India vs England: ಇಂಗ್ಲೆಂಡ್‌ ವಿರುದ್ಧದ ಮೊದಲ T20 ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗ ಹೀಗಿರಬಹುದು!

India vs England: . ನವೆಂಬರ್ 10, 2019 ರಂದು ನಾಗ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ 4 ಓವರ್‌ಗಳಲ್ಲಿ ಕೇವಲ 7 ರನ್‌ಗಳಿಗೆ ಚಹರ್ ಹ್ಯಾಟ್ರಿಕ್ ಸೇರಿದಂತೆ 6 ವಿಕೆಟ್ ಪಡೆದಿದ್ದರು.

India vs England: ಇಂಗ್ಲೆಂಡ್‌ ವಿರುದ್ಧದ ಮೊದಲ T20 ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗ ಹೀಗಿರಬಹುದು!
ವೇಗದ ಬೌಲರ್‌ಗಳು: ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಮೊಹಮ್ಮದ್ ಶಮಿ

Updated on: Mar 10, 2021 | 5:25 PM

ಅಹಮದಾಬಾದ್:ಭಾರತ ಮತ್ತು ಇಂಗ್ಲೆಂಡ್ (ಇಂಡಿಯಾ ವರ್ಸಸ್ ಇಂಗ್ಲೆಂಡ್) ತಂಡಗಳು ಈಗ ಐದು ಪಂದ್ಯಗಳ ಟಿ 20 ಸರಣಿಗೆ ಸಜ್ಜಾಗುತ್ತಿವೆ. ಸರಣಿ ಮಾರ್ಚ್ 12 ರಿಂದ ಪ್ರಾರಂಭವಾಗಲಿದೆ. ಎಲ್ಲಾ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ 20 ಸರಣಿಗಾಗಿ, ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳಲ್ಲಿ ಕೆಲವು ಬದಲಾವಣೆಗಳನ್ನ ಕಾಣಬಹುದು. ಟೆಸ್ಟ್ ಸ್ಪೆಷಲಿಸ್ಟ್ ಕ್ರಿಕೆಟಿಗರ ಕೆಲಸ ಮುಗಿದಿದೆ. ಈಗ ಸರದಿ ಟಿ 20 ತಜ್ಞರದು. ಇಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದ ಬಗ್ಗೆ ಊಹಾಪೋಹಗಳು ಎದ್ದಿವೆ.

ದೀಪಕ್ ಚಹರ್​ಗೆ ಸ್ಥಾನ..
ಟಿ 20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕೇವಲ 6 ರನ್‌ಗಳಿಗೆ 7 ವಿಕೆಟ್ ಕಬಳಿಸಿ ಅದ್ಭುತ ಸಾಧನೆ ಮಾಡಿದ ದೀಪಕ್ ಚಹರ್ ಟೀಮ್ ಇಂಡಿಯಾ ಆಡುವ ಇಲೆವೆನ್‌ನಲ್ಲಿ ಆಡುವ ಸಾಧ್ಯತೆಗಳು ಹೆಚ್ಚಾಗಿವೆ. ಚಹರ್ ಟೀಮ್ ಇಂಡಿಯಾದ ಟಿ 20 ಸ್ಪೆಷಲಿಸ್ಟ್ ಬೌಲರ್. ನವೆಂಬರ್ 10, 2019 ರಂದು ನಾಗ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ 4 ಓವರ್‌ಗಳಲ್ಲಿ ಕೇವಲ 7 ರನ್‌ಗಳಿಗೆ ಚಹರ್ ಹ್ಯಾಟ್ರಿಕ್ ಸೇರಿದಂತೆ 6 ವಿಕೆಟ್ ಪಡೆದಿದ್ದರು. ಟಿ20 ಇತಿಹಾಸದಲ್ಲಿಯೇ ಇದು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಚಹರ್ ಅವರಲ್ಲದೆ, ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ವೇಗದ ಬೌಲರ್ ಆಗಿ ಸ್ಥಾನ ಪಡೆಯಬಹುದಾಗಿದೆ. ಇದಲ್ಲದೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಲ್‌ರೌಂಡರ್ ಆಗಿ ಹಾಜರಾಗಲಿದ್ದಾರೆ. ಹಾಗೆಯೇ, ಸ್ಪಿನ್ ವಿಭಾಗದ ಜವಾಬ್ದಾರಿಯನ್ನು ಯುಜ್ವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ನಿರ್ವಹಿಸಬಹುದು.

ಸೂರ್ಯಕುಮಾರ್ ಕಾಯಬೇಕಾಗಬಹುದು..
ಶಿಖರ್ ಧವನ್ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಧವನ್ ಮತ್ತು ರೋಹಿತ್ ಶರ್ಮಾ ಅವರು ಆರಂಭಿಕರಾಗಿ ಕಣಕ್ಕಿಳಿಯಲ್ಲಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಸ್ವತಃ ಮೂರನೇ ಸ್ಥಾನದಲ್ಲಿದ್ದಲ್ಲಿ ಕಣಕ್ಕಿಳಿದರೆ, ಕೆಎಲ್ ರಾಹುಲ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ. ಐದನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಆರನೇ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಬ್ಯಾಟಿಂಗ್​ಗೆ ಇಳಿಯಲ್ಲಿದ್ದಾರೆ. ಏಳನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯುವ ನಿರೀಕ್ಷೆಯಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಕೆಲ ಪಂದ್ಯಗಳು ನಡೆಯುವವರೆಗೆ ಬೆಂಚ್​ ಕಾಯಬೇಕಾಗಬಹುದು.

ಟೀಮ್ ಇಂಡಿಯಾದ ಸಂಭಾವ್ಯ ಪಟ್ಟಿ
ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಭುವನೇಶ್ವರ ಕುಮಾರ್, ಯುಜ್ವೇಂದ್ರ ಚಹಲ್.

ಇದನ್ನೂ ಓದಿ: India vs England: ಇಂಗ್ಲೆಂಡ್‌ ಕ್ರಿಕೆಟ್​ನಲ್ಲಿ​ ಮೋರ್ಗನ್​ಗಿರುವಷ್ಟು ಸ್ವಾತಂತ್ರ್ಯ ರೂಟ್​ಗಿಲ್ಲ! ಹಾಗಾಗಿ ಟೆಸ್ಟ್​ ಸರಣಿ ಸೋಲಬೇಕಾಯ್ತು..!