Happy Birthday Sunil Gavaskar: 72ನೇ ವರ್ಷಕ್ಕೆ ಕಾಲಿಟ್ಟ ಟೀಮ್ ಇಂಡಿಯಾದ ಲಿಟಲ್ ಮಾಸ್ಟರ್: ಇಲ್ಲಿದೆ ಗವಾಸ್ಕರ್ ಬೆಸ್ಟ್ ರೆಕಾರ್ಡ್

|

Updated on: Jul 10, 2021 | 11:39 AM

ಭಾರತ ಕ್ರಿಕೆಟ್ ತಂಡಕ್ಕೆ ಬೆಟ್ಟದಷ್ಟು ಕೊಡುಗೆ ನೀಡಿರುವ ಗವಾಸ್ಕರ್, 1983ರಲ್ಲಿ ಮೊದಲ ವಿಶ್ವಕಪ್‌ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ 10,000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಖ್ಯಾತಿ ಕೂಡ ಗವಾಸ್ಕರ್‌ ಅವರದ್ದು.

Happy Birthday Sunil Gavaskar: 72ನೇ ವರ್ಷಕ್ಕೆ ಕಾಲಿಟ್ಟ ಟೀಮ್ ಇಂಡಿಯಾದ ಲಿಟಲ್ ಮಾಸ್ಟರ್: ಇಲ್ಲಿದೆ ಗವಾಸ್ಕರ್ ಬೆಸ್ಟ್ ರೆಕಾರ್ಡ್
Sunil Gavaskar
Follow us on

ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿರುವ ಲಿಟಲ್ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ ಇಂದು (ಜುಲೈ 10) 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿರುವ ಆಟಗಾರರ ಪೈಕಿ ಗವಾಸ್ಕರ್ ಮೊದಲ ಸಾಲಿನಲ್ಲಿದ್ದಾರೆ. ಇಂತಾ ದಿಗ್ಗಜ ಆಟಗಾರನ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಭಾರತ ಕ್ರಿಕೆಟ್ ತಂಡಕ್ಕೆ ಬೆಟ್ಟದಷ್ಟು ಕೊಡುಗೆ ನೀಡಿರುವ ಗವಾಸ್ಕರ್, 1983ರಲ್ಲಿ ಮೊದಲ ವಿಶ್ವಕಪ್‌ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ 10,000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಖ್ಯಾತಿ ಕೂಡ ಗವಾಸ್ಕರ್‌ ಅವರದ್ದು.

ಚೊಚ್ಚಲ ಪಂದ್ಯದಲ್ಲೇ ದಾಖಲೆ: ಸುನಿಲ್ ಗವಾಸ್ಕರ್ 1971ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ 65 ರನ್ ಗಳಿಸಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 67 ರನ್ ಗಳಿಸಿ ಮಿಂಚುಹರಿಸಿ ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದರು.

34 ಶತಕ: ಕ್ರಿಕೆಟ್‌ ಲೋಕವನ್ನು ದೀರ್ಘಕಾಲ ಆಳಿದ ಗವಾಸ್ಕರ್ 125 ಟೆಸ್ಟ್ ಪಂದ್ಯಗಳಲ್ಲಿ 34 ಶತಕ ಸಿಡಿಸಿದರು. ನಂತರ 2005 ರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ದಾಖಲೆ ಅಳಿಸಿ ಹಾಕಿದರು.

ವೆಸ್ಟ್​ ಇಂಡೀಸ್ ವಿರುದ್ಧ 13 ಶತಕ: 70, 80ರ ದಶತಕದಲ್ಲಿ ವೆಸ್ಟ್​ ಇಂಡೀಸ್ ತಂಡದ ವಿರುದ್ಧ ಆಡುವುದೆಂದರೆ ಅದು ಸುಲಭದ ವಿಚಾರವಾಗಿರಲಿಲ್ಲ. ಆದರೆ, ಗವಾಸ್ಕರ್ ಅಂತಹ ಬಲಿಷ್ಠ ತಂಡದ ವಿರುದ್ಧ 27 ಪಂದ್ಯಗಳಲ್ಲಿ 13 ಶತಕ ಬಾರಿಸಿರುವುದು ಅಚ್ಚರಿಯೇ ಸರಿ. ಅಲ್ಲದೆ ವಿಂಡೀಸ್ ವಿರುದ್ಧ ಒಂದು ಸರಣಿಯಲ್ಲಿ 774 ರನ್ ಗಳಿಸಿದ ಏಕೈಕ ಆಟಗಾರ ಗವಾಸ್ಕರ್ ಆಗಿದ್ದಾರೆ.

ಇನ್ನೂ ಸತತವಾಗಿ ನಾಲ್ಕು ಶತಕ ಬಾರಿಸಿದ ಏಕೈಕ ಆಟಗಾರ ಎಂಬ ಬಿರುದು ಗವಾಸ್ಕರ್​ಗೆ ಸಲ್ಲುತ್ತದೆ. ಟೆಸ್ಟ್ ಕ್ರಿಕೆಟ್​ನಲ್ಲಿ ಒಟ್ಟು 108 ಕ್ಯಾಚ್ ಅನ್ನು ಪಡೆದಿದ್ದಾರೆ.

ತನ್ನ ಚೊಚ್ಚಲ ಪಂದ್ಯದಲ್ಲೇ ಅಮೋಘ ಆಟ ಪ್ರದರ್ಶಿಸಿದ ಗವಾಸ್ಕರ್ ಭಾರತ ತಂಡದಲ್ಲಿ ಬಹುಕಾಲ ಉಳಿಯುವ ಭರವಸೆ ನೀಡಿದ್ದರು. ಮೊದಲ ಪಂದ್ಯದಲ್ಲಿ ಗವಾಸ್ಕರ್ ತೋರಿದ ಈ ಅದ್ಭುತ ಆಟದಿಂದಾಗಿ ಭಾರತ ಆ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಆಟವನ್ನು ಅವರು ಮುಂದಿನ ಹದಿನಾರು ವರ್ಷಗಳ ಕಾಲ ಮುಂದುವರಿಸಿ 1987ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಸಿಕ್ಸ್ ಲೈನ್ ಬಳಿ ಸೂಪರ್ ಮ್ಯಾನ್​ನಂತೆ ಹಾರಿದ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ: ರೋಚಕ ವಿಡಿಯೋ ಇಲ್ಲಿದೆ

Published On - 11:39 am, Sat, 10 July 21