ಐಪಿಎಲ್ ಟೂರ್ನಿಯನ್ನು ಗ್ಲೆನ್ ಮ್ಯಾಕ್ಸ್​ವೆಲ್ ಮೋಜಿಗಾಗಿ ಆಡುತ್ತಾರೆ: ವೀರೇಂದ್ರ ಸೆಹ್ವಾಗ್

ಭಾರತದ ವಿರುದ್ಧ ನಡೆದ ಸೀಮಿತ ಓವರ್​ಗಳ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾದ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಕೇವಲ ತಮ್ಮ ರಾಷ್ಟ್ರದ ಪರವಾಗಿ ಮಾತ್ರ ಚೆನ್ನಾಗಿ ಆಡುತ್ತಾರೆ. ಆದರೆ ಐಪಿಎಲ್ ಅನ್ನು ಗಂಭೀರವಾಗಿ ಪರಿಗಣಿಸದೆ ಕೇವಲ ಮೋಜಿಗಾಗಿ ಆಡುತ್ತಾರೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಐಪಿಎಲ್ ಟೂರ್ನಿಯನ್ನು ಗ್ಲೆನ್ ಮ್ಯಾಕ್ಸ್​ವೆಲ್ ಮೋಜಿಗಾಗಿ ಆಡುತ್ತಾರೆ: ವೀರೇಂದ್ರ ಸೆಹ್ವಾಗ್
ಗ್ಲೆನ್ ಮ್ಯಾಕ್ಸ್​ವೆಲ್
Arun Belly

|

Dec 09, 2020 | 9:04 PM

ಭಾರತದ ಮಾಜಿ ಆರಂಭ ಆಟಗಾರ ವಿರೇಂದ್ರ ಸೆಹ್ವಾಗ್ ನೇರ ಮತ್ತು ನಿಷ್ಢುರ ಮಾತಿಗೆ ಖ್ಯಾತರು. ಜೇಡವನ್ನು ಜೇಡವೆಂದೇ ಕರೆಯುವ ಸ್ವಭಾವ ಅವರದ್ದು. ಅವರ ಟ್ವೀಟ್​ಗಳು ವಿನೋದಮಯ ಕೂಡ ಆಗಿರುವುದು ಮತ್ತೊಂದು ವಿಶೇಷ. ವಿಷಯ ಯಾವುದೇ ಅಗಿರಲಿ, ಸೆಹ್ವಾಗ್ ಕೇವಲ ತಮಾಷೆಗಾಗಿ ಟ್ವೀಟ್ ಮಾಡುವುದಿಲ್ಲ, ಅದರಲ್ಲಿ ಗಂಭೀರವಾದ ಅಂಶ ಅಥವಾ ಟೀಕೆ ಅಡಗಿರುತ್ತದೆ.

ಇಂಥ ಸೆಹ್ವಾಗ್, ಇಂದು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ನೊಂದಿಗೆ ಮಾತಾಡುತ್ತಾ, ಅಸ್ಟ್ರೇಲಿಯಾದ ಆಲ್​ರೌಂಡರ್ ಮತ್ತು ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ಪರ ಆಡುವ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ತಮ್ಮ ಹಾಸ್ಯಭರಿತ ಧಾಟಿಯಲ್ಲೇ ಕಟುವಾಗಿ ಟೀಕಿಸಿದ್ದಾರೆ.

‘ಅಸ್ಟ್ರೇಲಿಯಾಗೆ ಆಡುವಾಗ ಗ್ಲೆನ್ ಧೋರಣೆಯೇ ಬದಲಾಗುತ್ತದೆ, ಅಲ್ಲಿ ಅವರು ಉತ್ತಮ ಪ್ರದರ್ಶನಗಳನ್ನು ನೀಡುತ್ತಾರೆ. ಯಾಕೆ ಗೊತ್ತಾ? ಟೀಮಿನಲ್ಲಿ ಅವರಿಗೆ ಖಾಯಂ ಸ್ಥಾನವಿಲ್ಲ. ಒಂದೆರಡು ಪಂದ್ಯಗಳಲ್ಲಿ ವಿಫಲರಾದರೆ ಅವರನ್ನು ಟೀಮಿನಿಂದ ಕೈಬಿಡಲಾಗುತ್ತದೆ ಮತ್ತು ಪುನಃ ಆಯ್ಕೆಯಾಗುವ ಬಗ್ಗೆ ಖಚಿತತೆಯಿರುವುದಿಲ್ಲ. ಅದರೆ, ಪಂಜಾಬ್ ಟೀಮಿನಲ್ಲಿ ಹಾಗಲ್ಲ, ಅವರು ವಿಫಲರಾದರೂ ಆಡುವ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸುತ್ತಾರೆ’ ಎಂದು ಸೆಹ್ವಾಗ್ ಹೇಳಿದ್ದಾರೆ.

ವಿರೇಂದ್ರ ಸೆಹ್ವಾಗ್

ಸೆಹ್ವಾಗ್ ಹೇಳಿರುವುದರಲ್ಲಿ ಉತ್ಪ್ರೇಕ್ಷೆಯ ಅಂಶವಿಲ್ಲ. ಐಪಿಎಲ್ 13ನೇ ಆವೃತ್ತಿಯಲ್ಲಿ 13 ಪಂದ್ಯಗಳನ್ನಾಡಿದ ಗ್ಲೆನ್, ಕೇವಲ 108 ರನ್ ಗಳಿಸಿದರು. ಆದರೆ, ಇತ್ತೀಚಿಗೆ ಭಾರತದ ವಿರುದ್ಧ ನಡೆದ ಮೂರು 50 ಓವರ್​ಗಳ ಪಂದ್ಯದಲ್ಲಿ ಅವರು 167 ರನ್ (45, 63* ಮತ್ತು 59 ರನ್) ಗಳಿಸಿದರು. ನಂತರ ನಡೆದ ಮೂರು ಟಿ20ಐ ಪಂದ್ಯಗಳಲ್ಲಿ 2, 22 ಮತ್ತು 54 ರನ್ ಬಾರಿಸಿದರು.

‘ನನ್ನ ವೈಯಕ್ತಿಕ ಅಭಿಪ್ರಾಯ ಕೇಳುವುದಾದರೆ ಗ್ಲೆನ್ ಕೇವಲ ಮೋಜಿಗಾಗಿ ಐಪಿಎಲ್​ನಲ್ಲಿ ಆಡುತ್ತಾರೆ. ರನ್ ಗಳಿಸುವುದೊಂದನ್ನು ಬಿಟ್ಟು ಅವರು ಎಲ್ಲವನ್ನೂ ಇಲ್ಲಿ ಮಾಡುತ್ತಾರೆ. ತಮ್ಮ ಜೊತೆ ಆಟಗಾರರನ್ನು ಹುರಿದುಂಬಿಸುತ್ತಾರೆ, ಮೈದಾನದ ತುಂಬ ಓಡಾಡುತ್ತಾರೆ, ಡ್ರೆಸ್ಸಿಂಗ್ ರೂಮಿನಲ್ಲಿ ಡ್ಯಾನ್ಸ್ ಮಾಡುತ್ತಾರೆ, ಆದರೆ ರನ್ ಮಾತ್ರ ಸ್ಕೋರ್ ಮಾಡುವುದಿಲ್ಲ. ಐಪಿಎಲ್​ ಟೂರ್ನಿಯನ್ನು ಅವರು ಯಾವತ್ತೂ ಗಂಭೀರವಾಗಿ ಪರಿಗಣಿಸಿದವರಲ್ಲ. ಇಲ್ಲಿಗೆ ಬಂದಾಗ ಅವರಿಗೆ ಕ್ರಿಕೆಟ್​ಕ್ಕಿಂತ ಗಾಲ್ಫ್ ಆಡುವುದು ಮುಖ್ಯವಾಗುತ್ತದೆ’ ಅಂತ ಹೇಳಿರುವ ಸೆಹ್ವಾಗ್, ಪಂದ್ಯ ಮುಗಿದ ನಂತರ ಮದ್ಯ ಉಚಿತವಾಗಿ ದೊರೆಯುವಂತಿದ್ದರೆ ಗ್ಲೆನ್ ಅದನ್ನೆತ್ತಿಕೊಂಡು ಡ್ರೆಸ್ಸಿಂಗ್ ರೂಮ್ ಕಡೆ ಓಡುತ್ತಾರೆ ಎಂದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada