Suresh Raina IPL 2021 CSK Team Player: ಕೊಹ್ಲಿ, ರೋಹಿತ್ಗೂ ಮೊದಲು ಐಪಿಎಲ್‌ನಲ್ಲಿ ಎಲ್ಲರ ಹೃದಯ ಗೆದ್ದ ಆಟಗಾರನೆಂದರೆ ಅದು ಸುರೇಶ್ ರೈನಾ!
Suresh Raina Profile: ಐಪಿಎಲ್ 2019 ರ ಅವಧಿಯಲ್ಲಿ 5000 ಐಪಿಎಲ್ ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೈನಾ ಪಾತ್ರರಾಗಿದ್ದಾರೆ.
ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್ ಸೂಪರ್ಸ್ಟಾರ್ ಪ್ಲೇಯರ್. ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿಗೆ ಅವರು ಪ್ರಮುಖ ಕೊಡುಗೆ ನೀಡಿದ್ದಾರೆ. ಸುರೇಶ್ ರೈನಾ ಎರಡು ಆವೃತ್ತಿಗಳನ್ನು ಹೊರತುಪಡಿಸಿ ಪ್ರತಿವರ್ಷ ಚೆನ್ನೈ ಪರ ಆಡಿದ್ದಾರೆ ಮತ್ತು ಕಳೆದ ಕೆಲವು ವರ್ಷಗಳಿಂದ ರನ್ ಗಳಿಸುವಲ್ಲಿ ಮುಂಚೂಣಿಯಲ್ಲಿದ್ದರು. ಈ ಕಾರಣದಿಂದಾಗಿ ಅವರನ್ನು ಮಿಸ್ಟರ್ ಐಪಿಎಲ್ ಎಂದೂ ಕರೆಯುತ್ತಾರೆ. ಕುಟುಂಬದ ಕಾರಣಗಳಿಂದಾಗಿ ಅವರು ಐಪಿಎಲ್ 2020 ರಲ್ಲಿ ಆಡಲಿಲ್ಲ. ಆದರೆ ಐಪಿಎಲ್ 2021 ರಲ್ಲಿ ರೈನಾ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿದ್ದಾರೆ. ಈ ತಂಡದ ಅಭಿಮಾನಿಗಳು ಅವರನ್ನು ‘ಚಿನ್ನ ತಲಾ’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಸುರೇಶ್ ರೈನಾ ಇಲ್ಲದೆ ಚೆನ್ನೈನ ಐಪಿಎಲ್ ಯಶಸ್ಸು ಅಪೂರ್ಣವಾಗಿದೆ. ಮೊದಲ ಆವೃತ್ತಿಯಲ್ಲಿ, ವಿದೇಶಿ ಆಟಗಾರರಾದ ಮ್ಯಾಥ್ಯೂ ಹೇಡನ್, ಮೈಕ್ ಹಸ್ಸಿ ಮತ್ತು ಜಾಕೋಬ್ ಓರಮ್ ಪಂದ್ಯಾವಳಿಯ ಮಧ್ಯದಲ್ಲಿ ತಂಡವನ್ನು ತೋರೆದು ಹೋದಾಗಲು, ರೈನಾ ಅವರ ಬ್ಯಾಟಿಂಗ್ ಕಡಿಮೆಯಾಗಲಿಲ್ಲ. 2010 ರಲ್ಲಿ, ಸಿಎಸ್ಕೆ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದಾಗ, ರೈನಾ 520 ರನ್ ಗಳಿಸಿದರು. ಜೊತೆಗೆ ಚೆನ್ನೈ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊದಲ ಮೂರು ಆವೃತ್ತಿಗಳಲ್ಲಿ ಸುರೇಶ್ ರೈನಾ 421, 434 ಮತ್ತು 520 ರನ್ ಗಳಿಸಿದರು. ಇದರಿಂದಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ಮೊದಲ ಮೂರು ಆವೃತ್ತಿಗಳಲ್ಲಿ ಹೆಚ್ಚು ಕ್ಯಾಚ್‌ಗಳು ಸಹ ಅವರ ಹೆಸರಿನಲ್ಲಿತ್ತು. ಈ ಕಾರಣಕ್ಕಾಗಿ ಚೆನ್ನೈ ಎಂಎಸ್ ಧೋನಿ, ಆಲ್ಬಿ ಮೊರ್ಕೆಲ್ ಮತ್ತು ಮುರಳಿ ವಿಜಯ್ ಅವರೊಂದಿಗೆ ರೈನಾ ಅವರನ್ನು ಉಳಿಸಿಕೊಂಡಿತು. ನಂತರ ರೈನಾ ಸಿಎಸ್ಕೆಗಾಗಿ ತಮ್ಮ ಉತ್ತಮ ಆಟವನ್ನು ಮುಂದುವರಿಸಿದರು. 2008 ರಿಂದ 2104 ರವರೆಗೆ ಸತತ ಏಳು ಆವೃತ್ತಿಗಳಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್‌ಮನ್ ಕೂಡ ರೈನಾ ಆಗಿದ್ದಾರೆ. ಈ ವರ್ಚಸ್ವಿ ಆಟದಿಂದಾಗಿ, ಐಪಿಎಲ್‌ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೈನಾ ಪಾತ್ರರಾದರು. ಜೊತೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಶತಕವನ್ನು ಸಹ ಸಿಡಿಸಿದ್ದಾರೆ.
ರೈನಾ ಅಸಮಾಧಾನಗೊಂಡಾಗಲೆಲ್ಲಾ ಐಪಿಎಲ್ ಸಹಾಯ ಮಾಡಿತು ಐಪಿಎಲ್ ಯಾವಾಗಲೂ ಸುರೇಶ್ ರೈನಾ ಅವರ ಬೆನ್ನಿಗೆ ನಿಂತಿದೆ. ರೈನಾ ಕೆಟ್ಟ ಫಾರ್ಮ್ನಿಂದಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಭಯದಲಿದ್ದಾಗಲೆಲ್ಲ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನದಿಂದಾಗಿ ಅವರು ಮತ್ತೆ ತಂಡಕ್ಕೆ ಸೇರಲು ಐಪಿಎಲ್ ಪಂದ್ಯಾವಳಿ ಸಹಾಯ ಮಾಡಿದೆ. 2014 ರಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಅವರು ಚೆನ್ನೈ ಪರ ಅಜೇಯ 109 ರನ್‌ಗಳ ಆಟವನ್ನು ಕೇವಲ 62 ಎಸೆತಗಳಲ್ಲಿ ಗಳಿಸಿದರು ಮತ್ತು ತಂಡವನ್ನು ವಿಜೇತರನ್ನಾಗಿ ಮಾಡಿದರು. 2015 ರಲ್ಲಿ ಚೆನ್ನೈಗೆ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ನಂತರ ರೈನಾ ಗುಜರಾತ್ ಲಯನ್ಸ್‌ಗೆ ತೆರಳಿ ಅಲ್ಲಿ ನಾಯಕನಾದರು. ರೈನಾ 400 ರನ್ ಗಳಿಸಲು ಸಾಧ್ಯವಾಗದ ಮೊದಲ ಆವೃತ್ತಿ ಇದಾಗಿತ್ತು. ಅವರು 17 ಇನ್ನಿಂಗ್ಸ್‌ಗಳಲ್ಲಿ 374 ರನ್ ಗಳಿಸಿದರು.
ಐಪಿಎಲ್‌ನಲ್ಲಿ 5000 ರನ್ ಗಳಿಸಿದ ಮೊದಲಿಗ ರೈನಾ ಐಪಿಎಲ್ 2018 ರಲ್ಲಿ ಚೆನ್ನೈಗೆ ಮರಳಿದಾಗ, ರೈನಾ ಅವರನ್ನು 11 ಕೋಟಿ ರೂ ನೀಡಿ ಚೆನ್ನೈ ಅವರನ್ನು ಖರೀದಿಸಿತು. ಆ ಆವೃತ್ತಿಯಲ್ಲಿ ರೈನಾ 445 ರನ್ ಗಳಿಸಿದರು ಮತ್ತು ಮತ್ತೊಮ್ಮೆ ಚೆನ್ನೈನ ಚಾಂಪಿಯನ್ ಆಗಲು ಪಾಲುದಾರರಾಗಿದ್ದರು. ಐಪಿಎಲ್ 2019 ರ ಅವಧಿಯಲ್ಲಿ 5000 ಐಪಿಎಲ್ ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೈನಾ ಪಾತ್ರರಾಗಿದ್ದಾರೆ. ಇದುವರೆಗೆ ಅವರು 193 ಪಂದ್ಯಗಳಲ್ಲಿ 33.34 ಸರಾಸರಿಯಲ್ಲಿ 5368 ರನ್ ಗಳಿಸಿದ್ದಾರೆ. ರೈನಾ ಹೆಸರಲ್ಲಿ ಒಂದು ಶತಕ ಮತ್ತು 38 ಅರ್ಧ ಶತಕಗಳು ಸೇರುವುದರ ಜೊತೆಗೆ ಐಪಿಎಲ್‌ನಲ್ಲಿ ರೈನಾ 25 ವಿಕೆಟ್ ಕಬಳಿಸಿದ್ದಾರೆ.
ಐಪಿಎಲ್‌ನಲ್ಲಿ ರೈನಾ ಹವಾ
ವರ್ಷ | ಪಂದ್ಯ | ರನ್ | ಅತ್ಯಧಿಕ ರನ್ | ಸರಾಸರಿ | ಶತಕ | ಅರ್ಧ ಶತಕ |
2020 | 0 | 0 | 0 | 0 | 0 | 0 |
2019 | 17 | 383 | 59 | 23.93 | 0 | 3 |
2018 | 15 | 445 | 75* | 37.08 | 0 | 4 |
2017 | 14 | 442 | 84 | 40.18 | 0 | 3 |
2016 | 15 | 399 | 75 | 28.5 | 0 | 3 |
2015 | 17 | 374 | 62 | 24.93 | 0 | 2 |
2014 | 16 | 523 | 87 | 40.23 | 0 | 5 |
2013 | 18 | 548 | 100* | 42.15 | 1 | 4 |
2012 | 19 | 441 | 73 | 25.94 | 0 | 1 |
2011 | 16 | 438 | 73* | 31.28 | 0 | 4 |
2010 | 16 | 520 | 83* | 47.27 | 0 | 4 |
2009 | 14 | 434 | 98 | 31 | 0 | 2 |
2008 | 16 | 421 | 55* | 38.27 | 0 | 3 |