ಫಿಫಾ ವಿಶ್ವಕಪ್ 2026 ನಾಕೌಟ್ ವೇಳಾಪಟ್ಟಿ ಪ್ರಕಟ

FIFA World Cup 2026 Schedule: ಫುಟ್‌ಬಾಲ್ ಇತಿಹಾಸದಲ್ಲೇ ಮೊದಲ ಬಾರಿಗೆ 48 ಬಲಿಷ್ಠ ತಂಡಗಳೊಂದಿಗೆ ಆರಂಭವಾದ ಮೆಗಾ ಟೂರ್ನಿಯ ಮೊದಲ ಸುತ್ತಿನ ಪೈಪೋಟಿ ಮುಗಿದಿದೆ. 48 ತಂಡಗಳಲ್ಲಿ 32 ಟೀಮ್​ಗಳು ದ್ವಿತೀಯ ಸುತ್ತಿಗೆ ಎಂಟ್ರಿಯಾಗಿದೆ. ಅದರಂತೆ ನಾಕೌಟ್ ಹಂತದಲ್ಲಿ 32 ತಂಡಗಳು ಒಟ್ಟು 16 ಪಂದ್ಯಗಳನ್ನಾಡಲಿದೆ.

ಫಿಫಾ ವಿಶ್ವಕಪ್ 2026 ನಾಕೌಟ್ ವೇಳಾಪಟ್ಟಿ ಪ್ರಕಟ
Fifa World Cup 2026
Image Credit source: x.com

Updated on: Jun 28, 2026 | 7:30 AM

ಫಿಫಾ ವಿಶ್ವಕಪ್​ನ ಮೊದಲ ಸುತ್ತಿನ ಬಹುತೇಕ ಪಂದ್ಯಗಳು ಮುಗಿದಿವೆ. ಈ ಪಂದ್ಯಗಳ ಮುಕ್ತಾಯದೊಂದಿಗೆ ‘ರೌಂಡ್ ಆಫ್ 32’ ವೇಳಾಪಟ್ಟಿ ಹೊರಬಿದ್ದಿದೆ. ಅದರಂತೆ ನಾಕೌಟ್ ಹಂತದ ರೋಚಕ ಪಂದ್ಯಗಳು ನಾಳೆಯಿಂದ (ಜೂನ್ 29) ಆರಂಭವಾಗಲಿದೆ. ಈ ಸುತ್ತಿನಲ್ಲಿ ಗೆಲ್ಲುವ ತಂಡ ಮುಂದಿನ ಹಂತಕ್ಕೇರಿದರೆ, ಸೋಲುವ ತಂಡಗಳು ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ‘ರೌಂಡ್ ಆಫ್ 32’ ಸುತ್ತಿನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

‘ರೌಂಡ್ ಆಫ್ 32’ ಸುತ್ತಿನಲ್ಲಿ ಒಟ್ಟು 32 ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು 16  ಹೈ-ವೋಲ್ಟೇಜ್ ಪಂದ್ಯಗಳು ನಡೆಯಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ದಿನಾಂಕ (2026) ಪಂದ್ಯ ಕ್ರೀಡಾಂಗಣ ಮತ್ತು ನಗರ 
ಜೂನ್ 29 ಸೌತ್ ಆಫ್ರಿಕಾ vs ಕೆನಡಾ ಲಾಸ್ ಏಂಜಲೀಸ್ ಸ್ಟೇಡಿಯಂ
ಜೂನ್ 29 ಬ್ರೆಝಿಲ್ vs ಜಪಾನ್ ಹೂಸ್ಟನ್ ಸ್ಟೇಡಿಯಂ
ಜೂನ್ 30 ಜರ್ಮನಿ vs ಪರಾಗ್ವೆ ಬಾಸ್ಟನ್ ಸ್ಟೇಡಿಯಂ
ಜೂನ್ 30 ನೆದರ್ಲ್ಯಾಂಡ್ಸ್ vs ಮೊರಾಕೊ ಮೊಂಟೆರ್ರಿ ಸ್ಟೇಡಿಯಂ
ಜೂನ್ 30 ಕೋಟ್ ಡಿ ಐವರಿ vs ನಾರ್ವೆ ಡಲ್ಲಾಸ್ ಸ್ಟೇಡಿಯಂ
ಜುಲೈ 1 ಫ್ರಾನ್ಸ್ vs ಸ್ವೀಡನ್ ನ್ಯೂಯಾರ್ಕ್ / ನ್ಯೂಜೆರ್ಸಿ ಸ್ಟೇಡಿಯಂ
ಜುಲೈ 1 ಮೆಕ್ಸಿಕೋ vs ಈಕ್ವೆಡಾರ್ ಮೆಕ್ಸಿಕೋ ಸಿಟಿ ಸ್ಟೇಡಿಯಂ
ಜುಲೈ 1 ಇಂಗ್ಲೆಂಡ್ vs ಡಿಆರ್​ ಕಾಂಗೋ ಅಟ್ಲಾಂಟಾ ಸ್ಟೇಡಿಯಂ
ಜುಲೈ 2 ಬೆಲ್ಜಿಯಂ vs ಸೆನೆಗೆಲ್ ಸಿಯಾಟಲ್ ಸ್ಟೇಡಿಯಂ
ಜುಲೈ 2 ಯುಎಸ್ಎ vs ಬೋಸ್ನಿಯಾ ಮತ್ತು ಹರ್ಜೆಗೋವಿನಾ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಸ್ಟೇಡಿಯಂ
ಜುಲೈ 3 ಸ್ಪೇನ್ vs ಆಸ್ಟ್ರಿಯಾ ಲಾಸ್ ಏಂಜಲೀಸ್ ಸ್ಟೇಡಿಯಂ
ಜುಲೈ 3 ಪೋರ್ಚುಗಲ್ vs ಕ್ರೊಯೇಷಿಯಾ ಟೊರೊಂಟೊ ಸ್ಟೇಡಿಯಂ
ಜುಲೈ 3 ಸ್ವಿಟ್ಜರ್ಲೆಂಡ್ vs ಇರಾನ್ ಬಿಸಿ ಪ್ಲೇಸ್, ವ್ಯಾಂಕೋವರ್
ಜುಲೈ 3 ಆಸ್ಟ್ರೇಲಿಯಾ vs ಈಜಿಪ್ಟ್ ಡಲ್ಲಾಸ್ ಸ್ಟೇಡಿಯಂ
ಜುಲೈ 4 ಅರ್ಜೆಂಟೀನಾ vs ಕೇಪ್ ವರ್ಡೆ ಮಿಯಾಮಿ ಸ್ಟೇಡಿಯಂ
ಜುಲೈ 4 ಕೊಲಂಬಿಯಾ vs ಘಾನಾ ಕನ್ಸಾಸ್ ಸಿಟಿ ಸ್ಟೇಡಿಯಂ

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಶ್ರೇಯಸ್ ಅಯ್ಯರ್ ಖಡಕ್ ಸೂಚನೆ..!

ಫಿಫಾ ವಿಶ್ವಕಪ್ 2026ರಿಂದ ಹೊರಬಿದ್ದಿರುವ ತಂಡಗಳು:

ತುರ್ಕಿಯೆ, ಜೆಕ್ ರಿಪಬ್ಲಿಕ್, ಖತಾರ್, ಜೋರ್ಡನ್, ಸೌದಿ ಅರೇಬಿಯಾ, ಇರಾಕ್, ಟ್ಯುನೀಷಿಯಾ, ಹೈತಿ, ಪನಾಮ, ಕುರಾಸಾವೊ, ಉರುಗ್ವೆ, ನ್ಯೂಝಿಲೆಂಡ್, ಸ್ಕಾಟ್‌ಲ್ಯಾಂಡ್.

 

 

 

Follow Us