T20 World Cup 2024: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಟಿ20 ವಿಶ್ವಕಪ್ ಅವಾರ್ಡ್ ಲಿಸ್ಟ್
T20 World Cup 2024 Awards List: ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್ ಮಾಡಿದ ಜಸ್ಪ್ರೀತ್ ಬುಮ್ರಾ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾದರು.
T20 World Cup 2024: ಟಿ20 ವಿಶ್ವಕಪ್ 2024 ಕ್ಕೆ ತೆರೆ ಬಿದ್ದಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಮೂಲಕ 17 ವರ್ಷಗಳ ಬಳಿಕ ಟಿ20 ಕ್ರಿಕೆಟ್ನಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತದ ಪರ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 76 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು.
177 ರನ್ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಬ್ಯಾಟರ್ಗಳು ದಿಟ್ಟ ಹೋರಾಟವನ್ನೇ ಪ್ರದರ್ಶಿಸಿದ್ದರು. ಅದರಲ್ಲೂ ಕೇವಲ 27 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 52 ರನ್ ಸಿಡಿಸಿ ಹೆನ್ರಿಕ್ ಕ್ಲಾಸೆನ್ ಅಬ್ಬರಿಸಿದರು. ಆದರೆ ಅಂತಿಮ 5 ಓವರ್ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸುವಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಯಶಸ್ವಿಯಾದರು.
ಇದನ್ನೂ ಓದಿ: Virat Kohli – Rohit Sharma: T20I ಕ್ರಿಕೆಟ್ಗೆ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ವಿದಾಯ
ಪರಿಣಾಮ ಕೊನೆಯ ಓವರ್ನಲ್ಲಿ 16 ರನ್ಗಳ ಗುರಿ ಪಡೆದ ಸೌತ್ ಆಫ್ರಿಕಾ ತಂಡವು ಕೇವಲ 8 ರನ್ ಮಾತ್ರ ಕಲೆಹಾಕಿತು. ಈ ಮೂಲಕ ಟೀಮ್ ಇಂಡಿಯಾ 7 ರನ್ಗಳ ರೋಚಕ ಜಯ ಸಾಧಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತು. ಇನ್ನು ಈ ಪಂದ್ಯದ ಬಳಿಕ ಹಲವು ಆಟಗಾರರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆ ಪ್ರಶಸ್ತಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
T20 ವಿಶ್ವಕಪ್ 2024 ಪ್ರಶಸ್ತಿ ವಿಜೇತರ ಪಟ್ಟಿ:
- ವಿನ್ನರ್- ಭಾರತ
- ರನ್ನರ್ ಅಪ್- ಸೌತ್ ಆಫ್ರಿಕಾ
- ಪಂದ್ಯಾವಳಿಯ ಆಟಗಾರ – ಜಸ್ಪ್ರೀತ್ ಬುಮ್ರಾ (4.17 ಎಕಾನಮಿ ರೇಟ್ನಲ್ಲಿ 15 ವಿಕೆಟ್)
- ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ – ವಿರಾಟ್ ಕೊಹ್ಲಿ (76 ರನ್)
- ಫೈನಲ್‌ನ ಸ್ಮಾರ್ಟ್ ಕ್ಯಾಚ್ – ಸೂರ್ಯಕುಮಾರ್ ಯಾದವ್
- ಅತಿ ಹೆಚ್ಚು ರನ್ – ರಹಮಾನುಲ್ಲಾ ಗುರ್ಬಾಝ್ (281 ರನ್)
- ಅತಿ ಹೆಚ್ಚು ವಿಕೆಟ್‌ಗಳು – ಅರ್ಷದೀಪ್ ಸಿಂಗ್ ಮತ್ತು ಫಝಲ್ಹಕ್ ಫಾರೂಕಿ (ತಲಾ 17 ವಿಕೆಟ್)
- ಗರಿಷ್ಠ ಸ್ಕೋರ್ – ನಿಕೋಲಸ್ ಪೂರನ್ (98 ರನ್ vs ಅಫ್ಘಾನಿಸ್ತಾನ್)
- ಅತ್ಯುತ್ತಮ ಬೌಲಿಂಗ್- ಫಝಲ್ಹಕ್ ಫಾರೂಕಿ (9/5 vs ಉಗಾಂಡ)
- ಅತ್ಯಧಿಕ ಸ್ಟ್ರೈಕ್ ರೇಟ್ – ಶಾಯ್ ಹೋಪ್ (187.71)
- ಅತ್ಯುತ್ತಮ ಎಕಾನಮಿ ರೇಟ್ – ಟಿಮ್ ಸೌಥಿ (3.00)
- ಅತ್ಯಧಿಕ ಸಿಕ್ಸರ್ – ನಿಕೋಲಸ್ ಪೂರನ್ (17 ಸಿಕ್ಸ್)
- ಅತ್ಯಧಿಕ 50+ ಸ್ಕೋರ್- ರೋಹಿತ್ ಶರ್ಮಾ ಮತ್ತು ರಹಮಾನುಲ್ಲಾ ಗುರ್ಬಾಝ್ (ತಲಾ 3)
- ಅತೀ ಹೆಚ್ಚು ಕ್ಯಾಚ್- ಐಡೆನ್ ಮಾರ್ಕ್ರಾಮ್ (8 ಕ್ಯಾಚ್‌ಗಳು)
Published On - 8:42 am, Sun, 30 June 24