Explained: ಒಲ್ಲದ ಮನಸ್ಸು! ಇರುವ ಮನಸ್ಸಿದ್ದರೂ ಲಿಯೊನೆಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್ ತೊರೆಯಲು ಕಾರಣವೇನು?

| Updated By: ಪೃಥ್ವಿಶಂಕರ

Updated on: Aug 11, 2021 | 9:08 PM

Lionel Messi: ಬಾರ್ಸಿಲೋನಾ ಕ್ಲಬ್‌ನೊಂದಿಗೆ ತನ್ನ ವೃತ್ತಿಜೀವನವನ್ನು ಕೊನೆಗೊಳಿಸುವ ಬಯಕೆಯಿಂದಾಗಿ ಹೊಸ ಒಪ್ಪಂದಕ್ಕಾಗಿ ಮೆಸ್ಸಿ ತನ್ನ ಸಂಬಳದಲ್ಲಿ 50 ಶೇಕಡಾ ಕಡಿತವನ್ನು ಮಾಡಿಕೊಳ್ಳಲು ಒಪ್ಪಿಕೊಂಡಿದ್ದರು.

Explained: ಒಲ್ಲದ ಮನಸ್ಸು! ಇರುವ ಮನಸ್ಸಿದ್ದರೂ ಲಿಯೊನೆಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್ ತೊರೆಯಲು ಕಾರಣವೇನು?
ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡಕ್ಕೆ ವಿದಾಯ ಹೇಳಿದ ಲಿಯೊನೆಲ್ ಮೆಸ್ಸಿ
Follow us on

ಆಧುನಿಕ ಫುಟ್ಬಾಲ್​ನ ಪ್ರಖ್ಯಾತ ತಂಡದೊಂದಿಗಿನ ಅತ್ಯಂತ ಸ್ಮರಣೀಯ ಮತ್ತು ಅದ್ಭುತವಾದ ಪ್ರಯಾಣ ಕೊನೆಗೊಂಡಿದೆ. ಈ ತಂಡದೊಂದಿಗೆ ಪ್ರಯಾಣದಲ್ಲಿದ್ದ ನಾಯಕ ಈಗ ತನ್ನ ತಂಡಕ್ಕೆ ಕಣ್ಣೀರಿನ ವಿದಾಯ ಹೇಳಿದ್ದಾರೆ. ಲಿಯೊನೆಲ್ ಮೆಸ್ಸಿ, ಸ್ಪೇನ್‌ನ ಖ್ಯಾತ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ (ಎಫ್‌ಸಿ ಬಾರ್ಸಿಲೋನಾ) ದ ಶ್ರೇಷ್ಠ ಆಟಗಾರ, ಭಾನುವಾರದಂದು ಕ್ಲಬ್‌ಗೆ ವಿದಾಯ ಹೇಳಿದರು. ಕಳೆದ 21 ವರ್ಷಗಳಿಂದ ಬಾರ್ಸಿಲೋನಾದಲ್ಲಿದ್ದ ಮೆಸ್ಸಿ, ಎಲ್ಲಾ ಪ್ರಯತ್ನಗಳ ನಂತರವೂ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಈ ಸುದೀರ್ಘ ಪ್ರಯಾಣ ಇಲ್ಲಿಗೆ ಕೊನೆಗೊಳ್ಳಬೇಕಾಯಿತು. ಬಾರ್ಸಿಲೋನಾ ಶುಕ್ರವಾರ ಮೆಸ್ಸಿಯ ನಿರ್ಗಮನದ ಬಗ್ಗೆ ಮಾಹಿತಿ ಪ್ರಕಟಿಸಿದ ನಂತರ, ಮೆಸ್ಸಿ ಭಾನುವಾರ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಸಮಯದಲ್ಲಿ ತಾನು ಬಾರ್ಸಿಲೋನಾದೊಂದಿಗೆ ತನ್ನ ಪ್ರಯಾಣವನ್ನು ಮುಂದುವರಿಸಲು ಬಯಸುತ್ತೇನೆ ಎಂದು ಹೇಳಿದರು. ಆದರೆ ಅದು ಆಗಲಿಲ್ಲ.

ಸ್ಪ್ಯಾನಿಷ್ ಕ್ಲಬ್‌ನೊಂದಿಗೆ ಅರ್ಜೆಂಟೀನಾದ ಖ್ಯಾತ ಆಟಗಾರನ ಒಪ್ಪಂದವು ಈ ವರ್ಷದ ಜೂನ್‌ನಲ್ಲಿ ಕೊನೆಗೊಂಡಿತು. ನಂತರ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ಕೇಳಿ ಬಂದವು. ಆದಾಗ್ಯೂ, ಬದಲಾದ ನಿಯಮಗಳೊಂದಿಗೆ ಕ್ಲಬ್ ಮತ್ತು ಮೆಸ್ಸಿ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನಂಬಲಾಗಿತ್ತು. ಆದರೆ ಬಾರ್ಸಿಲೋನಾ ಆಗಸ್ಟ್ 5 ಗುರುವಾರದಂದು ನೀಡಿದ ಹೇಳಿಕೆಯ ನಂತರ, ಎಲ್ಲಾ ಭರವಸೆಗಳು ಮತ್ತು ಸಾಧ್ಯತೆಗಳು ಕೊನೆಗೊಂಡವು.

ಇತ್ತೀಚೆಗೆ, ಮೆಸ್ಸಿ ಮತ್ತು ಬಾರ್ಸಿಲೋನಾ, ಹಲವು ವರ್ಷಗಳ ನಂತರ ಅರ್ಜೆಂಟೀನಾವನ್ನು ಕೋಪಾ ಅಮೆರಿಕದ ಚಾಂಪಿಯನ್ ಮಾಡಿದ್ದರು. ಎಫ್​​ಸಿ ಬಾರ್ಸಿಲೋನಾ ಮತ್ತು ಲಿಯೊನೆಲ್ ಮೆಸ್ಸಿ ನಡುವಿನ ಒಪ್ಪಂದದ ಹೊರತಾಗಿಯೂ ಮತ್ತು ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಎರಡೂ ಕಡೆಯವರ ಸ್ಪಷ್ಟ ಉದ್ದೇಶದ ಹೊರತಾಗಿಯೂ, ಹಣಕಾಸಿನ ಮತ್ತು ಮೂಲಸೌಕರ್ಯದ ನಿರ್ಬಂಧಗಳಿಂದ (ಸ್ಪ್ಯಾನಿಷ್ ಲೀಗ್ ನಿಯಂತ್ರಣ) ಮೆಸ್ಸಿ ನಮ್ಮೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಕ್ಲಬ್ ಹೇಳಿಕೆಯನ್ನು ನೀಡಿತ್ತು.

ಒಪ್ಪಂದದಲ್ಲಿ ಶೇಕಡಾ 50 ರಷ್ಟು ಕಡಿತಕ್ಕೆ ಸಿದ್ಧರಾಗಿದ್ದ ಮೆಸ್ಸಿ
ಫುಟ್ಬಾಲ್ ಇತಿಹಾಸದಲ್ಲಿ ಮೆಸ್ಸಿ ಅತ್ಯಂತ ದುಬಾರಿ ಆಟಗಾರ. ಬಾರ್ಸಿಲೋನಾದೊಂದಿಗಿನ ಅವರ ಇತ್ತೀಚಿನ ಒಪ್ಪಂದವು ಅತ್ಯಂತ ದುಬಾರಿಯಾಗಿತ್ತು. 2017 ರ ಒಪ್ಪಂದವು ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಒಪ್ಪಂದಗಳಲ್ಲಿ ಒಂದಾಗಿದೆ. ಇದರ ಪ್ರಕಾರ, ಮೆಸ್ಸಿಗೆ 5 ವರ್ಷಗಳಲ್ಲಿ 550 ದಶಲಕ್ಷ ಯೂರೋಗಳನ್ನು (ಸುಮಾರು ರೂ. 442 ಕೋಟಿ) ನೀಡಲಾಗಿತ್ತು. ಅವರ ಒಪ್ಪಂದದ ಅವಧಿ ಜೂನ್ 30 ಕ್ಕೆ ಮುಗಿಯಿತು. ಅಂದಿನಿಂದ ಮೆಸ್ಸಿ ಮತ್ತೆ ಕ್ಲಬ್‌ಗೆ ಸೇರುತ್ತಾರೆ ಅಥವಾ ಬೇರೆ ಕ್ಲಬ್‌ಗಳಿಗೆ ಹೋಗುತ್ತಾರೆ ಎಂದು ಎಲ್ಲಾ ರೀತಿಯ ಊಹಾಪೋಹಗಳು ಕೇಳಿ ಬಂದ್ದವು. ಆದಾಗ್ಯೂ, ಈ ಮಧ್ಯೆ, ಕಳೆದ ತಿಂಗಳು ಇಬ್ಬರು ಒಪ್ಪಂದಕ್ಕೆ ಮುಂದಾದರು, ಅದರ ಅಡಿಯಲ್ಲಿ ಬಾರ್ಸಿಲೋನಾ ಕ್ಲಬ್‌ನೊಂದಿಗೆ ತನ್ನ ವೃತ್ತಿಜೀವನವನ್ನು ಕೊನೆಗೊಳಿಸುವ ಬಯಕೆಯಿಂದಾಗಿ ಹೊಸ ಒಪ್ಪಂದಕ್ಕಾಗಿ ಮೆಸ್ಸಿ ತನ್ನ ಸಂಬಳದಲ್ಲಿ 50 ಶೇಕಡಾ ಕಡಿತವನ್ನು ಮಾಡಿಕೊಳ್ಳಲು ಒಪ್ಪಿಕೊಂಡಿದ್ದರು. ಆದರೆ ಇದರ ಹೊರತಾಗಿಯೂ ಅಂತಿಮವಾಗಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

ಬಾರ್ಸಿಲೋನಾದ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದೆ
ವಾಸ್ತವವಾಗಿ, ಕ್ಲಬ್ ಇತ್ತೀಚಿನ ದಿನಗಳಲ್ಲಿ ಭಾರಿ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಬಿಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಕ್ಲಬ್ 2020 ರಲ್ಲಿ $ 117 ಮಿಲಿಯನ್ ನಷ್ಟವನ್ನು ಅನುಭವಿಸಿತು. ಕ್ಲಬ್ ಇತ್ತೀಚಿನ ವರ್ಷಗಳಲ್ಲಿ ಹಲವಾರು ಫುಟ್ಬಾಲ್ ಆಟಗಾರರನ್ನು 100 ಮಿಲಿಯನ್‌ ಯೂರೋಗಿಂತ ಹೆಚ್ಚಿನ ಬೆಲೆಗೆ ಖರೀದಿಸಿತ್ತು. ಈ ಫುಟ್ಬಾಲ್ ಆಟಗಾರರ ಸಂಬಳವೂ ಸರಾಸರಿ ವೇತನಕ್ಕಿಂತ ಹೆಚ್ಚಾಗಿತ್ತು. ಆಗಲೂ ಕ್ಲಬ್ ಚಾಂಪಿಯನ್ಸ್ ಲೀಗ್ ನಂತಹ ಯುರೋಪ್ ನ ಅಗ್ರ ಪಂದ್ಯಾವಳಿಯನ್ನು ಗೆಲ್ಲಲು ವಿಫಲವಾಗಿತ್ತು. ಕೊರೊನಾ ಸಾಂಕ್ರಾಮಿಕದಿಂದ ಉಂಟಾದ ಬಿಕ್ಕಟ್ಟಿನಿಂದ ಪರಿಸ್ಥಿತಿ ಇನ್ನಷ್ಟೂ ಹದಗೆಟ್ಟಿತ್ತು. ಇವೆಲ್ಲವೂ ಕ್ಲಬ್‌ನ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರಿತು.

ಲಾ ಲಿಗಾದ ಸಂಬಳ ಮಿತಿ ನಿಯಮ ಅಡ್ಡಿಯಾಯಿತು
ಇದರ ಜೊತೆಯಲ್ಲಿ, ಸ್ಪ್ಯಾನಿಷ್ ಫುಟ್‌ಬಾಲ್‌ನ ಅಗ್ರ ದೇಶೀಯ ಲೀಗ್, ಲಾ ಲಿಗಾ, ವೇತನ ನಿಯಮಗಳ ಪ್ರಕಾರ ಕ್ಲಬ್ ಆಟಗಾರರ ವೇತನವನ್ನು ಬಹಳ ಕಡಿತಗೊಳಿಸಬೇಕಾಗಿತ್ತು. ನಂತರವೇ ಅವರು ಮೆಸ್ಸಿಯನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಾಗಿತ್ತು. Goal.com ನ ವರದಿಯ ಪ್ರಕಾರ, ಲಾ ಲಿಗಾ ನಿಯಮಗಳ ಪ್ರಕಾರ, ಬಾರ್ಸಿಲೋನಾ ಆಟಗಾರರಿಗೆ ನೀಡುವ ವಾರ್ಷಿಕ ವೇತನವನ್ನು 200 ಮಿಲಿಯನ್ ಯುರೋಗಳಷ್ಟು ಅಥವಾ ಸುಮಾರು 17.53 ಶತಕೋಟಿ ರೂಪಾಯಿಗಳಷ್ಟು ಕಡಿತಗೊಳಿಸಬೇಕಾಗಿತ್ತು. ಈ ಪ್ರಯತ್ನದಲ್ಲಿ, ಕ್ಲಬ್ ಅನೇಕ ಸಣ್ಣ ಮತ್ತು ದೊಡ್ಡ ಆಟಗಾರರನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿತ್ತು. ಅದರಲ್ಲಿ ಅದು ಹೆಚ್ಚಿನ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ.

ಬಾರ್ಸಿಲೋನಾ-ಮೆಸ್ಸಿಯ ಸಂಬಂಧ 13 ನೇ ವಯಸ್ಸಿನಲ್ಲಿ ಆರಂಭವಾಯಿತು
ಮೆಸ್ಸಿ ಮತ್ತು ಬಾರ್ಸಿಲೋನಾ ಸಂಬಂಧ 21 ವರ್ಷ ಹಳೆಯದು. ಈ ಸ್ಮರಣೀಯ ಪ್ರಯಾಣವು 2000 ರಲ್ಲಿ ಆರಂಭವಾಯಿತು. ಮೆಸ್ಸಿ ಕ್ಲಬ್‌ನ ಪ್ರಸಿದ್ಧ ಲಾ ಮೆಸಿಯಾ ಅಕಾಡೆಮಿಗೆ 13 ನೇ ವಯಸ್ಸಿನಲ್ಲಿ ಸೇರಿದರು. ಇದರ ನಂತರ, 2004 ರಲ್ಲಿ, ಅವರು ಬಾರ್ಸಿಲೋನಾದ ಹಿರಿಯ ತಂಡದಲ್ಲಿ ಪಾದಾರ್ಪಣೆ ಮಾಡಿದರು. ಅಂದಿನಿಂದ ಅವರು ನಿರಂತರವಾಗಿ ಕ್ಲಬ್‌ನಲ್ಲಿದ್ದರು. ಈ ಸಮಯದಲ್ಲಿ, ಬಾರ್ಸಿಲೋನಾ ಸ್ಪ್ಯಾನಿಷ್ ಲೀಗ್‌ನಿಂದ ಯುರೋಪಿಯನ್ ಲೀಗ್‌ಗೆ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿತು ಮತ್ತು ಕ್ಲಬ್ ಅನ್ನು ರಿಯಲ್ ಮ್ಯಾಡ್ರಿಡ್‌ಗೆ ಸರಿಸಮಾನವಾಗಿ ತರಲು ಹತ್ತಾರು ಟ್ರೋಫಿಗಳನ್ನು ಗೆಲ್ಲಲು ಸಹಾಯ ಮಾಡಿತು. 2018 ರಲ್ಲಿ ಆಂಡ್ರೆಸ್ ಇನಿಯೆಸ್ಟಾ ಕ್ಲಬ್‌ನಿಂದ ನಿರ್ಗಮಿಸಿದ ನಂತರ ಮೆಸ್ಸಿ ತಂಡದ ಪೂರ್ಣ ಪ್ರಮಾಣದ ನಾಯಕರಾದರು. ಆದರೆ ಈ ಅವಧಿಯಲ್ಲಿ ಅವರು ಹೆಚ್ಚಿನ ಯಶಸ್ಸನ್ನು ಸಾಧಿಸಲಿಲ್ಲ. ಅವರು ಏಕಾಂಗಿಯಾಗಿ ತಂಡವನ್ನು ನಿಭಾಯಿಸಬೇಕಾಗಿತ್ತು. ಈ ಕಾರಣಕ್ಕಾಗಿ ಅವರು 2020 ರಲ್ಲಿ ಕ್ಲಬ್ ಅನ್ನು ತೊರೆಯುವುದಾಗಿ ಘೋಷಿಸಿದರು. ಆದರೆ ಬಾರ್ಸಿಲೋನಾದ ಕಾನೂನು ಅಡೆತಡೆಗಳಿಂದ ಒಂದು ವರ್ಷ ಅವರು ತಂಡದಿಂದ ದೂರಾಗದಂತೆ ತಡೆಯಲಾಯಿತು.

ಬಾರ್ಸಿಲೋನಾದೊಂದಿಗೆ ಮೆಸ್ಸಿ ದಾಖಲೆ
ಲಾ ಲಿಗಾದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಮೆಸ್ಸಿ ಹೊಂದಿದ್ದಾರೆ. ಅವರು 520 ಪಂದ್ಯಗಳಲ್ಲಿ 474 ಗೋಲುಗಳನ್ನು ಗಳಿಸಿದ್ದಾರೆ, ಇದು ಕ್ಲಬ್ ಹಾಗೂ ಲೀಗ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಗೋಲುಗಳನ್ನು ಹೊಂದಿದೆ. ಒಟ್ಟಾರೆಯಾಗಿ ಮೆಸ್ಸಿ ಬಾರ್ಸಿಲೋನಾಗೆ 778 ಪಂದ್ಯಗಳಲ್ಲಿ 672 ಗೋಲುಗಳನ್ನು ದಾಖಲಿಸಿದ್ದಾರೆ. ಇದಲ್ಲದೇ, ಅವರು ಲೀಗ್‌ನಲ್ಲಿ 193 ಅಸಿಸ್ಟ್‌ಗಳೊಂದಿಗೆ ಅತ್ಯುನ್ನತ ಸಹಾಯ ಆಟಗಾರರಾಗಿದ್ದಾರೆ. ಅಷ್ಟೇ ಅಲ್ಲ, ಬಾರ್ಸಿಲೋನಾ ಪರ ಲಾ ಲಿಗಾದಲ್ಲಿ 36 ಹ್ಯಾಟ್ರಿಕ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಒಂದು ಋತುವಿನಲ್ಲಿ ಗರಿಷ್ಠ 50 ಗೋಲುಗಳು ಕೂಡ ಮೆಸ್ಸಿಯ ಹೆಸರಿನಲ್ಲಿವೆ. ಬಾರ್ಸಿಲೋನಾ ಮುಂಚೂಣಿಯಲ್ಲಿರುವಾಗ, ಮೆಸ್ಸಿ ಪ್ರತಿಷ್ಠಿತ ‘ಬ್ಯಾಲನ್ ಡಿ’ಆರ್’ ಟ್ರೋಫಿಯನ್ನು ಗೆದ್ದುಕೊಂಡರು. ವರ್ಷದ ಅತ್ಯುತ್ತಮ ಫುಟ್ಬಾಲ್ ಆಟಗಾರನ ಪ್ರಶಸ್ತಿಯನ್ನು 6 ಬಾರಿ ಗೆದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಮೆಸ್ಸಿ ಬಾರ್ಸಿಲೋನಾದೊಂದಿಗೆ 34 ಟ್ರೋಫಿಗಳನ್ನು ಗೆದ್ದರು, ಅದರಲ್ಲಿ ಅವರ ಕೊಡುಗೆ ಅಗ್ರಸ್ಥಾನದಲ್ಲಿದೆ. ಇವುಗಳಲ್ಲಿ, ಅವರು 10 ಲಾ ಲಿಗಾ ಪ್ರಶಸ್ತಿಗಳನ್ನು, 7 ಕೋಪಾ ಡೆಲ್ ರೇ ಮತ್ತು 4 UEFA ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು.