ಹಾರ್ದಿಕ್​ ಮೇಲೆ ಸಿಟ್ಟಾದ ಕೊಹ್ಲಿ; ವಿರಾಟ್​ರನ್ನು ಕೂಲ್ ಮಾಡಿದ ಧವನ್​ಗೆ ಪಾಂಡ್ಯ ಮೈದಾನದಲ್ಲೇ ದೀರ್ಘದಂಡ ನಮಸ್ಕಾರ

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಕಂಡಿತ್ತು. 103ರನ್​ ಗಳಿಸಿ ರೋಹಿತ್​-ಧವನ್​ ಆಡುತ್ತಿದ್ದರು. ಈ ವೇಳೆ ರೋಹಿತ್ (37) ಬೋಲ್ಡ್​ ಆದರು.

ಹಾರ್ದಿಕ್​ ಮೇಲೆ ಸಿಟ್ಟಾದ ಕೊಹ್ಲಿ; ವಿರಾಟ್​ರನ್ನು ಕೂಲ್ ಮಾಡಿದ ಧವನ್​ಗೆ ಪಾಂಡ್ಯ ಮೈದಾನದಲ್ಲೇ ದೀರ್ಘದಂಡ ನಮಸ್ಕಾರ
ಹಾರ್ದಿಕ್​ ಪಾಂದ್ಯ

Updated on: Mar 28, 2021 | 7:30 PM

ಭಾರತ ಮತ್ತು ಇಂಗ್ಲೆಂಡ್​ ನಡುವಣ ಅಂತಿಮ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಾರ್ದಿಕ್​ ಪಾಂಡ್ಯ ಅವರು ಶಿಖರ್​ ಧವನ್​ಗೆ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದನ್ನು ನೋಡಿದವರೆಲ್ಲ ನಕ್ಕಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಕಂಡಿತ್ತು. 103ರನ್​ ಗಳಿಸಿ ರೋಹಿತ್​-ಧವನ್​ ಆಡುತ್ತಿದ್ದರು. ಈ ವೇಳೆ ರೋಹಿತ್ (37) ಬೋಲ್ಡ್​ ಆದರೆ, ನಂತರ ಧವನ್ (67)​, ನಾಯಕ ವಿರಾಟ್​ ಕೊಹ್ಲಿ (7) ರಾಹುಲ್​ (7) ಕೂಡ ವಿಕೆಟ್​ ಒಪ್ಪಿಸಿದರು. ಟೀಂ ಇಂಡಿಯಾ ಸಂಕಷ್ಟದಲ್ಲಿರುವಾಗಲೇ ರಿಷಬ್​ ಪಂತ್​ ಹಾಗೂ ಹಾರ್ದಿಕ್​ ಪಾಂಡ್ಯ ಜಾಗರೂಕ ಜತೆಯಾಟ ಆಡಿದರು. ಅಂತಿಮವಾಗಿ ಟೀಂ ಇಂಡಿಯಾ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 329ರನ್​ ಗಳಿಸಿತು.

330ರನ್​ಗಳ ಬೃಹತ್ ಗುರಿ ಬೆನ್ನು ಹತ್ತಿದ ಆಂಗ್ಲ ಪಡೆಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಮೊದಲ ಓವರ್​ನಲ್ಲೇ ದಾಳಿಗೆ ಇಳಿದಿದ್ದ ಜೇಸನ್​ ರಾಯ್​ 14 ರನ್​ಗೆ ಔಟ್​ ಆದರು. ನಂತರ ಜಾನಿ ಬೇರ್​ಸ್ಟೋ (1) ಕೂಡ ಪೆವಿಲಿಯನ್​ ಸೇರುವ ಮೂಲಕ ಟೀಂ ಇಂಡಿಯಾವನ್ನು ನಿರಾಳ ಮಾಡಿದರು. ಈ ವೇಳೆ ಹೊಡಿಬಡಿ ಆಟಕ್ಕೆ ಮುಂದಾಗಿದ್ದರು ಬೆನ್​ ಸ್ಟೋಕ್ಸ್​. ಆದರೆ, ಬೀಸುವ ಅಬ್ಬರದಲ್ಲಿ ಅವರು ಎಚ್ಚರ ತಪ್ಪಿದ್ದರು.

ಅವರು ಹೊಡೆದ ಶಾಟ್​ ನೇರವಾಗಿ ಹಾರ್ದಿಕ್​ ಪಾಂಡ್ಯ ಕೈ ಸೇರಿತ್ತು. ಆದರೆ, ಅವರು ಸುಲಭ ಕ್ಯಾಚನ್ನು ಕೈಚೆಲ್ಲಿದರು. ಅವರು ಕ್ಯಾಚ್​ ಬಿಡುತ್ತಿದ್ದಂತೆ ಸ್ಟೋಕ್ಸ್​ ನಿರಾಳರಾದರು. ರೋಹಿತ್​ ತಲೆಮೇಲೆ ಕೈ ಹೊತ್ತು ಕುಳಿತರೆ, ವಿರಾಟ್​ ಕೊಹ್ಲಿ ಸಿಟ್ಟಾದರು. ಮಾಡಿದ ತಪ್ಪಿಗೆ ಹಾರ್ದಿಕ್​ ದೊಡ್ಡದಾಗಿ ಕೈ ಮುಗಿದು ಕ್ಷಮೆ ಕೇಳಿದರು.

ಕೆಲ ಓವರ್​ಗಳ ನಂತರ ಬೆನ್​ ಸ್ಟೋಕ್ಸ್​ ಹೊಡೆದ ಶಾಟ್​ ನೇರವಾಗಿ ಧವನ್​ ಕೈ ಸೇರಿತ್ತು. ಇದನ್ನು ಧವನ್​ ಅದ್ಭುತವಾಗಿ ಹಿಡಿದು ತೊಡೆ ತಟ್ಟಿದರು. ಕೊಹ್ಲಿ ಕೂಡ ನಕ್ಕರು. ಈ ವೇಳೆ ಎಲ್ಲರಿಗಿಂತ ಹೆಚ್ಚು ಖುಷಿ ಆಗಿದ್ದು ಹಾರ್ದಿಕ್​. ಅವರು ತಾವಿದ್ದಲ್ಲಿಂದಲೇ ದೀರ್ಘ ದಂಡ ನಮಸ್ಕಾರ ಹಾಕಿ ಬಿಟ್ಟರು. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ:  India vs England: ನಾನೆಂದಿಗೂ ಶತಕಗಳಿಗೋಸ್ಕರ ಆಡಿದವನಲ್ಲ! ನಿವೃತ್ತಿಯ ಬಳಿಕ ಅಂಕಿ- ಅಂಶ ಗಣನೆಗೆ ಬರುವುದಿಲ್ಲ: ಕಿಂಗ್ ಕೊಹ್ಲಿ

Published On - 7:27 pm, Sun, 28 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us