ಭಾರತದ ಫೀಲ್ಡಿಂಗ್ ಕಳವಳ ಹುಟ್ಟಿಸುತ್ತಿದೆ, ಇವತ್ತಿನ ಸೋಲಿಗೆ ಅದೇ ಕಾರಣ

ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಮೂರನೆ ಟಿ20ಐ ಪಂದ್ಯ ಮುಗಿದಾಕ್ಷಣ ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಭಾರತೀಯ ಟೀಮಿನ ಫೀಲ್ಡಿಂಗ್ ಕಳಪೆಯಾಗಿತ್ತೆಂದು ಕಾಮೆಂಟ್ ಮಾಡಿದ್ದಾರೆ. ಇದೊಂದೇ ಪಂದ್ಯವಲ್ಲ, ಸೀಮಿತ ಓವರ್​ಗಳ ಎರಡು ಸರಣಿಗಳಲ್ಲೂ ಟೀಮ್ ಇಂಡಿಯ ಆಟಗಾರರು ಕೆಟ್ಟದ್ದಾಗಿ ಫೀಲ್ಡ್ ಮಾಡಿದರು.

ಭಾರತದ ಫೀಲ್ಡಿಂಗ್ ಕಳವಳ ಹುಟ್ಟಿಸುತ್ತಿದೆ, ಇವತ್ತಿನ ಸೋಲಿಗೆ ಅದೇ ಕಾರಣ
ಟೀಂ ಇಂಡಿಯಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 08, 2020 | 8:40 PM

ಮ್ಯಾಥ್ಯೂ ವೇಡ್

ಕೊನೆಯ ಟಿ20ಐ ಪಂದ್ಯದಲ್ಲಿ 12 ರನ್​ಗಳ ಸಮಾಧಾನಕರ ಗೆಲುವು ಕಂಡಿರುವ ಆಸ್ಟ್ರೇಲಿಯ ಈ ಜಯವನ್ನು 10 ದಿನಗಳ ನಂತರ ಶುರುವಾಗಲಿರುವ ಟೆಸ್ಟ್ ಪಂದ್ಯಗಳ ಸರಣಿಗೆ ಬೂಸ್ಟ್ ಆಗಿ ಪರಿಗಣಿಸಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗೆಲುವುಗಳು ಒದಗಿಸುವ ಮೋಜೇ ಬೇರೆ. ಆದರೆ ಭಾರತಕ್ಕೆ ಸರಣಿ ಗೆದ್ದಿರುವ ಅಂಶ ಟೆಸ್ಟ್ ಸರಣಿಗೆ ಮುಂಚೆ ಬೇಕಿದ್ದ ಹುಮ್ಮಸ್ಸನ್ನು ನೀಡಿದೆ.

ಓಕೆ, ಇವತ್ತಿನ ಪಂದ್ಯ ಸೋತ ಭಾರತ ಎಡವಿದ್ದೆಲ್ಲಿ ಎನ್ನುವುದನ್ನು ಚರ್ಚಿಸುವ. ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಸೂಕ್ತವಾಗಿತ್ತು. ಇನ್-ಫಾರ್ಮ್ ಆಟಗಾರ ಆರನ್ ಫಿಂಚ್ ಅವರನ್ನು ವಾಷಿಂಗ್ಟನ್ ಸುಂದರ್ ತಮ್ಮ ಮೊದಲನೆ ಓವರ್​​ನಲ್ಲಿ ಔಟ್ ಮಾಡಿ ಟೀಮಿಗೆ ಶುಭಾರಂಭ ಒದಗಿಸಿದರು. ನಂತರ ಆವರು ಸ್ಟೀವ್ ಸ್ಮಿತ್​ ಅವರನ್ನೂ ಔಟ್​ ಮಾಡಿದಾಗ ಆ ಹಂತದಲ್ಲಿ ಭಾರತ ನಿಚ್ಚಳ ಮೇಲುಗೈ ಸಾಧಿಸಿತ್ತು.

ಆದರೆ ಎರಡನೆ ಟಿ20 ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಮ್ಯಾಥ್ಯೂ ವೇಡ್ ಅದೇ ಫಾರ್ಮ್ ಮುಂದುವರಿಸಿ ಮತ್ತೊಂದು ಭರ್ಜರಿ ಅರ್ಧ ಶಕತ ಬಾರಿಸಿದರಲ್ಲದೆ, ಮೂರನೇ ವಿಕೆಟ್​ಗೆ ಗ್ಲೆನ್ ಮ್ಯಾಕ್ಸ್​ವೆಲ್ (54) ಜೊತೆ ಸುಮಾರು 9 ಓವರ್​ಗಳ ಆಟದಲ್ಲಿ ಬರೋಬ್ಬರಿ 90 ರನ್ ಸೇರಿಸಿದರು. ಈ ಜೊತೆಗಾರಿಕೆ ಬೆಳೆಯಲು ಭಾರತೀಯರು ತಮ್ಮ ಕೈಗಳಿಗೆ ಬೆಣ್ಣೆ ಮೆತ್ತಿಕೊಂಡು ಫೀಲ್ಡಿಂಗ್​ಗೆ ಬಂದಿದ್ದು ಕಾರಣವಾಯಿತು.

ಮ್ಯಾಕ್ಸ್​ವೆಲ್ ಅವರಿಗೆ 3 ಜೀವದಾನಗಳನ್ನು ಭಾರತೀಯರು ನೀಡಿದರು. ಹಾಗೆಯೇ, ವೇಡ್ ಖಚಿತವಾಗಿ ಎಲ್ ಬಿ ಬಲೆಗೆ ಸಿಕ್ಕಾಗ ಅಂಪೈರ್ ತಿರಸ್ಕರಿಸಿದ ಮನವಿಯನ್ನು ಥರ್ಡ್ ಅಂಫೈರ್​ಗೆ ರೆಫರ್ ಮಾಡಲು ಕೊಹ್ಲಿ ಮೀನಮೇಷ ಎಣಿಸುವುದರಲ್ಲೇ ಸಮಯ ಕಳೆದುಹೋಗಿತ್ತು. ಈ ಜೀವದಾನಗಳು ಭಾರತಕ್ಕೆ ಭಾರಿ ದುಬಾರಿಯಾದವು. ವೇಡ್ ಬಿಗ್ ಹಿಟ್​ಗಳನ್ನು ಬಾರಿಸಿ ಕೇವಲ 53 ಎಸೆತಗಳಲ್ಲಿ 80 ರನ್ ಬಾರಿಸಿ 19ನೇ ಓವರ್​ನಲ್ಲಿ ಔಟಾದರು.

ಮಿಚೆಲ್ ಸ್ವೆಪ್ಸನ್

ಭಾರತದ ಪರ ಸುಂದರ್ ಮತ್ತು ಟಿ ನಟರಾಜನ್ ಉತ್ತಮವಾಗಿ ಬೌಲ್ ಮಾಡಿ ಕ್ರಮವಾಗಿ 2 ಮತ್ತು ಒಂದು ವಿಕೆಟ್ ಪಡೆದರು.

ಎರಡನೆ ಪಂದ್ಯದಲ್ಲಿ 194 ರನ್​ಗಳ ಮೊತ್ತವನ್ನು ಚೇಸ್ ಮಾಡಿ ಗೆದ್ದಿದ್ದ ಭಾರತಕ್ಕೆ 186ಗಳ ಮೊತ್ತ ದೊಡ್ಡದೆನಿಸಿರಲಾರದು. ಮ್ಯಾಕ್ಸ್​ವೆಲ್ ಮೊದಲ ಓವರ್​ನಲ್ಲೇ ಉತ್ತಮ ಸ್ಪರ್ಶದಲ್ಲಿದ್ದ ಕೆ ಎಲ್ ರಾಹುಲ್ ಅವರನ್ನು ಔಟ್ ಮಾಡಿ ಪ್ರವಾಸಿಗರಿಗೆ ದೊಡ್ಡ ಪೆಟ್ಟು ನೀಡಿದರು. ಆಗ ಆಡಲು ಬಂದ ಕೊಹ್ಲಿಯ ಮುಖದಲ್ಲಿ ಪಂದ್ಯ ಗೆಲ್ಲುವ ವಿಶ್ವಾಸ ಮತ್ತು ಛಲವಂತಿಕೆ ಕಾಣಿಸುತಿತ್ತು. ಆದರೆ, ಅವರು 61 ಎಸೆತಗಳಲ್ಲಿ 85 ರನ್ ಬಾರಿಸಲು ಅತಿಥೇಯರ ಔದಾರ್ಯ ಕಾರಣವಾಯಿತು. ಭಾರತದ ನಾಯಕನಿಗೂ ಮೂರು ಜೀವದಾನಗಳು ದೊರೆತವು.

ವಿರಾಟ್ ಕೊಹ್ಲಿ

ಎರಡನೇ ವಿಕೆಟ್​ಗೆ ಕೊಹ್ಲಿ ಮತ್ತು ಶಿಖರ್ ಧವನ್ 73 ರನ್ ಸೇರಿಸಿದ್ದು ಬಿಟ್ಟರೆ ಟೀಮಿನ ಗೆಲುವಿಗೆ ನೆರವಾಗಬಹುದಾದ ಜೊತೆಗಾರಿಕೆಗಳು ದೊರೆಯಲಿಲ್ಲ. ಹಾರ್ದಿಕ್ ಪಾಂಡ್ಯ ಅವರ ಮೇಲೆ ಭಾರತೀಯರು ನಿರೀಕ್ಷೆ ಇಟ್ಟುಕೊಂಡಿದ್ದರಾದರೂ ಕ್ರಿಕೆಟ್ ಆಟದ ವೈಶಿಷ್ಟ್ಯವೇ ಬೇರೆ. ಇಲ್ಲಿ ಆಟಗಾರರು ಪ್ರತಿ ಪಂದ್ಯದಲ್ಲಿ ಹಿರೋಗಳಾಗುವುದು ಸಾಧ್ಯವಿಲ್ಲ. ಇಟ್ಸ್ ಎ ಗ್ರೇಟ್ ಲೆವೆಲ್ಲರ್!  ಎರಡು ಸಿಕ್ಸ್ ಮತ್ತೊಂದು ಬೌಂಡರಿ ಬಾರಿಸಿದ ಪಾಂಡ್ಯ ಗೆಲ್ಲಿಸುವ ಪ್ರಯತ್ನ ಮಾಡಿದರು, ಆದರೆ ಇವತ್ತು ಅವರ ದಿನವಾಗಿರಲಿಲ್ಲ.

ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಆಸ್ಸೀ ಸ್ಪಿನ್ನರ್​ಗಳು- ಮಿಚಲ್ ಸ್ವೆಪ್ಸನ್ ಮತ್ತು ಆಡಂ ಜಂಪಾ ಭಾರತೀಯ ಸ್ಪಿನ್ನರ್​ಗಳಿಗಿಂತ ಉತ್ತಮವಾಗಿ ಬೌಲ್ ಮಾಡಿ ತಮ್ಮ 8 ಓವರ್​ಗಳಿಗೆ ಕೇವಲ 44 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಪುನಃ ರನ್ ಗಳಿಸಲು ವಿಫಲರಾದರು. ಸಂಜು ತಮಗೆ ದೊರಕುವ ಅವಕಾಶಗಳನ್ನೆಲ್ಲ ಹಾಳುಮಾಡಿಕೊಳ್ಳುತ್ತಿರುವುದು ಆಶ್ಚರ್ಯ ಮೂಡಿಸುತ್ತದೆ. ಕೆಲ ಸಮಯದವರೆಗಾದರೂ ರಾಷ್ಟ್ರೀಯ ಟೀಮಿನ ಭಾಗವಾಗಬೇಕಾದರೆ ಅವರು ಇನ್ನಷ್ಟು ಗಂಭೀರವಾಗಿ ಆಟದ ಮೇಲೆ ಫೋಕಸ್ ಮಾಡಬೇಕಾಗುತ್ತದೆ. ಅನೇಕ ಪ್ರತಿಭಾವಂತ ಆಟಗಾಅರರು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಈ ಅಂಶವನ್ನು ಸಂಜು ಅಷ್ಟೇ ಅಲ್ಲ, ಬೇರೆ ಯುವ ಆಟಗಾರರು ಸಹ ಮನದಟ್ಟು ಮಾಡಿಕೊಳ್ಳಬೇಕಿದೆ.

ಸೀಮಿತ ಓವರ್​ಗಳ ಸರಣಿಗಳು ಈಗ ಇತಿಹಾಸದ ಭಾಗ. ಭಾರತದ ಆಟಗಾರರು ಇನ್ನು ಸಾಂಪ್ರದಾಯಿಕ ಕ್ರಿಕೆಟ್ ಕುರಿತು ಯೋಚಿಸಬೇಕಿದೆ. ಮುಂದಿನ ಗುರುವಾರದಿಂದ ಟೆಸ್ಟ್ ಪಂದ್ಯ ಶುರುವಾಗಲಿದ್ದು ಮೊದಲ ಟೆಸ್ಟ್ ಆಡಿದ ನಂತರ ಕೊಹ್ಲಿ ಸ್ವದೇಶಕ್ಕೆ ಮರಳಲಿದ್ದಾರೆ. ಹಾಗಾಗಿ, ಭಾರತದ ಮುಂದಿರುವ ಸವಾಲು ದೊಡ್ಡದು.

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ