ದುಬೈ: ಹಲವು ವರ್ಷಗಳ ಕಾಲ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಐಸಿಸಿ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಪಾಕಿಸ್ತಾನದ ಬಾಬರ್ ಆಜಂ ಮೊದಲ ಸ್ಥಾನಕ್ಕೇರಿದ್ದಾರೆ.
ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯದಲ್ಲಿ ಬಾಬರ್ 82 ಬಾಲ್ಗಳಲ್ಲಿ 94 ರನ್ ಸಿಡಿಸಿದ್ದರು. ಈ ಮೂಲಕ 865 ಅಂಕ ಪಡೆದುಕೊಂಡು, ಭಾರತದ ನಾಯಕ ವಿರಾಟ್ಗಿಂತ ಅವರು 8 ಅಂಕ ಮುಂದಿದ್ದಾರೆ.
2010 ಹಾಗೂ 2012ರ ಅಂಡರ್ 19 ವರ್ಡ್ಕಪ್ನಲ್ಲಿ ಬಾಬರ್ ಮಿಂಚಿದ್ದರು. 2015ರಿಂದ ಅವರು ಪಾಕಿಸ್ತಾನದ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ ಬರೋಬ್ಬರಿ 1,258 ದಿನ ಮೊದಲ ಸ್ಥಾನದಲ್ಲೇ ಇದ್ದರು. ಈಗ ಮೊದಲ ಸ್ಥಾನಕ್ಕೆ ಬಾಬರ್ ಬಂದಿದ್ದಾರೆ.
ಈ ಮೊದಲಿಗೆ ಹೋಲಿಸಿದರೆ ವಿರಾಟ್ ಕೊಹ್ಲಿ ಪರ್ಫಾರ್ಮೆನ್ಸ್ ಕುಗ್ಗಿದೆ. ಅವರ ಬ್ಯಾಟ್ನಿಂದ ಶತಕ ಸಿಡಿಯದೇ ಎರಡು ವರ್ಷಗಳಾಗುತ್ತಾ ಬಂದಿವೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಕುಸಿಯೋಕೆ ಇದು ಕೂಡ ಕಾರಣವಾಗಿದೆ.
Babar Azam ??
The Pakistan captain has overtaken Virat Kohli to become the No.1 batsman in the latest @MRFWorldwide ICC men’s ODI rankings ? pic.twitter.com/krxoKRDsSY
— ICC (@ICC) April 14, 2021
ಅಂದಹಾಗೆ, ಐಸಿಸಿ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನಕ್ಕೇರಿದ ಪಾಕಿಸ್ತಾನದ ನಾಲ್ಕನೇ ಬ್ಯಾಟ್ಸಮನ್ ಬಾಬರ್ ಆಗಿದ್ದಾರೆ. ಈ ಮೊದಲು ಜಾಹೀರ್ ಅಬ್ಬಾಸ್ (1983-84), ಜಾವೇದ್ (1988-89), ಮೊಹ್ಮದ್ ಯೂಸುಪ್ (2003) ಮೊದಲ ಸ್ಥಾನದಲ್ಲಿದ್ದರು. 875 ಅಂಕ ಗಳಿಸಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ (825) ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಒಡಿಐಗಳಲ್ಲಿ ಕೇವಲ 76ನೇ ಇನ್ನಿಂಗ್ಸ್ನಲ್ಲಿ 13 ನೇ ಶತಕ ಬಾರಿಸಿ ಕೊಹ್ಲಿ ಮತ್ತು ಆಮ್ಲಾರನ್ನು ಹಿಂದಿಕ್ಕಿದ ಬಾಬರ್ ಆಜಂ