India vs England: ವೈಯಕ್ತಿಕ ಉದಾರಣೆಯೊಂದಿಗೆ ಟೀಮಿನ ಆತ್ಮವಿಶ್ವಾಸ ಹೆಚ್ಚಿಸಿರುವ ಕೊಹ್ಲಿ

|

Updated on: Mar 15, 2021 | 11:29 PM

ಅಹಮದಾಬಾದ್: ಮೊಟೆರಾದ ನರೇಂದ್ರ ಮೋದಿ ಮೈದಾನದಲ್ಲಿ ರವಿವಾರದಂದು ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಸಕಾಲಿಕ ಅರ್ಧ ಶತಕ ಬಾರಿಸಿದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ಹೊಸ್ತಿಲು ದಾಟಿಸಿದ್ದೂ ಅಲ್ಲದೆ ತಮ್ಮ ಫಾರ್ಮ್ ಬಗ್ಗೆ ಒಂದೆ ಸಮನೆ ಮಾತಾಡುತ್ತಿದ್ದ ಟೀಕಾಕಾರರ ಬಾಯಿ ಮುಚ್ಚಿಸಿದರು. ಅವರ ಮತ್ತು 22 ರ ಪ್ರಾಯದ ಇಶಾನ್ ಕಿಷನ್ ಅಮೋಘ ಆಟದ ನೆರವಿನಿಂದ ಭಾರತ ಸರಣಿಯನ್ನು 1-1ರಿದ ಸಮ ಮಾಡಿಕೊಂಡು ಮುಂದಿನ ಪಂದ್ಯಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿತು. ಮೊದಲ […]

India vs England: ವೈಯಕ್ತಿಕ ಉದಾರಣೆಯೊಂದಿಗೆ ಟೀಮಿನ ಆತ್ಮವಿಶ್ವಾಸ ಹೆಚ್ಚಿಸಿರುವ ಕೊಹ್ಲಿ
ವಿರಾಟ್​ ಕೊಹ್ಲಿ
Follow us on

ಅಹಮದಾಬಾದ್: ಮೊಟೆರಾದ ನರೇಂದ್ರ ಮೋದಿ ಮೈದಾನದಲ್ಲಿ ರವಿವಾರದಂದು ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಸಕಾಲಿಕ ಅರ್ಧ ಶತಕ ಬಾರಿಸಿದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ಹೊಸ್ತಿಲು ದಾಟಿಸಿದ್ದೂ ಅಲ್ಲದೆ ತಮ್ಮ ಫಾರ್ಮ್ ಬಗ್ಗೆ ಒಂದೆ ಸಮನೆ ಮಾತಾಡುತ್ತಿದ್ದ ಟೀಕಾಕಾರರ ಬಾಯಿ ಮುಚ್ಚಿಸಿದರು. ಅವರ ಮತ್ತು 22 ರ ಪ್ರಾಯದ ಇಶಾನ್ ಕಿಷನ್ ಅಮೋಘ ಆಟದ ನೆರವಿನಿಂದ ಭಾರತ ಸರಣಿಯನ್ನು 1-1ರಿದ ಸಮ ಮಾಡಿಕೊಂಡು ಮುಂದಿನ ಪಂದ್ಯಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿತು.

ಮೊದಲ ಓವರ್​ನಲ್ಲೇ ಬ್ಯಾಟಿಂಗ್ ಕ್ರೀಸಿಗೆ ಆಗಮಿಸಿದ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 73 ರನ್ ಬಾರಿಸಿದರು, ಇದರಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ್ದವು. ಭಾರತಕ್ಕೆ ಗೆಲುವಿನ ರನ್​ಗಳನ್ನು ವೇಗದ ಬೌಲರ್ ಕ್ರಿಸ್ ಜೊರ್ಡನ್ ಅವರ ಎಸೆತವೊಂದನ್ನು ಸಿಕ್ಸರ್​ಗೆ ಎತ್ತುವ ಮೂಲಕ ತಂದಿತ್ತ ಕೊಹ್ಲಿ ಇದೇ ಸಮಯದಲ್ಲಿ ಟಿ20ಐ ಆವೃತ್ತಿಯಲ್ಲಿ 3,000 ರನ್ ಬಾರಿಸಿದ ವಿಶ್ವದ ಮೊದಲ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು. ಪಂದ್ಯದ ನಂತರ ಮಾತಾಡಿದ ಅವರು, ಆಟ ಮುಗಿಯಯುವರೆಗೆ ಕ್ರೀಸಿನಲ್ಲಿದ್ದಿದ್ದು ಬಹಳ ಸಂತೋಷ ನೀಡಿದೆ ಎಂದು ಹೇಳಿದರು. ಪಂದ್ಯಕ್ಕೆ ಮೊದಲು ಅವರು ತಮ್ಮ ಆಪ್ತಮಿತ್ರ ಮತ್ತು ರಾಯಲ್ ಚಾಲೆಂಜೆರ್ಸ್​ ಟೀಮಿನ ಸಹವರ್ತಿ ದಕ್ಷಿಣ ಆಫ್ರಿಕಾದ ಮಿ. 360 ಡಿಗ್ರೀ ಕ್ರಿಕೆಟರ್ ಎಬಿ ಡಿ ವಿಲಿಯರ್ಸ್ ಜೊತೆ ಮಾತಾಡಿದ್ದು ಬಹಳ ನೆರವಾಯಿತು ಎಂದು ಕೊಹ್ಲಿ ಹೇಳಿದರು.

ವಿರಾಟ್, ಅನುಷ್ಕಾ ಮತ್ತು ಎಬಿ ಡಿ ವಿಲಿಯರ್ಸ್

‘ಬ್ಯಾಟಿಂಗ್​ನ ಮೂಲಭೂತ ಅಂಶಗಳ ಕಡೆ ನಾನು ಗಮನ ಹರಿಸಿದೆ. ಮೈದಾನದಾಚೆ ಹಲವಾರು ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದೆ. ಟೀಮಿಗೆ ಗೆಲವು ದೊರಕಿಸಿಕೊಡುವುದು ನನಗೆ ಹೆಮ್ಮೆ ಮೂಡಿಸುತ್ತದೆ ಮತ್ತು ಅಪಾರ ಸಂತೋಷ ತಂದುಕೊಡುತ್ತದೆ. ಹಾಗಾಗಿ ನಾನು 70ಕ್ಕಿಂತ ಹೆಚ್ಚು ರನ್ ಬಾರಿಸಿದ್ದಕ್ಕಿಂತ ಭಾರತ ಜಯ ಪಡೆದ ಆಂಶವನ್ನು ಹೆಚ್ಚು ಆನಂದಿಸುತ್ತೇನೆ. ನಿನ್ನ ದೃಷ್ಟಿ ಯಾವಾಗಲೂ ಬಾಲಿನ ಮೇಲಿರಲಿ ಎಂದು ಎಬಿ ನನಗೆ ಹೇಳಿದರು. ಅವರೊಂದಿಗೆ ನಡೆಸಿದ ಮಾತುಕತೆ ವಿಶೇಷವಾಗಿತ್ತು ಮತ್ತು ನನಗೆ ಬಹಳ ನೆರವಾಯಿತು. ಅಲ್ಲದೆ, ಅನುಷ್ಕಾ ಇಲ್ಲೇ ಇದ್ದಾಳೆ, ಮತ್ತು ಹಲವಾರು ವಿಷಯಗಳನ್ನು ನನ್ನೊಂದಿಗೆ ಚರ್ಚಿಸುತ್ತಾಳೆ,’ ಎಂದು ಕೊಹ್ಲಿ ಹೇಳಿದರು.

ಮೊದಲ ಪಂದ್ಯವನ್ನು ಸುಲಭವಾಗಿ ಸೋತ ಭಾರತ ರವಿವಾರದಂದು ನಡೆದ ಎರಡನೇ ಪಂದ್ಯದಲ್ಲಿ ಬರ್ಜರಿ ಜಯ ಸಾಧಿಸಿ ಸರಣಿಯಲ್ಲಿ ವಾಪಸ್ಸು ಬಂದಿದೆ. ಭಾರತದ ಬೌಲರ್​ಗಳು ಎರಡನೇ ಪಂದ್ಯದಲ್ಲಿ ಅದ್ಭುತವಾದ ನಿಯಂತ್ರಣ ಪ್ರದರ್ಶಿಸಿ, ಎದುರಾಳಿ ತಂಡದ ಒಬ್ಬೇ ಒಬ್ಬ ಬ್ಯಾಟ್ಸ್​ಮನ್​ಗೆ ಅರ್ಧ ಶತಕ ಬಾರಿಸುವ ಅವಕಾಶ ನೀಡಲಿಲ್ಲ. ಹಾಗೆಯೇ 164 ರನ್​ ಮೊತ್ತವನ್ನು ಚೇಸ್ ಮಾಡುವಾಗ ಮೊದಲ ವಿಕೆಟ್ ಅನ್ನು ಮೊದಲ ಓವರ್​ನಲ್ಲೇ ಕಳೆದುಕೊಂಡರೂ ಕೊಹ್ಲಿ , ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಕಿಷನ್ ಜೊತೆ ಎರಡನೇ ವಿಕೆಟ್​ಗೆ 94 ರನ್​ಗಳನ್ನು ಸೇರಿಸಿ ಪ್ರವಾಸಿ ತಂಡದ ನೀಡಿದ್ದ ಟಾರ್ಗೆಟ್ ಅನ್ನು ಮಕ್ಕಳಾಟ ಎಂಬಂತೆ ಬೆನ್ನಟ್ಟಿದರು. ಮೂರನೇ ಪಂದ್ಯಕ್ಕೆ ಮೊದಲು ಟೀಮಿಗೆ ಬೇಕಿದ್ದ ಆತ್ಮವಿಶ್ವಾವನ್ನು ವೈಯಕ್ತಿಕ ಉದಾಹರಣೆಯೊಂದಿಗೆ ಕೊಹ್ಲಿ ಒದಗಿಸಿದರು.

‘ತಂಡ ಅತ್ಯುತ್ತಮ ಪದರ್ಶನ ನೀಡಿತು. ಎಲ್ಲಾ ಆಯಾಮಗಳನ್ನು ನಾವು ಸರಿಮಾಡಿಕೊಂಡೆವು. ನಮ್ಮ ಬೌಲರ್​ಗಳು ಅದರಲ್ಲೂ ವಿಶೇಷವಾಗಿ ಕೊನೆಯ 5 ಓವರ್​ಗಳಲ್ಲಿ ಕೇವಲ 34 ರನ್ ನೀಡಿ ಶ್ಲಾಘನೀಯ ಪ್ರದರ್ಶನಗಳನ್ನು ನೀಡಿದರು. ವಾಷಿ (ವಾಷಿಂಗ್ಟನ್ ಸುಂದರ್) ನಂಬಲಸದಳ ರೀತಿಯಲ್ಲಿ ಬೌಲ್ ಮಾಡಿದ. ಅವನೆದರು ಕೇವಲ ಒಬ್ಬ ಎಡಗೈ ಬ್ಯಾಟ್ಸ್​ಮನ್ ಇದ್ದರೂ ಅವನು ತೋರಿದ ನಿಯಂತ್ರಣ ಊಹೆಗೆ ನಿಲುಕದಂಥದ್ದು. ಬಲಗೈ ಬ್ಯಾಟ್ಸ್​ಮನ್​ಗಳಿಗೆ ಬೌಲ್ ಮಾಡುವಾಗ ಅವನು ಮೈದಾನದ ದೊಡ್ಡ ಬೌಂಡರಿಗಳನ್ನು ಅದ್ಭುತವಾಗಿ ಬಳಸಿಕೊಂಡ,’ ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ: India vs England: ಮೂರನೇ ಪಂದ್ಯದಲ್ಲಿ ಎರಡೂ ತಂಡಗಳಿಂದ ಸ್ಫೋಟಕ ಪ್ರದರ್ಶನ ನಿರೀಕ್ಷೆ