ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಮೂರನೆ ಹಾಗೂ ಕೊನೆಯ ಟಿ20ಐ ಪಂದ್ಯವನ್ನು ಭಾರತ 12 ರನ್ಗಳಿಂದ ಸೋತಿದೆ. ಈ ಪಂದ್ಯವನ್ನುಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ವಿರಾಟ್ ಕೊಹ್ಲಿಯ ಉದ್ದೇಶ ಈಡೇರಲಿಲ್ಲ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ ನಿಗದಿತ 20 ಓವರ್ಗಳಲ್ಲಿ 186/5 ಮೊತ್ತ ಪೇರಿಸಿತು. ಅತಿಥೇಯರ ಪರ ಆರಂಭ ಆಟಗಾರ ಮ್ಯಾಥ್ಯೂ ವೇಡ್ ಅತ್ಯಧಿಕ 80 ರನ್ ಗಳಿಸಿದರು. ಮಧ್ಯಮ ಕ್ರಮಾಂಕದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ 54 ರನ್ ಗಳಿದರು.
ಭಾರತದ ಅತ್ಯಂತ ಯಶಸ್ವೀ ಬೌಲರ್ ಎನಿಸಿದ ವಾಷಿಂಗ್ಟನ್ ಸುಂದರ್ 34 ರನ್ ನೀಡಿ 2 ವಿಕೆಟ್ ಪಡೆದರು, ನಟರಾಜನ್ ಮತ್ತು ಶಾರ್ದುಲ್ ಠಾಕುರ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕುವಲ್ಲಿ ಮಾತ್ರ ಯಶ ಕಂಡಿತು, ಭಾರತದ ಪರ ಕೊಹ್ಲಿ ಅತ್ಯಂತ ಜವಾಬ್ದಾರಿಯುತ ಆಟವಾಡಿ 61 ಎಸೆತಗಳಲ್ಲಿ 85 ರನ್ ಬಾರಿಸಿದರಾದರೂ ಟೀಮನ್ನು ಗೆಲುವಿನ ಗೆರೆ ದಾಟಿಸಲು ವಿಫಲರಾದರು. ಆರಂಭ ಆಟಗಾರ ಶಿಖರ್ ಧವನ್ 28 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 20 ರನ್ ಬಾರಿಸಿದರು.
ಆಸ್ಟ್ರೇಲಿಯ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಮಿಚೆಲ್ ಸ್ವೆಪ್ಸನ್ ತಮ್ಮ 4 ಓವರ್ಗಳಲ್ಲಿ ಕೇವಲ 23 ರನ್ ನೀಡಿ 3 ವಿಕೆಟ್ ಪಡೆದರು.
ಎರಡು ರಾಷ್ಟ್ರಗಳ ನಡುವೆ ಸೀಮಿತ ಪಂದ್ಯಗಳ ಸರಣಿಗಳು ಕೊನೆಗೊಂಡಿವೆ. ಟೆಸ್ಟ್ ಸರಣಿ ಡಿಸೆಂಬರ್ 17ನೇ ತಾರೀಖಿನಿಂದ ಶುರುವಾಗಲಿದೆ.
ಮೂರನೇ ಪಂದ್ಯವನ್ನು ಭಾರತ 12 ರನ್ಗಳಿಂದ ಸೋತಿದೆ, ಗೆಲ್ಲಲು 187 ರನ್ ಗಳೀಸಬೇಕಿದ್ದ ಭಾರತಕ್ಕೆ ಕೇವಲ 174/7 ಗಳಿಸುವುದು ಮಾತ್ರ ಸಾಧ್ಯವಾಯಿತು
ಕೊನೆ ಓವರ್ನಲ್ಲಿ ಸುಂದರ್ ಔಟಾಗಿದ್ದಾರೆ, ಸೀನ್ ಅಬ್ಬಾಟ್ ದಾಳಿಯಲ್ಲಿ ಅವರು ಟೈಗೆ ಕ್ಯಾಚ್ ನೀಡಿದ್ದಾರೆ
19 ಓವರ್ಗಳ ಅಂತ್ಯಕ್ಕೆ ಭಾರತದ ಸ್ಕೋರ್ 160/6, ಗೆಲುವಿಗೆ 6 ಎಸೆತಗಳಲ್ಲಿ 27 ರನ್ ಬೇಕು, ಶಾರ್ದುಲ್ 7, ಸುಂದರ್ 3
ನಾಯಕ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 85 ರನ್ ಗಳಿಸಿ ಔಟಾಗಿದ್ದಾರೆ, ಭಾರತದ ಗೆಲುವಿನ ಆಸೆ ಕ್ಷೀಣಿಸಿದೆ
18 ಓವರ್ಗಳ ಅಂತ್ಯಕ್ಕೆ ಭಾರತದ ಸ್ಕೋರ್ 151/5, ಗೆಲುವಿಗೆ ಇನ್ನೂ 36ರನ್ ಬೇಕಿದೆ, 12 ಎಸೆತಗಳು ಮಾತ್ರ ಉಳಿದಿವೆ
17ನೇ ಓವರ್ನಲ್ಲಿ ಭಾರತ 13 ರನ್ ಗಳಿಸಿದೆ, ಈಗ ಗೆಲುವಿಗೆ 18 ಎಸೆತಗಳಲ್ಲಿ 43 ರನ್ ಬೇಕು, ಕೊಹ್ಲಿ 79, ಪಾಂಡ್ಯ 20
ಭಾರತದ ಬ್ಯಾಟ್ಸ್ಮನ್ಗಳು 16ನೇ ಓವರ್ನಲ್ಲಿ 3 ಸಿಕ್ಸರ್ ಸೇರಿದಂತೆ 20 ರನ್ ಚಚ್ಚಿದ್ದಾರೆ, ಭಾರತದ ಸ್ಕೋರ್ 131/4
15ನೇ ಓವರ್ ಬೌಲ್ ಮಾಡಿದ ಆ್ಯಂಡ್ರ್ಯೂ ಟೈ ಕೇವಲ 2 ರನ್ ನೀಡಿದರು ಬಾರತದ ಸ್ಕೋರ್ 111/4, ಕೊಹ್ಲಿ 65, ಪಾಂಡ್ಯ 2
14 ಓವರ್ಗಳ ಆಟದಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 109 ರನ್ ಗಳಿಸಿದೆ, ಕೊಹ್ಲಿ 64, ಹಾರ್ದಿಕ್ ಪಾಂಡ್ಯ 1
ಸ್ವೆಪ್ಸನ್ ಭಾರತಕ್ಕೆ ಇನ್ನೊಂದು ಆಘಾತ ನೀಡಿದ್ದಾರೆ, ಅಯ್ಯರ್ ಖಾತೆ ಆರಂಭಿಸದೆ ಪೆವಿಲಿಯನ್ಗೆ ಮರಳಿದ್ದಾರೆ, ಭಾರತದ ಸ್ಕೋರ್ 100/4
ಆಸ್ಸೀ ಸ್ಪಿನ್ನರ್ ಸ್ವೆಪ್ಸನ್, ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದ್ದಾರೆ, ಸಂಜು 9 ಎಸೆತಗಳಲ್ಲಿ 10ರನ್ ಗಳಿಸಿದರು, ಭಾರತದ ಸ್ಕೋರ್ 99/3
ಸಂಜು ಜಾಗದಲ್ಲಿ ಶ್ರೇಯಸ್ ಅಯ್ಯರ್ ಆಡಲು ಬಂದಿದ್ದಾರೆ
ಟೀಮ್ ಇಂಡಿಯ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ಪೂರೈಸಿದ್ದಾರೆ, ಅವರ 50 ರನ್ಗಳು 41 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ ಬಂದಿವೆ, 12 ಓವರ್ಗಳ ನಂತರ ಭಾರತದ ಸ್ಕೋರ್ 94/2
11 ನೇ ಓವರ್ ಅಂತ್ಯಕ್ಕೆ ಭಾರತದ ಸ್ಕೋರ್ 87/2, ಕೊಹ್ಲಿ 47, ಸಂಜು 6
10ನೇ ಓವರ್ ಅಂತ್ಯಕ್ಕೆ ಭಾರತದ ಸ್ಕೋರ್ 82/2, ಕೊಹ್ಲಿ 44, ಸಂಜು 4
9ನೇ ಓವರ್ನಲ್ಲಿ ಭಾರತ ಧವನ್ ಅವರ ವಿಕೆಟ್ ಕಳೆದುಕೊಂಡಿದೆ, ಧವನ್ 21 ಎಸೆತಗಳಲ್ಲಿ 28 ರನ್ (3X4) ಔಟಾದರು, ಭಾರತದ ಸ್ಕೋರ್ 75/2, ಸಂಜು ಸ್ಯಾಮ್ಸನ್ ಕ್ರೀಸಿಗೆ ಆಗಮಿಸಿದ್ದಾರೆ
8ನೇ ಓವರ್ ಕೊನೆಗೊಂಡಾಗ ಭಾರತ 69/1, ಕೊಹ್ಲಿ 36, ಧವನ್ 27,
7 ಓವರ್ಗಳ ಆಟ ಕೊನೆಗೊಂಡಾಗ ಭಾರತ 1 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿತ್ತು, ಕೊಹ್ಲಿ 34, ಧವನ್ 21
6 ಓವರ್ಗಳ ಆಟದಲ್ಲಿ ಭಾರತದ ಸ್ಕೋರ್ 55/1, ಕೊಹ್ಲಿ 31, ಧವನ್ 18, ಪವರ್ ಪ್ಲೇ ಮುಗಿದಿದೆ
5 ಓವರ್ಗಳ ಆಟದ ನಂತರ ಭಾರತ 1 ವಿಕೆಟ್ ಕಳೆದುಕೊಂಡು 40 ರನ್ ಗಳಿಸಿದೆ; ಕೊಹ್ಲಿ 25, ಧವನ್ 9
4 ಓವರ್ಗಳ ಆಟದಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿದೆ, ಕೊಹ್ಲಿ 19 ಧವನ್ 9
3 ಓವರ್ಗಳ ಆಟದಲ್ಲಿ ಭಾರತದ ಸ್ಕೋರ್ 23/1; ಕೊಹ್ಲಿ 12, ಧವನ್ 7
2 ಓವರ್ಗಳ ಆಟದಲ್ಲಿ ಭಾರತದ ಸ್ಕೋರ್ 15/1, (ಕೊಹ್ಲಿ 8, ಧವನ್ 5)
ಉತ್ತಮ ಸ್ಪರ್ಶದಲ್ಲಿದ್ದ ಭಾರತದ ಆರಂಭ ಆಟಗಾರ ಕೆ ಎಲ್ ರಾಹುಲ್ ಮೊದಲ ಓವರ್ನಲ್ಲೇ ಮ್ಯಾಕ್ಸ್ವೆಲ್ಗೆ ವಿಕೆಟ್ ಒಪ್ಪಿಸಿದ್ದಾರೆ, ಭಾರತದ ಸ್ಕೋರ್ 4/1, ವಿರಾಟ್ ಕೊಹ್ಲಿ ಆಡಲು ಬಂದಿದ್ದಾರೆ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ ನಿಗದಿತ 20 ಓವರ್ಗಳಲ್ಲಿ 186/5 ಮೊತ್ತ ಪೇರಿಸಿದೆ, ಕೊನೆಯ ಓವರ್ನಲ್ಲಿ ನಟರಾಜನ್ 11 ರನ್ ನೀಡಿದರು
ಭಾರತದ ಪರ 34 ರನ್ ನೀಡಿ 2 ವಿಕೆಟ್ ಪಡೆದ ಸುಂದರ್ ಅತ್ಯಂತ ಯಶಸ್ವೀ ಬೌಲರ್ ಎನಿಸಿದರು, ಶಾರ್ದುಲ್ ಮತ್ತು ನಟರಾಜನ್ ತಲಾ ಒಂದು ವಿಕೆಟ್ ಪಡೆದರು.
ಅತಿಥೇಯರ ಪರ ಮ್ಯಾಥ್ಯೂ ವೇಡ್ 80 ರನ್ ಗಳಿಸಿದರೆ, ಗ್ಲೆನ್ ಮ್ಯಾಕ್ಸ್ವೆಲ್ 54, ಮತ್ತು ಸ್ಟೀವ್ ಸ್ಮಿತ್ 24 ರನ್ ಗಳಿಸಿದರು.
20ನೇ ಓವರ್ನಲ್ಲಿ ಡಾರ್ಸಿ ಶಾರ್ಟ್ ರನೌಟ್ ಆಗಿದ್ದಾರೆ
ಕೊನಯ ಓವರ್ನಲ್ಲಿ ನಟರಾಜನ್ 54 ರನ್ ಗಳಿಸಿದ್ದ ಮ್ಯಾಕ್ಸ್ವೆಲ್ ಅವರನ್ನು ಔಟ್ ಮಾಡಿದ್ದಾರೆ
19ನೇ ಓವರ್ನಲ್ಲಿ ಶಾರ್ದುಲ್ ಠಾಕುರ್ ವೇಡ್ ಅವರನ್ನು ಎಲ್ ಬಿ ಬಲೆಗೆ ಕೆಡವಿದ್ದಾರೆ, ವೇಡ್ 53 ಎಸೆತಗಳಲ್ಲಿ 80 ರನ್ ಗಳಿಸಿ (7×4 2×6) ಔಟಾದರು, ಅಸ್ಟ್ರೇಲಿಯ ಸ್ಕೋರ್ 175/3
19ನೇ ಓವರ್ನಲ್ಲಿ ಶಾರ್ದುಲ್ ಕೇವಲ 7 ರನ್ ನೀಡಿದರು
ಅಪಾಯಕಾರಿ ಬ್ಯಾಟ್ಸ್ಮನ್ ಮ್ಯಾಕ್ಸ್ವೆಲ್ ಅರ್ಧ ಶತಕ ವನ್ನು ಕೇವಲ 32 ಎಸೆತಗಳಲ್ಲಿ ಪೂರೈಸಿದ್ದಾರೆ, 18 ಓವರ್ಗಳಲ್ಲಿ ಅಸ್ಟ್ರೆಲಿಯಾದ ಸ್ಕೋರ್ 168/2
17 ಓವರ್ಗಳ ಆಟದಲ್ಲಿ ಆಸ್ಟ್ರೇಲಿಯ 2 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ, ವೇಡ್ 76, ಮ್ಯಾಕ್ಸ್ವೆಲ್ 46
ಬೌಲಿಂಗ್ ದಾಳಿಗೆ ವಾಪಸ್ಸು ಬಂದಿರುವ ದೀಪಕ್ ಚಹರ್ 16ನೇ ಓವರ್ನಲ್ಲಿ ಕೇವಲ 6 ರನ್ ನೀಡಿದರು, ಆಸ್ಟ್ರೇಲಿಯ ಸ್ಕೋರ್ 145/2
ಕೊನೆಯ 5 ಓವರ್ಗಳ ಆಟ ಬಾಕಿಯುಳಿದಿದೆ, 15ನೇ ಓವರ್ ಅಂತ್ಯಕ್ಕೆ ಅತಿಥೇಯರ ಸ್ಕೋರ್ 139/2 (ವೇಡ್ 70, ಮ್ಯಾಕ್ಸ್ವೆಲ್ 35)
ವೇಡ್ ಮತ್ತು ಮ್ಯಾಕ್ಸ್ವೆಲ್ ಮುರಿಯದ ಮೂರನೇ ವಿಕೆಟ್ಗೆ 34 ಎಸೆತಗಳಲ್ಲಿ 51 ರನ್ ಸೇರಿಸಿದ್ದಾರೆ
14 ಓವರ್ಗಳ ಆಟ ಕೊನೆಗೊಂಡಾಗ ಆಸ್ಟ್ರೇಲಿಯ 124/2 (ವೇಡ್ 68, ಮ್ಯಾಕ್ಸ್ವೆಲ್ 22)
13ನೇ ಓವರ್ ಆಟ ಮುಗಿದಾಗ ಆಸ್ಟ್ರೇಲಿಯಾದ ಸ್ಕೋರ್ 112/2 (ವೇಡ್ 60 , ಮ್ಯಾಕ್ಸ್ವೆಲ್ 19)
12ನೇ ಓವರ್ ಆಟ ಮುಗಿದಾಗ ಆಸ್ಟ್ರೇಲಿಯ 101/2 (ವೇಡ್ 58, ಮ್ಯಾಕ್ಸ್ವೆಲ್ 11)
ಆಸ್ಟ್ರೇಲಿಯ ಆರಂಭ ಆಟಗಾರ ಮ್ಯಾಥ್ಯೂ ವೇಡ್ 35 ಎಸೆತಗಳಲ್ಲಿ 50 ರನ್ ಬಾರಿಸಿದ್ದಾರೆ, ಅದರಲ್ಲಿ 7 ಬೌಂಡರಿಗಳಿವೆ, 11 ಓವರ್ಗಳ ನಂತರ ಆಸ್ಟ್ರೇಲಿಯ 87/2
ಸುಂದರ್ ತಮ್ಮ ಕೋಟಾವನ್ನು ಪೂರ್ತಿಗೊಳಿಸಿರುವುದರಿಂದ (4-035-2) ಅವರ ಸ್ಥಾನದಲ್ಲಿ ಶಾರ್ದುಲ್ ಠಾಕುರ್ ಬೌಲ್ ಮಾಡಲು ಬಂದಿದ್ದಾರೆ
ಸ್ಮಿತ್ ಸ್ಥಾನದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಆಡಲು ಬಂದಿದ್ದಾರೆ, 10 ಓವರ್ಗಳ ನಂತರ ಆಸ್ಟ್ರೇಲಿಯ 84/2
Bowled! Washington Sundar strikes again!
Smith departs for 24.
Live – https://t.co/5obpq8o9yM #AUSvIND pic.twitter.com/hAAIO7sjUm
— BCCI (@BCCI) December 8, 2020
ವಾಷಿಂಗ್ಟನ್ ಸುಂದರ್ ತಮ್ಮ ಕೊನೆ ಓವರ್ನಲ್ಲಿ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡಿದ್ದಾರೆ, 23 ಎಸೆತಗಳಲ್ಲಿ 24 ರನ್ ಬಾರಿಸಿದ ಸ್ಮಿತ್ ಕ್ಲೀನ್ ಬೋಲ್ಡ್ ಆದರು, ಸ್ಕೋರ್ 82/2
9 ಓವರ್ಗಳ ಆಟದಲ್ಲಿ ಆಸ್ಟ್ರೇಲಿಯ 1 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ (ವೇಡ್ 48 ಸ್ಮಿತ್ 18)
8 ಓವರ್ಗಳ ಆಟ ಕೊನೆಗೊಂಡಾಗ ಆಸ್ಟ್ರೇಲಿಯ 68/1 (ವೇಡ್ 43, ಸ್ಮಿತ್ 15)
ಪವರ್ ಪ್ಲೇ ಮುಗಿದ ನಂತರ ವಿರಾಟ್ ಕೊಹ್ಲಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಬೌಲಿಂಗ್ ಆಕ್ರಮಣಕ್ಕೆ ಕರೆದಿದ್ದಾರೆ, 7 ಒವರ್ ಆಟದ ನಂತರ ಆಸ್ಟ್ರೇಲಿಯ 59/1
ಚಹಲ್ ಮೊದಲ ಓವರ್ನಲ್ಲಿ 8 ರನ್ ನೀಡಿದರು
6 ಓವರ್ಗಳ ಪವರ್ ಪ್ಲೇ ಮುಗಿದಿದೆ, ಆಸ್ಟ್ರೇಲಿಯ 51/1 (ವೇಡ್ 34, ಸ್ಮಿತ್ 10), ನಟರಾಜನ್ ತಮ್ಮ ಮೊದಲ ಓವರ್ನಲ್ಲಿ 6 ರನ್ ನೀಡಿದರು
ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ಅವರನ್ನು ಬೌಲಿಂಗ್ ಮಾಡಲು ಕರೆಯಲಾಗಿದೆ
5 ಓವರ್ಗಳ ಆಟದಲ್ಲಿ ಆಸ್ಟ್ರೇಲಿಯ 1 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ, (ವೇಡ್ 32, ಸ್ಮಿತ್ 6)
ವೇಡ್ ಎರಡನೇ ಪಂದ್ಯದಲ್ಲಿ ಆಡಿದಂತೆಯೇ ಆಕ್ರಮಣಕಾರಿ ಹೊಡೆತಗಳನ್ನು ಬಾರಿಸುತ್ತಿದ್ದಾರೆ, ಈಗಾಗಲೇ 20 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ
ನಾಲ್ಕು ಓವರ್ಗಳ ನಂತರ ಆಸ್ಟ್ರೇಲಿಯಾದ ಸ್ಕೋರ್ 28/1 (ವೇಡ್ 20, ಸ್ಮಿತ್ 2)
ಫಿಂಚ್ ಅವರ ಸ್ಥಾನದಲ್ಲಿ ಸ್ಟೀವ್ ಸ್ಮಿತ್ ಆಡಲು ಬಂದಿದ್ದಾರೆ, ಮೂರು ಓವರ್ಗಳ ಆಟದಲ್ಲಿ ಆಸ್ಟ್ರೇಲಿಯ 16/1 (ವೇಡ್ 15, ಸ್ಮಿತ್ 1)
ಸುಂದರ್ ತಮ್ಮ ಮೊದಲ ಓವರ್ನಲ್ಲೇ ಫಿಂಚ್ ಅವರನ್ನು ಔಟ್ ಮಾಡಿದ್ದಾರೆ. ಆಸ್ಸೀ ನಾಯಕ ತಮ್ಮ ಖಾತೆ ತೆರೆಯದೆ ಹಾರ್ದಿಕ್ ಪಾಂಡ್ಯಗೆ ಕ್ತಾಚಿತ್ತು ಔಟಾಗಿದ್ದಾರೆ. ಸ್ಕೋರ್ 14/1
ಮೊದಲ ಓವರ್ನಲ್ಲಿ ಅತಿಥೇಯರು ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದ್ದಾರೆ, ಸುಂದರ್ ಎರಡನೆ ಓವರ್ ಎಸೆಯುತ್ತಿದ್ದಾರೆ
ವೇಗದ ಬೌಲರ್ ದೀಪಕ್ ಚಹರ್ ಭಾರತದ ಪರ ಬೌಲಿಂಗ್ ದಾಳಿಯನ್ನು ಆರಂಭಿಸಿದ್ದಾರೆ, ಆರನ್ ಫಿಂಚ್ ಮತ್ತು ಮ್ಯಾಥ್ಯು ವೇಡ್ ಅತಿಥೇಯರ ಪರ ಇನ್ನಿಂಗ್ಸ್ ಶುರು ಮಾಡಿದ್ದಾರೆ
ಆಸ್ಟ್ರೇಲಿಯ ಟೀಮಿಗೆ ನಾಯಕ ಆರನ್ ಫಿಂಚ್ ವಾಪಸ್ಸಾಗಿದ್ದಾರೆ.
ಟೀಮ್ ಇಂತಿದೆ: ಫಿಂಚ್, ಮ್ಯಾಥ್ಯು ವೇಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಡಾರ್ಸಿ ಶಾರ್ಟ್, ಮೊಸೆಸ್ ಹೆನ್ರಿಕೆ, ಡೇನಿಯಲ್ ಸ್ಯಾಮ್ಸ್, ಸೀನ್ ಅಬ್ಬಾಟ್, ಮಿಚೆಲ್ ಸ್ವೆಪ್ಸನ್, ಅಂಡ್ರ್ಯೂ ಟೈ ಮತ್ತು ಆಡಂ ಜಂಪಾ
ಟಾಸ್ ಗೆದ್ದ ಭಾರತ: ಫೀಲ್ಡಿಂಗ್ ಆಯ್ಕೆ
Published On - 5:23 pm, Tue, 8 December 20