EURO 2024: ಫಿಫಾದ ‘ತಲಾ ಫಾರ್ ಎ ರೀಸನ್’ ಪೋಸ್ಟ್​ಗೆ ಧೋನಿ ಅಭಿಮಾನಿಗಳ ಮೆಚ್ಚುಗೆ

|

Updated on: Jun 19, 2024 | 11:30 AM

Portugal vs Czech Republic: ಯುರೋ ಕಪ್​ನ ಗ್ರೂಪ್ ಹಂತದ ಪಂದ್ಯದಲ್ಲಿ ಜೆಕ್ ರಿಪಬ್ಲಿಕ್ ವಿರುದ್ಧ ಪೋರ್ಚುಗಲ್ ತಂಡ ರೋಚಕ ಜಯ ಸಾಧಿಸಿದೆ. ಅತ್ಯುತ್ತಮ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ದ್ವಿತೀಯಾರ್ಧದಲ್ಲಿ ಎರಡು ಗೋಲು ಬಾರಿಸುವ ಮೂಲಕ ಪೋರ್ಚುಗಲ್ ಗೆಲುವು ತನ್ನದಾಗಿಸಿಕೊಂಡಿತು.

EURO 2024: ಫಿಫಾದ ತಲಾ ಫಾರ್ ಎ ರೀಸನ್ ಪೋಸ್ಟ್​ಗೆ ಧೋನಿ ಅಭಿಮಾನಿಗಳ ಮೆಚ್ಚುಗೆ
MS Dhoni - Cristiano Ronaldo
Follow us on

ಇತ್ತ ಟಿ20 ವಿಶ್ವಕಪ್ ನಡೆಯುತ್ತಿದ್ದರೆ, ಅತ್ತ ಯುರೋ ಕಪ್ ಫುಟ್​ಬಾಲ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯ ಎಫ್​ ಗ್ರೂಪ್​ನಲ್ಲಿನ ಮೊದಲ ಪಂದ್ಯಕ್ಕೂ ಮುನ್ನ ಫಿಫಾ ಹಂಚಿಕೊಂಡ ಪೋಸ್ಟ್​ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಕಾರಣ ‘ತಲಾ ಫಾರ್ ಎ ರೀಸನ್’. ಸಾಮಾನ್ಯವಾಗಿ 7 ನಂಬರ್ ಕಾಣಿಸಿಕೊಂಡರೆ ಧೋನಿ ಅಭಿಮಾನಿಗಳು ‘ತಲಾ ಫಾರ್ ಎ ರೀಸನ್’ ಎಂದು ಪ್ರತಿಕ್ರಿಯಿಸುತ್ತಿರುತ್ತಾರೆ. ಅದರಲ್ಲೂ ಏಳರ ಲೆಕ್ಕಾಚಾರದೊಂದಿಗೆ ಪ್ರತಿಯೊಂದಕ್ಕೂ ಧೋನಿ ಕಾರಣ (ತಲಾ ಫಾರ್ ಎ ರೀಸನ್) ಎನ್ನುವ ಅಭಿಮಾನಿಗಳಿದ್ದಾರೆ.

ಆದರೆ ಈ ಬಾರಿ ‘ತಲಾ ಫಾರ್ ಎ ರೀಸನ್’ ಎಂಬ ವಾಕ್ಯ ಕಾಣಿಸಿಕೊಂಡಿರುವುದು ವಿಶ್ವ ಫುಟ್​ಬಾಲ್ ಫೆಡರೇಷನ್​ನ​ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಎಂಬುದು ವಿಶೇಷ. ಪೋರ್ಚುಗಲ್ ಮತ್ತು ಜೆಕ್ ರಿಪಬ್ಲಿಕ್ ನಡುವಣ ಪಂದ್ಯಕ್ಕೂ ಮುನ್ನ ಫಿಫಾ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಇಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಜೆರ್ಸಿ ನಂಬರ್ 7. ಇದೇ ಕಾರಣದಿಂದಾಗಿ ಫಿಫಾ ಅಡ್ಮಿನ್ ‘ತಲಾ ಫಾರ್ ಎ ರೀಸನ್’ ಎಂಬ ಕ್ಯಾಪ್ಷನ್  ನೀಡಿದ್ದಾರೆ. ಅತ್ತ ಪೋರ್ಚುಗಲ್ ತಂಡದ ನಾಯಕರಾಗಿರುವ ರೊನಾಲ್ಡೊ ಫೋಟೋಗೆ ‘ತಲಾ ಫಾರ್ ಎ ರೀಸನ್’ ಕ್ಯಾಪ್ಷನ್ ಕಾಣಿಸುತ್ತಿದ್ದಂತೆ ಇತ್ತ ಧೋನಿ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವೇ ಹರಿಸಿದ್ದಾರೆ.

ಇದೀಗ ಸೆವೆನ್ ನಂಬರ್​ನ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ನಂಬರ್ 7 ನ ಮಹೇಂದ್ರ ಸಿಂಗ್ ಧೋನಿಯ ‘ತಲಾ ಫಾರ್ ಎ ರೀಸನ್’ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಪೋರ್ಚುಗಲ್​ಗೆ ರೋಚಕ ಜಯ:

ಮಂಗಳವಾರ ನಡೆದ ಯುರೋ ಕಪ್​ನ ಗ್ರೂಪ್ ಹಂತದ ಪಂದ್ಯದಲ್ಲಿ ಜೆಕ್ ರಿಪಬ್ಲಿಕ್ ವಿರುದ್ಧ ಪೋರ್ಚುಗಲ್ ತಂಡ ರೋಚಕ ಜಯ ಸಾಧಿಸಿದೆ. ಅತ್ಯುತ್ತಮ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ.

ಆದರೆ ದ್ವಿತೀಯಾರ್ಧದ 62ನೇ ನಿಮಿಷದಲ್ಲಿ ಲುಕಾಸ್ ಪ್ರೊವೊಡ್ ಮೊದಲ ಗೋಲು ಬಾರಿಸಿ ಜೆಕ್​ ರಿಪಬ್ಲಿಕ್ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಆದರೆ 69ನೇ ನಿಮಿಷದಲ್ಲಿ ಪೋರ್ಚುಗಲ್ ತಾರೆ ರಾಬಿನ್ ಹ್ರಾನಾಕ್ ಗೋಲು ಸಿಡಿಸಿ ಈ ಅಂತರವನ್ನು ಸಮಗೊಳಿಸಿದರು.

ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್

ಇನ್ನು ಡ್ರಾನತ್ತ ಸಾಗಿದ್ದ ಈ ಪಂದ್ಯದ ಹೆಚ್ಚುವರಿ ನಿಮಿಷದಲ್ಲಿ ಪೋರ್ಚುಗಲ್ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. 92ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಪ್ರಾನ್ಸಿಸ್ಕೊ ಪೋರ್ಚುಗಲ್ ತಂಡಕ್ಕೆ 2-1 ಅಂತರದಿಂದ ಗೆಲುವು ತಂದು ಕೊಟ್ಟರು.