ಗಿಲ್ ಅಸಾಮಾನ್ಯ ಪ್ರತಿಭಾವಂತ ಮತ್ತು ಉಜ್ವಲ ಭವಿಷ್ಯವಿರುವ ಆಟಗಾರ: ಗವಾಸ್ಕರ್ | Gill is special talent and brightest prospect for India: Gavaskar
ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಗಿದಿದೆ ಮತ್ತು 13ನೇ ಆವೃತ್ತಿಯಲ್ಲಿ ಸ್ಪರ್ಧಿಸಿದ 8ತಂಡಗಳಲ್ಲಿ 4 ನಿರ್ಗಮಿಸಿ ಉಳಿದ 4 ಪ್ಲೇ ಆಫ್ ಘಟ್ಟವನ್ನು ತಲುಪಿವೆ. ನಾಳೆಯಿಂದ ಚಾಂಪಿಯನ್ಶಿಪ್ಗಾಗಿ ಪಂದ್ಯಗಳು ನಡೆಯಲಿವೆ. ಐಪಿಎಲ್ನ ಪ್ರತಿ ಸೀಸನ್ನಲ್ಲಿ ಕೆಲವು ಉದಯೋನ್ಮುಖ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಕೊಲ್ಕತಾ ನೈಟ್ರೈಡರ್ಸ್ ಟೀಮಿನ ಆರಂಭ ಆಟಗಾರ ಶುಬ್ಮನ್ ಗಿಲ್ ಕ್ರಿಕೆಟ್ ಪ್ರೇಮಿಗಳಿಗೆ ಚೆನ್ನಾಗಿ ಪರಿಚಿತರು. ಟೀಮ್ ಇಂಡಿಯಾವನ್ನು ಅವರು ಈಗಾಗಲೇ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಭಾರತದ ಅಂಡರ್-19, ಇಂಡಿಯಾ […]
ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಗಿದಿದೆ ಮತ್ತು 13ನೇ ಆವೃತ್ತಿಯಲ್ಲಿ ಸ್ಪರ್ಧಿಸಿದ 8ತಂಡಗಳಲ್ಲಿ 4 ನಿರ್ಗಮಿಸಿ ಉಳಿದ 4 ಪ್ಲೇ ಆಫ್ ಘಟ್ಟವನ್ನು ತಲುಪಿವೆ. ನಾಳೆಯಿಂದ ಚಾಂಪಿಯನ್ಶಿಪ್ಗಾಗಿ ಪಂದ್ಯಗಳು ನಡೆಯಲಿವೆ.
ಐಪಿಎಲ್ನ ಪ್ರತಿ ಸೀಸನ್ನಲ್ಲಿ ಕೆಲವು ಉದಯೋನ್ಮುಖ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಕೊಲ್ಕತಾ ನೈಟ್ರೈಡರ್ಸ್ ಟೀಮಿನ ಆರಂಭ ಆಟಗಾರ ಶುಬ್ಮನ್ ಗಿಲ್ ಕ್ರಿಕೆಟ್ ಪ್ರೇಮಿಗಳಿಗೆ ಚೆನ್ನಾಗಿ ಪರಿಚಿತರು. ಟೀಮ್ ಇಂಡಿಯಾವನ್ನು ಅವರು ಈಗಾಗಲೇ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಭಾರತದ ಅಂಡರ್-19, ಇಂಡಿಯಾ ‘ಎ’ ಟೀಮುಗಳಿಗೂ ಅವರು ಆಡಿದ್ದಾರೆ.
ಗಿಲ್ ಬಗ್ಗೆ ಯಾಕೆ ಪ್ರಸ್ತಾಪಿಸಬೇಕಾಗಿದೆಯೆಂದರೆ, ಭಾರತದ ಲೆಜೆಂಡರಿ ಓಪನರ್ ಸುನೀಲ್ ಗವಾಸ್ಕರ 21 ವರ್ಷದ ಪಂಜಾಬಿನ ಆಟಗಾರನ ಬಗ್ಗೆ ಭಾರಿ ಪ್ರಶಂಸೆಯ ಮಾತುಗಳನ್ನಾಡಿ ಭಾರತದ ಉಜ್ವಲ ಪ್ರತಿಭೆ ಮತ್ತು ಭವಿಷ್ಯ ಎಂದು ಬಣ್ಣಿಸಿದ್ದಾರೆ.
‘‘ಗಿಲ್ನ ಟೆಕ್ನಿಕ್ ಅದ್ಭುತವಾಗಿದೆ, ಆನ್ಸೈಡ್ನಲ್ಲಿ ಅವನು ಸೊಗಸಾದ ಹೊಡೆತಗಳನ್ನು ಬಾರಿಸಿಸುತ್ತಾನೆ. ಅವನ ಫುಟ್ವರ್ಕ್ ಎಷ್ಟು ಅಪ್ರತಿಮವಾಗಿದೆಯೆಂದರೆ ಬೌನ್ಸಿ ವಿಕೆಟ್ಗಳ ಮೇಲೂ ಅವನು ಬ್ಯಾಕ್ಫುಟ್ನಲ್ಲಿ ನಿರಾಯಾಸವಾಗಿ ಚೆಂಡನ್ನು ಪಂಚ್ ಮಾಡಬಲ್ಲ. ಎಲ್ಲ ಹೊಡೆತಗಳನ್ನು ಬಾರಿಸುವ ಕ್ಷಮತೆ ಅವನಲ್ಲಿದೆ ಮತ್ತು ಶಾಟ್ಗಳನ್ನು ಆಡಲು ಅವನಲ್ಲಿ ಸಾಕಷ್ಟು ಟೈಮಿದೆ. ಎಸೆತದ ಲೆಂಗ್ತ್ ಅನ್ನು ಅವನು ಬಹಳ ಬೇಗ ಕಂಡುಕೊಂಡುಬಿಡುತ್ತಾನೆ. ಇವೆಲ್ಲ ಶ್ರೇಷ್ಠ ಆಟಗಾರನಲ್ಲಿರುವ ಲಕ್ಷಣಗಳು,’’ ಎಂದು ಟೆಸ್ಟ್ ಕ್ರಿಕೆಟ್ನಲ್ಲಿ 10,000 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಖ್ಯಾತಿಯ ಸನ್ನಿ ಹೇಳಿದ್ದಾರೆ.
ಯಾವುದೇ ಒಬ್ಬ ಬ್ಯಾಟ್ಸ್ಮನ್ನ ಕ್ವಾಲಿಟಿ ಮತ್ತು ಸಾಮರ್ಥ್ಯವನ್ನು ಅಳೆಯಬೇಕಾದರೆ ಅವನು ಶ್ರೇಷ್ಠ ಬೌಲರ್ಗಳ ವಿರುದ್ಧ ಹೇಗೆ ಆಡುತ್ತಾನೆ ಎಂಬ ಅಂಶವನ್ನು ಗಮನಿಸಬೇಕಾಗುತ್ತದೆ, ಎಂದು ಗವಾಸ್ಕರ್ ಹೇಳುತ್ತಾರೆ.
‘‘ಒಬ್ಬ ಬ್ಯಾಟ್ಸ್ಮನ್ನ ಸಾಮರ್ಥ್ಯವನ್ನು ಅಳೆಯುವಾಗ ಅವನು ಅತ್ಯುತ್ತಮ ಬೌಲರ್ಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದನ್ನು ಗಮನಿಸಬೇಕು. ಕೆಲವು ಪ್ರಚಂಡ ಬೌಲರ್ಗಳು ಈ ಐಪಿಎಲ್ನಲ್ಲಿ ಆಡುತ್ತಿದ್ದಾರೆ, ಸ್ಪಿನ್ ಮತ್ತು ವೇಗದ ಬೌಲರ್-ಎಲ್ಲರನ್ನು ಅತ್ಯಂತ ಸಮರ್ಥವಾಗಿ ಎದುರಿಸಿರುವ ಗಿಲ್ ಯಥೇಚ್ಛವಾಗಿ ರನ್ ಗಳಿಸಿದ್ದಾನೆ. ಅವನ ಬ್ಯಾಟಿಂಗ್ನಲ್ಲಿ ನನಗೆ ನ್ಯೂನತೆಗಳೇನೂ ಕಾಣುತ್ತಿಲ್ಲ. ಎಲ್ಲ ಫಾರ್ಮಾಟ್ಗಳಿಗೆ ಅವನನ್ನು ಆಡಿಸಿದರೆ ಭಾರತದ ಕ್ರಿಕೆಟ್ ಟೀಮಿಗೆ ಹೆಚ್ಚಿನ ಪ್ರಯೋಜನವಿದೆ,’’ ಎಂದು ಗವಾಸ್ಕರ್ ಹೇಳಿದ್ದಾರೆ.
ಗಿಲ್ ಪ್ರತಿನಿಧಿಸುವ ಕೆಕೆಆರ್ ಟೀಮು ಈ ಬಾರಿ ಪ್ಲೇ ಆಫ್ ಹಂತ ತಲುಪಲಿಲ್ಲ, ಆದರೆ, ಲೀಗ್ ಹಂತದಲ್ಲಿ ಆಡಿದ14 ಪಂದ್ಯಗಳಿಂದ ಅವರು 33.80 ಸರಾಸರಿಯಲ್ಲಿ 440ರನ್ ಕಲೆಹಾಕಿದರು. ದೇಶೀಯ ಕ್ರಿಕೆಟ್ನಲ್ಲಿ ಅವರ ಪಂಜಾಬನ್ನು ಪ್ರತಿನಿಧಿಸುತ್ತಾರೆ.
ಜನೆವರಿ 2019 ರಲ್ಲೇ ನ್ಯೂಜಿಲೆಂಡ್ ವಿರುದ್ಧ ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಗಿಲ್, ಅದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಗೆ ಆಯ್ಕೆಯಾದರಾದರೂ ಕ್ಯಾಪ್ ಧರಿಸುವ ಅವಕಾಶ ಸಿಗಲಿಲ್ಲ. ಆದರೆ ಆ ಸರಣಿಗೆ ಮೊದಲು ಇಂಡಿಯಾ ‘ಎ’ ಪರ ಆಡುತ್ತಾ ವೆಸ್ಟ್ ಇಂಡೀಸ್ ವಿರುದ್ಧ ಟ್ರಿನಿಡಾಡ್ ಅಂಡ್ ಟೊಬ್ಯಾಗೊದ ಬ್ರಿಯಾನ್ ಲಾರಾ ಮೈದಾನದಲ್ಲಿ 204 ರನ್ ಬಾರಿಸಿ ಭಾರತದ ಪರ ಪ್ರಥಮ ದರ್ಜೆಯ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು.
ಸಾಮಾನ್ಯವಾಗಿ ಮುಂಬೈಯೇತರ ಆಟಗಾರರನ್ನು ಹೊಗಳದ ಗವಾಸ್ಕರ್, ಗಿಲ್ ಬಗ್ಗೆ ಇಷ್ಟೆಲ್ಲ ಹೇಳಿದ್ದಾರೆಂದರೆ ಅವರು ನಿಜಕ್ಕೂ ಸ್ಪೆಷಲ್ ಟ್ಯಾಲೆಂಟ್ ಆಗಿರಲೇಬೇಕು.
Published On - 6:48 pm, Wed, 4 November 20