AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಚುನಾವಣೆ: ಮೊದಲ ಹಂತದಲ್ಲಿ ಶೇ 71.59 ಮತದಾನ

ಕೇರಳದ ತಿರುವನಂತಪುರಂ, ಇಡುಕ್ಕಿ, ಕೊಲ್ಲಂ, ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು ಮಂಗಳವಾರ ಮತದಾರರು ಮತ ಚಲಾಯಿಸಿದ್ದಾರೆ.

ಕೇರಳ ಚುನಾವಣೆ: ಮೊದಲ ಹಂತದಲ್ಲಿ ಶೇ 71.59 ಮತದಾನ
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ
ರಶ್ಮಿ ಕಲ್ಲಕಟ್ಟ
|

Updated on:Dec 08, 2020 | 7:05 PM

Share

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಮೊದಲ ಹಂತದಲ್ಲಿ ತಿರುವನಂತಪುರಂ, ಇಡುಕ್ಕಿ, ಕೊಲ್ಲಂ, ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಮಂಗಳವಾರ ಮತದಾರರು ಮತ ಚಲಾಯಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದ್ದರು.

ಮೊದಲ ಹಂತದ ಮತದಾನದಲ್ಲಿ ಸಂಜೆ 6 ಗಂಟೆ ಹೊತ್ತಿಗೆ ಶೇಕಡಾ 71.59 ಮತದಾನವಾಗಿದೆ. ಇಡುಕ್ಕಿಯಲ್ಲಿ ಶೇಕಡಾ 73.08, ಕೊಲ್ಲಂ- ಶೇ. 72.07, ಪತ್ತನಂತಿಟ್ಟದಲ್ಲಿ ಶೇ. 69.02, ತಿರುವನಂತಪುರಂನಲ್ಲಿ 68.9 ಮತ್ತು ಆಲಪ್ಪುಳದಲ್ಲಿ ಶೇ. 76.3 ಮತದಾನ ದಾಖಲಾಗಿದೆ. ಜನರು ಕೋವಿಡ್ ಭಯಬಿಟ್ಟು ಮತದಾನಕ್ಕೆ ಬಂದಿರುವುದು ಇಲ್ಲಿ ಕಾಣುತ್ತದೆ.

ಕೇರಳದ ವಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ, ದೇವಸ್ವಂ ಮತ್ತು ಪ್ರವಾಸೋದ್ಯಮ ಸಚಿವ ಕಡಂಕಂಪಳ್ಳಿ ಸುರೇಂದ್ರನ್, ಮೀನುಗಾರಿಕಾ ಇಲಾಖೆ ಸಚಿವೆ ಮೆರ್ಸಿಕುಟ್ಟಿ ಅಮ್ಮ, ಸಂಸದ ಆ್ಯಂಟೊ ಆ್ಯಂಟನಿ, ಎಎಂ ಆರಿಫ್, ಕೇರಳ ಕಾಂಗ್ರೆಸ್ (ಜೆ) ಮುಖ್ಯಸ್ಥ ಪಿಜೆ ಜೋಸೆಫ್ ಮೊದಲಾದವರು ಬೆಳಗ್ಗೆ ಮತಚಲಾಯಿಸಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯ ಮತಗಟ್ಟೆಯೊಂದರ ಆವರಣದಲ್ಲಿ ಪ್ರಜ್ಞೆತಪ್ಪಿ ಬಿದ್ದು 90ರಹರೆಯದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ತಿರುವನಂತಪುರಂನ ಬಾಲರಾಮಪುರಂ ಗ್ರಾಮ ಪಂಚಾಯತಿನ ಸ್ವತಂತ್ರ ಅಭ್ಯರ್ಥಿ ಎಸ್. ಫ್ರಾನ್ಸಿಸ್ ಕೋವಿಡ್ ರೋಗದಿಂದ ನಿಧನರಾಗಿದ್ದಾರೆ.

ಈ ಐದು ಜಿಲ್ಲೆಗಳಲ್ಲಿ 395 ಪಂಚಾಯತ್ ಗಳ 6,910 ವಾರ್ಡ್​ಗಳಿಗೆ ಚುನಾವಣೆ ನಡೆಯುತ್ತಿದೆ. 88.26 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೊದಲನೇ ಹಂತದ ಚುನಾವಣೆಯಲ್ಲಿ 11,225 ಮತಗಟ್ಟೆಗಳಿವೆ.

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ: 5 ಜಿಲ್ಲೆಗಳಲ್ಲಿ ಇಂದು ಮತದಾನ

Published On - 5:12 pm, Tue, 8 December 20