IND vs AUS: ಆಸಿಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್ವೆಲ್, ವೇಡ್
ಆಸಿಸ್ ವಿರುದ್ಧದ ಮೂರನೇ ಮತ್ತು ಕೊನೆಯ ಟಿ20 ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿ ಭಾರತೀಯರಿದ್ದಾರೆ. ಮೊದಲು ಬ್ಯಾಟ್ ಬೀಸಿದ ಆಸ್ಟ್ರೇಲಿಯಾ ಆಟದ ಚುಟುಕು ವಿವರ ಇಲ್ಲಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಆಸಿಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಭಾರತಕ್ಕೆ ಗೆಲ್ಲಲು 187 ರನ್ಗಳ ಗುರಿ ನೀಡಿದೆ. ಮೊದಲೆರಡು ಪಂದ್ಯಗಳನ್ನು ಗೆದ್ದು ಟಿ20 ಸರಣಿ ಕೈವಶಮಾಡಿಕೊಂಡಿರುವ ಭಾರತ ಆತ್ಮವಿಶ್ವಾಸದ ಆಟ ಆಡುತ್ತಿದೆ.
ಭಾರತದ ಬೌಲರ್ಗಳ ಪ್ರದರ್ಶನ ಹೇಗಿತ್ತು ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಭಾರತದ ಬೌಲಿಂಗ್ ಹೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಿರಲಿಲ್ಲ. ಭಾರತೀಯ ಎಸೆತಗಾರರು, 20 ಓವರ್ಗಳಲ್ಲಿ 186 ರನ್ ನೀಡಿ ಕೇವಲ 5 ವಿಕೆಟ್ ಕಬಳಿಸಿದ್ದಾರೆ. ವಾಷಿಂಗ್ಟನ್ ಸುಂದರ್ 2 ವಿಕೆಟ್, ಟಿ. ನಟರಾಜನ್ ಮತ್ತು ಶಾರ್ದುಲ್ ಠಾಕುರ್ ತಲಾ 1 ವಿಕೆಟ್ ಪಡೆದಿದ್ದಾರೆ. ಡಿ ಆರ್ಕಿ ಶಾರ್ಟ್ ರನೌಟ್ ಆಗಿದ್ದಾರೆ.
WASHINGTON SUNDAR HAS HIS SECOND ?
Steve Smith had a reprieve a couple of balls ago in form of a missed stumping, but the bowler has the last laugh!#AUSvIND SCORECARD ? https://t.co/aLozLSAnsU pic.twitter.com/onJUJRwAHM
— ICC (@ICC) December 8, 2020
ಮೂವರು ದಾಂಡಿಗರು ಎರಡಂಕಿ ದಾಟಿದರು ಕಾಂಗರೂ ಪಡೆಯ ಮೂವರು ಆಟಗಾರರು ಮಾತ್ರ ಎರಡಂಕಿ ದಾಟಿದ್ದಾರೆ. ಮ್ಯಾಥ್ಯೂ ವೇಡ್ 80 (53), ಮ್ಯಾಕ್ಸ್ವೆಲ್ 54 (36) ಮತ್ತು ಸ್ಮಿತ್ 24 (23) ಉತ್ತಮ ಪ್ರದರ್ಶನ ತೋರಿ ಒಟ್ಟು ಮೊತ್ತ 186 ಆಗಲು ಕಾರಣರಾಗಿದ್ದಾರೆ. ಉಳಿದ ಆಟಗಾರರು ಒಂದಂಕಿ ರನ್ ಗಳಿಸಲಷ್ಟೇ ಸಾಧ್ಯವಾಗಿದೆ. ತಂಡ ಸೇರಿದ ನಾಯಕ ಫಿಂಚ್ ಶೂನ್ಯಕ್ಕೆ ನಿರ್ಗಮಿಸಿ ನಿರಾಶೆ ಮೂಡಿಸಿದ್ದಾರೆ.
5️⃣0️⃣ for Matthew Wade ?
He is the only Australia wicket-keeper to make a 50-plus score in men's T20Is and he has done it thrice!
All three half-centuries have come against India as an opener ?
Follow #AUSvIND ? https://t.co/aLozLSAnsU pic.twitter.com/CFrthc2TRT
— ICC (@ICC) December 8, 2020
Glenn Maxwell's good fortune continues as Deepak Chahar drops him off Shardul Thakur.
Maxwell slams the next ball for 6⃣#AUSvIND SCORECARD ? https://t.co/aLozLSAnsU pic.twitter.com/q4acPspVVm
— ICC (@ICC) December 8, 2020
ಇಷ್ಟಾದರೂ, ಆಸ್ಟ್ರೇಲಿಯಾ ಬ್ಯಾಟಿಂಗ್ ಬಲಾಢ್ಯರನ್ನು ಸಂಪೂರ್ಣವಾಗಿ ಹಿಡಿದಿಡಲು ವಿಫಲರಾದ ಭಾರತದ ಬೌಲರ್ಗಳು, ರನ್ ಗಳಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ. 186 ರನ್ ಬಿಟ್ಟುಕೊಟ್ಟು 187 ರನ್ ಟಾರ್ಗೆಟ್ ಪಡೆದುಕೊಂಡಿದ್ದಾರೆ.
Innings Break!
Half-centuries from Wade (80) and Maxwell (54) as Australia post a total of 186/5 on the board.#TeamIndia chase coming up shortly. Stay tuned!
Scorecard – https://t.co/w2btSXTjYW #AUSvIND pic.twitter.com/Oy4BLZ9iMJ
— BCCI (@BCCI) December 8, 2020
Published On - 5:17 pm, Tue, 8 December 20