VIDEO: ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್: ಯಾಕೆ ಗೊತ್ತಾ?

|

Updated on: Jul 06, 2024 | 10:39 AM

T20 World Cup 2024: ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರು ಗುರುವಾರ ಮುಂಜಾನೆ ದೆಹಲಿಗೆ ಆಗಮಿಸಿದ್ದರು. ಆ ಬಳಿಕ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು. ಇದರ ನಂತರ ಮುಂಬೈಗೆ ಆಗಮಿಸಿದ ಟೀಮ್ ಇಂಡಿಯಾ ವಿಜಯಯಾತ್ರೆ ನಡೆಸಿದ್ದರು. ಈ ವಿಜಯಯಾತ್ರೆಯ ನಡುವೆ ಪಾಕಿಸ್ತಾನ್ ಘೋಷಣೆಗಳು ಕೇಳಿ ಬಂದಿದ್ದವು.

ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಮತ್ತೆ ಟಿ20 ವಿಶ್ವಕಪ್ (T20 World Cup 2024) ಮುಡಿಗೇರಿಸಿಕೊಂಡಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದು ಭಾರತ ತಂಡವು ವಿಶ್ವಕಪ್ ಅನ್ನು ಎತ್ತಿ ಹಿಡಿಯಿತು. ಈ ವಿಶ್ವಕಪ್​ನೊಂದಿಗೆ ತವರಿಗೆ ಆಗಮಿಸಿದ ಭಾರತ ತಂಡಕ್ಕೆ ಭವ್ಯ ಸ್ವಾಗತ ನೀಡಲಾಗಿದೆ.

ಅದರಲ್ಲೂ ಮುಂಬೈನಲ್ಲಿ ನಡೆದ ಟೀಮ್ ಇಂಡಿಯಾ ವಿಜಯಯಾತ್ರೆಯ ಅಪಾರ ಅಭಿಮಾನಿಗಳು ನೆರೆದಿದ್ದರು. ಅಲ್ಲದೆ ಟೀಮ್ ಇಂಡಿಯಾಗೆ ಜೈಕಾರ ಹಾಕುವ ಮೂಲಕ ಸಂಭ್ರಮಿಸಿದ್ದರು. ಟೀಮ್ ಇಂಡಿಯಾ ಅಭಿಮಾನಿಗಳ ಈ ಹರ್ಷೋದ್ಗಾರದ ನಡುವೆ ಪಾಕಿಸ್ತಾನ್ ಪಾಕಿಸ್ತಾನ್ ಎಂಬ ಘೋಷಣೆಗಳು ಕೂಡ ಕೇಳಿ ಬಂದಿದ್ದವು.

ಆದರೆ ಇದು ಪಾಕ್ ಪರವಾದ ಘೋಷಣೆಯಾಗಿರಲಿಲ್ಲ. ಬದಲಾಗಿ ಪಾಕಿಸ್ತಾನವನ್ನು ಅಪಹಾಸ್ಯ ಮಾಡಲೆಂದೇ ಕೆಲವರು ಘೋಷಣೆ ಮೊಳಗಿಸಿದ್ದರು. ಇದಕ್ಕೆ ಕಾರಣ ವಿಜಯಯಾತ್ರೆ ಸಾಗುತ್ತಿದ್ದ ದಾರಿಯಲ್ಲಿ ಕಸದ ಗಾಡಿ ಹೋಗಿರುವುದು. ಕಸ ತುಂಬಿದ ವಾಹನ ಹೋಗುತ್ತಿರುವುದನ್ನು ಗಮನಿಸಿದ ಅಭಿಮಾನಿಗಳು ಪಾಕಿಸ್ತಾನ್ ಪಾಕಿಸ್ತಾನ್ ಕೂಗುವ ಮೂಲಕ ಅಪಹಾಸ್ಯ ಮಾಡಿದರು. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಭಾರೀ ವೈರಲ್ ಆಗಿದೆ.

ಇನ್ನು ಈ ವಿಜಯಯಾತ್ರೆಯ ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಂಗೆ ಆಗಮಿಸಿದ ಟೀಮ್ ಇಂಡಿಯಾ ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಭಾರತ ತಂಡಕ್ಕೆ 125 ಕೋಟಿ ರೂ.ಗಳ ಬಹುಮಾನ ಮೊತ್ತವನ್ನು ಬಿಸಿಸಿಐ ಹಸ್ತಾಂತರಿಸಿದೆ.

 

Follow us on