ಖರೀದಿ ಮಾಡಿದ್ದಾನೆ. ಅಷ್ಟೇ ಅಲ್ಲ, ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾನೆ.
Travelling 1839kms to see u king @imVkohli ❤
Don’t disappoint me.! pic.twitter.com/r5z4Q8S2HI— Keecha (@Dhanushvk_) March 9, 2021
ವಿರಾಟ್ ಕೊಹ್ಲಿಯನ್ನು ನೋಡಲು 1839 ಕಿ.ಮೀ ಚಲಿಸುತ್ತಿದ್ದೇನೆ. ನಿರಾಸೆ ಮಾಡಬೇಡಿ ಎಂದು ಧನುಷ್ ಎಂಬ ಅಭಿಮಾನಿ ಬರೆದುಕೊಂಡಿದ್ದಾನೆ. ಇದಕ್ಕೆ ಅನೇಕರು ಖುಷಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿರಾಟ್ ಕೊಹ್ಲಿ ಡಕ್ ಬೀಳುವುದನ್ನು ನೋಡಲು ಅಲ್ಲಿವರೆಗೆ ಏಕೆ ತೆರಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: India vs England: ಶೂನ್ಯಕ್ಕೆ ಔಟಾದ ಕೊಹ್ಲಿ! ಈ ಕೆಟ್ಟ ದಾಖಲೆಯಲ್ಲೂ ಧೋನಿಯನ್ನ ಸರಿಗಟ್ಟಿದ ಶೂನ್ಯ ಸಂಪಾದಕ ವಿರಾಟ್
Published On - 7:48 pm, Tue, 9 March 21