Virat Kohli: ಇನ್ನೂ ಸರಿಯಾಗಿಲ್ಲ ವಿರಾಟ್​ ಕೊಹ್ಲಿ ಕಣ್ಣು; ಟಾಸ್​ ವೇಳೆ ಬಹಿರಂಗವಾಯ್ತು ವಿಚಾರ

18ನೇ ಓವರ್​ನ ಮೊದಲ ಬಾಲ್​ನಲ್ಲಿ ಕೃನಾಲ್​ ಪಾಂಡ್ಯ ಹೊಡೆದ ಶಾಟ್​ ವಿರಾಟ್​ ಕೊಹ್ಲಿ ಬಳಿ ಹೋಗಿತ್ತು. ಈ ಕ್ಯಾಚ್​ ಹಿಡಿಯೋಕೆ ಹೋದಾಗ ಬಾಲ್​ ನೇರವಾಗಿ ಕಣ್ಣಿನ ಮೇಲೆ ಬಿದ್ದಿತ್ತು.

Virat Kohli: ಇನ್ನೂ ಸರಿಯಾಗಿಲ್ಲ ವಿರಾಟ್​ ಕೊಹ್ಲಿ ಕಣ್ಣು; ಟಾಸ್​ ವೇಳೆ ಬಹಿರಂಗವಾಯ್ತು ವಿಚಾರ
Follow us
ರಾಜೇಶ್ ದುಗ್ಗುಮನೆ
|

Updated on: Apr 14, 2021 | 7:34 PM

ಮುಂಬೈ ವಿರುದ್ಧದ ಮ್ಯಾಚ್​ನಲ್ಲಿ ಕ್ಯಾಚ್​ ಹಿಡಿಯಲು ಹೋಗಿ ವಿರಾಟ್​ ಕೊಹ್ಲಿ ಕಣ್ಣಿಗೆ ಬಾಲ್​ ಬಡಿದಿತ್ತು. ಅವರ ಕಣ್ಣು ಸ್ವಲ್ಪ ಊದಿಕೊಂಡಿತ್ತು. ಈ ಮ್ಯಾಚ್​ ಪೂರ್ಣಗೊಂಡು ಐದು ದಿನ ಕಳೆದರೂ ವಿರಾಟ್​ ಕೊಹ್ಲಿ ಕಣ್ಣು ಸರಿ ಹೋದಂತೆ ಕಾಣುತ್ತಿಲ್ಲ. ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧದ ಮ್ಯಾಚ್​ನ  ಟಾಸ್​ ವೇಳೆ ಈ ವಿಚಾರ ಗೊತ್ತಾಗಿದೆ. ಏಪ್ರಿಲ್​ 9ರಂದು ನಡೆದ ಮೊದಲ ಪಂದ್ಯದಲ್ಲಿ ಆರ್​ಸಿಬಿ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಿತ್ತು. ಮುಂಬೈ ಮೊದಲು ಬ್ಯಾಟಿಂಗ್​ಗೆ ಇಳಿದಿತ್ತು. 18ನೇ ಓವರ್​ನ ಮೊದಲ ಬಾಲ್​ನಲ್ಲಿ ಕೃನಾಲ್​ ಪಾಂಡ್ಯ ಹೊಡೆದ ಶಾಟ್​ ವಿರಾಟ್​ ಕೊಹ್ಲಿ ಬಳಿ ಹೋಗಿತ್ತು. ಈ ಕ್ಯಾಚ್​ ಹಿಡಿಯೋಕೆ ಹೋದಾಗ ಬಾಲ್​ ನೇರವಾಗಿ ಕಣ್ಣಿನ ಮೇಲೆ ಬಿದ್ದಿತ್ತು. ಕೊಹ್ಲಿ ಕಣ್ಣು ಉಬ್ಬಿದಂತೆ ಕಂಡಿತ್ತು. ಆದಾಗ್ಯೂ, ಅವರು ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದರು.

ಕೊಹ್ಲಿ ಕ್ಯಾಚ್​ ಬಿಟ್ಟ ಬಗ್ಗೆ ಎಲ್ಲರೂ ಅಪಸ್ವರ ತೆಗೆದಿದ್ದರು. ಆದರೆ, ಪಂದ್ಯ ಮುಗಿದ ನಂತರ ಕೊಹ್ಲಿ ಮಾತನಾಡೋಕೆ ಬಂದಾಗ ಕಣ್ಣು ಊದಿಕೊಂಡಿದ್ದು ಸರಿಯಾಗಿ ಕಾಣಿಸಿತ್ತು. ಈ ಬಗ್ಗೆ ಸಾಕಷ್ಟು ಜನರು ಬೇಸರ ಹೊರ ಹಾಕಿದ್ದರು.

ಇಂದು ಸನ್​ ರೈಸರ್ಸ್​ ಹೈದರಾಬಾದ್ ತಂಡವನ್ನು ರಾಯಲ್​ ಚಾಲೆಂಜರ್ಸ್​ ತಂಡ ಎದುರಿಸುತ್ತಿದೆ. ಟಾಸ್​ ಮಾಡೋಕೆ ಕೊಹ್ಲಿ ಬಂದಾಗ ಎಲ್ಲರ ಗಮನ ನೆಟ್ಟಿದ್ದು ಅವರ ಕಣ್ಣಿನ ಮೇಲೆ. ಅವರ ಬಲಗಣ್ಣು ಇನ್ನೂ ಊದಿಕೊಂಡೆ ಇದೆ. ಇದನ್ನು ನೋಡಿದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ. ಇನ್ನೂ ಕೆಲವರು, ಕೊಹ್ಲಿ ಕ್ರೀಡಾಸ್ಫೂರ್ತಿಗೆ ಮೆಚ್ಚುಗೆ ಹೊರ ಹಾಕಿದ್ದಾರೆ.

ಇದನ್ನೂ ಓದಿ: Suresh Raina IPL 2021 CSK Team Player: ಕೊಹ್ಲಿ, ರೋಹಿತ್​ಗೂ ಮೊದಲು ಐಪಿಎಲ್​ನಲ್ಲಿ ಎಲ್ಲರ ಹೃದಯ ಗೆದ್ದ ಆಟಗಾರನೆಂದರೆ ಅದು ಸುರೇಶ್​ ರೈನಾ!

IPL 2021: ಕ್ಯಾಚ್​ ಬಿಟ್ಟು ಟ್ರೋಲಾದ ಕೊಹ್ಲಿ! ಮೊದಲ ಪಂದ್ಯದಲ್ಲೇ ಆರ್​ಸಿಬಿ ಬಿಟ್ಟಿದ್ದು ಬರೋಬ್ಬರಿ 5 ಕ್ಯಾಚ್

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ