ಇಂಡೋ- ಆಸಿಸ್ ಕದನ: ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ನೂರಾರು ವಿಘ್ನ..
ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರೋ ಟೀಮ್ ಇಂಡಿಯಾ ಸದ್ಯ, ಸಿಡ್ನಿಯಲ್ಲಿ ಕ್ವಾರಂಟೈನ್ ಆಗಿದೆ. ಅದ್ರೆ ಇಂಡೋ-ಆಸಿಸ್ ನಡುವಿನ ಬಹುನಿರೀಕ್ಷಿತ ಅಡಿಲೇಡ್ ಟೆಸ್ಟ್ ಪಂದ್ಯದ ಮೇಲೆ, ಮಹಾಮಾರಿ ಕೊರೊನಾ ಕಾರ್ಮೋಡ ಕವಿದಿದೆ. ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೊಲ್ಟೇಜ್ ಟೆಸ್ಟ್ ಸರಣಿಗಾಗಿ, ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅದ್ರಲ್ಲೂ ಡಿಸೆಂಬರ್ 17ರಂದು ಅಡಿಲೇಡ್ನಲ್ಲಿ ನಡೆಯೋ ಮೊದಲ ಟೆಸ್ಟ್ ಪಂದ್ಯ, ಕ್ರಿಕೆಟ್ ಜಗತ್ತಿನ ಗಮನವನ್ನ ತನ್ನತ್ತ ಕೇಂದ್ರಿಕರಿಸಿಕೊಂಡಿದೆ. ಯಾಕಂದ್ರೆ ಇದು ಟೀಮ್ ಇಂಡಿಯಾ ವಿದೇಶದಲ್ಲಿ ಆಡ್ತೀರೋ ಮೊದಲ ಡೇ ಅಂಡ್ ನೈಟ್ […]
ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರೋ ಟೀಮ್ ಇಂಡಿಯಾ ಸದ್ಯ, ಸಿಡ್ನಿಯಲ್ಲಿ ಕ್ವಾರಂಟೈನ್ ಆಗಿದೆ. ಅದ್ರೆ ಇಂಡೋ-ಆಸಿಸ್ ನಡುವಿನ ಬಹುನಿರೀಕ್ಷಿತ ಅಡಿಲೇಡ್ ಟೆಸ್ಟ್ ಪಂದ್ಯದ ಮೇಲೆ, ಮಹಾಮಾರಿ ಕೊರೊನಾ ಕಾರ್ಮೋಡ ಕವಿದಿದೆ.
ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೊಲ್ಟೇಜ್ ಟೆಸ್ಟ್ ಸರಣಿಗಾಗಿ, ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅದ್ರಲ್ಲೂ ಡಿಸೆಂಬರ್ 17ರಂದು ಅಡಿಲೇಡ್ನಲ್ಲಿ ನಡೆಯೋ ಮೊದಲ ಟೆಸ್ಟ್ ಪಂದ್ಯ, ಕ್ರಿಕೆಟ್ ಜಗತ್ತಿನ ಗಮನವನ್ನ ತನ್ನತ್ತ ಕೇಂದ್ರಿಕರಿಸಿಕೊಂಡಿದೆ. ಯಾಕಂದ್ರೆ ಇದು ಟೀಮ್ ಇಂಡಿಯಾ ವಿದೇಶದಲ್ಲಿ ಆಡ್ತೀರೋ ಮೊದಲ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯವಾಗಿದೆ.
ಇಂಡೋ-ಆಸಿಸ್ ಸರಣಿ ಮೇಲೆ ಕೊರೊನಾ ಕಾರ್ಮೊಡ! ಭಾರಿ ನಿರೀಕ್ಷೆಗಳನ್ನ ಹುಟ್ಟುಹಾಕಿರೋ ಅಡಿಲೇಡ್ ಟೆಸ್ಟ್ ಪಂದ್ಯದ ಮೇಲೆ, ಮಹಾಮಾರಿ ಕೊರೊನಾ ಕರಿನೆರಳು ಬಿದ್ದಿದೆ. ಕಳೆದ ಏಪ್ರಿಲ್ನಿಂದ ಕೊರೊನಾ ಪ್ರಕರಣಗಳೇ ದಾಖಲಾಗದ ಅಡಿಲೇಡ್ನಲ್ಲಿ, ಕಳೆದ 2 ದಿನಗಳಲ್ಲಿ 21 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದು ಕ್ರಿಕೆಟ್ ಆಸ್ಟ್ರೇಲಿಯಾ ತಲೆನೋವಿಗೆ ಕಾರಣವಾಗಿದೆ.
ಕ್ವಾರಂಟೈನ್ಗೆ ಒಳಗಾದ ಆಸ್ಟ್ರೇಲಿಯಾ ಕ್ರಿಕೆಟಿಗರು! ಟೀಮ್ ಇಂಡಿಯಾ ಆಟಗಾರರು ಸದ್ಯ ಸಿಡ್ನಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಮತ್ತೊಂದೆಡೆ ನಾಯಕ ಟೀಮ್ ಪೈನ್ ಸೇರಿದಂತೆ ಶೆಫೀಲ್ಡ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾ ಆಟಗಾರರು 14 ದಿನಗಳ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಹೀಗಾಗಿ ಏಕದಿನ ಮತ್ತು ಟಿಟ್ವೆಂಟಿ ತಂಡದಲ್ಲಿರೋ ಕೆಲ ಆಟಗಾರರು, ಸರಣಿಯ ಆರಂಭಿಕ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಕೊರೊನಾ ಜೊತೆಗೆ ಕ್ವಾರಂಟೈನ್ ಕಿರಿಕಿರಿ, ಕ್ರಿಕೆಟ್ ಆಸ್ಟ್ರೇಲಿಯಾ ಪಾಲಿಗೆ ಮತ್ತೊಂದು ಕಂಟಕವಾಗಿದೆ.
ಡಿಸೆಂಬರ್ 17ರಂದು ಅಡಿಲೇಡ್ ಟೆಸ್ಟ್ ಪಂದ್ಯವಿರೋದ್ರಿಂದ, ಪ್ರವಾಸದ ವೇಳಾಪಟ್ಟಿಯ ಪ್ರಕಾರ ಎರಡೂ ತಂಡಗಳ ಆಟಗಾರರು ಡಿಸೆಂಬರ್ 10ಕ್ಕೆ ಅಡಿಲೇಡ್ಗೆ ತೆರಳಲಿವೆ. ಅಷ್ಟರೊಳಗೆ ಸೌತ್ ಆಸ್ಟ್ರೇಲಿಯಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ್ರೆ ಸರಿ. ಒಂದು ವೇಳೆ ಕೊರೊನಾ ನಿಯಂತ್ರಣಕ್ಕೆ ಸಿಗದೇ ಇದ್ರೆ, ಸೌತ್ ಆಸ್ಟ್ರೇಲಿಯಾದ ಗಡಿ ನಿರ್ಬಂಧವನ್ನ ಸಡಿಲಿಸೋ ಸಾಧ್ಯತೆ ಕಡಿಮೆಯಿದೆ. ಹೀಗಾದ್ರೆ, ಇಂಡೋ-ಆಸಿಸ್ ನಡುವಿನ ಬಹುನಿರೀಕ್ಷಿತ ಅಡಿಲೇಡ್ ಟೆಸ್ಟ್ ಪಂದ್ಯ ನಡೆಯೋದು ಅನುಮಾನವಾಗಿದೆ.